ಗಣೇಶ ರೂಪಕಲ್ಪನ ಕಾವ್ಯ

(ಈ ಕೀರ್ತನೆಯ ಸುಮಧುರ ಗಾನ ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.... https://youtu.be/C5LnEDpG-cQ ) ಮೂಢಮನವನೇಳಿಸಿ ಜ್ಞಾನವೃದ್ಧಿಯ ಮಾಡುಬಾ ದಿವ್ಯಮೂರ್ತಿ ಬುದ್ಧೀಶನೇ ಜೈ ಜೈ ಗಣೇಶ ಪಾಹಿಮಾಂ ||ಪ|| ಗಕಾರ ರೂಪ ಪೂರ್ವದಿ ಪಾದ ಪೂಜೆಯ ಮಾಡುವೆ ಕಾಲಾತೀತದ ಕಾಲ್ಗಳೋ ಜೈ ಜೈ ಗಣೇಶ ಪಾಹಿಮಾಂ ||೧|| ಗರ್ವ ಬಂಡಾಟ ಗೀಳೇಕೆ ಭೂಮಿಯಲೊಂದು ಪಾದವು ಪರತತ್ವದೊಳೇ ಮುಕ್ತಿ ಜೈ ಜೈ ಗಣೇಶ ಪಾಹಿಮಾಂ ||೨|| ಪಾದವಿನ್ನೊಂದೆತ್ತರದಿ ಕ್ಷರಲೌಕಿಕ ಬೇಡವೋ ಬ್ರಹ್ಮವಕ್ಷಯ ಕಾಣಿಸೋ ಜೈ ಜೈ ಗಣೇಶ ಪಾಹಿಮಾಂ ||೩|| ಪಾದ ಪಾದದ ರೂಪವು ಕ್ಷಯಾಕ್ಷಯದ ಅಂತರ ಪಾದ ತಿಳಿಯೆ ಸ್ವರ್ಗವು ಜೈ ಜೈ ಗಣೇಶ ಪಾಹಿಮಾಂ ||೪|| ಮಧ್ಯಮವು ಅಕಾರವು ಭವ್ಯ ಬ್ರಹ್ಮಾಂಡ ರೂಪವು ಅನಂತಾಖಂಡ ಸಾದೃಶ್ಯ ಜೈ ಜೈ ಗಣೇಶ ಪಾಹಿಮಾಂ ||೫|| ನಾಗಪಾಶದಿ ಬಂಧಿತ ವಿಶ್ವಾಶ್ವಾಕ್ಷದೆಲ್ಲ ಕಣ ಪಾಶದಾಚೆ ಮುಕ್ತಿಲೋಕ ಜೈ ಜೈ ಗಣೇಶ ಪಾಹಿಮಾಂ ||೬|| ಭವದಿಚ್ಛೆಯೆಲ್ಲವಿದು ಭಕ್ಷ್ಯಭೋಜ್ಯ ಲಡ್ಡುಗಳು ವಾಂಛೆ ತ್ಯಜಿಸೆ ಬ್ರಹ್ಮೈಕ್ಯ ಜೈ ಜೈ ಗಣೇಶ ಪಾಹಿಮಾಂ ||೭|| ಚಿತ್ತ ಮರ್ಕಟ ಬಂಧಕೆ ಪರಶು ಪಾಶದಂಕುಶ ದಿವ್ಯ ಹೃದಯ ತುಂಬಿಕೋ ಜೈ ಜೈ ಗಣೇಶ ಪಾಹಿಮಾಂ ||೮|| ಭವ್ಯ ರೂಪವ ನೋಡಿದೆ ಮಿಥ್ಯ ಮೋಹವೆಲ್ಲ ಕಳೆ ಭವಸಾಗರ ದಾಟಿಸೋ ಜೈ ಜೈ ಗಣೇಶ ಪಾಹಿಮಾಂ ||೯|| ಅನುಸ್ವಾರಾಂತ ರೂಪವು ಶೂನ್ಯದೊಳು ಸರ್ವೈಕವೋ ಋಣ ಧನದ ಹಂಗೇಕೋ ಜೈ ಜೈ ಗಣೇಶ ಪಾಹಿಮಾಂ ||೧೦|| ಆರೋಗ್ಯವದು ಭಾಗ್ಯವೋ ನೆಮ್...