Posts

ಸೃಷ್ಟಿಮೂಲ ತಿಳಿಯೋ ಹುಚ್ಚುಪ್ರಯತ್ನಗಳು...!!

ಜಗತ್ತು ಹೇಗೆ ಸೃಷ್ಟಿಯಾಯಿತು? ಜೀವಸಂಕುಲದ ಮೂಲ ಯಾವುದು? ಈ ಬ್ರಹ್ಮಾಂಡ ವಿಕಾಸಗೊಂಡ ಬಗೆ ಹೇಗೆ? ಹೀಗೆ ಬ್ರಹ್ಮಾಂಡ ಸೃಷ್ಟಿಯ ಬಗ್ಗೆ ಅರಿತುಕೊಳ್ಳಲು ನಾವು ಬಹಳಷ್ಟು ಶತಮಾನಗಳಿಂದಲೇ ಒದ್ದಾಡುತ್ತಿದ್ದೇವೆ. 

ಮುಂದೆ ಓದಿ...ಸೃಷ್ಟಿಮೂಲ ತಿಳಿಯೋ ಹುಚ್ಚುಪ್ರಯತ್ನಗಳು...!!

ಪ್ರಣಾಮ್ ನ್ಯೂಸ್ ನಲ್ಲಿ ನನ್ನ ಅಂಕಣ

Image
ಪ್ರಣಾಮ್ ನ್ಯೂಸ್ ನಲ್ಲಿ ನನ್ನ ಹೊಸ ಅಂಕಣ ಶುರುವಾಗುತ್ತಿದೆ. ವಿಜ್ಞಾನ ಗಂಗೆ
ನಿಮ್ಮ ಪ್ರೀತಿ ಸಹಕಾರ ಮೊದಲಿನಂತೆಯೇ ಇರಲಿ
Pranam News
www.pranamnews.com

ಕೋತಿಗಳ ಸಾಮಾಜಿಕ ಸಂವಹನ...!

Image
ಫೇಸ್‌ಬುಕ್, ಟ್ವಿಟರ್ ಅಂದಾಕ್ಷಣ ನಮ್ಮ ಮನಸು ಖುಷ್ ಖುಷ್ ಆಗುತ್ತೆ. ಸೋಶಿಯಲ್ ನೆಟ್‌ವರ್ಕಿಂಗ್ ಇರಲೇಬೇಕು, ಅದೇ ನಮ್ಮನ್ನು ಉಲ್ಲಸಿತರನ್ನಾಗಿ ಇರಿಸೋದು ಅಂತ ಮನಸು ಕೂಗಿ ಹೇಳುತ್ತೆ. ಹಾಗಂತ ಈ ಸಾಮಾಜಿಕ ಸಂಪರ್ಕ ತಾಣಗಳು ತಲತಲಾಂತರ ವರ್ಷಗಳಿಂದ ಮಾನವ ಜೀವನದ ಅವಿಭಾಜ್ಯ ಅಂಶವಾಗಿ ಬಂದದ್ದೇನೂ ಅಲ್ಲ. ಇಂಟರ್‌ನೆಟ್ ಯುಗದಲ್ಲಿ ಕಂಪ್ಯೂಟರ್ ಬಿಟ್ಟು ಕದಲುವುದಕ್ಕೇ ಸಾಧ್ಯವಿಲ್ಲದಷ್ಟು ಬ್ಯುಸಿಯಾಗಿರುವ ಮಾನವ ಜೀವಿಗಳ ನಡುವಿನ ಸಂಪರ್ಕದ ಕೊಂಡಿಯಾಗಿ ಈ ಅಂತರ್ಜಾಲ ತಾಣಗಳು ಬಳಕೆಯಾಗುತ್ತಿವೆ ಅಷ್ಟೆ! ಹಾಗಂತ ‘ಸಾಮಾಜಿಕ ಸಂವಹನ’ ಈಚೀಚೆಗಿನ ವಿಚಾರವೇನೂ ಅಲ್ಲ. ಮಾನವನ ಪೂರ್ವಜರೆನ್ನಿಸಿಕೊಂಡಿರುವ ಕೋತಿಗಳು ಸಾವಿರಾರು ವರ್ಷಗಳಿಂದ ಸಾಮಾಜಿಕ ಸಂವಹನ ನಡೆಸುತ್ತಿವೆ. ಇದರ ಮೂಲಕವೇ ಪರಸ್ಪರ ಕ್ಷಿಪ್ರ ಸಂವಹನ ಬೆಳೆಸಿಕೊಂಡು ಜೀವನ ಸಾಗಿಸುತ್ತವೆಯಂತೆ! ಸೇಂಟ್ ಆ್ಯಂಡ್ರೂಸ್ ಯೂನಿವರ್ಸಿಟಿಯ ಆ್ಯಂಡ್ರೂ ವೈಟೆನ್ ನೇತೃತ್ವದ ಸಂಶೋಧಕರ ತಂಡ ಕೋತಿಗಳ ಸಾಮಾಜಿಕ ಸಂವಹನ ಕಲೆಯನ್ನು ಗುರುತಿಸಿದೆ. ಕೋತಿಗಳ ಜೀವನದ ಪ್ರತಿಯೊಂದು ಕ್ಷಣ, ಘಟ್ಟವೂ ಸಾಮಾಜಿಕ ಸಂವಹನಗಳನ್ನು ಆಧರಿಸಿರುತ್ತದೆ. ಅವುಗಳ ನಡತೆಯನ್ನೂ ಈ ಸಂವಹನವೇ ರೂಪಿಸುತ್ತದೆ. ಯಾವುದೇ ಒಂದು ಹೊಸ ಸಂಗತಿ ಒಂದು ಕೋತಿಯ ಗಮನಕ್ಕೆ ಬಂದರೂ ಅದು ತಕ್ಷಣವೇ ಕೋತಿಗಳ ಸಮೂಹದಲ್ಲಿ ಪಸರಿಸುತ್ತದೆ. ಇದು ಅವುಗಳಲ್ಲಿರುವ ಸಾಮಾಜಿಕ ಸಂವಹನದ ಪ್ರಭಾವ ಎಂಬುದು ಸಂಶೋಧಕರ ಅಂಬೋಣ.

ಮಾನವ ವಲಸೆ ಬಂದ ಬಗೆ ಹೇಗೆ?

Image
ಲಕ್ಷಾಂತರ ವರ್ಷಗಳ ಹಿಂದೆ ನಾಗರಿಕತೆ ವಿಕಾಸಗೊಂಡು, ಬದುಕುವ ಕಲೆಯನ್ನು ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಬದಲಿಸಿಕೊಂಡ ಮಾನವ ತಾನಿದ್ದ ಜಾಗದಿಂದ ವಿವಿಧ ಪ್ರದೇಶಗಳಿಗೆ ವಲಸೆ ಹೋಗುವುದನ್ನು ಶುರು ಮಾಡಿದ. ಬದುಕಿನ ಚಿತ್ರಣವನ್ನು ಹಂತಹಂತವಾಗಿ ಬದಲಿಸಿಕೊಳ್ಳುತ್ತಾ, ಪ್ರಕೃತಿಯ ಜತೆಗಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತಾ ಮುಂದೆ ಮುಂದಾ ಸಾಗಿ ಇಂದು ಪ್ರಕೃತಿಯನ್ನೇ ಧಿಕ್ಕರಿಸಿ ನಿಲ್ಲುವ ಮಟ್ಟಕ್ಕೆ ಬಂದಿದ್ದಾನೆ. ಯಾವುದೋ ಪ್ರದೇಶದ ಮೂಲನಿವಾಸಿಯಾಗಿದ್ದವ ಇಂದು ಮತ್ತಾವುದೋ ಪ್ರದೇಶ ಸೇರಿಕೊಂಡು ಅಲ್ಲಿ ತನ್ನ ವಂಶವೃಕ್ಷವನ್ನು ಬೆಳೆಸುತ್ತಿದ್ದಾನೆ. ಆರ್ಯರು, ದ್ರಾವಿಡರು... ಕೂಡಾ ಒಂದು ಕಾಲದಲ್ಲಿ ವಲಸೆ ಬಂದವರೇ! ಇದೆಲ್ಲ ಒತ್ತಟ್ಟಿಗಿರಲಿ, ಮಾನವ ವಲಸೆಯ ಇತಿಹಾಸವನ್ನು ಅಧ್ಯಯನ ಮಾಡುವುದಕ್ಕೆ ಈಗ ನಾಟಿಂಗ್‌ಹ್ಯಾಮ್ ಯೂನಿವರ್ಸಿಟಿಯ ವಂಶವಾಹಿ ತಜ್ಞರು ಸಂಶೋಧನೆ ಆರಂಭಿಸಿದ್ದು, ಬಸವನಹುಳುವಿನ ಮೂಲಕ ತಮ್ಮ ಗಮ್ಯ ತಲುಪುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಫ್ರಾನ್ಸ್‌ನ ಪೈರೇನಿಯನ್ ಪ್ರದೇಶದಿಂದ ಐರ್ಲೆಂಡ್‌ಗೆ ಜನ ವಲಸೆ ಬಂದದ್ದು ಹೇಗೆಂಬುದನ್ನು ಸದ್ಯಕ್ಕೆ ಅಧ್ಯಯನ ಮಾಡುತ್ತಿದ್ದಾರೆ.

ಜೀವಾಂಶ ಭೂಮಿಗೆ ಬಂದದ್ದು ಬಾಹ್ಯದಿಂದ

Image
ವೈಜ್ಞಾನಿಕ ಜಗತ್ತಿನಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಭಾರೀ ಕುತೂಹಲ, ಅದೊಂಥರಾ ಸೂಕ್ಷ್ಮ, ಅದೊಂದು ರೀತಿಯ ಗಾಂಭೀರ್ಯ, ಸ್ವಲ್ಪ ಅಚ್ಚರಿ, ಹೊಸ ಹೊಸ ಅನ್ವೇಷಣೆಗಳಿಗೆ ತುಡಿತ. ವಿಜ್ಞಾನವೇ ಹಾಗೆ, ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ, ಒಂದು ಕ್ಷಣ ಹೊಸದೆನೆಸಿದ್ದು ಮರುಕ್ಷಣದಲ್ಲಿ ಹಳತಾಗುತ್ತದೆ, ಮತ್ತೊಂದು ಹೊಸ ವಿಚಾರ ಕಾಣಿಸಿಕೊಂಡಿರುತ್ತದೆ. ವೈಜ್ಞಾನಿಕ ವಲಯದಲ್ಲಿ ಅತಿ ಹೆಚ್ಚು ಕುತೂಹಲ ಮೂಡಿರುವಂಥದ್ದು ಭೂಮಿಯಲ್ಲಿ ಜೀವಸೃಷ್ಟಿ ಹೇಗಾಯ್ತು ಎಂಬ ವಿಚಾರದ ಸುತ್ತ. ಭೂಮಿಯಲ್ಲಿನ ಜೀವಸೃಷ್ಟಿ, ಜೀವಾಸ್ತಿತ್ವ ಮತ್ತು ಜೀವ ವಿಕಾಸದ ಬಗ್ಗೆ ಒಬ್ಬೊಬ್ಬ ವಿಜ್ಞಾನಿ ಮಂಡಿಸಿದ ಒಂದೊಂದು ಸಿದ್ಧಾಂತಗಳು ಒಂದೊಂದು ವಿಚಾರವನ್ನು ಪ್ರತಿಪಾದಿಸುತ್ತವೆ. ಅವುಗಳದ್ದೇ ಆದ ನೆಲೆಯಲ್ಲಿ ಯೋಚಿಸಿದರೆ ಆ ಎಲ್ಲ ಸಿದ್ಧಾಂತಗಳೂ ಸರಿ ಎಂದೆನಿಸುತ್ತವೆ. ಅವುಗಳ ವಿರುದ್ಧವಾಗಿ ಯೋಚಿಸದರೆ ಆ ಯೋಚನೆಯೂ ಸರಿಯಾಗಿಯೇ ಭಾಸವಾಗುತ್ತದೆ. ಯಾಕೆಂದರೆ ಜೀವಸೃಷ್ಟಿ ಹೀಗೇ ಆಯ್ತು ಎಂದು ಹೇಳುವುದಕ್ಕೆ ನಮ್ಮಲ್ಲಿ ಯಾವ ಆಧಾರವೂ ಇಲ್ಲ. ಇದೀಗ ಹೊಸದೊಂದು ಸಿದ್ಧಾಂತ ಮಂಡನೆಯಾಗಿದ್ದು, ಅದರ ಪ್ರಕಾರ ಭೂಮಿಯಲ್ಲಿ ಜೀವಸೃಷ್ಟಿಗೆ ಕಾರಣವಾದ ಒಂದು ಅಂಶ ಬಂದದ್ದು ಉಲ್ಕೆಗಳಿಂದ. ಅದು ಗಂಧಕದ ಅಂಶ.

ಭಾವತೀವ್ರತೆ ಮಾನವನಿಗೆ ಮಾತ್ರವಲ್ಲ!

Image
ಸಿಕ್ಕಾಪಟ್ಟೆ ಸಿಟ್ಟು ಬಂದ ವ್ಯಕ್ತಿ ಕೈಗೆ ಸಿಕ್ಕಿದ್ದನ್ನು ಎತ್ತೆತ್ತಿ ಎಸೆಯುತ್ತಾನೆ. ಸಮಾಧಾನಪಡಿಸುವುದಕ್ಕೆ ಬಂದವರನ್ನೇ ಹೊಡೆದು ಕಳುಹಿಸುತ್ತಾನೆ. ಅದೇ ರೀತಿ ತುಂಬಾ ಸಂತೋಷದಿಂದಿರುವ ವ್ಯಕ್ತಿ ತಾನು ಏನು ಮಾಡುತ್ತಿದ್ದೇನೆ ಎಂಬುದನ್ನೇ ಮರೆತು ಖುಷಿಯಾಗಸದಲ್ಲಿ ತೇಲಾಡುತ್ತಾನೆ. ನೋವು ತುಂಬಿದ ಹೃದಯ ಮನುಷ್ಯನನ್ನು ಅನ್ಯಮನಸ್ಕನನ್ನಾಗಿಸುತ್ತದೆ.... ಅದೆಷ್ಟು ಭಾವಗಳು, ಅದೆಂಥ ತೀವ್ರತೆ? ಒಂದೊಂದು ಭಾವಕ್ಕೆ ಒಂದೊಂದು ಪ್ರತಿಕ್ರಿಯೆ. ಪ್ರತಿಕ್ರಿಯೆಯ ತೀವ್ರತೆಯು ಭಾವನೆಗಳ ತೀವ್ರತೆಎ ನೇರಾನುಪಾತದಲ್ಲಿರುತ್ತದೆ. ಈ ಭಾವನೆಗಳು ಅನ್ನೋ ವಿಚಾರ ಎಷ್ಟೊಂದು ವಿಚಿತ್ರ ಅಲ್ವೇ? ಮನುಷ್ಯ ಮಾತ್ರವಲ್ಲ, ಮನುಷ್ಯನ ಪೂರ್ವಜರು ಎನ್ನಿಸಿಕೊಂಡಂಥ ಚಿಂಪಾಂಜಿಗಳು, ಗೋರಿಲ್ಲಾಗಳು ಕೂಡಾ ಮಾನವನ ರೀತಿಯಲ್ಲೇ ಭಾವತೀವ್ರತೆಗೆ ಒಳಗಾಗುತ್ತವಂತೆ!