Posts

Showing posts from June, 2013

ಮಾನವ ವಲಸೆ ಬಂದ ಬಗೆ ಹೇಗೆ?

Image
ಲಕ್ಷಾಂತರ ವರ್ಷಗಳ ಹಿಂದೆ ನಾಗರಿಕತೆ ವಿಕಾಸಗೊಂಡು , ಬದುಕುವ ಕಲೆಯನ್ನು ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಬದಲಿಸಿಕೊಂಡ ಮಾನವ ತಾನಿದ್ದ ಜಾಗದಿಂದ ವಿವಿಧ ಪ್ರದೇಶಗಳಿಗೆ ವಲಸೆ ಹೋಗುವುದನ್ನು ಶುರು ಮಾಡಿದ . ಬದುಕಿನ ಚಿತ್ರಣವನ್ನು ಹಂತಹಂತವಾಗಿ ಬದಲಿಸಿಕೊಳ್ಳುತ್ತಾ , ಪ್ರಕೃತಿಯ ಜತೆಗಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತಾ ಮುಂದೆ ಮುಂದಾ ಸಾಗಿ ಇಂದು ಪ್ರಕೃತಿಯನ್ನೇ ಧಿಕ್ಕರಿಸಿ ನಿಲ್ಲುವ ಮಟ್ಟಕ್ಕೆ ಬಂದಿದ್ದಾನೆ . ಯಾವುದೋ ಪ್ರದೇಶದ ಮೂಲನಿವಾಸಿಯಾಗಿದ್ದವ ಇಂದು ಮತ್ತಾವುದೋ ಪ್ರದೇಶ ಸೇರಿಕೊಂಡು ಅಲ್ಲಿ ತನ್ನ ವಂಶವೃಕ್ಷವನ್ನು ಬೆಳೆಸುತ್ತಿದ್ದಾನೆ . ಆರ್ಯರು , ದ್ರಾವಿಡರು ... ಕೂಡಾ ಒಂದು ಕಾಲದಲ್ಲಿ ವಲಸೆ ಬಂದವರೇ ! ಇದೆಲ್ಲ ಒತ್ತಟ್ಟಿಗಿರಲಿ , ಮಾನವ ವಲಸೆಯ ಇತಿಹಾಸವನ್ನು ಅಧ್ಯಯನ ಮಾಡುವುದಕ್ಕೆ ಈಗ ನಾಟಿಂಗ್‌ಹ್ಯಾಮ್ ಯೂನಿವರ್ಸಿಟಿಯ ವಂಶವಾಹಿ ತಜ್ಞರು ಸಂಶೋಧನೆ ಆರಂಭಿಸಿದ್ದು , ಬಸವನಹುಳುವಿನ ಮೂಲಕ ತಮ್ಮ ಗಮ್ಯ ತಲುಪುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ . ಫ್ರಾನ್ಸ್‌ನ ಪೈರೇನಿಯನ್ ಪ್ರದೇಶದಿಂದ ಐರ್ಲೆಂಡ್‌ಗೆ ಜನ ವಲಸೆ ಬಂದದ್ದು ಹೇಗೆಂಬುದನ್ನು ಸದ್ಯಕ್ಕೆ ಅಧ್ಯಯನ ಮಾಡುತ್ತಿದ್ದಾರೆ .

ಜೀವಾಂಶ ಭೂಮಿಗೆ ಬಂದದ್ದು ಬಾಹ್ಯದಿಂದ

Image
ವೈಜ್ಞಾನಿಕ ಜಗತ್ತಿನಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಭಾರೀ ಕುತೂಹಲ , ಅದೊಂಥರಾ ಸೂಕ್ಷ್ಮ , ಅದೊಂದು ರೀತಿಯ ಗಾಂಭೀರ್ಯ , ಸ್ವಲ್ಪ ಅಚ್ಚರಿ , ಹೊಸ ಹೊಸ ಅನ್ವೇಷಣೆಗಳಿಗೆ ತುಡಿತ . ವಿಜ್ಞಾನವೇ ಹಾಗೆ , ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ , ಒಂದು ಕ್ಷಣ ಹೊಸದೆನೆಸಿದ್ದು ಮರುಕ್ಷಣದಲ್ಲಿ ಹಳತಾಗುತ್ತದೆ , ಮತ್ತೊಂದು ಹೊಸ ವಿಚಾರ ಕಾಣಿಸಿಕೊಂಡಿರುತ್ತದೆ . ವೈಜ್ಞಾನಿಕ ವಲಯದಲ್ಲಿ ಅತಿ ಹೆಚ್ಚು ಕುತೂಹಲ ಮೂಡಿರುವಂಥದ್ದು ಭೂಮಿಯಲ್ಲಿ ಜೀವಸೃಷ್ಟಿ ಹೇಗಾಯ್ತು ಎಂಬ ವಿಚಾರದ ಸುತ್ತ . ಭೂಮಿಯಲ್ಲಿನ ಜೀವಸೃಷ್ಟಿ , ಜೀವಾಸ್ತಿತ್ವ ಮತ್ತು ಜೀವ ವಿಕಾಸದ ಬಗ್ಗೆ ಒಬ್ಬೊಬ್ಬ ವಿಜ್ಞಾನಿ ಮಂಡಿಸಿದ ಒಂದೊಂದು ಸಿದ್ಧಾಂತಗಳು ಒಂದೊಂದು ವಿಚಾರವನ್ನು ಪ್ರತಿಪಾದಿಸುತ್ತವೆ . ಅವುಗಳದ್ದೇ ಆದ ನೆಲೆಯಲ್ಲಿ ಯೋಚಿಸಿದರೆ ಆ ಎಲ್ಲ ಸಿದ್ಧಾಂತಗಳೂ ಸರಿ ಎಂದೆನಿಸುತ್ತವೆ . ಅವುಗಳ ವಿರುದ್ಧವಾಗಿ ಯೋಚಿಸದರೆ ಆ ಯೋಚನೆಯೂ ಸರಿಯಾಗಿಯೇ ಭಾಸವಾಗುತ್ತದೆ . ಯಾಕೆಂದರೆ ಜೀವಸೃಷ್ಟಿ ಹೀಗೇ ಆಯ್ತು ಎಂದು ಹೇಳುವುದಕ್ಕೆ ನಮ್ಮಲ್ಲಿ ಯಾವ ಆಧಾರವೂ ಇಲ್ಲ . ಇದೀಗ ಹೊಸದೊಂದು ಸಿದ್ಧಾಂತ ಮಂಡನೆಯಾಗಿದ್ದು , ಅದರ ಪ್ರಕಾರ ಭೂಮಿಯಲ್ಲಿ ಜೀವಸೃಷ್ಟಿಗೆ ಕಾರಣವಾದ ಒಂದು ಅಂಶ ಬಂದದ್ದು ಉಲ್ಕೆಗಳಿಂದ . ಅದು ಗಂಧಕದ ಅಂಶ .

ಭಾವತೀವ್ರತೆ ಮಾನವನಿಗೆ ಮಾತ್ರವಲ್ಲ!

Image
ಸಿಕ್ಕಾಪಟ್ಟೆ ಸಿಟ್ಟು ಬಂದ ವ್ಯಕ್ತಿ ಕೈಗೆ ಸಿಕ್ಕಿದ್ದನ್ನು ಎತ್ತೆತ್ತಿ ಎಸೆಯುತ್ತಾನೆ . ಸಮಾಧಾನಪಡಿಸುವುದಕ್ಕೆ ಬಂದವರನ್ನೇ ಹೊಡೆದು ಕಳುಹಿಸುತ್ತಾನೆ . ಅದೇ ರೀತಿ ತುಂಬಾ ಸಂತೋಷದಿಂದಿರುವ ವ್ಯಕ್ತಿ ತಾನು ಏನು ಮಾಡುತ್ತಿದ್ದೇನೆ ಎಂಬುದನ್ನೇ ಮರೆತು ಖುಷಿಯಾಗಸದಲ್ಲಿ ತೇಲಾಡುತ್ತಾನೆ . ನೋವು ತುಂಬಿದ ಹೃದಯ ಮನುಷ್ಯನನ್ನು ಅನ್ಯಮನಸ್ಕನನ್ನಾಗಿಸುತ್ತದೆ .... ಅದೆಷ್ಟು ಭಾವಗಳು , ಅದೆಂಥ ತೀವ್ರತೆ ? ಒಂದೊಂದು ಭಾವಕ್ಕೆ ಒಂದೊಂದು ಪ್ರತಿಕ್ರಿಯೆ . ಪ್ರತಿಕ್ರಿಯೆಯ ತೀವ್ರತೆಯು ಭಾವನೆಗಳ ತೀವ್ರತೆಎ ನೇರಾನುಪಾತದಲ್ಲಿರುತ್ತದೆ . ಈ ಭಾವನೆಗಳು ಅನ್ನೋ ವಿಚಾರ ಎಷ್ಟೊಂದು ವಿಚಿತ್ರ ಅಲ್ವೇ ? ಮನುಷ್ಯ ಮಾತ್ರವಲ್ಲ , ಮನುಷ್ಯನ ಪೂರ್ವಜರು ಎನ್ನಿಸಿಕೊಂಡಂಥ ಚಿಂಪಾಂಜಿಗಳು , ಗೋರಿಲ್ಲಾಗಳು ಕೂಡಾ ಮಾನವನ ರೀತಿಯಲ್ಲೇ ಭಾವತೀವ್ರತೆಗೆ ಒಳಗಾಗುತ್ತವಂತೆ !