Posts

Showing posts from February, 2013

ಶನಿಯಲ್ಲೊಂದು ಮ್ಯಾಜಿಕ್ ವಾತಾವರಣ

Image
ಭೂಮ್ಯೇತರ ಆಕಾಶಕಾಯಗಳು ಸೇರಿದಂತೆ ಬಾಹ್ಯ ಜಗತ್ತಿನ ಬಗ್ಗೆ ಒಂದೇ ವಿಚಾರಗಳು ಬಯಲಾಗುತ್ತಾ ಹೋದಂತೆ ಅವುಗಳ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಾಗಿ , ನಾವು ತಿಳಿದುಕೊಂಡದ್ದರ ಆಚೆಗೆ ಏನಿದೆ ಎಂಬುದನ್ನು ಹಣಕಿ ನೋಡಬೇಕೆನಿಸುತ್ತದೆ . ವೈಜ್ಞಾನಿಕ ಜಗತ್ತಿಗೆ ಈಗಲೂ ಅತ್ಯಂತ ಸೋಜಿಗವಾಗಿ ಕಾಡುತ್ತಿರುವುದು ಬ್ರಹ್ಮಾಂಡ ಪರಮಾಣುಗಳು ಅಥವಾ ಕಾಸ್ಮಿಕ್ ಪಾರ್ಟಿಕಲ್‌ಗಳು . ನಮ್ಮ ಬ್ರಹ್ಮಾಂಡದ ಸೃಷ್ಟಿಗೆ ಈ ಕಾಸ್ಮಿಕ್ ಪಾರ್ಟಿಕಲ್‌ಳು ನೇರ ಕಾರಣ ಎಂಬ ಎಂಬ ನಂಬಿಕೆ ವೈಜ್ಞಾನಿಕ ವಲಯದಲ್ಲಿರುವ ಕಾರಣ ಇವುಗಳ ಬಗ್ಗೆ ಕುತೂಹಲ ಮತ್ತು ತತ್ಪರಿಣಾಮ ಸಂಶೋಧನೆಗಳು ಹೆಚ್ಚುತ್ತಲೇ ಇವೆ . ಇದೀಗ ವೈಜ್ಞಾನಿಕ ವಲಯವೇ ಖುಷಿಯಿಂದ ಬ್ರಹ್ಮಾಂಡ ಪರಮಾಣುಗಳ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸುವಂಥ ವಿಚಾರವೊಂದು ತೆರೆದುಕೊಂಡಿದೆ . ಅದು ಶನಿಗ್ರಹದಲ್ಲಿ ! ಶನಿಯ ಬಗ್ಗೆ ಅಧ್ಯಯನ ಮಾಡುತ್ತಿರುವ ಕ್ಯಾಸಿನಿ ಗಗನನೌಕೆ ಅಲ್ಲಿನ ಕೌತುಕವೊಂದನ್ನು ಮುಂದಿಟ್ಟು ವಿಜ್ಞಾನಿಗಳು ಹುಬ್ಬೇರಿಸುವಂತೆ ಮಾಡಿದೆ . ಶನಿಯ ವಾತಾವರಣದಲ್ಲಿ ತೀರಾ ಅಪರೂಪಕ್ಕೆಂಬಂತೆ ಕಾಣಿಸಿಕೊಂಡ ತೀವ್ರ ಸ್ವರೂಪದ ಸೌರಸುನಾಮಿ ಬ್ರಹ್ಮಾಂಡ ಪರಮಾಣುಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವ ಅವಕಾಶವನ್ನು ಕೊಟ್ಟಿದೆ .