ಸೋಲಾರನ್ನು ಪೇಂಟ್ ಮಾಡಿ

ಸೌರಕೋಶಗಳನ್ನು ದ್ರವರೂಪಕ್ಕೆ ಇಳಿಸಿದ್ದಾರೆ ವಿಜ್ಞಾನಿಗಳು. ಈ ದ್ರವರೂಪದ ಸೌರಕೋಶಗಳನ್ನು ಮನೆ ಗೋಡೆಗೆ, ಛಾವಣಿಗೆ ಪೇಂಟ್ ಮಾಡಿದ್ರಾಯ್ತು. ಬೇಸಗೆ ಬಂತೆಂದ್ರೆ ಸಾಕು, ಪವರ್ ಕಟ್, ಲೋಡ್ ಶೆಡ್ಡಿಂಗ್, ಲೋ ವೋಲ್ಟೇಜ್... ಶಿವನಸಮುದ್ರದಲ್ಲಿ ನೀರಿಲ್ಲ, ವಿದ್ಯುತ್ ಖರೀದಿ ಸಾಮರ್ಥ್ಯ ನಮ್ಮಲ್ಲಿಲ್ಲ. ಕರೆಂಟ್ ಇಲ್ದೇ ಇರೋದನ್ನು ಸ್ವಲ್ಪ ಅಭ್ಯಾಸ ಮಾಡ್ಕೊಳ್ಳಿ... ಅನ್ನೋ ಧಾಟಿಯನ್ನೇ ಪ್ರತಿಧ್ವನಿಸುವಂತೆ ಹಣಕುತ್ತಾ ಕಣ್ಣಾಮುಚ್ಚಾಲೆಯಾಡುವ ಕರೆಂಟ್ಗೆ ಅದೆಷ್ಟು ಶಾಪ ಹಾಕ್ತೀವೋ ಗೊತ್ತಿಲ್ಲ. ಅಟ್ಲೀಸ್ಟ್ ಬೆಳಕಾದ್ರೂ ಇರ್ಲಿ ಅಂತ ಸೋಲಾರ್ ಹಾಕ್ಸೋಣ ಅಂದ್ಕೊಂಡ್ರೆ ಅದ್ರಲ್ಲಿ ಬರೋ ಬೆಳಕು ಸಾಲೇದೇ ಇಲ್ಲ. ಇನ್ನು ಮಿಕ್ಸಿ, ಗ್ರೈಂಡರ್, ಟಿವಿ, ಫ್ಯಾನು... ಎಲ್ಲ ಕೆಲ್ಸ ಮಾಡಬೇಕಾದರೆ ಮನೆ ಛಾವಣಿಯುದ್ದಕ್ಕೂ ಸೋಲಾರ್ ಪೆನಲ್ಗಳನ್ನು ಹಾಕಿಸಬೇಕಾಗಿ ಬರುತ್ತೆ. ಒಟ್ಟಿನಲ್ಲಿ ಸಮಸ್ಯೆ ಬಗೆಹರಿಯೋದೇ ಇಲ್ಲ ಅಂತ ಚಿಂತೆ! ಆದರೆ ವಿಜ್ಞಾನಿಗಳು ಈ ಚಿಂತೆಗೆ ಪರಿಹಾರ ಕಂಡುಕೊಂಡುಳ್ಳುವ ಮಹತ್ತರ ಸಂಶೋಧನೆ ಮಾಡಿದ್ದಾರೆ.