Posts

Showing posts from April, 2013

ಬುವಿಯೊಳಗೆ ಜೀವಸೃಷ್ಟಿ ಎಲ್ಲಾಯ್ತು?

Image
ಭೂಮಿಯಲ್ಲಿ ಜೀವಜಗತ್ತು ಸೃಷ್ಟಿಯಾಗಿ , ಬೆಳೆಯುತ್ತಿದೆ ಎಂಬುದು ಗೊತ್ತು . ಯಾವುದೇ ಒಂದು ಕಾಲದಲ್ಲಿ ಇಲ್ಲಿ ಸೃಷ್ಟಿ ಕಾರ್ಯ ಶುರುವಾಗಿದೆ ಎಂಬುದೂ ಗೊತ್ತು . ಆದರೆ ಸೃಷ್ಟಿಕಾರ್ಯ ಶುರುವಾದದ್ದು ಎಲ್ಲಿ ? ಹೇಗೆ ಶುರುವಾಯ್ತು ? ಎಲ್ಲಾ ಜೀವಿಗಳೂ ಒಟ್ಟಿಗೇ ಸೃಷ್ಟಿಯಾದವೇ ? ಅಥವಾ ವಿಕಾಸದ ಪಥದಲ್ಲಿ ಒಂದು ಜೀವಿ ಇನ್ನೊಂದಾಗಿ ರೂಪಾಂತರಗೊಂಡಿತೇ ? ವೈಜ್ಞಾನಿಕ ಜಗತ್ತಿನಲ್ಲಿ ಇವುಗಳು ಮಿಲಿಯನ್ ಡಾಲರ್ ಪ್ರಶ್ನೆಗಳು . ಸೃಷ್ಟಿಯ ಬಗ್ಗೆ ಒಬ್ಬೊಬ್ಬರದು ಒಂದೊಂದು ವಾದ ; ಸೃಷ್ಟಿ ರಹಸ್ಯವನ್ನು ಪರಿಪೂರ್ಣವಾಗಿ ತೆರೆದಿಡುವುದಕ್ಕೆ ಯಾವ ವಾದಕ್ಕೂ ಸಾಧ್ಯವಾಗಿಲ್ಲ . ಅಪಾರವಾದ ಜಲರಾಶಿಯಲ್ಲಿ ಅರ್ಥಾತ ಅತಿಯಾದ ತಾಪಮಾನದಿಂದ ಕೂಡಿದ್ದ ಸಮುದ್ರತಟದಲ್ಲಿ ಜೀವಕುಡಿ ಸೃಷ್ಟಿಯಾಯಿತು ಎಂದು ಇದುವರೆಗಿನ ವೈಜ್ಞಾನಿಕ ಸಿದ್ಧಾಂತಗಳು ಪ್ರತಿಪಾದಿಸುತ್ತಾ ಬಂದಿದ್ದವು . ಆದರೆ ಈಗ ಇದು ಸರಿಯಾದ ವಾದವಲ್ಲ , ಸಾಗರದ ತಟದಲ್ಲಿ ಜೀವಜಗತ್ತಿನ ಉದಯವಾಗಿಲ್ಲ . ಬದಲಾಗಿ ಹಿಮಾವೃತಗೊಂಡಿರುವ ಧ್ರುವಪ್ರದೇಶಗಳಲ್ಲಿ ಜೀವಿಗಳು ಸೃಷ್ಟಿಯಾದವು ಎಂದು ಹೊಸ ಸಂಶೋಧನೆಯೊಂದು ಹೇಳಿದೆ . ಭೂಮಿಯ ಧ್ರುವಪ್ರದೇಶಗಳಲ್ಲಿ ಸಾಗರಮುಖಿಯಾಗಿ ಬೆಳೆದಿರುವ ಸಮುದ್ರ ನೀರ್ಗೋಲುಗಳು ( ಸೀ ಸ್ಟಾಲಕ್ಟೈಟ್ಸ್ ) ಅಥವಾ ಮಂಜಿನ ಕೊಳವೆಗಳಿರುವ ಪ್ರದೇಶದಲ್ಲಿ ಜೀವಜಗತ್ತು ಸೃಷ್ಟಿಯಾಯಿತು . ಉದ್ದಕ್ಕೆ ಮಂಜಿನರಾಶಿಯ ಅಡಿಯಲ್ಲಿ ನೂರಾರು ಯಾರ್ಡ್‌ಗಳಷ್ಟು ಉದ್ದಕ್ಕೆ ಬೆಳೆಯಬಲ್ಲ ನೀರ್ಗೋಲುಗಳನ್ನು

ಏರುತಿದೆ ಸಾಗರದ ಮಟ್ಟ...

Image
ಅದ್ಯಾಕೋ ಜಗತ್ತು ಅಭಿವೃದ್ಧಿ , ಅಭಿವೃದ್ಧಿ ಎಂದು ಒಂದೇ ಮಂತ್ರ ಜಪಿಸುತ್ತಿದೆ . ಆದರೆ ಈ ಅಭಿವೃದ್ಧಿಯ ಜತೆಯಲ್ಲೇ ಇರಬೇಕಾದ ಪರಿಸರ ಸಂರಕ್ಷಣೆಯ ಮಂತ್ರವನ್ನು ಯಾರೂ ಜಪಿಸುತ್ತಿಲ್ಲ . ಅಂದರೆ ಅಭಿವೃದ್ಧಿ ಎಂಬುದನ್ನು ನಾವು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂಬುದು ದಿಟ . ಚೆಂದ ಚೆಂದದ ಮುಗಿಲೆತ್ತರದ ಕಟ್ಟಡಗಳು , ಕಾರ್ಖಾನೆಗಳು , ನುಣುಪಾದ ರಸ್ತೆಗಳು , ಎಸಿ ಕೋಣೆಗಳು ... ಇವೆಲ್ಲ ನಮ್ಮ ದೃಷ್ಟಿಕೋನದಲ್ಲಿ ಅಭಿವೃದ್ಧಿ ಕಾರ್ಯಗಳು . ಆದರೆ ಇವೆಲ್ಲ ಸಾಧ್ಯವಾಗಬೇಕಾದರೆ ಪ್ರಕೃತಿಯ ಮೇಲೆ ನಾವೆಂಥ ಪ್ರಹಾರ ಮಾಡುತ್ತಿದ್ದೇವೆ ; ಇದರಿಂದಾಗಿ ನಮ್ಮ ಮುಂದಿನ ಪೀಳಿಗೆ ಎಂಥ ಆಪತ್ತಿನಲ್ಲಿ ಸಿಲುಕಿಕೊಳ್ಳಬೇಕಾದೀತು ಎಂಬುದನ್ನು ಯೋಚಿಸುವ ಗೊಡವೆಗೇ ಹೋಗುವುದಿಲ್ಲ ! ಹೌದು , ವೈಜ್ಞಾನಿಕ ವಲಯದಲ್ಲಿ ಎಚ್ಚರಿಕೆಯ ಗಂಟೆಯೊಂದು ಮೊಳಗಿದೆ . ಮಾನವನಿಂದಾಗಿ ಆಗುತ್ತಿರುವ ಪರಿಸರ ಮಾಲಿನ್ಯವನ್ನು ನಿಯಂತ್ರಿಸದೇ ಇದ್ದಲ್ಲಿ ಮುಂದೊಂದು ದಿನ ಸಮುದ್ರದ ಮಟ್ಟ ಹೆಚ್ಚಿ , ಬಹುಪಾಲು ಭೂಮಿ ಸಾಗರ ಪಾಲಾಗುತ್ತದೆ . ಆಗ ಮಾನವ ಸಂಕುಲ ಉಳಿದುಕೊಳ್ಳಲು ಜಾಗಕ್ಕಾಗಿ ಪರದಾಡಬೇಕಾಗುತ್ತದೆ !

ಸಾವಿನ ನಂತರ ಮುಂದೇನು?

Image
ಹುಟ್ಟಿದ ಜೀವಿ ಸಾಯಲೇಬೇಕು . ಸತ್ತ ನಂತರ ? ಪುನರ್ಜನ್ಮ ಎಂಬುದು ಬಹುತೇಕರು ಕೊಡುವ ಉತ್ತರ . ಪುನರ್ಜನ್ಮದ ಮೇಲೆ ನಂಬಿಕೆ ಇದೆಯೋ , ಇಲ್ಲವೋ ಅನ್ನೋದು ಪ್ರಶ್ನೆ ಅಲ್ಲ , ಮುಂದಿನ ಜನ್ಮದಲ್ಲಿ ಚೆನ್ನಾಗಿರೋಣ ಎಂಬ ಭಾವನೆ ಬಹಳಷ್ಟು ಮನಸುಗಳಲ್ಲಿ ಸುಳಿದಾಡುವುದು ಖಂಡಿತ . ವೈಜ್ಞಾನಿಕ ಜಗತ್ತು ನಿನ್ನೆ , ಮೊನ್ನೆಯವರೆಗೂ ಸಾವೇ ಕೊನೆ ; ಅಲ್ಲಿಂದ ಆಚೆಗೆ ಏನೂ ಇಲ್ಲ ಎಂದು ಹೇಳುತ್ತಿತ್ತು . ಇದೀಗ ಪ್ರಕಟವಾಗಿರುವ ಹೊಸ ಸಿದ್ಧಾಂತ ಹಳೆಯ ಸಿದ್ಧಾಂತವನ್ನು ಬುಡಮೇಲು ಮಾಡಿದ್ದು , ಸಾವು ಕೊನೆಯಲ್ಲ , ಕೊನೆಯೆಂಬುದೇ ಇಲ್ಲ , ಸಾವು ರೂಪಾಂತರದ ಒಂದು ಪ್ರಕ್ರಿಯೆ ಎಂದು ಪ್ರತಿಪಾದಿಸಿದೆ , ಏನಿದು ಸಿದ್ಧಾಂತ ?: ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ಈ ಸಿದ್ಧಾಂತದ ಹೆಸರು ಬಯೋಸೆಂಟ್ರಿಸಮ್ . ಕ್ವಾಂಟಮ್ ಫಿಸಿಕ್ಸ್‌ನಲ್ಲೊಂದು ಸಿದ್ಧಾಂತವಿದೆ ; ಶಕ್ತಿಯನ್ನು ಸೃಷ್ಟಿಸುವುದಕ್ಕೂ , ನಾಶಪಡಿಸುವುದಕ್ಕೂ ಸಾಧ್ಯವಿಲ್ಲ . ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಅದನ್ನು ರೂಪಾಂತರಿಸಬಹುದಷ್ಟೇ ! ಇದೇ ಸಿದ್ಧಾಂತದ ಆಧಾರದಲ್ಲಿ ಜೀವಿಗಳ ಹುಟ್ಟು , ಸಾವಿನ ಬಗ್ಗೆ ಚಿಂತನಾತ್ಮಕ ಸಂಶೋಧನೆ ನಡೆಸಿದ ವಿಜ್ಞಾನಿ ಡಾ . ರಾಬರ್ಟ್ ಲಾಂಜಾ ಪ್ರತಿಯೊಂದು ಜೀವಿಯ ದೇಹವೂ ನಶ್ವರ , ಜೀವಿಗಳ ಎಲ್ಲ ಕ್ರಿಯೆಗಳೂ ನಡೆಯುವುದು ಅವುಗಳ ಒಳಗಿರುವ ಶಕ್ತಿ ಅಥವಾ ಆತ್ಮಚೈತನ್ಯದ ಪ್ರಭಾವದಿಂದಾಗಿ ಎಂಬುದನ್ನು ಕಂಡುಕೊಂಡಿದ್ದಾರೆ .

ಅದೃಶ್ಯಶಕ್ತಿಯ ಬೆನ್ನೇರಿ...

Image
ಈ ಜಗತ್ತಿನ ಸೃಷ್ಟಿಗೆ ಮೂಲ ಕಾರಣ ಎಂದು ವೈಜ್ಞಾನಿಕ ವಲಯ ಭಾವಿಸಿರುವುದು ಅದೃಶ್ಯಶಕ್ತಿಯನ್ನು . ಖಗೋಳಶಾಸ್ತ್ರದ ಪರಿಭಾಷೆಯಲ್ಲಿ ಇದನ್ನು ಡಾರ್ಕ್ ಮ್ಯಾಟರ್ ಅಥವಾ ಅದೃಶ್ಯ ವಸ್ತು ಎಂದು ಕರೆಯಲಾಗುತ್ತದೆ . ಸೂರ್ಯ ಅಥವಾ ಇನ್ಯಾವುದೇ ನಕ್ಷತ್ರಗಳಿಂದ ಇದರ ಮೇಲೆ ಬೀಳುವ ಬೆಳಕು ಪ್ರತಿಫಲನಗೊಳ್ಳುವುದಿಲ್ಲವಾದ ಕಾರಣ ಇದು ಕಾಣಿಸುವುದಿಲ್ಲ . ಹೀಗಾಗಿ ಇದಕ್ಕೆ ಡಾರ್ಕ್ ಮ್ಯಾಟರ್ ಎಂಬ ಹೆಸರು ಬಂತು . ಇದರ ಸ್ವರೂಪವನ್ನು ಕಂಡುಕೊಳ್ಳಬೇಕು , ಜಗತ್ತಿನ ಸೃಷ್ಟಿಯಲ್ಲಿ ಇದು ಹೇಗೆ ಕಾರಣವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕೆಂದು ವಿಜ್ಞಾನಿಗಳು ಹಲವು ದಶಕಗಳಿಂದ ಸಂಶೋಧನೆ ನಡೆಸುತ್ತಿದ್ದರು . ಈ ನಿಟ್ಟಿನಲ್ಲಿ ಇದೀಗ ಹೊಸ ಭರವಸೆಯ ಕಿರಣವೊಂದು ಗೋಚರಿಸಿದ್ದು , ಅದೃಶ್ಯಶಕ್ತಿಯನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ವಿಜ್ಞಾನಿಗಳ ತಂಡವೊಂದು ಮಹತ್ವದ ಹೆಜ್ಜೆಯಿಟ್ಟಿದೆ . ನೊಬೆಲ್ ಪುರಸ್ಕೃತ ಭೌತಶಾಸ್ತ್ರಜ್ಞ ಸ್ಯಾಮುಯೆಲ್ ಟಿಂಗ್ ನೇತೃತ್ವದ ವಿಜ್ಞಾನಿಗಳ ತಂಡ ಆಲ್ಫಾ ಮ್ಯಾಗ್ನೆಟಿಕ್ ಸ್ಪೆಕ್ಟ್ರೋಮೀಟರ್ ( ಎಎಂಎಸ್ 1) ಮೂಲಕ ನಡೆಸಿದ ಸಂಶೋಧನೆಯಲ್ಲಿ ಈ ಅದೃಶ್ಯಶಕ್ತಿಯ ಬಗ್ಗೆ ಸುಳಿವು ಸಿಕ್ಕಿದೆಯಂತೆ . ಒಟ್ಟು 200 ಕೋಟಿ ಡಾಲರ್ ( ಸುಮಾರು ಕೋಟಿ ರೂ .) ವೆಚ್ಚದಲ್ಲಿ ನಡೆಸಲಾಗಿರುವ ಪ್ರಯೋಗದಲ್ಲಿ 2500 ಕೋಟಿಗೂ ಅಧಿಕ ದಾಖಲೆಗಳನ್ನು ವಿಜ್ಞಾನಿಗಳು ಸಂಗ್ರಹಿಸಿದ್ದಾರೆ . 0.5 ಜಿಇವಿ ( ಗಿಗಾ ಎಲೆಕ್ಟ್ರಾನ್ ವೋಲ್ಟ್ ) ಯಿಂದ 350 ಜಿಇವಿ ನಡುವಿನ