ನಮೋ ರಾಘವೇಂದ್ರ

(ಈ ಕೀರ್ತನೆಯ ಸಮಧುರ ಗಾನ ಕೇಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ....

ಹಸಿದು ಬಂದ ಕಂದಗೇ ಹಾಲೂಡಿಸುವ ನಂದನ
ಸಾರ್ವಭೌಮ ಯತೀಶನೇ ರಾಘವೇಂದ್ರ ನಮೋ ನಮೋ ||ಪ||

ಬಾಲಮಾನಸ ಮಂದಿರ
ತುಂಬಿಹೆ ನೀನು ಚಂದಿರ
ತಂಪೆರೆಯುತ ಕಾಯು ನೀ
ರಾಘವೇಂದ್ರ ನಮೋ ನಮೋ ||೧||

ತುಂಗೆ ತೀರದಿ ನಿಂತಿಹೆ
ಭಕ್ತ ಭಕ್ತರ ಪಾಲಿಸೆ
ಮಂತ್ರ ಗಾನದಿ ಪ್ರಸನ್ನಾ
ರಾಘವೇಂದ್ರ ನಮೋ ನಮೋ ||೨||

ಭಕ್ತಿಯೊಲ್ಮೆಯ ಪೂಜೆಗೇ
ಶುದ್ಧ ಮಾನಸ ಧ್ಯಾನಕೇ
ಒಲಿಯೋ ಗುರು ಶ್ರೇಷ್ಠನೇ
ರಾಘವೇಂದ್ರ ನಮೋ ನಮೋ ||೩||

ಫಲ ವಾಂಛೆಯೆಲ್ಲವನು
ಇಲ್ಲವೆನ್ನದೆ ನೀಡುವಾ
ಮಂತ್ರಾಲಯ ಪುರಾಧೀಶ
ರಾಘವೇಂದ್ರ ನಮೋ ನಮೋ ||೪||

ಚಂದನವು ನಿನ್ನಾನಾಮ
ನಂದನವು ನಿನ್ನಾನೆಲ
ಬೃಂದಾವನದಿ ಐತಿಹ್ಯ
ರಾಘವೇಂದ್ರ ನಮೋ ನಮೋ ||೫||

ವೃಂದ ವೃಂದದಿ ಭಕ್ತರು
ದರ್ಶನ ಬೇಡಿದಾಗಲೇ
ಕ್ಷಣಮಾತ್ರದಿ ಪ್ರತ್ಯಕ್ಷ
ರಾಘವೇಂದ್ರ ನಮೋ ನಮೋ ||೬||

ಹೃನ್ಮನವು ಮಲ್ಲಿಗೆಯು
ಕಣ್ಣೊಲ್ಮೆಯಾ ಮಹಾನದಿ
ಧ್ವನಿಯು ಮಾಣಿಕ್ಯಮಣಿ
ರಾಘವೇಂದ್ರ ನಮೋ ನಮೋ ||೭||

ಮಧುರ ಮಾತಿನಿಂದಲೇ
ಮನ್ಮಂದಿರ ಗೆಲ್ಲುವೆಯೋ
ಶರಣೆಂದೊಡೆ ಬಾರಯ್ಯಾ
ರಾಘವೇಂದ್ರ ನಮೋ ನಮೋ ||೮||

ಭಾವ ಭಾವದಲ್ಲಿ ರಾಮ
ರಾಮ ನಾಮದಲ್ಲೀಜಗ
ರಾಮ ದರ್ಶನ ಮಾಡಿಸೋ
ರಾಘವೇಂದ್ರ ನಮೋ ನಮೋ ||೯||

ಗುಣಾಧೀಶ ನಮೋ ನಮೋ
ಕೃಪಾನಿಧಿ ನಮೋ ನಮೋ
ಭವ್ಯಕೃತೇ ನಮೋ ನಮೋ
ರಾಘವೇಂದ್ರ ನಮೋ ನಮೋ ||೧೦||

ಪಯಣಿಗನ ಭಾವದೀ
ಕಾವ್ಯದಿಂದ ನಮೋ ನಮೋ
ಅಕ್ಷರದಿ ನಮೋ ನಮೋ
ರಾಘವೇಂದ್ರ ನಮೋ ನಮೋ ||೧೧||

- ಪ್ರಕಾಶ ಪಯಣಿಗ

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು