Posts

Showing posts from 2023

ಪುಟಾಣಿ ನವಿಲು

Image
ಪುಟಾಣಿ ನವಿಲು ಪುಟಾಣಿ ನವಿಲು ನವಿಲೇ ನವಿಲೇ ಪುಟಾಣಿ ನವಿಲೇ ನನ್ನ ಮುದ್ದು ಚೆಂದದ ನವಿಲೇ || ನಾನೂ ನೀನೂ ಅಕ್ಕ ತಂಗಿ ಹತ್ತಿರ ಬಂದು ಆಡು ಬಾ ನವಿಲೇ || ಅಪ್ಪ ಅಮ್ಮ ನನ್ನನು ಬಿಟ್ಟು ಪೇಟೆಗೆ ಹೋಗ್ತಾರೆ ಮರಿ ನವಿಲೇ || ನಿದ್ದೆ ಬಿಟ್ಟು ನಾನು ಎದ್ದಾಗ ಪಕ್ಕದಿ ನೀನೇ ಇರು ನವಿಲೇ || ಪೇಟೇಲಿ ಪೊಲೀಸ್ ಬಿಡ್ತಾ ಇಲ್ಲ ಮನೇಲೆ ನಾವು ಆಡುವ ನವಿಲೇ || ಪೇಟೇಲಿ ತಿಂಡಿ ಸಿಗುತ್ತಾ ಇಲ್ಲ ಸ್ವಲ್ಪ ಸ್ವಲ್ಪ ತಿನ್ನುವ ನವಿಲೇ || ಅಜ್ಜಿ ಟೀವಿಲಿ ವಾರ್ತೆ ನೋಡ್ತಾರೆ ನಾನೂ ನೀನೂ ಕಾರ್ಟೂನು ನೋಡುವ || ವಾಕಿಂಗ್ ಹೋಗುವ ಬಾ ನವಿಲೇ ಆಟವನಾಡುವ ಓ ನವಿಲೇ || ಹೃದಯದಿ ಪ್ರೀತಿ ತುಂಬಾ ತುಂಬಾ ನನ್ನ ತಂಗಿ ಪುಟ್ಟು ನವಿಲೇ || ಇಂದು ತುಂಬಾ ಮಳೆಯ ಹನಿಯು ಬರಲೇ ಇಲ್ಲ ಯಾಕೇ ನವಿಲೇ || ಮನೆಯ ಒಳಗೆ ಇದ್ದೂ ಇದ್ದೂ ಬೇಜಾರೂ ಆಯ್ತು ಮುದ್ದು ನವಿಲೇ || ನಿನಗೇ ಒಂದು ಬಂಗಾರ ಗೆಜ್ದೆ ತಂದು ಕೊಡುವೆ ಕುಣಿಯೋಣ ನವಿಲೇ || ನಾನೂ ನೀನು ಸೇರಿಕೊಂಡು ಚಂದದ ಡ್ಯಾನ್ಸು ಮಾಡುವ ನವಿಲೇ || ಥಕ ದಿನ್ನ ತೈ ತಕಿಟ ತಾಂ ತಕಿಟ ತೋಂ ದಿನ ದಿನ್ನ ತ್ತಾಂ ತರಿಕಿಟ ದಿನ ದಿನ್ನ ತ್ತೋಂ ಧಿಮಿ ಧಿಮಿತ ಧಿಮಿತ ಧೀಂ || ಪರಿಕಲ್ಪನೆ, ಸಾಹಿತ್ಯ – ಪ್ರಣಮ್ಯ ಡಿ. ಶರ್ಮ ಅಕ್ಷರ, ಪದ್ಯರೂಪ – ಪ್ರಕಾಶ್ ಪಯಣಿಗ

ಶಿವ ರೂಪಕಲ್ಪನ ಕಾವ್ಯ

Image
ಶಿವ ರೂಪಕಲ್ಪನ ಕಾವ್ಯ ಹಿಮಸುತೆಯಪತಿ ಮಹಿಮಗಿರಿಯೊಡೆಯ ಶಂಭೋ ಮನದರಿಯ ತರಿದು ಅರಿವ ಬೆಳಗಿಸು ಶಂಭೋ || ಪ || ಹರಹರ ಲಯಹರ ಮೃದುವದನ ಹರಿಬಂಧು ಜಯಕರ ಹಿತಕರ ಜನಮನಗಮನ ಸಿಂಧು ದಿನಕರ ಯಮಹರ ಮದನಹರ ಹರ ಶಂಭೋ ವರ ವರದ ಅಮರ ರುದಿರ ಶಿಶಿರ ಸುಬಂಧು || ೧ || ಅಸುರ ಸುರ ನರ ಅಚರ ಚರ ಗಣಕೆ ಈಶ ಮೃಗಚರುಮ ವಸನ ಮೃಗಪತಿಯೆ ಜಗದೀಶ ಮನನ ಗಮನ ಕಿಡಿನಯನ ಪರಮ ಗಿರೀಶ ಗುಹ ಗಣಪ ಗಿರಿಜೆಯೊಡೆಯನೆ ಉರಗಭೂಷ || ೨ || ಕರದೊಳಗೆ ಡಮ ಡಮ ಡಮ ಡಮರ ನಿನಾದ ಜಗಜಗದ ಕಣಕಣದಿ ಶಿವ ಶಿವ ಸುನಾದ ಮನಕೆರಳೆ ಸುಡುಕಿಡಿಗೆ ಯುಗಯುಗದ ಅಂತ್ಯ ಗತಿಯೆನಲು ಗತನವನು ಅಮಿತಜನ ವಂದ್ಯ || ೩ || ಜನಮನಕೆ ಕೆಡುಕೆನಿಪ ಕಳೆಕಳೆವ ಕಾಲ ಇರಿದಿರಿದು ಅರಿಗಳೆದೆ ಬಗೆಬಗೆವ ಶೂಲ ಬಳಿದಿರಲು ಮಸಣ ಬಸುಮ ಮಹಿಮೆ ಅನಂತ ಅಹಿತವನು ಹಿತವೆನಲು ಕರುಣಶಿವ ಕಾಂತ || ೪ || ಜಗದಗಲ ಹರ ತಿರುಗೆ ಹೊರುವನವ ನಂದಿ ಶಿವಶಿವೆಯ ಮಹಿಮೆ ಜನ ತಿಳಿಯೆ ನೆಪ ಭೃಂಗಿ ಹರನೊಲವ ಇಳೆಗರುಹೆ ಮಹಿಮಗಣ ಶೃಂಗಿ ವಿಷಕುಡಿದು ಜಗಪೊರೆದ ಪಶುಪತಿಯೆ ದಂಡಿ || ೫ || ಶಿರದೊಳಗೆ ಶಶಿಬೆಳಗೆ ನಿಶೆಗಳೆವ ಚಂದ ಹರಜಟೆಯೆ ನೆಲೆಯೆನುವ ಸುರನದಿಯು ಗಂಗಾ ದುರುಳಮನ ಮತಿಗೆಡಿಪ ನಿಜಶರ ಪಿನಾಕಿ ನಿಜಬಕುತಿ ಜಗಮುಕುತಿ ಶಿವನೊಲವ ನಾಕ || ೬ || ಶಿವನೆನೆಯೆ ಪದುಮಜನು ಜಗಸೃಜಿಪ ಹಂಸ ಜಗಪೊರೆವ ಹರಿಯಿರಲು ಉಸಿರುಸಿರೆ ವಂಶ ಉಸಿರಳಿಯೆ ಲಯಹರನೆ ಇಹ ಪರಮಹಂಸ ಸಕಲಮನ ಇಹಪರದಿ ಶಿವಶಿವೆಯ ಅಂಶ || ೭ ||