ಅಳಿದ ಬಳಿಕ ಚಿಂತಿಸಿ ಫಲವೇನು?

ಉಲ್ಕಾಪಾತದಂಥ ಘಟನೆ ಸಂಭವಿಸಿದರೆ ಅದನ್ನು ತಡೆಯುವುದಕ್ಕೆ ನಮ್ಮಿಂದಾಗದು. ಭೂಮಿಯಾಳದಿಂದ ನುಗ್ಗಿ ಬರುವ ಜ್ವಾಲಾಮುಖಿಯನ್ನು ತಡೆಯಲು ಹೊರಟರೆ ಬೆಂಕಿ ಕೆಂಡವನ್ನು ರಟ್ಟಿನ ಪೆಟ್ಟಿಗೆಯೊಳಗೆ ಅಡಗಿಸಿಡುವ ಸಾಹಸ ಮಾಡಿದಂತಾದೀತು. ಹಾಗಂತ ಮಾನವ ಸೃಷ್ಟಿಸಿರುವ, ಸೃಷ್ಟಿಸುತ್ತಿರುವ ಪ್ರತಿಕೂಲ ವಿಚಾರಗಳಿಂದಾಗಿ ಜೀವಿಗಳು ಅವಸಾನಗೊಳ್ಳುವುದನ್ನು ತಡೆಯುವ ಪ್ರಯತ್ನ ಮಾಡಬಹುದಲ್ಲವೇ? ಇದ್ದಾಗ ಗೊತ್ತಾಗದ ಮೌಲ್ಯ ಸತ್ತ ಮೇಲೆ ಗೊತ್ತಾಗುತ್ತದೆಯಂತೆ! ಇದು ಸಾರ್ವತ್ರಿಕವಾಗಿ ಅನ್ವಯವಾಗುವಂಥ ಮಾತು. ಅದು ಮನುಷ್ಯರೇ ಇರಲಿ, ಪ್ರಾಣಿಗಳೇ ಇರಲಿ ಯಾವ ಜೀವಿಯೇ ಆದರೂ ಆದು ಇಲ್ಲದಿದ್ದಾಗಲೇ ಅದರ ಬಗ್ಗೆ ಕುತೂಹಲ ಹೆಚ್ಚುತ್ತದೆ. ಈ ಮಾತು ಡೈನೋಸಾರ್ ಗಳ ವಿಚಾರದಲ್ಲಿ ಸಮರ್ಪಕವಾಗಿ ಅನ್ವಯವಾಗುತ್ತದೆ. ಹಲವು ಸಾವಿರ ವರ್ಷಗಳ ಹಿಂದೆ ಭೂಮಿಯ ಮೇಲೆ ಇದ್ದವು ಎಂದು ಹೇಳಲಾಗುವಂಥ ಡೈನೋಸಾರ್ ಗಳು ಹೇಗಿದ್ದವು? ಅವುಗಳ ಶಾರೀರಿಕ ರಚನೆ ಹೇಗಿತ್ತು? ಅವುಗಳು ನಾವಂದುಕೊಂಡಿರುವಂತೆಯೇ ಕ್ರೂರ ಮೃಗಗಳಾಗಿದ್ದವೇ? ಡೈನೋಸಾ ರ್ ಗ ಳ ಬಗೆಗೆ ಪ್ರಶ್ನೆಗಳು ಹುಟ್ಟಿಕೊಳ್ಳುವುದಕ್ಕೆ ಶುರುವಾಗಿ ದಶಕಗಳೇ ಕಳೆದವು. ಸಮರ್ಪಕವಾದ ಉತ್ತರಗಳಿಗೆ ಮಾತ್ರ ಇನ್ನೂ ಹುಡುಕಲಾಗುತ್ತಿದೆ. ಡೈನೋಸಾರ್ ಗಳ ಪಳೆಯುಳಿಕೆಗಳನ್ನು ವಿಜ್ಞಾನಿಗಳು ಸಂಶೋಧನೆಗೆ ಒಳಪಡಿಸುತ್ತಿದ್ದಾರೆ. ಡೈನೋಸಾ ರ್ ಗಳ ಬಗೆಗೆ ಇರುವಂಥ ಪ್ರಮುಖ ಪ್ರಶ್ನೆಯೆಂದರೆ ಅವುಗಳು ಅಳಿದದ್ದು ಹೇಗೆ ಎಂಬುದು. ...