Posts

Showing posts from May, 2011

ಅಜ್ಞಾತ ಶಕ್ತಿಯ ಸುತ್ತ ವಿಜ್ಞಾನದ ಪರಿಭ್ರಮಣ

Image
ಜಗತ್ತಿನ ಎಲ್ಲ ಶಕ್ತಿಗಳೂ ಈ ಶಕ್ತಿಯ ಪ್ರತೀಕವಾಗಿವೆ. ಅಂತೆಯೇ ಗುರುತ್ವಾಕರ್ಷಣ ಶಕ್ತಿಯೂ ಅಜ್ಞಾತ ಶಕ್ತಿಯ ಸ್ವರೂಪವೇ ಆಗಿರಬಹುದು. ಆ ಅಜ್ಞಾತ ಶಕ್ತಿಯನ್ನು ಗುರುತಿಸುವಲ್ಲಿ ಐನ್ ಸ್ಟೀನ್ ನ ವಿಫಲವಾಗಿರಬಹುದು. ಅಥವಾ ವಿಶ್ವದ ಅಜ್ಞಾತ ಶಕ್ತಿಯನ್ನೇ ಗುರುತ್ವಾಕರ್ಷಣ ಶಕ್ತಿ ಎಂದೇ ತಿಳಿದುಕೊಂಡಿರಬಹುದು. ಒಂದು ಸಿದ್ಧಾಂತವನ್ನು ಸುಳ್ಳು ಎಂದು ಸಾರಾಸಗಟಾಗಿ ಹೇಳುವ ಮೊದಲು ವಿಚಾರ ಮಾಡುವುದು ಒಳಿತು.  ವಿಶ್ವವನ್ನೇ ನಿಯಂತ್ರಿಸುವ ಶಕ್ತಿಯೊಂದಿದೆ. ಆ ಶಕ್ತಿಗೆ ಶರಣಾದರಷ್ಟೇ ಅಭಿವೃದ್ಧಿ ಎಂದರು ನಮ್ಮ ಹಿರಿಯರು. ಶಕ್ತಿಯೂ ಇಲ್ಲ, ಏನೂ ಇಲ್ಲ ಎಂದು ವಿತ್ತಂಡವಾದ ಮಂಡಿಸಿದರು ಕೆಲವೊಂದಷ್ಟು ಜನ ಬುದ್ಧಿಜೀವಿಗಳು. ಕಾಣದ ಅಸ್ತಿತ್ವವನ್ನು ಒಪ್ಪಿಕೊಳ್ಳುವುದು ಸುಲಭವೇನಲ್ಲ. ಒಪ್ಪಿಕೊಳ್ಳಬೇಕೆಂಬ ನಿಯಮವೂ ಇಲ್ಲ. ಅನುಭೂತಿಯಾದಾಗ, ಆ ಶಕ್ತಿಯ ಅಸ್ತಿತ್ವದ ಪ್ರಭಾವ ನಮ್ಮ ಮೇಲಾದಾಗ, ಹೌದು ಇಂಥದ್ದು ಯಾವುದೋ ಒಂದು ಶಕ್ತಿ ಇದೆ. ಆ ಶಕ್ತಿ ನಮ್ಮ ವಿಶ್ವವನ್ನು ತನ್ನ ನಿಯಂತ್ರಣದಲ್ಲಿರಿಸಿಕೊಂಡಿದೆ ಎಂದು ಒಪ್ಪಿಕೊಳ್ಳುತ್ತೇವೆ. ವಿಜ್ಞಾನವೂ ಹಾಗೆಯೇ. ಒಬ್ಬ ವಿಜ್ಞಾನಿ ಮಂಡಿಸಿದ ವಾದವನ್ನು ಇನ್ನೊಬ್ಬ ವಿಜ್ಞಾನಿ ಒಪ್ಪಿಕೊಳ್ಳಬೇಕೆಂದಿಲ್ಲ, ಆ ವಿಜ್ಞಾನಿಯ ವಾದಕ್ಕೇ ತನ್ನ ವಾದವೂ ಬಂದು ನಿಲ್ಲುವವರೆಗೆ ಒಪ್ಪಿಕೊಳ್ಳುವುದೂ ಇಲ್ಲ. ಇಂದು ಜಗತ್ತಿನ ಶ್ರೇಷ್ಟಾತಿಶ್ರೇಷ್ಠ ವಿಜ್ಞಾನಿಗಳೆನಿಸಿಕೊಂಡವರು, ಇಂದಿನ ವೈಜ್ಞಾನಿಕ ಆವಿಷ್ಕಾರಗಳಿಗೆ ಆಧಾರಸ್ವರೂಪವಾಗಿರುವವರ

ಮೆದುಳೇ ಇನ್ನೂ ಅರ್ಥ ಆಗಿಲ್ಲ!

Image
ಅಷ್ಟು ಸುಲಭಕ್ಕೆ ಗುಟ್ಟು ಬಿಟ್ಟುಕೊಡಲು ಈ ಹಾರ್ಡ್ ಡಿಸ್ಕ್  ಕೂಡಾ ತಯಾರಿಲ್ಲ. ಅದಕ್ಕೆ ಅಳವಡಿಸಿರುವ ಪಾಸ್ವರ್ಡ್ `ಹ್ಯಾಕ್' ಮಾಡುವುದಕ್ಕೆ ಇನ್ನೂ ಯಾರಿಗೂ ಸಾಧ್ಯವಾಗಿಲ್ಲ. ಆದರೆ, ಇದರ ಒಂದು ಸೂಕ್ಷ್ಮ ಭಾಗದಲ್ಲಾಗುವ ಒಂದು ಪರಿವರ್ತನೆ ಹಾರ್ಡ್ ಡಿಸ್ಕ್ ವ್ಯವಸ್ಥೆಯನ್ನೇ ಬದಲಲಿಸಿ ಬಿಡಬಲ್ಲುದು ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅಷ್ಟಕ್ಕೂ ಇದೆಂಥ ಹಾರ್ಡ್ ಡಿಸ್ಕ್ ?  ಇದೊಂಥರ ಹಾರ್ಡ್ ಡಿಸ್ಕ್ . ಅದೆಷ್ಟು ವಿಚಾರಗಳನ್ನು ಸಂಗ್ರಹಿಸುತ್ತಾ ಹೋದರೂ ತುಂಬಿಕೊಳ್ಳುತ್ತಾ ಹೋಗುತ್ತದೆ. ವಾರಗಳು, ತಿಂಗಳುಗಳು, ವರ್ಷಗಳ ಕಾಲ ಈ ಹಾರ್ಡ್ ಡಿಸ್ಕ್ನಲ್ಲಿ ಸಂಗ್ರಹವಾಗುವ ವಿಚಾರಗಳು ಎಷ್ಟು ಗಿಗಾಬೈಟ್ (ಗಿಬಿ) ಇವೆ ಎಂಬುದನ್ನು ಯಾರೂ ಅಳತೆ ಮಾಡಿಲ್ಲ. ಅಳತೆ ಮಾಡಲು ಹೊರಟಿದ್ದಾರಾದರೂ ಇದರ ಸಾಮಥ್ರ್ಯ ಅವರ ಅರಿವಿಗೆ ನಿಲುಕಿಲ್ಲ. ಈ ಹಾರ್ಡ್ ಡಿಸ್ಕ್ ನಿರ್ವಹಿಸುವಂಥ ಕೆಲಸಗಳನ್ನು ನೋಡಿದವರಿಗೆ ಎಂಥವರಿಗಾದರೂ ಅಚ್ಚರಿಯಾಗುತ್ತದೆ. ಅಂಥ ಹಾರ್ಡ್ಡಿಸ್ಕ್ನ ಮೂಲ ವಿನ್ಯಾಸ ಏನು ಎಂದು ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದರು. ಅಷ್ಟು ಸುಲಭಕ್ಕೆ ಗುಟ್ಟು ಬಿಟ್ಟುಕೊಡಲು ಈ ಹಾರ್ಡ್ಡಿಸ್ಕ್ ಕೂಡಾ ತಯಾರಿಲ್ಲ. ಅದಕ್ಕೆ ಅಳವಡಿಸಿರುವ ಪಾಸ್ವರ್ಡ್ `ಹ್ಯಾಕ್' ಮಾಡುವುದಕ್ಕೆ ಇನ್ನೂ ಯಾರಿಗೂ ಸಾಧ್ಯವಾಗಿಲ್ಲ. ಆದರೆ, ಇದರ ಒಂದು ಸೂಕ್ಷ್ಮ ಭಾಗದಲ್ಲಾಗುವ ಒಂದು ಪರಿವರ್ತನೆ ಹಾರ್ಡ್ಡಿಸ್ಕ್ನ ವ್ಯವಸ್ಥೆಯನ್ನೇ ಬದಲಲಿಸಿ ಬಿಡಬಲ್ಲುದು ಎಂಬುದನ್ನು ವಿ

ಶನಿಯ ಚಂದಿರನಲ್ಲೂ ನೀರಿದೆ, ಎಲ್ಲೆಲ್ಲೂ ಇದೆ!

Image
ಜೀವಿಗಳ ಪ್ರಮುಖ ಅಗತ್ಯವಾದ ನೀರು ಯಾವುದಾದರೂ ಕಾಯಗಳಲ್ಲಿದೆಯೇ? ಎಂಬ ಹುಡುಕಾಟ ನಡೆಯುತ್ತಿತ್ತು. ಈಗ ಶನಿಗ್ರಹದ ಅತಿದೊಡ್ಡ ಉಪಗ್ರಹ (ಚಂದ್ರ) ಟೈಟಾನ್ನಲ್ಲಿ ನೀರಿನ ಸಾಗರವೇ ಪತ್ತೆಯಾಗಿದೆ. ಪ್ರತಿಯೊಂದು ಕಾಯಗಳಲ್ಲಿಯೂ ನೀರಿನ ಅಸ್ತಿತ್ವ ಕಾಣಿಸುತ್ತಿದೆ ಎಂದರೆ ಈ ಬ್ರಹ್ಮಾಂಡದ ಯಾವ ಭಾಗಕ್ಕೆ ಹೋದರೂ ಅಲ್ಲಿ ನೀರಿನ ಅಸ್ತಿತ್ವ ಇರಲೇಬೇಕು. ಅದು ದ್ರವ ರೂಪದಲ್ಲಿಯೇ ಇರಬೇಕೆಂದಿಲ್ಲ. ಯಾವ ರೂಪವನ್ನಾದರೂ ಹೊಂದಿರಬಹುದು.  ವೈಜ್ಞಾನಿಕ ಜಗತ್ತೇ ಹಾಗೆ, ಏನೋ ಒಂದು ವಿಚಾರ ಹೊಳೆದರೆ ಸಾಕು ಮತ್ತೆ ಅದರ ಸುತ್ತಲೇ ಈ ಜಗತ್ತು ಗಿರಕಿ ಹೊಡೆಯುತ್ತಿರುತ್ತದೆ. ಅಂಥದ್ದೇ ಒಂದು ಹುಡುಕಾಟ ಜೀವಜಗತ್ತಿನ ಬಗ್ಗೆ. ಭೂಮ್ಯೇತರ ಆಕಾಶಕಾಯಗಳಲ್ಲಿ ಜೀವಜಗತ್ತಿನ ಅಸ್ತಿತ್ವವಿದೆಯೇ? ಅಸ್ತಿತ್ವ ಹೊಂದಲು ಅವಕಾಶವಿದೆಯೇ? ಜೀವಿಗಳ ಪ್ರಮುಖ ಅಗತ್ಯವಾದ ನೀರು ಯಾವುದಾದರೂ ಕಾಯಗಳಲ್ಲಿದೆಯೇ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತ ಹೊರಟಿತ್ತು ವೈಜ್ಞಾನಿಕ ಜಗತ್ತು. ಹುಡುಕಾಟದ ಹಾದಿಯಲ್ಲಿ ಚಂದ್ರನ ಅಂಗಳದಲ್ಲಿ ನೀರಿರುವುದು ಗೊತ್ತಾಯಿತು. ಮಂಗಳನಲ್ಲೂ ನೀರಿನ ಒರತೆಯ ಸುಳಿವು ಸಿಕ್ಕಿತು. ಕ್ಷುದ್ರಗ್ರಹಗಳಲ್ಲಿ ಭರವಸೆಯ ಹನಿಯೊಂದು ಗೋಚರಿಸಿತು. ಹುಡುಕಾಟ ನಿರಂತರ, ಅನಂತದೆಡೆಗಿನ ಪಯಣ, ಮುಂದುವರಿಯಿತು. ಒಂದೊದೇ ಗ್ರಹಗಳನ್ನು ತಡಕಾಡತೊಡಗಿತು ವೈಜ್ಞಾನಿಕ ಜಗತ್ತು. ಇದೀಗ ಮತ್ತೊಂದು ಹೊಳಹು ಮೂಡಿದೆ. ಅದು- ಶನಿಯ ಚಂದ್ರನಲ್ಲಿ! ಶನಿಗ್ರಹದ ಅತಿದೊಡ್ಡ ಉಪಗ್ರಹ (

ಆಯುರ್ವೇದವನ್ನು ಕಂಡರೆ ಪಾಶ್ಚಾತ್ಯರಿಗೆ ಭೀತಿ!

Image
ಇಂಗಿಷ್ ವೈದ್ಯ ಪದ್ಧತಿಯು ಯಾವುದೇ ರೋಗವನ್ನು ಸಂಪೂರ್ಣ ಗುಣ ಮಾಡುವುದಿಲ್ಲ. ರೋಗದ ಲಕ್ಷಣಗಳನ್ನು ತಟಸ್ಥಗೊಳಿಸುವ ಮೂಲಕ ಆ ರೋಗವನ್ನು ಅಜ್ಞಾತವಾಗಿಡುತ್ತದೆ ಅಷ್ಟೆ. ಗುಳಿಗೆಗಳು ರೋಗಲಕ್ಷಣಗಳನ್ನು ತಟಸ್ಥವಾಗಿಸುವ ಕಾರಣ ರೋಗ ಗುಣವಾಗಿದೆ ಎಂಬ ಭ್ರಾಂತಿಗೊಳಗಾಗುತ್ತೇವೆ.  ಆದರೆ ಆಯುರ್ವೇದ ವೈದ್ಯ ಪದ್ಧತಿ ಹಾಗಲ್ಲ, ರೋಗಮೂಲ ಏನು ಎಂಬುದನ್ನು ಅರಿತುಕೊಂಡು ಅದಕ್ಕೆ ಚಿಕಿತ್ಸೆ ಮಾಡುತ್ತದೆ.  `ಅದ್ಯಾವುದೋ ಬೇರಂತೆ, ನಾರಂತೆ, ಸೊಪ್ಪು, ಎಲೆ, ಬಳ್ಳಿಯಿಂದಾನೂ ಔಷಧಿ ಕೊಡ್ತಾರಂತೆ, ಹಣ್ಣೂ ಮದ್ದಂತೆ, ಕಾಯಿಯೂ, ಕಾಯಿಯೊಳಗಿನ ಬೀಜವೂ ರೋಗ ನಿವಾರಕವಂತೆ. ಹಲವು ಮೂಲಿಕೆಗಳನ್ನು ಸೇರಿಸಿ ಔಷಧಿ ಮಾಡೋದಂತೆ. ಇದನ್ನೆಲ್ಲ ನಂಬ್ತೀರಾ? ಇದು ಮೂಢನಂಬಿಕೆ. ಇಂಥದ್ದನ್ನೆಲ್ಲ ತಿಂದು ಆರೋಗ್ಯ ಹಾಳು ಮಾಡ್ಕೋಬೇಡಿ' ಎಂದು ಭಾರತೀಯ ವೈದ್ಯ ಪದ್ಧತಿಯ ಬಗ್ಗೆ ಮೂಗು ಮುರಿದದ್ದು ಪಾಶ್ಚಾತ್ಯರು. `ನಿಮ್ಮ ವೈದ್ಯ ಪದ್ಧತಿ ಆಧಾರವಿಲ್ಲದ್ದು, ಅದನ್ನೆಲ್ಲ ಒಪ್ಪುವುದಕ್ಕೆ ಸಾಧ್ಯವಿಲ್ಲ' ಎಂದು ಕೆಲವು ಸಮಯದ ಹಿಂದೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ದೇಶದಲ್ಲಿ ಈ ವೈದ್ಯ ಪದ್ಧತಿಗೆ ಪ್ರೋತ್ಸಾಹ ನೀಡದಿರುವಂತೆ ಹೇಳಿದ್ದರು. ಬ್ರಿಟನ್ ಕೂಡಾ ಆಯುರ್ವೇದ ವೈದ್ಯ ಪದ್ಧತಿಯ ಮೇಲೆ ನಿಷೇಧ ಹೇರಿತು. ಇದೀಗ ಆಯುರ್ವೇದ ವೈದ್ಯ ಪದ್ಧತಿಯ ಮೇಲೆ ಮತ್ತೊಂದು ನಿಷೇಧ! ಅದು ಐರೋಪ್ಯ ಒಕ್ಕೂಟದಿಂದ. ಮೇ 1ರಿಂದ ಈ ಔಷಧ ಪದ್ಧತಿಯನ್ನು, ಗಿಡಮೂಲಿಕೆ

ಸ್ವರ್ಣಬಿಂದು: ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಚಿನ್ನ

Image
ಕಶ್ಯಪ ಸಂಹಿತೆಯಲ್ಲಿ ಹೇಳಿರುವಂಥ ಸ್ವರ್ಣಬಿಂದು ಪ್ರಾಶನ ಇತ್ತೀಚೆಗೆ ಖ್ಯಾತಿಗೊಳ್ಳುತ್ತಿದೆ. ಸ್ವರ್ಣಬಿಂದು ಪ್ರಾಶನವನ್ನು ಪರಿಣಿತ ವೈದ್ಯರ ಬಳಿಯೇ ಹಾಕಿಸಿಕೊಳ್ಳಬೇಕು. ಅತ್ಯಲ್ಪ ಪ್ರಮಾಣದಲ್ಲಿ ಶುದ್ಧ ಚಿನ್ನವನ್ನು ಔಷಧಿಯುಕ್ತವಾದಂಥ ತುಪ್ಪದೊಂದಿಗೆ ಕೊಡುವ ಕಾರಣ ಇದರಿಂದ ಹಾನಿಯೇನೂ ಇಲ್ಲ. ಆ ಬಗ್ಗೆ ಭಯ ಬೇಡ. ಬುದ್ಧಿ ಶಕ್ತಿ, ಜೀರ್ಣಕ್ರಿಯೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಚಿನ್ನಕ್ಕಿದೆ. ಒಂದೊಂದು ಕಾಲಘಟ್ಟದಲ್ಲಿ ಕೆಲವೊಂದು ವಿಚಾರಗಳು ಹೆಚ್ಚು ಪ್ರಚಲಿತದಲ್ಲಿರುತ್ತವೆ. ಒಂದು ಕಾಲದಲ್ಲಿ ಅಖಂಡ ಭಾರತವನ್ನು ಆಳಿದ್ದ ಆಯುರ್ವೇದ ವೈದ್ಯ ಪದ್ಧತಿ ನಂತರ ಕಳೆ ಕಳೆದುಕೊಂಡಿತು. ಇತ್ತೀಚಿನ ದಿನಗಳಲ್ಲಿ ಮತ್ತೆ ಪ್ರಖ್ಯಾತಿಗೊಳ್ಳುತ್ತಿದೆ. ಹೆಚ್ಚು ಹೆಚ್ಚು ಜನ ಆಯುರ್ವೇದದತ್ತ ವಾಲುತ್ತಿದ್ದಾರೆ. ಅಂಥಾದ್ದರಲ್ಲಿ ಆಯುರ್ವೇದದಲ್ಲಿ ಹಲವು ಸಾವಿರ ವರ್ಷಗಳ ಹಿಂದೆ ಹೇಳಿದ್ದಂಥ ಔಷಧೀಯ ಪದ್ಧತಿಯೊಂದು ಈಗ ಕರ್ನಾಟಕ, ಕೇರಳ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಜನಜನಿತವಾಗುತ್ತಿದೆ. ಅದುವೇ ಸ್ವರ್ಣಬಿಂದು ಪ್ರಾಶನ. ಚಿಕ್ಕ ಮಕ್ಕಳಿಗೆ ಸ್ವರ್ಣಬಿಂದು ಪ್ರಾಶನ ಮಾಡಿಸಿದಲ್ಲಿ ಅದು ಹಲವು ರೋಗಗಳನ್ನು ತಡೆಯುತ್ತದೆ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುತ್ತದೆ ಆಯುರ್ವೇದ. ಸ್ವರ್ಣಬಿಂದು ಪ್ರಾಶನ ಮಾಡಿಸಿಕೊಳ್ಳುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇಂತಿರುವಾಗ ಸ್ವರ್