Posts

Showing posts from September, 2011

ವೈರಸ್ ಕೊಲ್ಲೋ ಶಾರ್ಕ್!

Image
ಸೂಕ್ಷ್ಮಾಣು ಜೀವಿಗಳು ಜೀವಕೋಶವನ್ನು ಪ್ರವೇಶಿಸಿ ಧನಾತ್ಮಕ ವಿದ್ಯುದಾವೇಶದ ಪ್ರೋಟೀನ್ಗಳಿಗಾಗಿ ಹುಡುಕಾಡುತ್ತವೆ. ಸೂಕ್ಷ್ಮಾಣುಜೀವಿಗಳು, ಮುಖ್ಯವಾಗಿ ವೈರಸ್ಗಳು ವಂಶಾಭಿವೃದ್ಧಿ ಮಾಡಬೇಕು ಎಂದಾದರೆ ಈ ಪ್ರೋಟೀನ್ಗಳು ಅವುಗಳಿಗೆ ಸಿಗಲೇಬೇಕು. ಸ್ಕ್ವಾಲಮೈನ್ ಹೊದಿಕೆಯಿರುವಾಗ ಸೂಕ್ಷ್ಮಾಣುಜೀವಿಗಳಿಗೆ ಈ ಪ್ರೋಟೀನ್ಗಳು ಸಿಗುವುದಾದರೂ ಹೇಗೆ?   ಸೂಕ್ಷ್ಮಾಣು ಜೀವಿಗಳ ಬಗ್ಗೆ ಮನುಷ್ಯ ಅದೆಷ್ಟು ಭಯಭೀತನಾಗಿದ್ದನೆ! ಒಂದೊಂದು ಹೊಸ ಹೊಸ ರೋಗಗಳು ಸಹ ತನ್ನನ್ನು ಕಾಡಿದಾಗ ಈ ಎಲ್ಲ ರೋಗಗಳನ್ನು ಹರಡುವಂಥ ಸೂಕ್ಷ್ಮಾಣು ಜೀವಿಗಳನ್ನು, ಮುಖ್ಯವಾಗಿ ವೈರಸ್ಗಳನ್ನು ಹೇಗಾದ್ರೂ ಮಾಡಿ ನಾಶ ಮಾಡಿಬಿಡಬೇಕು ಎಂಬಷ್ಟು ಸಿಟ್ಟು ಬಂದಿರುತ್ತೆ. ಅದ್ಯಾಕಾದ್ರೂ ಈ ರೋಗಗಳೆಲ್ಲ ವಕ್ಕರಿಸಿಕೊಳ್ತವೋ, ಒಂದು ರೋಗ ಗುಣ ಮಾಡಿದ್ರೆ ಇನ್ನೊಂದು ರೋಗ ಹುಟ್ಟಿಕೊಳ್ಳುತ್ತೆ. ವೈರಸ್ಗಳೂ ಸಹ ರೋಗಲಸಿಕೆಗಳು ತಮಗೆ ಏನೂ ತೊಂದರೆ ಮಾಡದಂತೆ ನಿರೋಧಕ ಶಕ್ತಿ ಬೆಳೆಸಿಕೊಳ್ತವೆ. ಏನ್ ಮಾಡೋದು? ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲೇ ಇದ್ದಾರೆ ವಿಜ್ಞಾನಿಗಳು. ವೈರಸ್ಗಳನ್ನು ಸುಲಭವಾಗಿ ಹತೋಟಿಗೆ ತೆಗೆದುಕೊಳ್ಳುವಂಥ ಒಂದು ಉಪಾಯ ಬೇಕು ಎಂಬ ಚಿಂತನೆ ಗಾಢವಾಗಿ ಕಾಡತೊಡಗಿತ್ತು. ಆದರೆ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಗುವುದು ಸುಲಭವಲ್ಲ. ಇನ್ನೂ ಕೆಲವೊಂದು ಬಾರಿ ಏನನ್ನೋ ಹುಡುಕುತ್ತಿರುವಾಗ ಇನ್ನೇನೋ ಸಿಕ್ಕಿಬಿಡುತ್ತೆ. ಯಾವುದೋ ಒಂದು ಸಂಶೋಧನೆ ನಡೆಸುವಾಗ

ಬೆಳಕಿಗಿಂತ ವೇಗವಾಗಿ ಚಲಿಸಬಹುದಾದದ್ದು ಯಾವುದು?

Image
ಸೆರ್ನ್ ವಿಜ್ಞಾನಿಗಳ ಪ್ರಯೋಗ ಭೌತಶಾಸ್ತ್ರದ ಮೂಲನಿಯಮವನ್ನೇ ಅಲ್ಲಾಡಿಸುತ್ತಿದೆಯಲ್ಲ ಎಂಬ ಚಿಂತೆ ಈಗಾಗಲೇ ಹಲವರಲ್ಲಿ ಮೂಡಿದೆ. ಬೆಳಕಿಗಿಂತ ವೇಗವಾಗಿ ಚಲಿಸುವುದಕ್ಕೆ ಹೇಗೆ ಸಾಧ್ಯ? ಇದನ್ನು ಆರಂಭದಲ್ಲಿ ಸೆರ್ನ್ ವಿಜ್ಞಾನಿಗಳೂ ನಂಬಲಿಲ್ಲ. ಆದರೆ ತಮ್ಮ ಯಂತ್ರೋಪಕರಣಗಳಲ್ಲಿ, ಲೆಕ್ಕಾಚಾರಗಳಲ್ಲಿ ಯಾವುದೇ ದೋಷ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ ಬಳಿಕವೇ ಅವರು ಮಾಹಿತಿಯನ್ನು ಹೊರಹಾಕಿದ್ದಾರೆ. ಹಾಗಿದ್ದರೆ ಐನ್ ಸ್ಟೀನನ ಸಿದ್ಧಾಂತವೇ ತಪ್ಪೇ?  ಇದರ ಬಗ್ಗೆಯೇ ಚಿಂತಿಸುತ್ತಾ ಅಂತರ್ಜಾಲದಲ್ಲಿ ಹುಡುಕಾಡುತ್ತಿರಬೇಕಾದರೆ ಟ್ರುಥ್ ಡೈವ್ ಎಂಬ ಅಂತರ್ಜಾಲತಾಣದಲ್ಲಿ ಕವಿ, ಲೇಖಕ, ಎಂಜಿನಿಯರ್ ಮನೋಹರನ್ ಸಂಬಂದಮ್ (Manoharan Sambandam)  ಎಂಬವರು ಬರೆದಿದ್ದಂಥ ಲೇಖನ ಸಿಕ್ಕಿತು. ಅವರ ವಾದಸರಣಿ ನಿಜಕ್ಕೂ ಮನಸ್ಸಿಗೆ ನಾಟಿತು. ನನ್ನ ಬ್ಲಾಗ್ ಮಿತ್ರರಿಗಾಗಿ ಈ ಲೇಖನದ ಯಥಾವತ್ ಕನ್ನಡಾನುವಾದವನ್ನು ಇಲ್ಲಿ ಕೊಡುತ್ತಿದ್ದೇನೆ. ಇಲ್ಲಿಂದ ಮನೋಹರನ್ ಲೇಖನ.... ಬೆಳಕಿಗಿಂತ ವೇಗವಾಗಿ ಚಲಿಸುವುದಕ್ಕೆ ಸಾಧ್ಯವೇ ಇಲ್ಲ ಎಂಬ ತತ್ತವದ ಆಧಾರದಲ್ಲಿರುವ ನಮ್ಮ ಎಲ್ಲ ಕಥೆಗಳು, ಗ್ರಹಿಕೆಗಳು, ಸಿದ್ಧಾಂತಗಳು, ಲೆಕ್ಕಾಚಾರಗಳು ಈಗ ತಲೆಕೆಳಗಾಗುತ್ತವೆ. ಯೂರೋಪಿನಲ್ಲಿ ಇತ್ತೀಚೆಗೆ ನಡೆಸಲಾದಂಥ ಸಂಶೋಧನೆಯ ಪ್ರಕಾರ ಅಣುವಿಗಿಂತಲೂ ಚಿಕ್ಕದಾದಂಥ ಕಣ ಬೆಳಕಿಗಿಂತ ತುಸು ವೇಗದಲ್ಲಿ ಚಲಿಸುತ್ತದೆ. ಹಾಗಿದ್ದರೆ ಐನ್ ಸ್ಟೀನನನ್ನು ಗತಕಾಲದವನು ಅಥವಾ ಔಟ್ ಡೇಟೆಡ

ಐನ್ ಸ್ಟೀನನ ಸಿದ್ಧಾಂತ ಸುಳ್ಳಾದರೆ ನನ್ನ ಬಾಕ್ಸಿಂಗ್ ಚಡ್ಡಿ ತಿನ್ನುವೆ ಎಂದ ಜಿಮ್!

Image
ನಿನ್ನೆಯಷ್ಟೇ ಜಿನೇವಾದಲ್ಲಿನ ಲಾಜ್೯ ಹ್ಯಾಡ್ರಾನ್ ಕೊಲೈಡರ್ ನಿಂದ ಬಂದಂಥ ಸುದ್ದಿ ವೈಜ್ಞಾನಿಕ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಯಾವ ಸಿದ್ಧಾಂತದ ಮೇಲೆ ಇಷ್ಟು ವಷ೯ ಭೌತಶಾಸ್ತ್ರವೇ ನಿಂತಿತ್ತೋ ಆ ಸಿದ್ಧಾಂತವೇ ಅಲುಗಾಡಿದೆ ಎಂದರೆ ಮನೆಯ ಅಡಿಪಾಯವೇ ಬಿರಿದಂತೆ. ನಿಜ, ವಿಜ್ಞಾನ ಎಂದರೆ ಮೂಗು ಮುರಿದು ಅದು ಯಾರಿಗೆ ಅಥ೯ವಾಗುತ್ತೆ ಮಾರಾಯಾ ಅನ್ನುವವರು ಕೂಡಾ ಐನ್ ಸ್ಟೀನನ ಸಿದ್ಧಾಂತ ಸುಳ್ಳಾಗುತ್ತಿದೆ ಎಂಬ ಸುದ್ದಿಯನ್ನು ಚೂಯಿಂಗ್ ಗಮ್ ನಂತೆ ಜಗಿದಿದ್ದಾರೆ. ಒಂದಷ್ಟು ಹೊತ್ತು ಚಚೆ೯ ನಡೆಸಿ ಬಳಿಕ ಇವರು ಹೇಳಿದ್ದು ಅದೇ ಹಳೇ ಮಾತನ್ನು- ವಿಜ್ಞಾನ ಯಾರಿಗೆ ಅಥ೯ವಾಗುತ್ತೆ?   ಇವರ ವಿಚಾರ ಒತ್ತಟ್ಟಿಗಿರಲಿ, ಈ ಸಂಶೋಧನೆಯ ಬಗ್ಗೆ ವಿಜ್ಞಾನಿಗಳು ಯಾವ ಪ್ರತಿಕ್ರಿಯೆಯನ್ನೇ ಕೊಡಲಿಲ್ಲವೇ? ಕೊಟ್ಟಿದ್ದಾರೆ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವೊಬ್ಬರು ಅದೆಷ್ಟು ಪೂವಾ೯ಗ್ರಪೀಡಿತರಾಗಿ ವತಿ೯ಸಿದ್ದಾರೆ ಎಂದರೆ, ಒಂದು ಸಂಶೋಧನೆಯ ಫಲಿತಾಂಶವನ್ನು ಕನಿಷ್ಟಪಕ್ಷ ಚಚಿ೯ಸುವಂಥ ಮನಃಸ್ಥಿತಿಯನ್ನೂ ಅವರು ಪ್ರದಶಿ೯ಸಿಲ್ಲ. ಇಂಥ ಪೂವಾ೯ಗ್ರಹಗಳು ಹೊಸದೇನಲ್ಲ ಬಿಡಿ. ಐನ್ ಸ್ಟೀನ್ ತನ್ನ ಸಾಪೇಕ್ಷತಾ ಸಿದ್ಧಾಂತವನ್ನು ಮಂಡಿಸುವಾಗಲೂ ಅಂದಿನ ವಿಜ್ಞಾನಿಗಳು ಪೂವಾ೯ಗ್ರಹಪೀಡಿತರಂತೆ ವತಿ೯ಸಿದ್ದರು. ನ್ಯೂಟನ್ ಗುರುತ್ವಾಕಷ೯ಣ ಶಕ್ತಿಯನ್ನು ಕಂಡು ಹಿಡಿದಾಗಲೂ ಒಂದಷ್ಟು ಅಪಸ್ವರಗಳು ಪುಟಿದೆದ್ದು ಬಂದಿದ್ದವು. ಇರಲಿ, ಅಂದಿನ ವಿಚಾರಗಳು ಈ

ಆಲ್ಬರ್ಟ್ ಐನ್ ಸ್ಟೀನನ ಸಿದ್ಧಾಂತವೇ ಸುಳ್ಳೇ?

Image
ಭೌತಶಾಸ್ತ್ರಕ್ಕೊಂದು  ಮೂಲಭೂತ ನಿಯಮ ಎನ್ನುವುದನ್ನು ಕೊಟ್ಟದ್ದು ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್. ಅದು ವಿಶೇಷ ಸಾಪೇಕ್ಷತಾ ಸಿದ್ಧಾಂತ. ಇದೀಗ ಈ ಸಿದ್ಧಾಂತವೇ ಸುಳ್ಳಾಗಿರಬಹುದೇ ಎಂಬ ಚಿಂತನೆಯನ್ನು ಹಚ್ಚಿದೆ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಲ್ಲಿನ ಸಂಶೋಧನೆ. ಐನ್ ಸ್ಟೀನನ ವಿಶೇಷ ಸಾಪೇಕ್ಷತಾ ಸಿದ್ಧಾಂತದ ಪ್ರಕಾರ ಒಂದು ವ್ಯವಸ್ಥೆ ಭೌತಶಾಸ್ತ್ರದ ಎಲ್ಲ ನಿಯಮಗಳನ್ನೂ ಸಮರ್ಪಕವಾಗಿ ಸಾಬೀತುಪಡಿಸುತ್ತದೆ ಎಂದಾದರೆ ಆ ವ್ಯವಸ್ಥೆಯ ಜೊತೆಗೆ ಸಂಬಂಧ ಹೊಂದಿರುವಂಥ ಇನ್ನೊಂದು ವ್ಯವಸ್ಥೆಯೂ ಸಹ ಭೌತಶಾಸ್ತ್ರದ ಎಲ್ಲ ನಿಯಮಗಳಿಗೂ ಅನ್ವಯವಾಗಿರಲೇಬೇಕು. ಈ ಸಿದ್ಧಾಂತದ ಪ್ರಕಾರವೇ ಐನ್ ಸ್ಟೀನ್ ರಾಶಿ ಮತ್ತು ಶಕ್ತಿಯ ನಡುವಿನ ಸಂಬಂಧದ ಸೂತ್ರವನ್ನು ಕೊಟ್ಟ. ಇದುವೇ ಮಾಸ್ ಎನರ್ಜಿ ರಿಲೇಶನ್, E= mc2. ಇಲ್ಲಿ E ಅಂದರೆ ಶಕ್ತಿ, m ಅಂದರೆ ಕಣದ ರಾಶಿ ಮತ್ತು c ಬೆಳಕಿನ ವೇಗ. ಇವುಗಳ ಪೈಕಿ ಬೆಳಕಿನ ವೇಗವನ್ನು ಸ್ಥಿರಾಂಕವೆಂದು ಪರಿಗಣಿಸಲಾಗಿತ್ತು. ಬೆಳಕಿನ ವೇಗ ಪ್ರತಿ ಸೆಕೆಂಡಿಗೆ  186,282 ಮೈಲಿಗಳು ಎಂಬುದು ಇದುವರೆಗಿನ ಲೆಕ್ಕಾಚಾರ. ಬೆಳಕಿನ ವೇಗವನ್ನು ಈ ಸಂಖ್ಯೆಗೆ ಸ್ಥಿರಗೊಳಿಸಿಯೇ ಭೌತಶಾಸ್ತ್ರದ ಎಲ್ಲ ನಿಯಮಗಳನ್ನೂ ರೂಪಿಸಲಾಗಿದೆ. ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಲ್ಲಿನ ಸಂಶೋಧನೆ ಬೆಳಕಿನ ವೇಗವನ್ನೇ ಪ್ರಶ್ನಿಸಿದೆ. ಅಂದರೆ ನಿಗದಿತ ಶಕ್ತಿ ಮಟ್ಟದಲ್ಲಿ, ನಿಗದಿತ ರಾಶಿಯ ಒಂದು ಕಣ ಗರಿಷ್ಠ ಎಂದರೆ ಬೆಳಕಿನ ವೇಗದಲ್ಲಿ ಚಲ

ಇಂಗಾಲವಿಲ್ಲದ ಜೀವಗಳು...!

Image
ವೈಜ್ಞಾನಿಕ ಜಗತ್ತು ಇಂದು ಅಚ್ಚರಿ ಎನ್ನಿಸುವಂಥ ಒಂದು ಸಾಧನೆ ಮಾಡುವುದಕ್ಕೆ ಕಾರಣವಾಗಿದೆ. ಅದು ಕಾರ್ಬನ್ (ಇಂಗಾಲ) ಇಲ್ಲದಂಥಜೀವ ಜಗತ್ತಿನ ಸೃಷ್ಟಿ!  ಅನ್ವೇಷಣೆ ಅನ್ನುವಂಥದ್ದು ಸದಾ ಚಲನಶೀಲ. ಒಂದು ವಿಚಾರದ ಅನ್ವೇಷಣೆಯಾದರೆ ಅದನ್ನು ಮತ್ತೊಂದಷ್ಟು ಒರೆಗೆ ಹಚ್ಚಿ ಆ ಅನ್ವೇಷಣೆಯನ್ನು ಇನ್ನಷ್ಟು ಬಲಗೊಳಿಸುವ ಪ್ರಯತ್ನ ನಡೆಯುತ್ತದೆ. ಇಂಥ ಪ್ರಯತ್ನದಲ್ಲಿ ಎಷ್ಟೋ ಬಾರಿ ಮೊದಲಿನ ಅನ್ವೇಷಣೆಯೇ ಸುಳ್ಳು ಎಂಬ ಫಲಿತಾಂಶ ಬರುತ್ತದೆ. ಮಹತ್ತರವಾದಂಥ ನಿರೀಕ್ಷೆಗಳನ್ನಿಟ್ಟುಕೊಂಡು ಪ್ರಯೋಗ ಶುರು ಮಾಡುತ್ತೇವೆ. ಫಲಿತಾಂಶ ಬಂದಾಗ ಎಲ್ಲವೂ ತಲೆಕೆಳಗಾಗಿರುತ್ತದೆ. ಹಾಗಂತ ಪ್ರಯತ್ನಗಳು ನಿಲ್ಲುವುದಿಲ್ಲ. ಅದು ವಿಜ್ಞಾನದ ತಾಕತ್ತು. ಅದೆಷ್ಟೇ ವೈಫಲ್ಯಗಳು ಎದುರಾದರೂ ಮರಳೆ ಯತ್ನವ ಮಾಡುವಂಥ ಮನಸ್ಥಿತಿಯೇ ವೈಜ್ಞಾನಿಕ ಜಗತ್ತನ್ನು ಕಂಡು ಇತರರು ಅಚ್ಚರಿಗೊಳ್ಳುವಂತೆ ಮಾಡುತ್ತದೆ. ಇಂಥ ಮನಸ್ಥಿತಿಯೇ ವೈಜ್ಞಾನಿಕ ಜಗತ್ತು ಇಂದು ಅಚ್ಚರಿ ಎನ್ನಿಸುವಂಥ ಒಂದು ಸಾಧನೆ ಮಾಡುವುದಕ್ಕೆ ಕಾರಣವಾಗಿದೆ. ಅದು ಕಾರ್ಬನ್ (ಇಂಗಾಲ) ಇಲ್ಲದಂಥಜೀವ ಜಗತ್ತಿನ ಸೃಷ್ಟಿ! ಪ್ರಸ್ತುತ ಭೂಮಿಯಲ್ಲಿ ಕಾರ್ಬನ್ ಅಥವಾ ಇಂಗಾಲವನ್ನು ಹೊಂದಿಲ್ಲದಂಥ ಜೀವಿಗಳನ್ನು ಹುಡುಕುವುದು ಕಷ್ಟ. ಯಾವುದೇ ಜೀವಿಯನ್ನು ಉದಾಹರಣೆಯನ್ನಾಗಿ ತೆಗೆದುಕೊಂಡರೂ ಆ ಜೀವಿಯಲ್ಲಿ ಇಂಗಾಲ ಇದ್ದೇ ಇರುತ್ತದೆ. ನಾವು ಉಸಿರಾಡುವ ಗಾಳಿಯ ಮೂಲಕವೇ ಇಂಗಾಲ ನಮ್ಮ ದೇಹ ಸೇರುತ್ತಿರುವಾಗ ಬೇರೆ ಪ್ರಶ್ನೆ ಬೇಕ

ಪ್ಲೂಟೋದಲ್ಲಿ ಸಾಗರ ಗಭ೯!

Image
ಒಂದು ಕಾಲದಲ್ಲಿ ನಮ್ಮ ಸೌರಮಂಡಲದ ಒಂಬತ್ತನೇ ಗ್ರಹವಾಗಿದ್ದಂಥ ಪ್ಲೂಟೋವನ್ನು ಗ್ರಹದ ಪಟ್ಟಿಯಿಂದ ತೆಗೆದು ಹಾಕಲಾಗಿತ್ತು. ಈಗ ಅದೇ ಪ್ಲೂಟೋದಿಂದಲೇ ಒಂದು ವಿಸ್ಮಯ ಹೊರಬಿದ್ದಿದೆ. ಅದು... ಪ್ಲೂಟೋದಲ್ಲಿರುವಂಥ ಸಾಗರ ಗಭ೯!     ನಮ್ಮ ಸೌರಮಂಡಲದಲ್ಲಿನ ಅತ್ಯಂತ ಶೀತಕಾಯ ಎಂದೇ ಖ್ಯಾತಿ ಪಡೆದಂಥದ್ದು ಈ ಪ್ಲೂಟೋ. ಇದರಲ್ಲಿರುವಂಥ ಮೈಲಿಗಟ್ಟಲೆ ದಪ್ಪದ ಮಂಜಿನ ಪದರದಡಿ ಸಾಗರ ಇರುವಂಥ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಕ್ಯಾಲಿಫೋನಿ೯ಯಾ ಯೂನಿವಸಿ೯ಟಿಯ ವಿಜ್ಞಾನಿಗಳು. ಈ ಪ್ಲೂಟೋ ಅತ್ಯಂತ ಶೀತಲವಾಗಿದ್ದರೂ ಸಹ ಅದರಲ್ಲಿರುವಂಥ ವಿಕಿರಣ ವಸ್ತುಗಳು ಸೂಸುವಂಥ ವಿಕಿರಣಗಳ ಕಾರಣದಿಂದಾಗಿ ಈ ಕುಬ್ಜ ಗ್ರಹವು ತನ್ನೊಳಗೆ ಸಾಗರವನ್ನು ಹೊಂದುವುದಕ್ಕೆ ಅಗತ್ಯವಿರುವಷ್ಟು ಶಾಖ ಹೊಂದಿರುವ ಸಾಧ್ಯತೆಗಳಿವೆ.   ಈಗಾಗಲೇ ಶನಿಯ ಚಂದ್ರರಾದ ಟೈಟಾನ್ ಮತ್ತು ಎನ್ಸಿಲಾಡಸ್ ಗಳಲ್ಲಿ ನೀರಿನ ಸಾಗರ ಇದೆ ಎಂದು ಸಾಬೀತಾಗಿದೆ. ಒಂದು ವೇಳೆ ಪ್ಲೂಟೋದಲ್ಲಿಯೂ ಸಾಗರ ಇರುವುದು ಖಾತ್ರಿಯಾದರೆ ಅದು ಕೂಡಾ ಈ ಕಾಯಗಳ ಪಟ್ಟಿಗೆ ಸೇರುತ್ತದೆ. ಪ್ಲೂಟೋದ ಮೇಲ್ಪದರವು ಸುಮಾರು 200 ಕಿಲೋಮೀಟರ್ ಗಳಷ್ಟು ಮಂಜಿನ ಗಟ್ಟಿಯಿಂದ ಕೂಡಿದೆ. ಈ ಮಂಜಿನ ಪದರದಿಂದ ಸುಮಾರು 100ರಿಂದ 170 ಕಿಲೋಮೀಟರ್ ಗಳಷ್ಟು ಆಳದಲ್ಲಿ ತಾಜಾ ನೀರಿನ ಸಾಗರವಿರುವ ಸಾಧ್ಯತೆಗಳಿವೆ.   ಪ್ಲೂಟೋದಲ್ಲಿ ಮುಖ್ಯವಾಗಿ ಪೊಟ್ಯಾಶಿಯಂ- 40 ಮತ್ತಿತರ ವಿಕಿರಣ ವಸ್ತುಗಳಿವೆ. ಈ ವಿಕಿರಣ ವಸ್ತುಗಳ ಸದಾ ಸೂಸುತ್ತಿರುವಂಥ ಶಾಖದ

ಇಬ್ಬರು ಸೂಯ೯ರ ಮುದ್ದಿನ ಗ್ರಹ!

Image
ಆ ಲೋಕದಲ್ಲಿ ಒಬ್ಬ ಸೂಯ೯ ಉದಯಿಸಿದ ಬೆನ್ನಲ್ಲೇ ಇನ್ನೊಬ್ಬ ಸೂಯ೯ ಉದಯಿಸುತ್ತಾನೆ. ಮೊದಲ ಸೂಯ೯ನೊಂದಿಗೇ ಗಿರಕಿ ಹೊಡೆಯುತ್ತಾನೆ. ಆ ಸೂಯ೯ ನಡುನೆತ್ತಿಗೆ ಬಂದಾಗ ಇವನೂ ನಡುನೆತ್ತಿಗೆ ಬರುತ್ತಾನೆ. ಆ ಸೂಯ೯ ಮುಳುಗುವುದೇ ತಡ ಈ ಸೂಯ೯ನೂ ಮುಳುಗುತ್ತಾನೆ. ಈ ಇಬ್ಬರೂ ಸೂಯ೯ರಿಗೆ ಒಂದು ಮುದ್ದಿನ ಗ್ರಹವಿದೆ. ಆ ಗ್ರಹಕ್ಕೆ ಎರಡೆರಡು ಸೂಯೋ೯ದಯ ಎರಡೆರಡು ಸೂಯಾ೯ಸ್ತ ನೋಡುವಂಥ ಭಾಗ್ಯ. ಯಾರಿಗುಂಟು? ಯಾರಿಗಿಲ್ಲ?   30 ವಷ೯ಗಳ ಹಿಂದೆ ತೆರೆ ಕಂಡಂಥ ಹಾಲಿವುಡ್ ಚಿತ್ರ ಸ್ಟಾರ್ ವಾರ್ಸ್ ನೋಡಿದವರಿಗೆ ಇದು ಅದರದ್ದೇ ಕಥೆ ಎನಿಸಬಹುದು. ಆದರೆ ಇದು ಕಥೆಯಲ್ಲ, ವಾಸ್ತವ. ಇಂಥದ್ದೊಂದು ಲೋಕವನ್ನು ನಾಸಾದ ಕೆಪ್ಲರ್ ಬಾಹ್ಯಾಕಾಶ ಮಿಶನ್ ಪತ್ತೆ ಮಾಡಿದೆ. ಭೂಮಿಯಿಂದ 200 ಜ್ಯೋತಿವ೯ಷ೯ (1 ಜ್ಯೋತಿವ೯ಷ೯ ಅಂದರೆ 9460730472580.8 ಕಿಲೋ ಮೀಟರ್) ದೂರದಲ್ಲಿ ಈ ಗ್ರಹ ಮತ್ತು ಸೂಯ೯ರು ಇದ್ದಾರೆ.   ಈ ಗ್ರಹವು ಸಾಕಷ್ಟು ತಂಪಾಗಿದೆ ಮತ್ತು ಅನಿಲಗಳಿಂದ ತುಂಬಿದೆ. ಆದರೆ ಅಲ್ಲಿ ಜೀವಾಸ್ತಿತ್ವ ಇರುವುದು ಕಷ್ಟ. ಆದಾಗ್ಯೂ, ವಾಸಯೋಗ್ಯ ವಾತಾವರಣ ಇದೆ. ಹೀಗಾಗಿ ಅಲ್ಲಿ ಜೀವಿಗಳನ್ನು ಪತ್ತೆ ಮಾಡುವುದಕ್ಕೆ ಅಥವಾ ಜೀವಿಗಳು ವಾಸಿಸುವುದು ಸಾಧ್ಯವೇ ಎಂಬುದನ್ನು ಪತ್ತೆ ಮಾಡಲು ಪ್ರಯತ್ನಿಸಬಹುದು ಎಂದಿದ್ದಾರೆ ವಿಜ್ಞಾನಿಗಳು. ಈ ಗ್ರಹದ ಒಂದು ವಿಶೇಷವೆಂದರೆ ಇದು ಸೂಯ೯ರ ಸುತ್ತ ಪರಿಭ್ರಮಿಸುವುದಕ್ಕೆ ನಿಖರವಾದ ಕಾಲಮಾನವಿಲ್ಲ. ಅಂದರೆ, ನಮ್ಮ ಭೂಮಿ ಸೂಯ೯ನ ಸುತ್ತ ಪರಿಭ್ರಮಿಸು

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

Image
ಮೋಜಿನ ಜೀವನದ ಬೆನ್ನು ಬಿದ್ದ ಯುವ ಸಮುದಾಯ ಬಯಕೆ ತೀರಿಸಿಕೊಳ್ಳುವ ಭರದಲ್ಲಿ ಎಡವುವುದೇ ಹೆಚ್ಚು. ಇಂಥ ಸಂದರ್ಭದಲ್ಲಿ ಗರ್ಭಧಾರಣೆಯಾಗುವುದನ್ನು ತಪ್ಪಿಸಲು ಬಹುತೇಕ ಯುವಸಮುದಾಯ ಗರ್ಭನಿರೋಧಕಗಳ ಮೊರೆ ಹೋಗುತ್ತದೆ. ಅತಿಯಾದ ಗರ್ಭನಿರೋಧಕ ಗುಳಿಗೆಗಳ ಸೇವನೆ ನಿಮ್ಮ ನೆನಪುಗಳನ್ನೇ ಹಾಳುಮಾಡಬಹುದು, ಸ್ಮರಣಶಕ್ತಿಗೆ ಹೊಡೆತ ನೀಡಬಹುದು ಎಚ್ಚರ. ಆವಿಷ್ಕಾರಗಳು ಪ್ರಪಂಚಕ್ಕೆ ಉಪಕಾರಿಯಾಗುವುದರ ಜೊತೆ ಜೊತೆಗೆ ಹಲವು ಬಾರಿ ಕಂಟಕವಾಗಿಯೂ ಪರಿಣಮಿಸುತ್ತವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಗರ್ಭನಿರೋಧಕ ಗುಳಿಗೆಗಳು. ಬೇಡದ ಗರ್ಭವನ್ನು ತಡೆಗಟ್ಟುವಂಥ ಈ ಗುಳಿಗೆಗಗಳನ್ನು ಇಂದು ಅತಿಯಾಗಿ ಬಳಸುತ್ತಿರುವುದು ಯುವ ಸಮುದಾಯ. ಮೋಜಿನ ಜೀವನದ ಬೆನ್ನು ಬಿದ್ದ ಯುವ ಸಮುದಾಯ ಬಯಕೆ ತೀರಿಸಿಕೊಳ್ಳುವ ಭರದಲ್ಲಿ ಎಡವುವುದೇ ಹೆಚ್ಚು. ಇಂಥ ಸಂದರ್ಭದಲ್ಲಿ ಗರ್ಭಧಾರಣೆಯಾಗುವುದನ್ನು ತಪ್ಪಿಸಲು ಬಹುತೇಕ ಯುವಸಮುದಾಯ ಗರ್ಭನಿರೋಧಕಗಳ ಮೊರೆ ಹೋಗುತ್ತದೆ. ಇದರಿಂದಾಗಬಹುದಾದಂಥ ಅಪಾಯಗಳೆಲ್ಲ ಆ ಕ್ಷಣದಲ್ಲಿ ನೆನಪಿಗೆ ಬರುವುದೇ ಇಲ್ಲ! ಅತಿಯಾದ ಗರ್ಭನಿರೋಧಕ ಗುಳಿಗೆಗಳ ಸೇವನೆ ಬಂಜೆತನಕ್ಕೆ ಕಾರಣವಾಗಬಹುದು ಎಂಬ ಸತ್ಯವನ್ನು ವೈಜ್ಞಾನಿಕ ಸಂಶೋಧನೆಗಳು ಈಗಾಗಲೇ ಸಾಬೀತುಪಡಿಸಿವೆ. ಈ ವಿಚಾರ ಗೊತ್ತಿದ್ದರೂ ಯುವಸಮುದಾಯ ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುವಂಥ ಪ್ರಸಂಗ ಬರದಂತೆ ಎಚ್ಚರವಹಿಸುವುದೇ ಇಲ್ಲ. ಇದೀಗ ವಿಜ್ಞಾನಿಗಳು ಈ ಗರ್ಭನಿರೋಧಕ ಗುಳಿಗೆಗಳ ಇನ್ನೊಂದು

ಅಳಿವ ಜೀವಿಗೆ ಕಾಂಡಕೋಶದ ರಕ್ಷೆ?

Image
ವಿನಾಶದ ಅಂಚಿಗೆ ಬಂದಿರುವಂಥ ಜೀವಿಗಳ ರಕ್ಷಣೆ ಸಾಧ್ಯವೇ ಇಲ್ಲವೇನೋ ಎಂದು ಆತಂಕಕ್ಕೊಳಗಾಗಿರುವಂಥ ಈ ಕಾಲಘಟ್ಟದಲ್ಲಿ ವೈಜ್ಞಾನಿಕ ತಂತ್ರಜ್ಞಾನವೊಂದು ಭರವಸೆಯ ಬೆಳಕನ್ನು ಹೊಮ್ಮಿಸಿದೆ. ಅದು ಕಾಂಡಕೋಶ ತಂತ್ರಜ್ಞಾನ. ಆದರೆ ಈ ರೀತಿ ಜೀವಿಗಳು ಸೃಷ್ಟಿಯಾಗಿ ಅವುಗಳ ಸಂಖ್ಯೆ ಹೆಚ್ಚಾದರೆ ವಾಸಿಸುವುದೆಲ್ಲಿ?  ಮಾನವನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಇದಕ್ಕೆ ತತ್ಸಮಾನವಾಗಿ ಇತರ ಜೀವಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ತನ್ನ ಬದುಕು ಕಟ್ಟಿಕೊಳ್ಳುವ ಭರದಲ್ಲಿ ಇತರ ಜೀವಿಗಳಿಗೂ ಈ ಭೂಮಿಯ ಮೇಲೆ ಹಕ್ಕಿದೆ ಎಂಬುದನ್ನು ಆತ ನಿರ್ಲಕ್ಷಿಸುತ್ತಿದ್ದಾನೆ. ಪರಿಣಾಮ ಹಲವಾರು ಜೀವಿಗಳು ಇಂದು ಕಣ್ಮರೆಯಾಗಿವೆ. ಇನ್ನೂ ಉನವಾರು ಪ್ರಭೇದದ ಜೀವಿಗಳು ಅದೇ ಹಾದಿಯಲ್ಲಿ ಸಾಗುತ್ತಿವೆ. ಅಳಿವಿನ ಅಂಚಿಗೆ ಬಂದು ನಿಂತ ಪ್ರಾಣಿಗಳನ್ನು ರಕ್ಷಿಸಬೇಕು ಎಂಬ ಕುಗು ದಶದಿಕ್ಕುಗಳಲ್ಲೂ ಮಾರ್ದನಿಸುತ್ತಿದೆ. ರಕ್ಷಣೆಯ ಬಗ್ಗೆ ನಡೆದಿರುವಂಥ ಕಾರ್ಯಗಳು ಮಾತ್ರ ಬಹುತೇಕ ನಿಷ್ಪ್ರಯೋಜಕ! ವಿನಾಶದ ಅಂಚಿಗೆ ಬಂದಿರುವಂಥ ಜೀವಿಗಳ ರಕ್ಷಣೆ ಸಾಧ್ಯವೇ ಇಲ್ಲವೇನೋ ಎಂದು ಆತಂಕಕ್ಕೊಳಗಾಗಿರುವಂಥ ಈ ಕಾಲಘಟ್ಟದಲ್ಲಿ ವೈಜ್ಞಾನಿಕ ತಂತ್ರಜ್ಞಾನವೊಂದು ಭರವಸೆಯ ಬೆಳಕನ್ನು ಹೊಮ್ಮಿಸಿದೆ. ಅದು ಕಾಂಡಕೋಶ ತಂತ್ರಜ್ಞಾನ. ಪ್ರತಿಯೊಂದು ಜೀವಿಗಳ ಜೀವಕೋಶಗಳಿಗೂ ಮೂಲಕೋಶಗಳಾಗಿರುವುದು ಕಾಂಡಕೋಶ. ಇಂಥ ಕಾಂಡಕೋಶಗಳನ್ನು ಪಡೆದು ಮಾನವನ ಹಲವಾರು ಸಮಸ್ಯೆಗಳನ್ನು ನಿವಾರಿಸುವಲ್ಲಿ ವೈಜ್ಞಾನಿಕ