ವಿಜ್ಞಾನ`ಗರ್ಭ'ದಲಿ `ಭರವಸೆ'ಯ ಕುಡಿ

ಕೆಲವೊಂದು ಬಾರಿ ಸೃಷ್ಟಿಯಾದ ಪ್ರಕೃತಿಯಲ್ಲಿ (ಸ್ತ್ರೀಯಲ್ಲಿ) ಲೋಪವಿರುತ್ತದೆ ಅಥವಾ ಪುರುಷನಲ್ಲಿ ದೋಷವಿರುತ್ತದೆ. ಅದು ಸೃಷ್ಟಿಯ ವೈಪರೀತ್ಯ. ಹಾರ್ಮೋನುಗಳ ವ್ಯತ್ಯಾಸ, ಮಾತಾಪಿತರಿಂದ ಹರಿದುಬಂದ ವಂಶವಾಹಿಗಳ ಅಸಮರ್ಥತೆ... ಪರಿಹಾರ ಕಂಡುಹಿಡಿಯಲೇಬೇಕೆಂಬ ತುಡಿತದಲ್ಲಿ, ಯೋಚನೆಗಳನ್ನು, ಚಿಂತನೆಗಳನ್ನು ಹೊತ್ತು ಸಂಶೋಧನಾ ಪಥದಲ್ಲಿ ಬೆಳೆಯುತ್ತಿದ್ದ ವಿಜ್ಞಾನಗರ್ಭದಲ್ಲಿ ಭರವಸೆಯ ಬೆಳಕೊಂದು ಚಿಮ್ಮಿದೆ. ಅಸಮರ್ಥತೆಗೊಂದು ಸಮರ್ಥ ಪರಿಹಾರ ಕಂಡುಕೊಳ್ಳುವ ಹಾದಿಯ ಶೋಧವಾಗಿದೆ.