Posts

Showing posts from 2012

ಮಂಗಳನ ಜೀವಿಗಳು ಭೂಮಿಗೆ ಬರುತ್ತಿವೆ

Image
ಮಂಗಳನಲ್ಲಿ ಇರುವಂಥ ಜೀವಿಗಳನ್ನು ನಾವು ಭೂಮಿಗೆ ತೆಗೆದುಕೊಂಡು ಬರುತ್ತಿದ್ದೇವೆ. ನೀಲಿ ಬಣ್ಣದ ಈ ಜೀವಿಗಳ ಬಗ್ಗೆ ಭೂಮಿಯಲ್ಲಿಯೇ ಅಧ್ಯಯನ ನಡೆಸುತ್ತೇವೆ. ಅವು ಭೂಮಿಯಲ್ಲಿ ಬದುಕುವ ಶಕ್ತಿ ಹೊಂದಿವೆಯೇ ಎಂಬುದನ್ನು ಪರೀಕ್ಷಿಸುತ್ತೇವೆ.... ಹೀಗಂತ ನಾಸಾದ ವಿಜ್ಞಾನಿಗಳು ಘೋಷಿಸಿದ್ದಾರೆ. ಮಂಗಳನ ಜೀವಿಗಳು ಎಂದಾಕ್ಷಣ ಹಾಲಿವುಡ್ ಚಲನಚಿತ್ರಗಳು ನೆನಪಾದರೆ ಅದರಲ್ಲಿ ಅಚ್ಚರಿಯಿಲ್ಲ. ಸ್ಫೀಶೀಸ್-2, ಮೆನ್ ಇನ್ ಬ್ಲಾಕ್ 3, ಪ್ರಾಮೆಥೌಸ್ ಮೊದಲಾದ ಚಿತ್ರಗಳೆಲ್ಲ ಅನ್ಯಗ್ರಹಗಳ ಜಿವಿಗಳ ಕಲ್ಪನೆಯನ್ನಿಟ್ಟುಕೊಂಡೇ ನಿರ್ಮಿಸಿರುವಂಥದ್ದು. ಬೇರೆ ಗ್ರಹದ ಜೀವಿಗಳು ಭೂಮಿಗೆ ಬಂದರೆ ಹೇಗಿರುತ್ತದೆ ಎಂಬುದನ್ನು ಹಲವು ಶತಮಾನಗಳ ಹಿಂದಿನಿಂದಲೇ ನಾವು ಕಲ್ಪಿಸಿಕೊಳ್ಳುವುದಕ್ಕೆ ಶುರು ಮಾಡಿದ್ದೆವು. ಆದರೆ ಆ ಕಲ್ಪನೆಗಳು ವಾಸ್ತವ ರೂಪಕ್ಕೆ ಬರುತ್ತಿರುವುದು ಮಾತ್ರ ಈಗ!

ಇಂಥ ಸಂಶೋಧನೆಗಳು ಬೇಕಾ?

Image
ಲುಮಿನಾಲ್  ರಕ್ತದ ಜೊತೆಗೆ ರಾಸಾಯನಿಕ ಕ್ರಿಯೆಗೆ ಒಳಗಾದಾಗ ನೀಲಿ ಬಣ್ಣದ ಪ್ರಕಾಶಮಾನ ಬೆಳಕು ಹೊಮ್ಮಿಸುತ್ತದೆ. ವೈಜ್ಞಾನಿಕ ಸಂಶೋಧನೆಗಳು ಜಗತ್ತಿಗೆ ಉಪಕಾರಿ ಯಾಗುವಂತಿರ ಬೇಕು. ಮನುಕುಲವನ್ನು, ಜೀವಸಂಕುಲವನ್ನು ಪೋಷಿಸುತ್ತಿರುವಂಥ ಭೂಮಿಯನ್ನು ನಾಶ ಮಾಡುವಂಥ ಸಂಶೋಧನೆಗಳನ್ನು ಮಾಡಬಾರದು. ಆದರೆ ಬಹಳಷ್ಟು ಬಾರಿ ಸಂಶೋಧನೆಗಳು ಸಂಶೋಧನೆಕಾರನ ಎಣಿಕೆಯನ್ನು ಮೀರಿ ಹಳಿ ತಪ್ಪಿ ನಡೆಯುತ್ತವೆ. ಇನ್ನೂ ಬಹಳಷ್ಟು ಸಾರ್ತಿ ಉದ್ದೇಶಪೂರ್ವಕವಾಗಿಯೇ ನಡೆಸಿದ ಒಂದು ಸಂಶೋಧನೆ ಜೀವಪೋಷಕ ಭೂಮಿಗೆ ಮಾರಕವಾಗಿ ಪರಿಣಮಿಸುತ್ತವೆ. ಕೆಲವೊಂದು ಬಾರಿ ಯಾರದೋ ಒತ್ತಾಸೆಗೆ, ಒತ್ತಡಕ್ಕೆ, ಬೆದರಿಕೆಗೆ ಮಣಿದು ಇಳೆಯನ್ನು ಹಾಳು ಮಾಡುವಂಥ ಸಂಶೋಧನೆ ನಡೆಯುತ್ತದೆ.

ಗ್ರಹಗಳು ಮಾರಾಟಕ್ಕಿವೆ...!!

Image
ಒಬ್ಬ ತಾಯಿಯ ಗರ್ಭ ಶಿಶುವಿನ ಬೆಳವಣಿಗೆ ಮತ್ತು ಜನ್ಮಕ್ಕೆ ಯೋಗ್ಯವಾಗಿದೆ ಎಂಬುದಷ್ಟೇ ಮುಖ್ಯವಾಗುವುದಿಲ್ಲ. ಆ ಗರ್ಭದಲ್ಲಿ ಜೀವ ಚಿಗುರಬೇಕು. ಅಂತೆಯೇ ಗ್ರಹಗಳು. ಓಹ್, ಒಂದು ಪುಟ್ಟ ಭೂಮಿ ನಮ್ಮಲ್ಲಿರುತ್ತಿದ್ದರೆ, ಚಿಕ್ಕದಾದರೂ ಚೊಕ್ಕದಾದ ಮನೆಯೊಂದನ್ನು ಕಟ್ಟಿ ಹಾಯಾಗಿರುತ್ತಿದ್ದೆವು ಎಂದು ಹಲುಬುತ್ತಾ ಕೂರುವವರಿಗೆ ಬರವಿಲ್ಲ. ಬೆಂಗಳೂರಿನಂಥ ನಗರಗಳಲ್ಲಿ ಮೂರಡಿ ಆರಡಿ ಜಾಗ ಸಿಗುವುದೇ ಕಷ್ಟ, ಇಂತಿರುವಾಗ ಮನೆ ಕಟ್ಟಲು ಬೇಕಾದಷ್ಟು ಜಾಗ ಎಲ್ಲಿ ಸಿಕ್ಕೀತು? ಹಳ್ಳಿಗಳಲ್ಲಿ ಕೂಡಾ ಈಗ ಪಟ್ಟಣದ ಸ್ಥಿತಿ ಬಂದುಬಿಟ್ಟಿದೆ... ಒಂದು ಜಾಗ ಖರೀದಿಸುವುದಕ್ಕೆ ಹೊರಟರೆ ಎಷ್ಟೆಲ್ಲ ಯೋಚನೆಗಳು ಹುಟ್ಟಿಕೊಳ್ಳುತ್ತವೆ! ಆದರೆ ಜಾಗ ಖರೀದಿ ವಿಚಾರ ಈಗ ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿದೆಯೇನೋ ಎಂಬ ಶಂಕೆ ಶುರುವಾಗಿದೆ. ಯಾಕೆ ಗೊತ್ತಾ? ನಮ್ಮ ಬ್ರಹ್ಮಾಂಡದಲ್ಲಿ ಇರುವಂಥ ಹಲವಾರು ವಾಸಯೋಗ್ಯ ಗ್ರಹಗಳಲ್ಲಿನ ಜಾಗ ಈಗ ಮಾರಾಟಕ್ಕಿದೆ. ಅಚ್ಚರಿ ಪಡಬೇಡಿ, ಶೀಘ್ರದಲ್ಲಿಯೇ ನಮ್ಮ ಜನರು ಭೂಮಿಯನ್ನು ಬಿಟ್ಟು ಮತ್ತಾವುದೋ ಆಕಾಶಕಾಯಗಳಿಗೆ  ಗುಳೇ ಹೊರಡುವುದು ಖರೇ! ಮುಂದೊಂದು ದಿನ ಸೂಪರ್ ಭೂಮಿಯಲ್ಲಿ ಜಾಗ ಹೊಂದಿರುವ, ಭವ್ಯ ಬಂಗಲೆ ಕಟ್ಟಿರುವ ಹುಡುಗನಿಗೆ ಮಾತ್ರ ಹುಡುಗಿ ಕೊಡುವುದು ಎಂಬ ಷರತ್ತನ್ನು ಹೆಣ್ಣು ಹೆತ್ತವರು ಹೇರಿದರೆ ಗಂಡು ಹೆತ್ತವರು ಸೂಪರ್ ಭೂಮಿಯಲ್ಲಿ ಜಾಗ ಖರೀದಿಸುವುದಕ್ಕೆ ಪಡಿಪಾಟಲು ಪಡುವಂಥ ಪರಿಸ್ಥಿತಿ ಬಂದೀತು!

ಸೋಲಾರನ್ನು ಪೇಂಟ್ ಮಾಡಿ

Image
ಸೌರಕೋಶಗಳನ್ನು ದ್ರವರೂಪಕ್ಕೆ ಇಳಿಸಿದ್ದಾರೆ ವಿಜ್ಞಾನಿಗಳು. ಈ ದ್ರವರೂಪದ ಸೌರಕೋಶಗಳನ್ನು ಮನೆ ಗೋಡೆಗೆ, ಛಾವಣಿಗೆ ಪೇಂಟ್ ಮಾಡಿದ್ರಾಯ್ತು.   ಬೇಸಗೆ ಬಂತೆಂದ್ರೆ ಸಾಕು, ಪವರ್ ಕಟ್, ಲೋಡ್ ಶೆಡ್ಡಿಂಗ್, ಲೋ ವೋಲ್ಟೇಜ್... ಶಿವನಸಮುದ್ರದಲ್ಲಿ ನೀರಿಲ್ಲ, ವಿದ್ಯುತ್ ಖರೀದಿ ಸಾಮರ್ಥ್ಯ ನಮ್ಮಲ್ಲಿಲ್ಲ. ಕರೆಂಟ್ ಇಲ್ದೇ ಇರೋದನ್ನು ಸ್ವಲ್ಪ ಅಭ್ಯಾಸ ಮಾಡ್ಕೊಳ್ಳಿ... ಅನ್ನೋ ಧಾಟಿಯನ್ನೇ ಪ್ರತಿಧ್ವನಿಸುವಂತೆ ಹಣಕುತ್ತಾ ಕಣ್ಣಾಮುಚ್ಚಾಲೆಯಾಡುವ ಕರೆಂಟ್‌ಗೆ ಅದೆಷ್ಟು ಶಾಪ ಹಾಕ್ತೀವೋ ಗೊತ್ತಿಲ್ಲ. ಅಟ್‌ಲೀಸ್ಟ್ ಬೆಳಕಾದ್ರೂ ಇರ್‌ಲಿ ಅಂತ ಸೋಲಾರ್ ಹಾಕ್ಸೋಣ ಅಂದ್ಕೊಂಡ್ರೆ ಅದ್ರಲ್ಲಿ ಬರೋ ಬೆಳಕು ಸಾಲೇದೇ ಇಲ್ಲ. ಇನ್ನು ಮಿಕ್ಸಿ, ಗ್ರೈಂಡರ್, ಟಿವಿ, ಫ್ಯಾನು... ಎಲ್ಲ ಕೆಲ್ಸ ಮಾಡಬೇಕಾದರೆ ಮನೆ ಛಾವಣಿಯುದ್ದಕ್ಕೂ ಸೋಲಾರ್ ಪೆನಲ್‌ಗಳನ್ನು ಹಾಕಿಸಬೇಕಾಗಿ ಬರುತ್ತೆ. ಒಟ್ಟಿನಲ್ಲಿ ಸಮಸ್ಯೆ ಬಗೆಹರಿಯೋದೇ ಇಲ್ಲ ಅಂತ ಚಿಂತೆ! ಆದರೆ ವಿಜ್ಞಾನಿಗಳು ಈ ಚಿಂತೆಗೆ ಪರಿಹಾರ ಕಂಡುಕೊಂಡುಳ್ಳುವ ಮಹತ್ತರ ಸಂಶೋಧನೆ ಮಾಡಿದ್ದಾರೆ.

ಸ್ಪೇಸ್ ವಾರ್

Image
ಇದು ಈ ಬಾರಿ ವಿಜಯ Nextನಲ್ಲಿ ಪ್ರಕಟವಾದ ಕವರ್ ಸ್ಟೋರಿ. ಅದನ್ನು ಯಥಾವತ್ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ ಮಹಾಕದನಕ್ಕೊಂದು ರಣರಂಗ ಕೈವಾರ ಗೋಪೀನಾಥ್ ೨೦೦೭ರ ಜನವರಿ ೧೧ರಂದು ಒಂದು ಆತಂಕಕಾರಿ ಘಟನೆ ಸಂಭವಿಸಿತು. ದಕ್ಷಿಣ ಚೀನಾದ ಅಂತರಿಕ್ಷದ ಮೇಲೆ ಒಂದು ಕೃತಕ ಉಪಗ್ರಹ ತನ್ನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿತ್ತು. ಇದ್ದಕ್ಕಿದ್ದಂತೆ ಆ ಕೃತಕ ಉಪಗ್ರಹ ಚೂರುಚೂರಾಗಿ ಒಡೆದು ಭಗ್ನಾವಶೇಷಗಳ ಮೋಡವನ್ನೇ ಸೃಷ್ಟಿಸಿತು. ಏಳು ವರುಷಗಳಿಂದ ನಿರಂತರವಾಗಿ ಭೂಕೇಂದ್ರಗಳಿಗೆ ತನಗೆ ಒಪ್ಪಿಸಿದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದ ಆ ಆರು ಅಡಿ ಉದ್ದದ ಕೃತಕ ಉಪಗ್ರಹವನ್ನು ನಾಶ ಮಾಡಿದ್ದು ಯಾರು ಎಂಬ ವಿಷಯ ತಿಳಿದರೆ ಅಚ್ಚರಿ ಮೂಡುತ್ತದೆ. ಆ ಕೃತಕ ಉಪಗ್ರಹವನ್ನು ಸೃಷ್ಟಿಸಿದ ಚೀನಾ ದೇಶವೇ ಅದನ್ನು ನಾಶ ಮಾಡಿತು ಎಂದರೆ ಆಶ್ಚರ್ಯವಾಗುತ್ತದೆ. ಸಿಚೂನ್ ರಾಜ್ಯದ ಕ್ಸಿಚಾಂಗ್ ಪ್ರದೇಶದ ಹತ್ತಿರವಿರುವ ಸೋಂಗ್ಲಿನ್ ಪರೀಕ್ಷಾ ಕೇಂದ್ರದಿಂದ ಅಂತರಿಕ್ಷದ ಕಡೆ ಉಡಾಯಿಸಲಾದ ಬಹು-ಹಂತಗಳ ಕ್ಷಿಪಣಿಯೊಂದು ಗಂಟೆಗೆ ೧೮೦೦೦ ಮೈಲಿಗಳ ವೇಗದಲ್ಲಿ ಪ್ರಯಾಣಿಸುತ್ತಾ ಆ ಕೃತಕ ಉಪಗ್ರಹದ ಜಾಡು ಹಿಡಿದು ಅದನ್ನು ನಾಶಮಾಡಿತು.

ನಮ್ಮ ಕ್ಷೀರಪಥದಲ್ಲಿ ಹಲವು ಶತಕೋಟಿ ವಾಸಯೋಗ್ಯ ಗ್ರಹಗಳಿವೆಯಂತೆ!

Image
ನಮ್ಮ ಕ್ಷೀರಪಥದಲ್ಲಿ ಕನಿಷ್ಠವೆಂದರೂ ೧೬೦ ಶತಕೋಟಿ ಕೆಂಪು ಕುಬ್ಜ ನಕ್ಷತ್ರಗಳಿವೆ. ಈ ನಕ್ಷತ್ರಗಳ ಸುತ್ತ ಕನಿಷ್ಠ ಒಂದು ಸೂಪರ್ ಅರ್ಥ್ ಪರಿಭ್ರಮಿಸುತ್ತಿದ್ದರೂ ೧೬೦ ಶತಕೋಟಿ ಸೂಪರ್‌ಅರ್ಥ್‌ಗಳು ನಮ್ಮ ಕ್ಷೀರಪಥದಲ್ಲಿರಬೇಕು. ಅಥವಾ ಶೇ.೪೦ರಷ್ಟೇ ಕೆಂಪು ಕುಬ್ಜ ಸೂರ್ಯರು ಸೂಪರ್ ಅರ್ಥ್ ಹೊಂದಿರುವುದು ಎಂಬ ವಾದವನ್ನು ಪರಿಗಣಿಸಿದರೂ ೬೪ ಶತಕೋಟಿ ಸೂಪರ್ ಅರ್ಥ್‌ಗಳು ನಮ್ಮ ಕ್ಷೀರಪಥದಲ್ಲಿರಬೇಕು. ಭೂಮಿಯನ್ನೊಳಗೊಂಡ ನಮ್ಮ ಸೌರಮಂಡಲ ಇರುವಂಥ ಕ್ಷೀರಪಥ ಗೆಲಾಕ್ಸಿಯಲ್ಲಿ ವಾಸಯೋಗ್ಯವಾಗಿರುವ ಗ್ರಹಗಳಿರಬಹುದೇ? ಬಾಹ್ಯಾಕಾಶದಾಚೆಗೆ ಸಾವಿರಾರು ಕೋಟಿ ಮೈಲಿಗಳ ದೂರದವರೆಗೆ ಎಲ್ಲಿಯಾದರೂ ಜೀವಾಸ್ತಿತ್ವಕ್ಕೆ ಅನುಕೂಲವಾಗುವಂಥ ಪ್ರದೇಶವಿದೆಯೇ ಎಂಬ ಹುಡುಕಾಟ ತಾರಕಸ್ಥಾಯಿ ತಲುಪಿರುವ ಈ ಹೊತ್ತಿನಲ್ಲಿ ಇಂಥದ್ದೊಂದು ಪ್ರಶ್ನೆ ಅಚ್ಚರಿ ಎನ್ನಿಸುವುದಿಲ್ಲ. ಕ್ಷೀರಪಥದೊಳಗೇ ವಾಸಯೋಗ್ಯ ಗ್ರಹಗಳು ಖಂಡಿತವಾಗಿಯೂ ಇರಬಹುದು ಎಂಬ ಉತ್ತರವೇ ಸಿಗುತ್ತದೆ. ಆದರೆ ಈ ಪ್ರಶ್ನೆಯ ಬೆನ್ನಿಗೇ ಎಷ್ಟು ಗ್ರಹಗಳು, ಆಕಾಶಕಾಯಗಳು ವಾಸಯೋಗ್ಯ ಪ್ರದೇಶಗಳನ್ನು ಹೊಂದಿರಬಹುದು? ಎಂಬ ಇನ್ನೊಂದು ಪ್ರಶ್ನೆ ಎಸೆದರೆ ಬಹುಶಃ ಅದಕ್ಕೆ ನಿಖರವಾದ ಉತ್ತರವನ್ನು ಕೊಡುವುದಕ್ಕೆ ಪರಿಣತ ವಿಜ್ಞಾನಿಗಳಿಂದಲೂ ಸಾಧ್ಯವಾಗದು.

ಪ್ಲಾಸ್ಟಿಕ್ ತಿನ್ನೋ ಫಂಗಸ್

Image
ಪ್ಲಾಸ್ಟಿಕ್ ತಿನ್ನೋ ಫಂಗಸ್ ಅನ್ನು ಕಂಡು ಹಿಡಿದಿದ್ದಾರೆ ಅಂತ ನನ್ನ ಗಮನಕ್ಕೆ ತಂದವರು ಮಿತ್ರ ಕಿರಣ್ ಪುರಾಣಿಕ್ . ಅದ್ಯಾವ ಪುಣ್ಯಾತ್ಮ ಪ್ಲಾಸ್ಟಿಕ್ ಕಂಡು ಹಿಡಿದ್ನೋ ( ಅಲೆಕ್ಸಾಂಡರ್ ಪಾರ್ಕ್ಸ್ , ೧೮೬೨ರಲ್ಲಿ ಪ್ಲಾಸ್ಟಿಕ್ ಅನ್ನೋ ಪಾಲಿಇಥಿಲೀನ್ ಅನ್ನು ಜಗತ್ತಿಗೆ ಪರಿಚಯಿಸಿದ್ದ) ಮನೆ ಮುಂದೆ ಎಲ್ಲಾ ಪ್ಲಾಸ್ಟಿಕ್... ಪ್ಲಾಸ್ಟಿಕ್... ಇಂಥದ್ದೊಂದು ಬಯ್ಗುಳ ಪರಿಸರ ಪ್ರಿಯರ ಬಾಯಿಯಿಂದ ಖಂಡಿತ ಕೇಳಿರುತ್ತೀರಿ. ಪರಿಸರ ರಕ್ಷಣೆಯ ಬಗ್ಗೆ ಮಾತುಗಳು ಚುರುಕು ಪಡೆದುಕೊಂಡಿರುವಂಥ ಈ ಸಮಯದಲ್ಲಿ ಜಗತ್ತಿನ ಉದ್ದಗಲಕ್ಕೂ ಪ್ಲಾಸ್ಟಿಕ್ ವಿರೋಧಿ ಮಾತುಗಳೇ ಕಿವಿಗಪ್ಪಳಿಸುತ್ತಿವೆ.

೨೩ ಮೈಲಿ ಎತ್ತರದಿಂದ ದಾಖಲೆಯ ಜಿಗಿತ!

Image
ಅಧಿಕ ಒತ್ತಡ ಇರುವಂಥ ದಿರಿಸು ಧರಿಸಿಕೊಂಡು ಜಿಗಿಯುವುದು ಎಂದರೆ ಅದು ಸುಲಭದ ವಿಚಾರವಲ್ಲ ಎನ್ನುತ್ತಾರೆ ಫೆಲಿಕ್ಸ್. ಯಾಕೆಂದರೆ ಒಂದು ವೇಳೆ ಎತಿ ಎತ್ತರದಿಂದ ಜಿಗಿಯುತ್ತಿರುವ ವೇಳೆ ಈ ದಿರಿಸಿನಲ್ಲಿ ಒಂದು ಸಣ್ಣ ತೂತು ಕಾಣಿಸಿಕೊಂಡರೂ ಅದನ್ನು ಧರಿಸಿದ ವ್ಯಕ್ತಿಯ ಕಣ್ಣಗುಡ್ಡೆಗಳು ಕುದಿಯತೊಡಗುತ್ತವೆ, ಹೃದಯ ಸ್ಫೋಟಿಸುತ್ತದೆ. 5 ಅಡಿ ಎತ್ತರದಿಂದ ಜಿಗಿಯುವುದೆಂದರೇ ಮೈ ನಡುಕ ಶುರುವಾಗುತ್ತದೆ. ಇನ್ನು ೨೩ ಮೈಲಿ ಸುಮಾರು ೧,೨೦,೦೦೦ ಅಡಿ ಎತ್ತರದಿಂದ ಜಿಗಿಯುವ ವಿಚಾರವನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಹೌದು, ಆಸ್ಟ್ರಿಯಾದ ಡೇರ್ ಡೆವಿಲ್ ಫೆಲಿಕ್ಸ್ ಬೌಮ್ ಗಾರ್ಟನರ್ ಇಂಥದ್ದೊಂದು ಸಾಹಸಕ್ಕೆ ಸಿದ್ಧವಾಗಿದ್ದಾರೆ. ಹಾಗಂತ ಇವರೇನೂ ಸುರಕ್ಷಾ ಸಾಧನಗಳಿಲ್ಲದೇ ಜಿಗಿಯುತ್ತಿಲ್ಲ. ಸುಮಾರು ೮ ಅಡಿ ಉದ್ದದ ಕ್ಯಾಪ್ಸೂಲ್‌ನಲ್ಲಿ (ಇದು ಅಪ್ಪಟ ಗಗನನೌಕೆಯಂತೆ ಕೆಲಸ ಮಾಡುತ್ತದೆ) ಕುಳಿತು ಹಾರಾಟ ನಡೆಸಲಿದ್ದು, ಬರೋಬ್ಬರಿ ೨೩ ಮೈಲಿ ಎತ್ತರಕ್ಕೆ ಏರಿ ಅಲ್ಲಿಂದ ಧುಮುಕಲಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅವರು ೬೦,೦೦೦ ಅಡಿ ಎತ್ತರದಿಂದ ಧುಮುಕಿ ತಮ್ಮ ಹೊಸಸಾಧನೆಗೆ ನಾಂದಿ ಹಾಡಿದ್ದಾರೆ. ಈ ಹಿಂದೆ ಇವರು ದೊಡ್ಡ ದೊಡ್ಡ ಕಟ್ಟಡಗಳ ಮೇಲಿಂದ ಹಾರುವ ಮೂಲಕ ಸಾಧನೆಯ ಒಂದೊಂದೇ ಮೆಟ್ಟಿಲನ್ನು ಏರುವುದಕ್ಕೆ ಶುರು ಮಾಡಿದ್ದರು. ಇದೀಗ ವಾತಾವರಣದ ಉನ್ನತ ಮಟ್ಟಕ್ಕೆ (ಬಹುತೇಕ ನಿರ್ವಾತದಿಂದ ಕೂಡಿರುವಂಥ ಎತ್ತರಕ್ಕೆ) ಏರಿ ಅಲ್ಲಿಂದ ಜಿಗಿಯುವ ದಾಖಲೆ ನಿರ್ಮಿಸ

ಸೂಪರ್ ಅರ್ಥ್‌ನಲ್ಲಿಯೂ ಇತ್ತು ಜೀವಾಸ್ತಿತ್ವ

Image
ವಿಷ್ಣುಪ್ರಿಯ ಅಂದ್ರೆ ಪ್ರಕಾಶ್ ಪಯಣಿಗ ಎಂಬುದನ್ನು ಬಹಿರಂಗಗೊಳಿಸಿದ ಬಳಿಕ ಮೊದಲ ಲೇಖನ. ಹಾಂ, ಅಂದ ಹಾಗೆ, ಇದು ವಿ ಜ್ಞಾ ನಗಂಗೆ ಬ್ಲಾಗ್‌ನಲ್ಲಿ ಮಾತ್ರ!  ಬ್ರಹ್ಮಾಂಡದ ಉದ್ದಗಲಕ್ಕೂ ಇರುವ ಅಸಂಖ್ಯಾತ ಗ್ರಹಗಳು, ಉಪಗ್ರಹಗಳು ಕ್ಷುದ್ರಗ್ರಹಗಳು.... ಒಟ್ಟಿನಲ್ಲಿ ಪ್ರತಿಯೊಂದು ಆಕಾಶಕಾಯಗಳಲ್ಲಿಯೂ ಜೀವಾಸ್ತಿತ್ವ ಇತ್ತೇ ಎಂಬ ಇದುವರೆಗೆ ಉತ್ತರ ಸಿಗದ ಪ್ರಶ್ನೆಯ ಬೆನ್ನತ್ತಿ ಹೊರಟ ವೈ ಜ್ಞಾ ನಿಕ ಜಗತ್ತು ಹಲವು ವಿಸ್ಮಯಗಳನ್ನು ಕಾಣುತ್ತಿದೆ. ಜಗನ್ನಿಯಮ ಹೀಗೂ ಇದೆಯೇ ಎಂಬ ಚಕಿತತೆಯೊಂದಿಗೇ ಹೊಸ ಹೆಜ್ಜೆಯನ್ನು ಇಡುವುದಕ್ಕೆ ಅಣಿಯಾಗುತ್ತಿದೆ. ಮಂಗಳನಲ್ಲಿ, ಚಂದ್ರನಲ್ಲಿ ನೀರು ಸಿಕ್ಕಿದಾಗ ಮರುಭೂಮಿಯಲ್ಲಿ ಓಯಸಿಸ್ ಕಂಡಷ್ಟೇ ಖುಷಿ ಪಟ್ಟಿದ್ದ ವೈ ಜ್ಞಾ ನಿಕ ಜಗತ್ತಿಗೆ ಹಲವು ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಗ್ರಹಗಳೂ ತಮ್ಮ ಅಗಾಧ ಗರ್ಭದಲ್ಲಿ ಜಲಸಾಗರವನ್ನು ಹೊಂದಿರುವ ಸಂಗತಿ ತಿಳಿದದ್ದು ಹಲವು ಹೊಸ ಮಜಲುಗಳ ದ್ವಾರಗಳನ್ನು ತೆರೆಯುವುದಕ್ಕೆ ಸಿಕ್ಕ ಕೀಲಿಕೈಯಂತಾಗಿದೆ.

ವಿಷ್ಣುಪ್ರಿಯ ಅಂದ್ರೆ......

ವಿಷ್ಣುಪ್ರಿಯ ಅಂದ್ರೆ ಯಾರು? ಇಂಥದ್ದೊಂದು ಪ್ರಶ್ನೆಯನ್ನು ತುಂಬಾ ಬಾರಿ ನನ್ನನ್ನೇ ಕೇಳಿದವರಿದ್ದಾರೆ. ಕೆಲವೊಂದು ಬಾರಿ ಹೇಳಿ ಬಿಡಬೇಕು ಎಂಬ ತುಡಿತ. ಛೇ, ಹೇಳಿದರೆ, ನನ್ನ ಗುರುತು ಬದಲಾದರೆ ಸದ್ಯಕ್ಕೆ ಒಳ್ಳೆಯದಲ್ಲ ಎಂಬ ಮನಸಿನ ಎಚ್ಚರಿಕೆಯ ಕರೆಗೆ ಓಗೊಟ್ಟು ಸುಮ್ಮನಾಗಿದ್ದೆ. ವಿಷ್ಣುಪ್ರಿಯ ಎಂದರೆ ಅವರಂತೆ, ಇವರಂತೆ... ತುಂಬಾ ಜನ ಹೇಳಿದ್ದರು. ನನ್ನ ಅಕ್ಕನಲ್ಲಿಯೂ ‘ಹಾಗಂದ್ರೆ ನೀನಾ?’ ಎಂದು ಕೇಳಿದ್ದರು. ಹೇಳೋದು ಹೇಗೆ? ಅವರು ಯಾರೋ ಪ್ರಾಯದ ವ್ಯಕ್ತಿಯಂತೆ ಎಂದವರೂ ಇದ್ದಾರೆ. ಈಗ ನನ್ನ ಐಡೆಂಟಿಟಿ ಬಯಲು ಮಾಡುವ ಗಳಿಗೆ ಸಮೀಪಿಸಿದೆಯೇನೋ ಎಂದೆನಿಸಿದೆ. ಆ ಕಾರಣಕ್ಕೆ ಈ ಬರಹ. ವಿಜ್ಞಾನದ ಬಗ್ಗೆ ಅತೀವ ಆಸಕ್ತಿ, ಬರೆಯುವುದಕ್ಕೆ ಅವಕಾಶವಿಲ್ಲದ ಪರಿಸ್ಥಿತಿ. ಅಂಥ ಸಂದರ್ಭದಲ್ಲಿ ಅವಕಾಶ ಸಿಕ್ಕಿದ್ದು ಹೊಸದಿಗಂತದಲ್ಲಿ. ಪ್ರತೀ ಬುಧವಾರ ವಿಜ್ಞಾನ ಮತ್ತು ಸಾದ್ಯವಾದಷ್ಟು ಮಟ್ಟಿಗೆ ಆಧ್ಯಾತ್ಮ, ವೇದಗಳನ್ನು ಸೇರಿಸಿಕೊಂಡು ಲೇಖನ ಬರೆಯುತ್ತಿದ್ದೆ. ಹಾಗಂತ ನಾನೇನೂ ಪರಿಪೂರ್ಣನಲ್ಲ. ಹಲವಾರು ವಿಚಾರಗಳ ಬಗ್ಗೆ ನಾನೂ ತಜ್ಞರ ಬಳಿ ಕೇಳಿ ತಿಳಿದುಕೊಂಡಿದ್ದಿದೆ. ಗುರುತು ಬಿಟ್ಟುಕೊಡಲಾಗದ ಅನಿವಾರ್ಯತೆಯಿಂದಾಗಿ ಅವರನ್ನು ಮುಖತಃ ಭೇಟಿ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಸತತವಾಗಿ ೫೬ ವಾರಗಳ ಕಾಲ ವಿಜ್ಞಾನ ವಿಶೇಷ ಅಂಕಣವನ್ನು ಹೊಸದಿಗಂತದಲ್ಲಿ ಬರೆದೆ. ಆದರೆ ನಂತರ ಮುಂದುವರಿಸುವುದು ಬೇಡ ಎಂದು ನಾನೇ ಅದಕ್ಕೆ ಅಂತ್ಯ ಹಾಡಿದೆ. ಹಾಗಂತ ಬ್ಲಾಗ್ ಬರೆಹ

ಸಹಾರಾ ಮರುಭೂಮಿಯಲ್ಲೊಂದು ಓಯಸಿಸ್

Image
ಮಾನವನಿಗೂ ಓಯಸಿಸ್ ನಿರ್ಮಿಸುವುದಕ್ಕೆ ಸಾಧ್ಯವೇ? ಅಚ್ಚರಿಬೇಡ, ಜಗತ್ತು ತಾಂತ್ರಿಕವಾಗು ಮುಂದುವರಿಯುತ್ತಿರುವಂಥ ಇಂದಿನ ದಿನದಲ್ಲಿ ಅಸಾಧ್ಯ ಎಂಬುದು ಬಹುಶಃ ಯಾವುದೂ ಇಲ್ಲ.   ಅದು ಸಹಾರಾ ಮರುಭೂಮಿ. ಸಾಹಸ ಮಾಡುವುದಕ್ಕೆಂದು ಹೊರಟು ನೀರಿಗಾಗಿ ಹುಡುಕಾಡುತ್ತಿದ್ದೀರಿ. ಎಲ್ಲಿ ನೋಡಿದರೂ ನೀರಿದೆ ಎಂಬ ಭ್ರಮೆ. ಆದರೆ ನೀರು ಕಾಣಿಸುತ್ತಿಲ್ಲ. ಮತ್ತೂ ಸ್ವಲ್ಪ ಮುಂದಕ್ಕೆ ಹೋದಿರಿ. ಅಲ್ಲೊಂದು ನೀರ ಚಿಲುಮೆ ಇದೆ ಎಂದು ನಿಮಗೆ ಭಾಸವಾಗುತ್ತದೆ. ಅದೂ ಮರೀಚಿಕೆಯೇ ಇರಬೇಕು ಎಂಬ ತೀರ್ಮಾನಕ್ಕೆ ಬರುತ್ತೀರಿ. ಆದರೂ ಕುತೂಹಲ. ತಣಿಯದ ದಾಹ. ಹನಿ ನೀರು ಸಿಕ್ಕರೆ ಸಾಕು, ಜೀವನವೇ ಧನ್ಯವಾಗುತ್ತದೆಂಬ ಹಪಹಪಿ. ಹತ್ತಿರ ಹೋಗಿ ನೋಡಿದರೆ ಆಶ್ಚರ್ಯ. ನಿಜಕ್ಕೂ ಅಲ್ಲೊಂದು ಓಯಸಿಸ್. ಅದು ನೈಸರ್ಗಿಕವಲ್ಲ, ಮಾನವ ನಿರ್ಮಿತ.

ಅಳಿದ ಬಳಿಕ ಚಿಂತಿಸಿ ಫಲವೇನು?

Image
ಉಲ್ಕಾಪಾತದಂಥ ಘಟನೆ ಸಂಭವಿಸಿದರೆ ಅದನ್ನು ತಡೆಯುವುದಕ್ಕೆ ನಮ್ಮಿಂದಾಗದು. ಭೂಮಿಯಾಳದಿಂದ ನುಗ್ಗಿ ಬರುವ ಜ್ವಾಲಾಮುಖಿಯನ್ನು ತಡೆಯಲು ಹೊರಟರೆ ಬೆಂಕಿ ಕೆಂಡವನ್ನು ರಟ್ಟಿನ ಪೆಟ್ಟಿಗೆಯೊಳಗೆ ಅಡಗಿಸಿಡುವ ಸಾಹಸ ಮಾಡಿದಂತಾದೀತು. ಹಾಗಂತ ಮಾನವ ಸೃಷ್ಟಿಸಿರುವ, ಸೃಷ್ಟಿಸುತ್ತಿರುವ ಪ್ರತಿಕೂಲ ವಿಚಾರಗಳಿಂದಾಗಿ ಜೀವಿಗಳು ಅವಸಾನಗೊಳ್ಳುವುದನ್ನು ತಡೆಯುವ ಪ್ರಯತ್ನ ಮಾಡಬಹುದಲ್ಲವೇ?   ಇದ್ದಾಗ ಗೊತ್ತಾಗದ ಮೌಲ್ಯ ಸತ್ತ ಮೇಲೆ ಗೊತ್ತಾಗುತ್ತದೆಯಂತೆ! ಇದು ಸಾರ್ವತ್ರಿಕವಾಗಿ ಅನ್ವಯವಾಗುವಂಥ ಮಾತು. ಅದು ಮನುಷ್ಯರೇ ಇರಲಿ, ಪ್ರಾಣಿಗಳೇ ಇರಲಿ ಯಾವ ಜೀವಿಯೇ ಆದರೂ ಆದು ಇಲ್ಲದಿದ್ದಾಗಲೇ ಅದರ ಬಗ್ಗೆ ಕುತೂಹಲ ಹೆಚ್ಚುತ್ತದೆ. ಈ ಮಾತು ಡೈನೋಸಾರ್ ಗಳ ವಿಚಾರದಲ್ಲಿ ಸಮರ್ಪಕವಾಗಿ ಅನ್ವಯವಾಗುತ್ತದೆ. ಹಲವು ಸಾವಿರ ವರ್ಷಗಳ ಹಿಂದೆ ಭೂಮಿಯ ಮೇಲೆ ಇದ್ದವು ಎಂದು ಹೇಳಲಾಗುವಂಥ ಡೈನೋಸಾರ್ ಗಳು ಹೇಗಿದ್ದವು? ಅವುಗಳ ಶಾರೀರಿಕ ರಚನೆ ಹೇಗಿತ್ತು? ಅವುಗಳು ನಾವಂದುಕೊಂಡಿರುವಂತೆಯೇ ಕ್ರೂರ ಮೃಗಗಳಾಗಿದ್ದವೇ? ಡೈನೋಸಾ ರ್ ಗ ಳ ಬಗೆಗೆ ಪ್ರಶ್ನೆಗಳು ಹುಟ್ಟಿಕೊಳ್ಳುವುದಕ್ಕೆ ಶುರುವಾಗಿ ದಶಕಗಳೇ ಕಳೆದವು. ಸಮರ್ಪಕವಾದ ಉತ್ತರಗಳಿಗೆ ಮಾತ್ರ ಇನ್ನೂ ಹುಡುಕಲಾಗುತ್ತಿದೆ. ಡೈನೋಸಾರ್ ಗಳ ಪಳೆಯುಳಿಕೆಗಳನ್ನು ವಿಜ್ಞಾನಿಗಳು ಸಂಶೋಧನೆಗೆ ಒಳಪಡಿಸುತ್ತಿದ್ದಾರೆ. ಡೈನೋಸಾ ರ್ ಗಳ ಬಗೆಗೆ ಇರುವಂಥ ಪ್ರಮುಖ ಪ್ರಶ್ನೆಯೆಂದರೆ ಅವುಗಳು ಅಳಿದದ್ದು ಹೇಗೆ ಎಂಬುದು. ಜೀವ ವಿಕಾಸದ ಹಂತ

ಎಷ್ಟು ಶುದ್ಧ ಮಾಡಿದರೂ ಕೊಚ್ಚೆ ಕೊಚ್ಚೆಯೇ!

Image
ಬಹಳ ಸಮಯದ ನಂತರ ನನ್ನ ಬ್ಲಾಗ್ ಅಪ್ಡೇಟ್ ಮಾಡುತ್ತಿದ್ದೇನೆ. ತಾಂತ್ರಿಕ ದೋಷವೂ ಸೇರಿದಂತೆ ಹಲವು ಕಾರಣಗಳಿಂದಾಗಿ ಬ್ಲಾಗ್ ಅಪ್ಡೇಟ್ ಮಾಡುವುದಕ್ಕೆ ಆಗಿರಲಿಲ್ಲ... ಕ್ಷಮಿಸಿ.... ವಿಷ್ಣುಪ್ರಿಯ ---------------- ತಾನು ಎಲ್ಲವನ್ನೂ ನಿಯಂತ್ರಿಸಬಲ್ಲೆ ಎಂಬ ಮಾನವಭ್ರಮೆಗೆ ಪ್ರತಿ ಬಾರಿಯೂ ತಡೆ ಬೀಳುತ್ತಿದೆ ಎಂಬುದು ದಿಟವಾಯಿತು. ಪ್ರಕೃತಿಯ  ನಿರ್ಧಾರಗಳ ಮೇಲೆ ಮಾನವ ತನ್ನ ಪ್ರಭಾವ ಬೀರುವ ಪ್ರಯತ್ನ ಮಾಡಿದರೆ ಪ್ರಕೃತಿ ಮಾನವನಿಗಿಂತಲೂ ಎತ್ತರಕ್ಕೆ ಬೆಳೆಯುತ್ತದೆ ಎಂಬುದು ಕೂಡಾ ಸ್ಪಷ್ಟವಾಯಿತು.  ಈ ಚರಂಡಿಗಳಲ್ಲಿ ಹರಿಯುವ ನೀರನ್ನು ನೊಡಿದರೆ ಮೈಯೆಲ್ಲಾ ಜಿರಳೆ ಹರಿದಂತಾಗುತ್ತದೆ! ಬೆಂಗಳೂರಿಗರಿಗಂತೂ ಮಳೆ ಬಂದು ಚರಂಡಿಯಲ್ಲಿ ನೀರುಕ್ಕಿ ಹರಿದರೆ ಜೀವನವೇ ಬೇಡ ಎನ್ನುವಷ್ಟರ ಮಟ್ಟಿಗೆ ಜಿಗುಪ್ಸೆ ಬಂದೀತು! ಬೆಂಗಳೂರಿನಲ್ಲಿ ಚರಂಡಿಗಳ ನೀರು ಅದ್ಯಾವ ಕೆರೆ ಸೇರುತ್ತದೆ ಎಂದು ನೋಡುವುದಕ್ಕೆ ಹೊರಟರೆ ಆ ಕೆರೆಯಿಂದಲೇ ನಮಗೆ ವಿತರಣೆಯಾಗುವಂಥ ನೀರನ್ನು ಕುಡಿಯುವುದಕ್ಕೆ ಸಾಧ್ಯವಿಲ್ಲ. ನಿರನ್ನು ಶುದ್ಧೀಕರಿಸಿಯೇ ಕೆರೆಗೆ ಬಿಡಲಾಗುತ್ತದೆ, ಕೆರೆಯ ನಿರನ್ನು ಶುದ್ಧೀಕರಿಸಿಯೇ ಕುಡಿಯುವುದಕ್ಕೆ ನೀಡಲಾಗುತ್ತದೆ. ಹೀಗಾಗಿ ಆ ನೀರಿನಿಂದ ಏನೂ ಸಮಸ್ಯೆ ಆಗದು ಎಂದು ಆಧಿಕಾರಿಗಳು ಹೇಳಿದರು ಎಂದಾದರೆ ಅವರ ಮಾತನ್ನು ನಂಬಬೇಡಿ. ಯಾಕೆಂದರೆ ಕೊಚ್ಚೆ ನೀರನ್ನು ಅದೆಷ್ಟೇ ಶುದ್ಧೀಕರಿಸಿದರೂ ಸಹ, ಅದ್ಯಾವ ಅತ್ಯಾಧುನಿಕ ತಂತ್ರಜ್ಞಾನದಿಂದ ಶುದ್ಧೀಕರಿಸಿದರ