ಇಂಥ ಸಂಶೋಧನೆಗಳು ಬೇಕಾ?

ಲುಮಿನಾಲ್ ರಕ್ತದ ಜೊತೆಗೆ ರಾಸಾಯನಿಕ ಕ್ರಿಯೆಗೆ ಒಳಗಾದಾಗ ನೀಲಿ ಬಣ್ಣದ ಪ್ರಕಾಶಮಾನ ಬೆಳಕು ಹೊಮ್ಮಿಸುತ್ತದೆ. ವೈಜ್ಞಾನಿಕ ಸಂಶೋಧನೆಗಳು ಜಗತ್ತಿಗೆ ಉಪಕಾರಿ ಯಾಗುವಂತಿರ ಬೇಕು. ಮನುಕುಲವನ್ನು, ಜೀವಸಂಕುಲವನ್ನು ಪೋಷಿಸುತ್ತಿರುವಂಥ ಭೂಮಿಯನ್ನು ನಾಶ ಮಾಡುವಂಥ ಸಂಶೋಧನೆಗಳನ್ನು ಮಾಡಬಾರದು. ಆದರೆ ಬಹಳಷ್ಟು ಬಾರಿ ಸಂಶೋಧನೆಗಳು ಸಂಶೋಧನೆಕಾರನ ಎಣಿಕೆಯನ್ನು ಮೀರಿ ಹಳಿ ತಪ್ಪಿ ನಡೆಯುತ್ತವೆ. ಇನ್ನೂ ಬಹಳಷ್ಟು ಸಾರ್ತಿ ಉದ್ದೇಶಪೂರ್ವಕವಾಗಿಯೇ ನಡೆಸಿದ ಒಂದು ಸಂಶೋಧನೆ ಜೀವಪೋಷಕ ಭೂಮಿಗೆ ಮಾರಕವಾಗಿ ಪರಿಣಮಿಸುತ್ತವೆ. ಕೆಲವೊಂದು ಬಾರಿ ಯಾರದೋ ಒತ್ತಾಸೆಗೆ, ಒತ್ತಡಕ್ಕೆ, ಬೆದರಿಕೆಗೆ ಮಣಿದು ಇಳೆಯನ್ನು ಹಾಳು ಮಾಡುವಂಥ ಸಂಶೋಧನೆ ನಡೆಯುತ್ತದೆ.