Posts

Showing posts from August, 2011

ದೇವರು ಕಾಣಲೇ ಇಲ್ಲ...!

Image
ದೇವಕಣ ವಿಜ್ಞಾನಿಗಳನ್ನು ಪೇಚಿಗೆ ಸಿಕ್ಕಿಸಿದೆ. ಇದರ ರಾಶಿ ಇಷ್ಟೇ ಎಂದುಕೊಂಡಾಗ ಇನ್ನೂ ಅಧಿಕವಾಗಿರಬೇಕು ಎಂಬ ಚಿಂತನೆ ಮೂಡಿಸಿದೆ. ಇಲ್ಲ, ಇನ್ನೂ ಅಧಿಕ ರಾಶಿಯಿರಬೇಕು ಎಂದುಕೊಂಡಾಗ ತೀರಾ ಹಗುರಾಗಿ ರಾಶಿಯನ್ನೇ ಹೊಂದಿರದ ಕಣವೋ ಎಂಬ ಭ್ರಮೆ ಮೂಡಿಸಿದೆ. ಯಾವುದು ಸತ್ಯ ಎಂಬ ಸಂದಿಗ್ಧ ವಿಜ್ಞಾನಿಗಳ ಪಾಲಾಗಿದೆ.  ದೇವರನ್ನು ಅರ್ಥಾತ್ ದೇವಕಣವನ್ನು ಹುಡುಕಬೇಕು, ಈ ಸೃಷ್ಟಿಯ ಮೂಲ ಹೇಗಾಯಿತು ಎಂಬುದನ್ನು ಕಂಡುಕೊಳ್ಳಬೇಕು, ಬ್ರಹ್ಮಾಂಡ ಸೃಷ್ಟಿಯಾದ ಆರಂಭದಲ್ಲಿ ಜೀವಾಸ್ತಿತ್ವ ಹೇಗಿತ್ತು ಎಂಬುದನ್ನು ಅರಿತುಕೊಳ್ಳಬೇಕು ಎಂಬೆಲ್ಲ ಉತ್ಕಟಾಪೇಕ್ಷೆಯಲ್ಲಿದ್ದ ವಿಜ್ಞಾನಿಗಳು ಭ್ರಮನಿರಸನಗೊಂಡಿದ್ದಾರೆ. ಸೃಷ್ಟಿಯ ಮೂಲಕಣವೆಂದು ವೈಜ್ಞಾನಿಕ ಜಗತ್ತು ಪರಿಗಣಿಸಿರುವಂಥ ಹಿಗ್ಸ್ ಬೋಸಾನ್ಗಳನ್ನು ನೋಡಬೇಕು, ಅವುಗಳ ಸ್ವರೂಪವನ್ನು ಅರಿಯಬೇಕು ಎಂದು ನಿರ್ಧರಿಸಿದ್ದರು. ಅದಕ್ಕಾಗಿ ಸ್ವಿಜರ್ಲೆಂಡಿನ ಜಿನೇವಾ ಸಮೀಪದ ಸಿಇಆರೆನ್ ಎಂಬಲ್ಲಿ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ಸ್ಥಾಪಿಸಿದ್ದರು. ಈ ಮೂಲಕವಾಗಿ ದೇವಕಣವನ್ನು ಕಂಡುಕೊಳ್ಳುವ ಚಿಂತನೆಯಿತ್ತು. ಆದರೆ ಅದೀಗ ತಲೆಕೆಳಗಾಗಿದೆ. ಯಾವ ದೇವಕಣವನ್ನು ಅಂದರೆ ಹಿಗ್ಸ್ ಬೋಸಾನನ್ನು ಕಾಣಬೇಕು ಎಂದು ವಿಜ್ಞಾನಿಗಳು ಬಯಸಿದ್ದರೋ ಆ ದೇವಕಣ ವಿಜ್ಞಾನಿಗಳ ಜೊತೆ ಕಣ್ಣಾಮುಚ್ಚಾಲೆಯಾಡಿದೆ. ದೇಬಕಣವನ್ನು ಕಂಡೆವು, ಇದೇ ದೇವಕಣ ಎಂದು ಗುರುತಿಸುವಷ್ಟು ಕಾಲಾವಕಾಶವನ್ನು ವಿಜ್ಞಾನಿಗಳಿಗೆ ಕೊಡಲಿಲ್ಲ ಈ ದೇವಕಣ. ಮಿಂಚಿನಂತೆ ಮಿಂಚಿ

ಸೋತು ಹೋಗುತ್ತೆ ತಾಜ್ ಮಹಲ್!

Image
ಸುಂದರವಾದ ವಿನ್ಯಾಸವುಳ್ಳ ಕಟ್ಟಡಗಳಲ್ಲಿ ತಾಜ್ ಮಹಲ್ ಕೂಡಾ ಒಂದು. ಆದ್ರೆ ಇದರ ಈ ಪಟ್ಟ ಸದ್ಯದಲ್ಲೇ ಹೊರಟು ಹೋಗುತ್ತೆ. ಯಾಕೆ ಅಂತೀರಾ? ಅದಕ್ಕೊಂದು ಪ್ರತಿಸ್ಪಧಿ೯ ಬರ್ತಾ ಇದೆ.       ಹೌದು, ಇದು ತಾಜ್ ಮಹಲ್ ಗಿಂತ ಸುಂದರವಾದ ಕಟ್ಟಡ ಮಾತ್ರವಲ್ಲ, ವಿಶ್ವದಲ್ಲೇ ಅತ್ಯಂತ ಸುಂದರ ಕಟ್ಟಡ ಎಂದು ಹೆಸರು ಗಳಿಸುವುದು ಖಚಿತ. ತಂತ್ರಜ್ಞಾನ ಮುಂದುವರಿದಂತೆ ಅದು ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಕೈಚಳಕ ತೋರಿಸುತ್ತಿದೆ. ವಾಸ್ತುಶಾಸ್ತ್ರದಲ್ಲಿಯೂ ತಂತ್ರಜ್ಞಾನದ ಬಳಕೆ ಅಧಿಕವಾಗಿದೆ. ಇದೇ ತಂತ್ರಜ್ಞಾನ ಈಗ ಒಂದು ಸುಂದರ ಕಟ್ಟಡದ ವಿನ್ಯಾಸಕ್ಕೆ ಸಹಕಾರಿಯಾಗಿದೆ. ಕೋಲ್ಕೊತಾದಲ್ಲಿ ನಿಮಿ೯ಸಲು ಉದ್ದೇಶಿಸಿರುವ ಕಟ್ಟಡ       ಇದು ಒಂದು ಥರಾ ಬಾಹ್ಯಾಕಾಶ ನಿಲ್ದಾಣದಂತೆ ಕಾಣಿಸುವಂಥ ಕಟ್ಟಡ. ಕೋಲ್ಕತಾದಲ್ಲಿ ಇದನ್ನು ನಿಮಿ೯ಸುವ ಉದ್ದೇಶ ಹೊಂದಲಾಗಿದೆ. ಈ ವರ್ಷಾಂತ್ಯದಲ್ಲಿ ಬಾರ್ಸಿಲೋನಾದಲ್ಲಿ ನಡೆಯಲಿರುವಂಥ ವಿಶ್ವ ಶಿಲ್ಪಕಲಾ ಮೇಳದಲ್ಲಿ ಈ ಕಟ್ಟದ ವಿನ್ಯಾಸವೂ ಪ್ರದಶ೯ನಗೊಳ್ಳಲಿದೆ ಮತ್ತು ಸ್ಪಧೆ೯ಯಲ್ಲಿಯೂ ಭಾಗವಹಿಸಲಿದೆ. ಹಿಂದೂ ಸಾಂಪ್ರದಾಯಿಕ ಜೀವನದ ಹಿನ್ನೆಲೆಯನ್ನು ಇಟ್ಟುಕೊಂಡು ಈ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದ್ದು, ಸುಮಾರು 80 ಮನೆಗಳು ಇದರಲ್ಲಿವೆ. ಕೂಡುಕುಟುಂಬಕ್ಕೆ ಅನುಕೂಲವಾಗುವಂತೆ ಈ ಮನೆಗಳನ್ನು ವಿನ್ಯಾಸಗೊಳಿಸಲಾಗಿದೆ.       ಈ ಕಟ್ಟಡದೊಳಗೇ ಒಂದು ಸುಂದರ ಕೈದೋಟವಿದೆ, ಆರ್ಟಿಫಿಶಿಯಲ್ ಬೀಚ್ ಇದೆ. ಬೋರ್ ಎನಿಸಿದಾಗ ಆಟವಾಡು

ಕ್ಷೀರಪಥದಲ್ಲೊಂದು ವಜ್ರಕಾಯ!

Image
ಈ ಗ್ರಹವನ್ನು ಇಡಿ ಇಡಿಯಾಗಿ ತಂದರೂ ಭೂಮಿಯ ಮೇಲಿರುವ ಎಲ್ಲ ದೇಶಗಳೂ ಶ್ರೀಮಂತವಾಗಬಹುದು! ಯಾಕೆ ಅಂತೀರಾ? ಇದು ಸಂಪೂಣ೯ವಾಗಿ ವಜ್ರಗಳಿಂದಲೇ ತುಂಬಿರುವಂಥ ಗ್ರಹ.    ಹೌದು, ಇಂಥದ್ದೊಂದು ಕಾಯ ನಮ್ಮ ಕ್ಷೀರಪಥ ಗೆಲಾಕ್ಸಿಯಲ್ಲಿಯೇ ಪತ್ತೆಯಾಗಿದೆ. ಮೆಲ್ಬನಿ೯ನ ಸ್ವಿನ್ ಬನ್೯ ಯೂನಿವಸಿ೯ಟಿ ಆಫ್ ಟೆಕ್ನಾಲಜಿಯ ಪ್ರೋವೈಸ್ ಛಾನ್ಸೆಲರ್ ಪ್ರೊ. ಮ್ಯಾಥ್ಯೂ ಬೇಲ್ಸ್ ಸಾರಥ್ಯದಲ್ಲಿನ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ ಈ ಕಾಯವನ್ನು ಪತ್ತೆ ಮಾಡಿದೆ. ಆಸ್ಟ್ರೇಲಿಯಾ, ಜಮ೯ನಿ, ಬ್ರಿಟನ್, ಇಟಲಿ ಮತ್ತು ಅಮೆರಿಕದ ಬಾಹ್ಯಾಕಾಶ ವಿಜ್ಞಾನಿಗಳು ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು. ಈ ಕಾಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದೆಯಲ್ಲವೇ? ಮುಂದೆ ಓದಿ-    ಕ್ಷೀರಪಥದಲ್ಲೇ ಇರುವಂಥ ಪಲ್ಸಾರ್ ಎಂದು ಕರೆಯಲ್ಪಡುವ ಒಂದು ಪುಟ್ಟ ನಕ್ಷತ್ರ. ಪಲ್ಸಾರ್ ಗಳೆಂದರೆ ಸುಮಾರು 20 ಕಿಲೋ ಮೀಟರ್ ವ್ಯಾಸದ ಪುಟ್ಟ ನಕ್ಷತ್ರಗಳು. ಈ ನಕ್ಷತ್ರಗಳು ಸದಾ ರೇಡಿಯೋ ತರಂಗಗಳನ್ನು ಹೊರಹೊಮ್ಮಿಸುತ್ತಲೇ ಇರುತ್ತವೆ. ಈ ನಕ್ಷತ್ರ ತನ್ನ ಕಕ್ಷೆಯಲ್ಲಿ ಪರಿಭ್ರಮಿಸುತ್ತಾ ಇರುವಾಗ ಹೊರಹೊಮ್ಮುವಂಥ ರೇಡಿಯೋ ತರಂಗಗಳು ಭೂಮಿ ಸೇರಿದಂತೆ ಎಲ್ಲ ಆಕಾಶಕಾಯಗಳತ್ತಲೂ ಚಿಮ್ಮುತ್ತವೆ. ಇದೇ ರೇಡಿಯೋ ತರಂಗಗಳನ್ನು ಗುರುತಿಸುವ ಮೂಲಕ ವಿಜ್ಞಾನಿಗಳು ವಜ್ರಕಾಯವನ್ನು ಪತ್ತೆ ಮಾಡುವಲ್ಲಿ ಯಸಸ್ವಿಯಾಗಿದ್ದಾರೆ. ಈ ನಕ್ಷತ್ರಕ್ಕೆ ವಿಜ್ಞಾನಿಗಳು ಇಟ್ಟಂಥ ಹೆಸರು- ಪಿ ಎಸ್ ಆರ್ ಜೆ1719-1438. ಈ ನಕ್ಷತ್ರಕ್ಕ

ಸೂಪರ್ ಬಗ್- ಕೊತ್ತಂಬ್ರಿ ಮದ್ದು

Image
ಭಾರತ ಸಂಬಾರ ಪದಾಥ೯ಗಳ ಮತ್ತು ಗಿಡಮೂಲಿಕೆಗಳ ತವರು. ನಮ್ಮಲ್ಲಿ ಬಹಳಷ್ಟು ಮಂದಿ ಸಣ್ಣ ಪುಟ್ಟ ಸಮಸ್ಯೆಗಳಿಗೆ ವೈದ್ಯರ ಬಳಿ ಹೋಗುವುದಿಲ್ಲ. ಗಿಡಮೂಲಿಕೆಗಳನ್ನೇ ಬಳಸಿಕೊಳ್ಳುವಷ್ಟು ಜ್ಞಾನ ನಮ್ಮಲ್ಲಿದೆ. ಸೋಂಕಿನಂತಹ ಸಮಸ್ಯೆಗಳು ಆಂಗ್ಲ ವೈದ್ಯ ಪದ್ಧತಿಯ ಪ್ರಕಾರ ಔಷಧಿ ತೆಗೆದುಕೊಂಡರೆ ಕಡಿಮೆಯಾಗುವುದಿಲ್ಲ. ಅಂಥ ಸಂದಭ೯ದಲ್ಲಿ ದಾರಿ ಯಾವುದು? ಈ ಬಗ್ಗೆ ನಿಜಕ್ಕೂ ತಲೆಕೆಡಿಸಿಕೊಂಡವರು ಪಾಶ್ಚಿಮಾತ್ಯರು. ನಮ್ಮ ವಿಚಾರ ಬಿಡಿ, ಪಾಶ್ಚಾತ್ಯ ಗಾಳಿಯಿಂದಾದ ಸೋಂಕು ಮತ್ತು ಅಲಜಿ೯ಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನಮ್ಮಿಂದ ಇನ್ನೂ ಆಗಿಲ್ಲ. ಪೋಚು೯ಗೀಸ್ ವಿಜ್ಞಾನಿಗಳು ಸೋಂಕಿಗೊಂದು ಉತ್ತಮ ಔಷಧಿ ಕಂಡುಕೊಳ್ಳಬೇಕೆಂದು ಪ್ರಯತ್ನಿಸಿದರು. ಹಲವು ಪ್ರಯೋಗಗಳು ಫಲ ಕಾಣಲಿಲ್ಲ ಅಂಥ ಸಂದಭ೯ದಲ್ಲಿ ಅವರಿಗೆ ಕಾಣಿಸಿದ್ದು ಕೊತ್ತಂಬ್ರಿ ಕಾಳಿನ ಎಣ್ಣೆ! ಆಶ್ಚಯ೯ವಾದರೂ ಇದು ನಿಜ. ಬ್ರಿಟಿಷರ ದಾಳಿಗೂ ಪೂವ೯ದಲ್ಲಿಯೇ ಭಾರತಕ್ಕೆ ಬಂದಿದ್ದಂಥ ಪೋಚು೯ಗೀಸರು ಇಲ್ಲಿನ ಸಂಬಾರ ಮತ್ತು ಗಿಡಮೂಲಿಕೆ ಸಂಪನ್ಮೂಲವನ್ನು ಕಂಡು ಚಕಿತಗೊಂಡಿದ್ದರು. ಬಹಳಷ್ಟು ಸಂಪನ್ಮೂಲವನ್ನು ತಮ್ಮಲ್ಲಿಗೆ ಒಯ್ದಿದ್ದರು ಕೂಡಾ. ಆದರೆ ಈಗ ಅದೇ ಸಂಪನ್ಮೂಲವೇ ಮಹತ್ವದ ಸಂಶೋಧನೆಗೆ ನೆರವಾಗಿದೆ. ಕೊತ್ತಂಬ್ರಿ ಕಾಳಿನ ಎಣ್ಣೆಯನ್ನು ಪ್ರಯೋಗಕ್ಕೆ ಒಳಪಡಿಸಿದರು ವಿಜ್ಞಾನಿಗಳು. ಸ್ವತಃ ವಿಜ್ಞಾನಿಗಳೇ ಚಕಿತಗೊಳ್ಳುವಂಥ ಫಲಿತಾಂಶ ಸಿಕ್ಕಿತು. 12 ವಿಧದ ಬ್ಯಾಕ್ಟೀರಿಯಾಗಳ ಸದ್ದಡಗಿಸಿತ್ತು ಕೊತ್ತಂಬ್ರಿ ಕಾಳ

ಹೃದಯದ ಆರೋಗ್ಯ ಹೆಚ್ಚಿಸುತ್ತೆ ಮದುವೆ!

Image
ಮದುವೆ ಆಗ್ತೀನಿ ಅಂದ್ರೆ ಸಾಕು ಎಲ್ರೂ.. ಅಂತೂ ಹಳ್ಳಕ್ಕೆ ಬೀಳ್ತಿದ್ದೀ ಅನ್ನು. ಇನ್ನು ನಿನ್ನ ಸ್ವಾತಂತ್ರ್ಯ ಮುಗೀತಪ್ಪಾ ಅಂತಾರೆ. ಅದೇ ಹುಡುಗಿಯನ್ನು ಪ್ರೀತ್ಸೋದಕ್ಕೆ ಶುರು ಮಾಡಿ ಹಾಟ್೯ ಸೇಲ್ ಮಾಡ್ಬಿಟ್ಯಾ ಅಂತಾರೆ! ಎಷ್ಟು ವ್ಯತ್ಯಾಸ ಅಲ್ವೇ? ಇದೆಲ್ಲ ಒತ್ತಟ್ಟಿಗಿಲಿ೯, ಮದ್ವೆ ಆದ ತಕ್ಷಣ ಗಂಡಸ್ರು, ಹೆಂಗಸ್ರು ದಪ್ಪ ಆಗ್ತಾರೆ, ಸ್ವಲ್ಪ ದಷ್ಟಪುಷ್ಟವಾಗ್ತಾರೆ. ಅವರ ಆರೋಗ್ಯ ಹೆಚ್ಚುತ್ತೆ. ನಿಜ, ಭಾರತೀಯ ಪರಂಪರೆಯಲ್ಲಿ ಮದುವೆಗೆ ಮಹತ್ವ ಕೊಟ್ಟಿರುವುದು ಗೊತ್ತೇ ಇದೆ. ಇದನ್ನೊಂದು ದೈವೀ ಕಾಯ೯ ಎಂಬಂತೆ ನಾವು ಕಾಣುತ್ತೇವೆ. ಈ ಮದುವೆ ಬಗ್ಗೆ, ಅದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ವಿದೇಶಿಯರು ಹಲವು ಕಾಲದಿಂದ ಒಂದಿಲ್ಲೊಂದು ರೀತಿಯಲ್ಲಿ ಸಂಶೋಧನೆ ನಡೆಸುತ್ತಲೇ ಬಂದಿದ್ದಾರೆ. ಇದೀಗ ಇನ್ನೂ ಒಂದು ಸಂಶೋಧನೆಯ ಫಲಿತಾಂಶ ಅಮೆರಿಕದಿಂದ ಪುಟಿದೆದ್ದು ಬಂದಿದೆ. ಅಮೆರಿಕದ ಸಂಶೋಧಕರು ಮದುವೆಯ ಎಲ್ಲ ಆಯಾಮಗಳಲ್ಲೂ ಒಂದು ಸೂಕ್ಷ್ಮನೋಟ ಬೀರಿದ್ದು ಅದರಿಂದ ಗಂಡು-ಹೆಣ್ಣಿನ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಅನ್ನೋದನ್ನು ಅಧ್ಯಯನ ಮಾಡಿದ್ದಾರೆ. ಗಂಡು-ಹೆಣ್ಣಿನ ಜೋಡಿ ಸರಿಯಾಗಿ ತಾಳೆಯಾಗುತ್ತೆ ಅಂತಾದ್ರೆ ಹೃದಯದ ಸಮಸ್ಯೆ ಬಹುಪಾಲು ಕಡಿಮೆಯಾಗುತ್ತದೆಯಂತೆ! ಏನಿಲ್ಲ ಅಂದ್ರೂ 15 ವಷ೯ ಹೆಚ್ಚು ಬದುಕೋ ಶಕ್ತಿ ಅವರಿಗೆ ಸಿಗುತ್ತೆ. ಸಣ್ಣ ಪುಟ್ಟ ಸಮಸ್ಯೆಗಳಂತೂ ಮಾಯವಾಗುತ್ತವೆ. ತಾಳೆಯಾಗುವ ಜೋಡಿ ಹೇಗಿರಬೇಕು ಎಂಬುದನ್ನೂ ಸಂಶೋಧಕರು ವಿವರಿಸುತ್

ಸಾಗರದಾಳದಲ್ಲಿ ಜಲಜನಕ: ಇಂಧನಕ್ಕೊಂದು ಮಾರ್ಗ

Image
ವಿಜ್ಞಾನಿಗಳಿಗೆ ಕಾಣಸಿಕ್ಕಿದ್ದು ಜೀವಂತ ಶಕ್ತಿಕೋಶಗಳು! ಅಂದರೆ ಹೈಡ್ರೋಜನ್ ಅನಿಲವನ್ನೇ ತುಂಬಿಕೊಂಡಿರುವ ಬ್ಯಾಕ್ಟೀರಿಯಾಗಳು. ಈ ಶಕ್ತಿಯನ್ನು ಹೊರತೆಗೆದು ಮಾನವನ ಅನುಕೂಲಕ್ಕೆ ಬಳಸಿಕೊಳ್ಳುವಂಥ ಪ್ರಕ್ರಿಯೆಯಲ್ಲಿ ಆ ಜೀವಿಗಳಿಗೂ ಅನ್ಯಾಯವಾಗಬಾರದಲ್ಲ? ಈ ಭೂಮಿಯಲ್ಲಿ ಬದುಕುವುದಕ್ಕೆ ಮಾನವನಿಗೆ ಎಷ್ಟು ಹಕ್ಕಿದೆಯೋ ಇತರ ಜೀವಿಗಳಿಗೂ ಅಷ್ಟೇ ಹಕ್ಕಿದೆ.  ಪರ್ಯಾಯ ಇಂಧನಕ್ಕಾಗಿ ನಡೆಯುತ್ತಿರುವ ಒಂದು ಪ್ರಯತ್ನ, ಅಂದರೆ ಗಾಳಿಯಲ್ಲಿರುವ ಇಂಗಾಲದ ಡೈ ಆಕ್ಸೈಡನ್ನು ಪ್ರತ್ಯೇಕಿಸುವ ತಂತ್ರಜ್ಞಾನದ ಬಗ್ಗೆ ಕಳೆದವಾರ ಇದೇ ಅಂಕಣದಲ್ಲಿ ಬರೆದಿದ್ದೆ. ಪರ್ಯಾಯ ಇಂಧನ ಮೂಲಗಳು, ಅದರಲ್ಲೂ ಮುಖ್ಯವಾಗಿ ನೈಸರ್ಗಿಕ ಮೂಲಗಳ ಬಗ್ಗೆ ಹಲವಾರು ಸಂಶೋಧನೆಗಳು ನಡೆಯುತ್ತಲೇ ಇವೆ. ಯಾವೆಲ್ಲ ಮೂಲಗಳಿಂದ ಇಂಧನಗಳನ್ನು ಸಂಗ್ರಹಿಸಿ ನಮ್ಮಲ್ಲಿನ ಇಂಧನ ಕೊರತೆಯನ್ನು ನೀಗಿಸಬಹುದು ಎಂಬ ಚಿಂತನೆ ಕ್ಷಿಪ್ರಗತಿಯನ್ನು ಪಡೆದಿದೆ. ಇಂತಿರುವಾಗ ಇಂಧನಕ್ಕೆ ಇನ್ನೂ ಒಂದು ಮೂಲವನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಅದು- ಸಾಗರದ ಆಳದಲ್ಲಿ ಸಮೃದ್ಧವಾಗಿರುವ ಜಲಜನಕ! ಸಾಗರದ ನೀರಿನಿಂದ (ಎಚ್2ಒ) ಜಲಜನಕವನ್ನು ಬೇರ್ಪಡಿಸುವ ಪ್ರಯತ್ನವಂತೂ ಇದಲ್ಲ. ಹಾಗಿದ್ದರೆ ಸಾಗರದ ಆಳದಲ್ಲಿ ಜಲಜನಕದ ಮೂಲ ಏನಿರಬಹುದು? ಕುತೂಹಲ ಖಂಡಿತ ಇದ್ದೇ ಇರುತ್ತದೆ. ದಿ ಮ್ಯಾಕ್ಸ್ ಪ್ಲಾಂಕ್ ಇನ್ ಸ್ಟಿಟ್ಯೂಟ್ ಆಫ್ ಮೆರೈನ್ ಮೈಕ್ರೋಬಯಾಲಜಿ ಮತ್ತು ದಿ ಕ್ಲಸ್ಟರ್ ಆಫ್ ಏಕ್ಸೆಲೆನ್ಸ್ ಮರುಮ್ ನ ಸಂಶೋಧಕರು ಏನನ

ಬುದ್ಧಿವಂತಿಕೆ ಮನುಷ್ಯರಿಗಷ್ಟೇ ಅಲ್ಲ, ಆನೆಗಳಿಗೂ ಇರುತ್ತೆ!

Image
ಮನುಷ್ಯ ತನ್ನನ್ನು ತಾನು ತೀರಾ ಬುದ್ಧಿವಂತ ಅಂದುಕೊಂಡುಬಿಟ್ಟಿದ್ದಾನೆ. ಆದರೆ ಪ್ರಾಣಿಗಳಿಗೂ ಬುದ್ಧಿ ಇದೆ, ಅವುಗಳಿಗೆ ನಮ್ಮ ರೀತಿಯಲ್ಲಿ ಸಂವಹನ ನಡೆಸುವುದಕ್ಕೆ ಗೊತ್ತಿಲ್ಲದೇ ಇರಬಹುದು. ಆದರೆ ಅವುಗಳದ್ದೇ ಆದ ರೀತಿಯ ಸಂವಹನ ಇದೆ ಎಂಬುದನ್ನು ನಾವು ಬಹಳಷ್ಟು ಬಾರಿ ನಿಲ೯ಕ್ಷಿಸುತ್ತೇವೆ. ನಮ್ಮ ಕೈಗೆಟುಕದ ವಸ್ತುಗಳನ್ನು ಪಡೆಯುವುದಕ್ಕೆ ನಾವು ಏಣಿ ಬಳಸುತ್ತೇವೆ. ಸಾಕೆಂದಾದಲ್ಲಿ ಸ್ಟೂಲನ್ನಾದರೂ ಬಳಸುತ್ತೇವೆ. ಹೀಗೆ ಅಗತ್ಯ ಬಿದ್ದಲ್ಲೆಲ್ಲ ಉಪಕರಣಗಳನ್ನು ಬಳಸಿಕೊಳ್ಳುವ ಸಾಮಥ್ಯ೯ ನಮ್ಮಲ್ಲಿದೆ ಅಂತ ಮಾನವರಾದ ನಾವು ಅಹಂನಿಂದ ಬೀಗುತ್ತೇವೆ. ಮಾನವನ ಈ ಅಹಂಗೆ ಪೆಟ್ಟುಕೊಡುವಂಥ ಸಂಶೋಧನೆಯೊಂದು ನಡೆದಿದೆ. ಅದು- ಅಗತ್ಯ ಬಿದ್ದಾಗ ಉಪಕರಣಗಳನ್ನು. ಸಲಕರಣೆಗಳನ್ನು ಬಳಸಿಕೊಳ್ಳುವುದರಲ್ಲಿ ಆನೆಗಳೂ ಏನೂ ಕಮ್ಮಿಯಿಲ್ಲ! ಹಾಗಿದ್ದರೆ ಈ ಸಂಶೋಧನೆ ಏನು ಎಂಬ ಕುತೂಹಲ ಇದೆಯಲ್ಲವೇ? ಮುಂದೆ ಓದಿ- ಅದು ಖಂಡೂಲಾ. ಏಳು ವಷ೯ ಪ್ರಾಯದ ಏಷ್ಯನ್ ಆನೆ. ನ್ಯೂಯಾಕ್೯ ಸಿಟಿ ಯೂನಿವಸಿ೯ಟಿಯ ಹಂಟರ್ ಕಾಲೇಜಿನ ಸಂಶೋಧಕರು ಆನೆಯ ನಡವಳಿಕೆಯ ಬಗ್ಗೆ ಸಂಶೋಧನೆ ಮಾಡಬೇಕು ಎಂದುಕೊಂಡಾಗ ಅವರ ಪರೀಕ್ಷೆಗೆ ಒಳಪಟ್ಟದ್ದು ಇದೇ ಖಂಡೂಲಾ. ಈ ಸಂಶೋಧಕರು ಆನೆ ಮತ್ತು ಡಾಲ್ಫಿನ್ ಗಳ ಬುದ್ಧಿಮತ್ತೆಯ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ವಾಷಿಮಂಗ್ಟನ್ ಡಿಸಿಯ ಪ್ರಾಣಿಸಂಗ್ರಹಾಲಯದಲ್ಲಿದ್ದ ಗಂಡಾನೆ ಖಂಡೂಲಾದ ಬುದ್ಧಿಮತ್ತೆ ಪರೀಕ್ಷಿಸಬೇಕು ಅನ್ನಿಸಿತು ಸಂಶೋಧಕರಿಗೆ. ಅದಕ್ಕಾಗಿ ಮ

ಕ್ಯಾಂಡಲ್ ಬೆಳಕಿನಲ್ಲಿ ವಜ್ರವಿದೆ...!

Image
ಈ ಕೆಇಬಿಯವ್ರು ಎಷ್ಟು ಹೊತ್ತಿಗೆ ಪವರ್ ಕಟ್ ಮಾಡ್ತಾರೋ ಹೇಳೋದಕ್ಕೆ ಬರೋದಿಲ್ಲ. ಏನ್ ಮಾಡೋದು, ಮನೆಯಲ್ಲಿ ಕ್ಯಾಂಡಲ್ಲೋ, ಸೀಮೆಣ್ಣೆ ದೀಪಾನೋ ರೆಡಿ ಇರ್ಲೇ ಬೇಕು. ಹೆಚ್ಚಿನವ್ರು ಕ್ಯಾಂಡಲ್ ತಂದಿಟ್ಕೊಳ್ಳೋದನ್ನೇ ಇಷ್ಟಪಡ್ತಾರೆ. ಯಾವ ಟೈಮಲ್ಲಿ ಕರೆಂಟ್ ಹೋದ್ರೂ ಸಹ ಛಕ್ಕಂತ ಕ್ಯಾಂಡಲ್ ಉರಿಸಿ ಮನೆಯನ್ನು ಬೆಳಗುತ್ತಾರೆ. ಅದೆಷ್ಟೋ ವಷ೯ಗಳಿಂದ ನಾವು ಕ್ಯಾಂಡಲ್ ಜೊತೆ ಅವಿನಾಭಾವ ನಂಟಿ ಬೆಸೆದುಕೊಂಡಿದ್ದೇವೆ. ಕ್ಯಾಂಡಲ್ ನಲ್ಲಿರೋ ಮಹಿಮೆ ಮಾತ್ರ ಈಗ ವೈಜ್ಞಾನಿಕ ಜಗತ್ತಿನಿಂದ ಬೆಳಕಿಗೆ ಬರುತ್ತಾ ಇದೆ. ಏನಪ್ಪಾ ಅಂಥಾ ಮಹಿಮೆ ಅಂತ ನೀವು ಕೇಳ್ಬಹುದು. ವಜ್ರಗಳು, ಅದೇ ಡೈಮಂಡ್ಸ್! ಕ್ಯಾಂಡಲ್ ಮತ್ತು ವಜ್ರಕ್ಕೆ ಎತ್ತಣಿಂದೆತ್ತ ಸಂಬಂಧ? ಈ ಕ್ಯಾಂಡಲ್ಲೋ ಮೇಣ, ಸ್ವಲ್ಪ ಜಾಸ್ತಿ ಒತ್ತಿದ್ರೆ ಪುಡಿಯಾಗುವಂಥದ್ದು. ಆದ್ರೆ ವಜ್ರವನ್ನು ಪುಡಿ ಮಾಡುವುದಕ್ಕೆ ವಜ್ರವೇ ಆಗಬೇಕು. ಹಾಗಿರುವಾಗ ಕ್ಯಾಂಡಲ್ ಮತ್ತು ವಜ್ರಕ್ಕೆ ಸಂಬಂಧ ಇದೆ ಅಂತ ಹೇಳಿದ್ರೆ? ಪ್ರಶ್ನೆಗಳು ಸಹಜ, ಇದಕ್ಕೆ ಉತ್ತರ ಬೇಕೇ? ಮುಂದೆ ಓದಿ- ಕ್ಯಾಂಡಲ್ ಉರಿಯುತ್ತಿರಬೇಕಾದರೆ ಅಸಂಖ್ಯಾತ ವಜ್ರದ ಕಣಗಳು ಸಿಡಿಯುತ್ತವೆ ಎಂಬ ಸತ್ಯವನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಪ್ರತಿ ಸೆಕೆಂಡಿಗೆ ಸುಮಾರು 15 ಲಕ್ಷ ವಜ್ರದ ಕಣಗಳು ಉರಿಯುತ್ತಿರುವ ಕ್ಯಾಂಡಲ್ ನಿಂದ ಸಿಡುಯುತ್ತವೆ. ಕ್ಯಾಂಡಲ್ ಬೆಳಕಿನಲ್ಲಿ ಏನಿದೆ ಎಂದು ಕುತೂಹಲದಿಂದ ಸಂಶೋಧನೆ ನಡೆಸಿದಂಥ ಸೇಂಟ್ ಆಂಡ್ರೂಸ್ ಯೂನಿವಸಿ೯ಟಿಯ ವಿಜ್ಞಾನ

ಬುಲ್ಲೆಟ್ ಪ್ರೂಫ್ ಚಮ೯ ಬಂದೈತೆ!

Image
ಈ ಚಮ೯ ಎಂಥ ಎಮ್ಮೆ ಚಮ೯ದ್ದೇ ಆದರೂ ಗುಂಡು(ಬುಲ್ಲೆಟ್)ಬಡಿದಾಗ ತಡೆದುಕೊಳ್ಳುವಷ್ಟು ಶಕ್ತವಾಗಿಲ್ಲ. ಅದೇ ಕಾರಣಕ್ಕೆ ಬುಲ್ಲೆಟ್ ಪ್ರೂಫ್ ಜಾಕೆಟ್ ಗಳಿಗೆ ಅಷ್ಟೊಂದು ಬೇಡಿಕೆ ಬಂದದ್ದು. ಆದರೆ ವೈಜ್ಞಾನಿಕ ಸಂಶೋಧನೆಗಳು ಸುಮ್ಮನೇ ಕೈ ಕಟ್ಟಿ ಕೂರುವುದಿಲ್ಲವಲ್ಲ? ಏನಾದರೊಂದು ಸಾಧನೆಯತ್ತ ಕಣ್ಣಿಟ್ಟೇ ಇರುತ್ತದೆ ವೈಜ್ಞಾನಿಕ ಜಗತ್ತು. ಈಗ ಹೊಸದೊಂದು ಸಂಶೋಧನೆ ಜಗತ್ತನ್ನು ಅಚ್ಚರಿಯ ಕಡಲಲ್ಲಿ ಮುಳುಗಿಸಿದೆ. ಅಂದರೆ ಬುಲ್ಲೆಟ್ ಪ್ರೂಫ್ ಚಮ೯ವನ್ನೇ ಅಭಿವೃದ್ಧಿಪಡಿಸಿದ್ದಾರೆ ಡಚ್ ಸಂಶೋಧಕಿ ಜಲಿಲಾ ಎಸ್ಸೈದಿ. ಅಲ್ಲ, ಬುಲ್ಲೆಟ್ ಪ್ರೂಫ್ ಚಮ೯ ಎಂದ ತಕ್ಷಣ ಅದನ್ನು ಸೃಷ್ಟಿಸುವಲ್ಲಿ ಹೇಗೆ ಯಶಸ್ವಿಯಾದರು? ಗುಂಡಿಗೂ ಜಗ್ಗದ ಚಮ೯ ಹುಟ್ಟುವುದಕ್ಕೆ ಕಾರಣ ಯಾವುದು?... ಎಂಬೆಲ್ಲ ಪ್ರಶ್ನೆಗಳು ಮೂಡುವುದು ಸಹಜ. ಇದಕ್ಕಾಗಿ ಜಲಿಲಾ ಬಳಸಿಕೊಂಡಿದ್ದು ಜೇಡದ ದೇಹದಲ್ಲಿರುವಂಥ ಪ್ರೋಟೀನ್ ಮತ್ತು ಮೇಕೆಯ(ಆಡು) ಹಾಲು! ಅಚ್ಚರಿಯಾಗುತ್ತದೆ ಅಲ್ಲವೇ? ಜಲಿಲಾ ಮತ್ತವರ ತಂಡ ಮೇಕೆಯನ್ನು ಕುಲಾಂತರಗೊಳಿಸಿತು. ಅಥಾ೯ತ್ ಕುಲಾಂತರಿ ತಳಿ ತಂತ್ರಜ್ಞಾನದ ಮೂಲಕ ಹೊಸ ತಳಿಯ ಮೇಕೆಯನ್ನು ಸೃಷ್ಟಿಸಿದರು. ಈ ರೀತಿ ಸೃಷ್ಟಿಸಿದಂಥ ಮೇಕೆ ಜೇಡವೊಂದು ಉತ್ಪಾದಿಸುವಂಥ ಪ್ರೋಟೀನನ್ನೇ ಒಳಗೊಂಡಿರುವ ಹಾಲನ್ನು ಉತ್ಪಾದಿಸುವುದಕ್ಕೆ ಶಕ್ತವಾಗಿತ್ತು. ಈ ಕುತಾಂತರಿ ಮೇಕೆಯಿಂದ ಉತ್ಪಾದಿಸಿದಂಥ ಹಾಲಿನಿಂದ ಫ್ಯಾಬ್ರಿಕ್ ಪ್ರತ್ಯೇಕಿಸಿದರು. ಈ ಫ್ಯಾಬ್ರಿಕ್ ಉಕ್ಕಿಗಿಂತಲೂ ಅಧಿಕ ಬಲಿಷ್ಠವಾಗಿದ್ದು

ಇಂಧನಕ್ಕಾಗಿ ಗಾಳಿಯಲ್ಲಿ ಗಣಿಗಾರಿಕೆ!

Image
ಸಾಮಾನ್ಯ ಜನರು `ನೀರಿನಿಂದ ಗಾಡಿ ಓಡೋ ಹಾಗಾಗಬೇಕು. ಹಾಗಿದ್ದರೆ ಒಂದಲ್ಲ, ಎರಡೆರಡು ಗಾಡಿ ಬೇಕಾದರೂ ಇಟ್ಟುಕೊಳ್ಳಬಹುದು' ಎಂದು ಹೇಳುತ್ತಿದ್ದರು. ಜನ ಏನು ಅಪೇಕ್ಷೆ ಪಟ್ಟಿದ್ದರೋ ಅದು ಸಾಧ್ಯವಾಗುವ ದಿನ ಹತ್ತಿರ ಬಂದಿದೆ. ಅಂದರೆ ನೀರು ಮತ್ತು ಗಾಳಿಯಿಂದ (ಕಾರ್ಬನ್ ಡೈ ಆಕ್ಸೈಡ್) ಗಾಡಿ ಓಡುವ ದಿನ ಹತ್ತಿ ಬರುತ್ತಿದೆ.  ಪೆಟ್ರೋಲಿಯಂ ಉತ್ಪನ್ನಗಳು ದಿನೇ ದಿನೇ ದುಬಾರಿಯಾಗುತ್ತಿವೆ. ಜೊತೆಗೆ ಈ ಸಂಪನ್ಮೂಲಗಳ ಆಗರ ಬರಿದಾಗುತ್ತಿದೆ. ಇಂಧನಗಳಿಲ್ಲದ ಬದುಕನ್ನು ಕಲ್ಪಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಏನಾದರೊಂದು ಮಾರ್ಗ ಕಂಡು ಹಿಡಿಯಲೇಬೇಕೆಂಬ ಪ್ರಯತ್ನಗಳು ವೈಜ್ಞಾನಿಕ ವಲಯದಲ್ಲಿ ಸತತವಾಗಿ ನಡೆಯುತ್ತಲೇ ಇದೆ. ಸೂರ್ಯನ ಶಕ್ತಿಯನ್ನು ವಿದ್ಯುತ್ತನ್ನಾಗಿ ಪರಿವರ್ತಿಸುವಂಥ ತಂತ್ರಜ್ಞಾನ ಇದೆಯಾದರೂ ಕ್ಷಮತೆ ಕಡಿಮೆ ಇರುವುದರಿಂದ ಹೂಡಿಕೆಯ ಪ್ರಮಾಣ ಹೆಚ್ಚು ಬೇಕಾಗುತ್ತದೆ. ಹೀಗಾಗಿ ಹೆಚ್ಚು ಕ್ಷಮತೆಯ ವಿಧಾನಕ್ಕಾಗಿ ಪ್ರಯತ್ನ ನಡೆಯುತ್ತಲೇ ಇದೆ. ಈ ಪ್ರಯತ್ನಗಳ ಸರಣಿಯಲ್ಲಿ ಒಂದು ಭರವಸೆಯ ಬೆಳಕು ಚಿಮ್ಮಿದ್ದು ಗಾಳಿಯಲ್ಲಿ. ಹಾಗಂತ ಇದು ಪವನ ವಿದ್ಯುತ್ ಉತ್ಪಾದನೆಯ ತಂತ್ರಜ್ಞಾನವಲ್ಲ. ಗಾಳಿಯಲ್ಲೇ ಗಣಿಗಾರಿಕೆ ಮಾಡುವಂಥ ತಂತ್ರಜ್ಞಾನ! ಹಾಂ, ಗಣಿಗಾರಿಕೆ ಎಂದ ತಕ್ಷಣ ನಮ್ಮ ಮನಸ್ಸು ಅಕ್ರಮ ಗಣಿಗಾರಿಕೆ, ಲೋಕಾಯುಕ್ತ ವರದಿ... ಮುಂತಾದ ವಿಚಾರಗಳತ್ತ ಸುಳಿದಾಡೀತು. ಇದು ಆ ಗಣಿಗಾರಿಕೆ ಅಲ್ಲ! ಗಾಳಿಯಲ್ಲಿರುವಂ

ಯುಎಸ್ಬಿ ಟೂಥ್ ಬ್ರಶ್ ಬಂದಿದೆ ಗೊತ್ತಾ?

Image
ಅಲ್ಲಾ ಸ್ವಾಮಿ, ಕಾಲ ಎಲ್ಲಿಗೆ ಬಂತು ಅಂತೀನಿ! ಮನುಷ್ಯ ತನ್ನ ಕೆಲ್ಸಗಳನ್ನು ತಾನೇ ಮಾಡಿಕೊಳ್ಳುವುದರಿಂದ ವಿಮುಖನಾಗುತ್ತಲೇ ಇದ್ದಾನೆ. ಅಥಾ೯ತ್ ಪಕ್ಕಾ ಸೋಮಾರಿಯಾಗುತ್ತಿದ್ದಾನೆ. ಬಟ್ಟೆ ತೊಳೆಯೋದಕ್ಕೂ ಮೆಷಿನ್ ಬೇಕು. ನಾಲ್ಕೆಜ್ಜೆ ಇಟ್ಟರೆ ತಲುಪಬಹುದಾದಂಥ ಸ್ಥಳಗಳಿಗೆ ತಲುಪೋದಕ್ಕೂ ಮೆಷಿನ್ ಬೇಕು. ಮನೆಕೆಲಸಗಳನ್ನು ಮಾಡ್ಕೊಡೋದಕ್ಕೂ ಒಂದು ರೋಬಟ್ ಮೆಷಿನ್ನು! ಇದುವರೆಗೆ ಈ ಮನುಷ್ಯ ತನ್ನ ಹಲ್ಲುಗಳನ್ನು ತಾನೇ ಉಜ್ಕೋತಾ ಇದ್ದ. ಇನ್ನೂ ಆ ಕೆಲ್ಸ ಕೂಡಾ ಆತ ಮಾಡೋಲ್ಲ. ಸುಮ್ನೇ ಬಾಯಿ "ಆ..." ಮಾಡಿಕೊಟ್ರೆ ಸಾಕು ಮೆಷಿನ್ನು ಹಲ್ಲುಜ್ಜುತ್ತೆ! ಆಶ್ಚಯ೯ ಬೇಡ, ಇದು ನಿಜ. ಇಂಥದ್ದೊಂದು ಟೂಥ್ ಬ್ರಶ್ ಮೆಷಿನ್ನಿನ ಬಗ್ಗೆ ಅಂತಜಾ೯ಲದಲ್ಲಿ ಮಾಹಿತಿ ಸಿಕ್ಕಾಗ ಅದನ್ನು ನನ್ನ ಮಿತ್ರರಿಗೂ ಹೇಳ್ಬೇಕು ಅನ್ನಿಸ್ತು ನೋಡಿ. ನಿಮ್ಗೆ ಯುಎಸ್ಬಿ ಬ್ಲೂಟೂಥ್, ಯುಎಸ್ಬಿ ಮೌಸ್, ಯುಎಸ್ಬಿ ಕೀಬೋಡ್೯.... ಇಂಥ ಕಂಪ್ಯೂಟರ್ ಭಾಷೆ ಕೇಳಿ ಗೊತ್ತು. ಇದೇ ಥರ ಈಗ ಯುಎಸ್ಬಿ ಟೂಥ್ ಬ್ರಶ್ ಬಂದಿದೆ. ಹಾಗಂತ ಇದೇನೂ ಕಂಪ್ಯೂಟರ್, ಲ್ಯಾಪ್ ಟಾಪ್ ಇಂಥ ಕಂಪ್ಯೂಟರ್ ಕುಟುಂಬದ ಮೆಷಿನ್ನುಗಳ ಹಲ್ಲು ಉಜ್ಜೋದಕ್ಕೆ ಇರುವಂಥದ್ದಲ್ಲ. ಸಾಕ್ಷಾತ್, ಈ ಮೆಷಿನ್ನುಗಳನ್ನೆಲ್ಲ ಕಂಡುಹಿಡಿದಂಥ ಮನುಷ್ಯನ ಹಲ್ಲುಗಳನ್ನೇ ಉಜ್ಜೋದಕ್ಕೆ ಇರುವಂಥದ್ದು. ಅಂದಹಾಗೆ, ಈ ಟೂಥ್ ಬ್ರಶ್ಶನ್ನು ಕಂಡುಹಿಡಿದದ್ದು ಸಾಧಾರಣ ಕಂಪನಿಯಲ್ಲ, ಜಗತ್ತಿನಾದ್ಯಂತ ಅತ್ಯಂತ ಪ್ರಖ್ಯಾತಿ ಪಡೆದಿರುವಂಥ ಫಿಲ

ಮಕ್ಕಳು ತಿನ್ನುವ ಆಹಾರ ಅಮ್ಮನ ಮೇಲೆ ಅವಲಂಬಿತ

Image
ನಿಮ್ಮ ಮಕ್ಕಳು ಹಸಿರು ಆಹಾರವನ್ನೇ ಹೆಚ್ಚಾಗಿ ತಿನ್ನಬೇಕೆ? ಹಾಗಿದ್ದರೆ ಗಭಿ೯ಣಿಯಾಗಿದ್ದಾಗಲೇ ಹಸಿರು ಆಹಾರ ಮಾತ್ರ ತಿನ್ನಿ! ಹೀಗಂತ ಅಮೆರಿಕದ ವಿಜ್ಞಾನಿಗಳು ಸಂಶೋಧನೆ ನಡೆಸಿ ಅಮೆರಿಕದ ಮಹಿಳೆಯರಿಗೆ ಸಲಹೆ ನೀಡಿದ್ದಾರೆ. ಅಮೆರಿಕದ ಹೆಚ್ಚಿನ ಮಹಿಳೆಯರು ತಮ್ಮ ಮಕ್ಕಳು ಸಸ್ಯಾಹಾರಿಗಳಾಗಬೇಕು ಎಂದು ಬಯಸುತ್ತಿದ್ದಾರೆ. ಆದರೆ ಮಕ್ಕಳು ಸಸ್ಯಾಹಾರಕ್ಕೆ ಒಗ್ಗಿಕೊಳ್ಳುತ್ತಿಲ್ಲ ಎಂಬ ಕೊರಗು ಅವರಲ್ಲಿದೆ. ಇದಕ್ಕೆ ಪರಿಹಾರವೆಂದರೆ ಹೆಣ್ಣು ಮಕ್ಕಳು ಗಭಿ೯ಣಿಯಾಗಿದ್ದಾಗಲೇ ಸಸ್ಯಾಹಾರವನ್ನು ತಿನ್ನುವುದು ಎನ್ನುತ್ತದೆ ಸಂಶೋಧನೆ. ಅಷ್ಟಕ್ಕೂ ಸಸ್ಯಾಹಾರದ ಮೇಲೆ ವಿದೇಶಿಯರಿಗೆ ಅಷ್ಟೊಂದು ವ್ಯಾಮೋಹ ಯಾತಕ್ಕೆ? ನಾವು ಹೇಗೆ ಪಾಶ್ಚಾತ್ಯರ ಸಂಸ್ಕೃತಿಗೆ ಮಾರುಹೋಗಿ ಅವರನ್ನು ಅನುಕರಣೆ ಮಾಡುತ್ತಿದ್ದೇವೆಯೋ ಅವರೂ ಹಾಗೆಯೇ ನಮ್ಮನ್ನು ನೋಡಿ ಕಲಿತಿದ್ದಾರೆ. ಆದರೆ ಇಲ್ಲೊಂದು ವ್ಯತ್ಯಾಸವಿದೆ. ನಮ್ಮದು ಅಂಧಾನುಕರಣೆ, ಅವರು ಹಾಗಲ್ಲ, ನಮ್ಮ ಪ್ರತಿಯೊಂದು ಪದ್ಧತಿಯಲ್ಲೂ ಇರುವಂಥ ವೈಜ್ಞಾನಿಕ ಸತ್ಯಗಳನ್ನು ಅನ್ವೇಷಿಸಿ, ಸತ್ಯ ಕಂಡುಕೊಂಡು ಬಳಿಕ ಅದನ್ನು ಅನುಸರಿಸುತ್ತಿದ್ದಾರೆ. ಅವರ ಸಸ್ಯಾಹಾರ ಪ್ರೀತಿಗೆ ಇಷ್ಟೇ ಕಾರಣ ಅಲ್ಲ. ಮಾಂಸಾಹಾರದಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನ ಅಂಶ ಇರುತ್ತದೆ. ಇದೇ ಕಾರಣಕ್ಕೆ ಅಮೆರಿಕದಂಥ ದೇಶಗಳಲ್ಲಿನ ಶೇ.40ರಷ್ಟು ಜನ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬೊಜ್ಜನ್ನು ಹೇಗಾದರೂ ಕರಗಿಸಿಕೊಳ್ಳಬೇಕು ಎಂದು ಚಿಂತಿಸಿದ ಅವರಿ

ರೋಗಗಳ ಗೂಡಾಗುತ್ತಿದೆ ಯುವಶಕ್ತಿ

Image
* 20 ವರ್ಷಕ್ಕೇ ಮಧುಮೇಹ, ಬೊಜ್ಜು, ಬಿಪಿ;  ಆರೋಗ್ಯದ ಬಗ್ಗೆ ಕಾಳಜಿಯಿಲ್ಲ * ನಗರ ಪ್ರದೇಶದ ಯುವಕರಲ್ಲೇ ಹೆಚ್ಚು ಸಮಸ್ಯೆ;   ಯುವತಿಯರಲ್ಲಿ ಬೊಜ್ಜಿನ ಪ್ರಮಾಣ ಅಧಿಕ ದೇಶದ ಜೀವಾಳ ಎಂದೇ ಪರಿಗಣಿಸಲ್ಪಡುವ ಯುಶಕ್ತಿ ರೋಗಗಳ ಗೂಡಾಗುತ್ತಿದೆ. ಸಾಮಾನ್ಯವಾಗಿ 40 ವರ್ಷದ ನಂತರ ಕಾಣಿಸಿಕೊಳ್ಳುತ್ತಿದ್ದ ಸಮಸ್ಯೆಗಳೆಲ್ಲ ಇಂದು 20 ವರ್ಷದ ಯುವಕರಲ್ಲೇ ಕಾಣಿಸಿಕೊಳ್ಳುತ್ತಿವೆ. ಮಧುಮೇಹ, ಬೊಜ್ಜು, ರಕ್ತದೊತ್ತಡ, ಮಾನಸಿಕ ಒತ್ತಡ ಮತ್ತಿತರ ಹಲವಾರು ಸಮಸ್ಯೆಗಳಿಂದ ದೇಶದ ಯುವಶಕ್ತಿ ನರಳುತ್ತಿದೆ. ಯುವಶಕ್ತಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆ. ಅಂದಹಾಗೆ ಇಂದು (ಆಗಸ್ಟ್ 12) ಅಂತಾರಾಷ್ಟ್ರೀಯ ಯುವ ದಿನ. ಭಾರತದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12ರಂದು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆ ಮಾನ್ಯ ಮಾಡಿರುವಂಥ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವದಿನವೆಂದು ಪರಿಗಣಿತವಾಗಿರುವುದು ಆಗಸ್ಟ್ 12. ಇಂತಹ ಸಮಯದಲ್ಲಿ ಯುವಶಕ್ತಿ ಹಾದಿ ತಪ್ಪುತ್ತಿರುವುದರ ಬಗ್ಗೆ ಯೋಚಿಸಲೇಬೇಕಾದ ಅನಿವಾರ್ಯತೆಯಿದೆ. ಈ ಹಿಂದಿನ ದಿನಗಳಲ್ಲಿ ದೇಶದಲ್ಲಿ ಬೊಜ್ಜಿನ ಪ್ರಮಾಣ ಶೇ.2ರಷ್ಟಾಗಿತ್ತು. ಆದರೆ ಈಗ ಇದು ಶೇ.20-25ಕ್ಕೆ ಏರಿಕೆಯಾಗಿದೆ. ಭಾರತದ ಶೇ..25ರಷ್ಟು ಯುವಕರು ಇಂದು ಬೊಜ್ಜಿನ ಸಮಸ್ಯೆಗೆ ಒಳಗಾಗಿದ್ದಾರೆ. ಅದರಲ್ಲೂ ನಗರ ಪ್ರದೇಶಗಳಲ್ಲಿನ ಯುವಕರಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಪ್ರಾಯವಾಗುತ್ತಾ ಹೋದಂತೆ

ಬಾಹ್ಯಾಕಾಶದಿಂದ ಹಲವು ರಹಸ್ಯಗಳ ನಿರೀಕ್ಷೆ!

Image
ಹಲವು ಕಾಲದ ಹಿಂದೆ ನಮ್ಮ ಭೂಮಿ ಎರಡು ಚಂದ್ರರನ್ನು ಹೊಂದಿದ್ದಿರಬೇಕು. ಕಾಲಾಂತರದಲ್ಲಿ ಮತ್ತೊಂದು ಚಂದ್ರ ಈಗಿರುವ ಚಂದ್ರನೊಂದಿಗೆ ಘರ್ಷಣೆಗೆ ಒಳಗಾಗಿ ಎರಡು ಚಂದ್ರರೂ ಒಂದಾಗಿರಬೇಕು. ಒಂದು ಕ್ಷುದ್ರಗ್ರಹ ಚಂದ್ರನ ಹಿಂದಿಂದೆಯೇ ನಮ್ಮ ಭೂಮಿಯನ್ನು ಪರಿಭ್ರಮಿಸುತ್ತಿದೆ.  ಇನ್ನು ಗುರು ಗ್ರಹದ ವಿಚಾರ. ಕಳೆದ ಶುಕ್ರವಾರ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ `ಜುನೋ' ಗಗನನೌಕೆಯನ್ನು ಉಡಾಯಿಸಿತು.  ಕುತೂಹಲ ಎಂದರೆ ಹಾಗೆಯೇ. ಒಮ್ಮೆ ಮನಸ್ಸನ್ನು ಹೊಕ್ಕಿತು ಎಂದಾದರೆ ಅದು ಅಲ್ಲಿಂದ ಹೊರಟು ಹೋಗುವುದೇ ಇಲ್ಲ. ಭೂಮಿಯ ಮೇಲೆ ಇರುವಂಥ ವಸ್ತುಗಳ ಬಗ್ಗೆ ನಮ್ಮಲ್ಲಿ ಅಷ್ಟೊಂದು ಕುತೂಹಲ ಮೂಡುವುದಿಲ್ಲ. ಆದರೆ ಬಾಹ್ಯಾಕಾಶದಲ್ಲಿ ಏನಾದರೂ ಅಚ್ಚರಿಗಳು ಕಂಡರೆ ನಮ್ಮ ಕುತೂಹಲ ಹೆಚ್ಚುತ್ತಾ ಹೋಗುತ್ತದೆ. ಇನ್ನೂ ಏನೇನಿರಬಹುದು ಎಂಬುದನ್ನು ತಿಳಿದುಕೊಳ್ಳಲು ಹಾತೊರೆಯುತ್ತೇವೆ. ಬಾಹ್ಯಾಕಾಶದ ವಿಚಾರಗಳೇ ಹಾಗೆ, ತಿಳಿದುಕೊಂಡಷ್ಟೂ ಇನ್ನಷ್ಟು ಅನ್ವೇಷಣೆ ಮಾಡುವುದಕ್ಕೆ ಪ್ರೇರಣೆ ಸಿಗುತ್ತದೆ. ಸದ್ಯಕ್ಕೆ ಇಂಥದ್ದೇ ಕುತೂಹಲದ ಘಟ್ಟದ ಸಮೀಪ ಬಂದಿದ್ದೇವೆ ಎನಿಸುತ್ತಿದೆ. ಇದಕ್ಕೆ ಕಾರಣಗಳು ಹಲವು- ಒಂದು ಮಂಗಳ ಗ್ರಹದಲ್ಲಿ ನೀರಿನ ಹರಿವು ಇರುವುದು ನಾಸಾದ ಸಂಶೋಧನೆಯಲ್ಲಿ ಸ್ಪಷ್ಟವಾಗಿ ತಿಳಿದುಬಂದಿದೆ. ಮಂಗಳಗ್ರಹದಲ್ಲಿ ಇನ್ನೂ ಎಂತಹ ವಿಸ್ಮಯಗಳು ಸಿಗಬಹುದು? ಜೀವಾಸ್ತಿತ್ವ ಇದೆಯೇ ಎಂಬ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಮಂಗಳನ ಅಂಗಳದಲ್ಲಿ ನೀರಿನ ಆಗರವೇ ಇರುವ

ಲಿಂಗಪರಿವರ್ತನೆ: ಬಡವಾಗುತ್ತಿವೆ ಕಂದಮ್ಮಗಳು!

ಜೆನಿಟೋಪ್ಲಾಸ್ಟಿ. ಈ ತಂತ್ರಜ್ಞಾನದ ಹಿಂದಿದ್ದ ಉದ್ದೇಶವೂ ಸಹ ಕೆಟ್ಟದಾಗೇನೂ ಇರಲಿಲ್ಲ. ನಪುಂಸಕತೆಯನ್ನು ನಿವಾರಿವಂಥ ಮಹತ್ವದ ಉದ್ದೇಶವನ್ನು ಇಟ್ಟುಕೊಂಡಿದ್ದಂಥ ಈ ತಂತ್ರಜ್ಞಾನ ಧನದಾಹಿ ವೈದ್ಯರ ಕೈಯಲ್ಲಿ ಲಿಂಗಪರಿವರ್ತನೆಯಂಥ ದುರುದ್ದೇಶಕ್ಕೆ ಬಳಕೆಯಾಗುತ್ತಿದೆ ಅಷ್ಟೆ. ಎಂತಹುದ್ದೇ ಅಭಿವೃದ್ಧಿಯಾದರೂ ಅದು ನಿಸರ್ಗವನ್ನು, ಆ ನಿಸರ್ಗದ ಸೃಷ್ಟಿಯನ್ನು ಕಾಪಾಡಿಕೊಂಡು ಬರಬೇಕೇ ಹೊರತು, ಅದನ್ನೇ ಧಿಕ್ಕರಿಸಿ ಮುನ್ನಡೆಯುವಂತಿರಬಾರದು. ಗರ್ಭಿಣಿಯೊಬ್ಬಳು ಪ್ರಸವಿಸಿದ ತಕ್ಷಣ ಆಕೆಯ ಕಡೆಯವರು ನೋಡುವುದು- ಮಗು ಗಂಡೋ ಹೆಣ್ಣೋ ಎಂದು. ಒಂದು ವೇಳೆ ಮಗು ಹೆಣ್ಣಾಗಿದ್ದರೆ ಮುಗಿಯಿತು ಅದರ ಕಥೆ! ಹೀಗೆಲ್ಲ ಆಗುತ್ತದೆಯೇ ಎಂಬ ಪ್ರಶ್ನೆ ಒಂದಷ್ಟು ವರ್ಗಗಳ ಜನರ ಮನಸ್ಸಿನಲ್ಲಿ ಮೂಡಬಹುದು. ಕಾರಣ- ಮಗು ಗಂಡಾಗಲಿ, ಹೆಣ್ಣಾಗಲಿ... ಸುಸೂತ್ರವಾಗಿ ಆದರೆ ಸಾಕು ಎಂದು ಭಾವಿಸುವ ಜನರಿದ್ದಾರೆ. ಮುಖ್ಯವಾಗಿ ಕರ್ನಾಟಕ ಮತ್ತು ಕೇರಳಗಳಲ್ಲಿ ಹೆಣ್ಣು ಗಂಡೆಂಬ ತಾರತಮ್ಯ ಕಡಿಮೆಯಾಗುತ್ತಿದೆ. ಆದರೆ ಸಂಪೂರ್ಣ ಭಾರತದ ಪರಿಸ್ಥಿತಿ ಹೀಗಿಲ್ಲ. ಗಂಡು ಮಗು ಮಾತ್ರ ನಮಗೆ ಬೇಕು ಎಂದು ಭಾವಿಸುವ ಅದೆಷ್ಟೋ ಜನ ಭಾರತದಲ್ಲಿದ್ದಾರೆ. ಮಗು ಹೆಣ್ಣು ಎಂದಾಕ್ಷಣ ಅದನ್ನು ಒಂದೋ ಸಾಯಿಸಿ ಬಿಡುತ್ತಾರೆ, ಇಲ್ಲವಾದಲ್ಲಿ ಬಿಟ್ಟು ಹೋಗುತ್ತಾರೆ. ಇದು ಹಳೇ ದಿನಗಳ ವಿಚಾರವಾಯಿತು. ಆದರೆ ಯಾವಾಗ ಲಿಂಗಪರಿವರ್ತನೆ ತಂತ್ರಜ್ಞಾನವನ್ನು ವೈದ್ಯಲೋಕ ಬಳಸಿಕೊಳ್ಳಲಾರಂಭಿಸಿತೋ ಅಂದಿನಿಂದ ಹೆಣ್ಣು ಮಗು