ಪುಟಾಣಿ ನವಿಲು
ಪುಟಾಣಿ ನವಿಲು
ಪುಟಾಣಿ ನವಿಲು
ನವಿಲೇ ನವಿಲೇ
ಪುಟಾಣಿ ನವಿಲೇ
ನನ್ನ ಮುದ್ದು
ಚೆಂದದ ನವಿಲೇ ||
ನಾನೂ ನೀನೂ
ಅಕ್ಕ ತಂಗಿ
ಹತ್ತಿರ ಬಂದು
ಆಡು ಬಾ ನವಿಲೇ ||
ಅಪ್ಪ ಅಮ್ಮ
ನನ್ನನು ಬಿಟ್ಟು
ಪೇಟೆಗೆ ಹೋಗ್ತಾರೆ
ಮರಿ ನವಿಲೇ ||
ನಿದ್ದೆ ಬಿಟ್ಟು
ನಾನು ಎದ್ದಾಗ
ಪಕ್ಕದಿ ನೀನೇ
ಇರು ನವಿಲೇ ||
ಪೇಟೇಲಿ ಪೊಲೀಸ್
ಬಿಡ್ತಾ ಇಲ್ಲ
ಮನೇಲೆ ನಾವು
ಆಡುವ ನವಿಲೇ ||
ಪೇಟೇಲಿ ತಿಂಡಿ
ಸಿಗುತ್ತಾ ಇಲ್ಲ
ಸ್ವಲ್ಪ ಸ್ವಲ್ಪ
ತಿನ್ನುವ ನವಿಲೇ ||
ಅಜ್ಜಿ ಟೀವಿಲಿ
ವಾರ್ತೆ ನೋಡ್ತಾರೆ
ನಾನೂ ನೀನೂ
ಕಾರ್ಟೂನು ನೋಡುವ ||
ವಾಕಿಂಗ್ ಹೋಗುವ
ಬಾ ನವಿಲೇ
ಆಟವನಾಡುವ
ಓ ನವಿಲೇ ||
ಹೃದಯದಿ ಪ್ರೀತಿ
ತುಂಬಾ ತುಂಬಾ
ನನ್ನ ತಂಗಿ
ಪುಟ್ಟು ನವಿಲೇ ||
ಇಂದು ತುಂಬಾ
ಮಳೆಯ ಹನಿಯು
ಬರಲೇ ಇಲ್ಲ
ಯಾಕೇ ನವಿಲೇ ||
ಮನೆಯ ಒಳಗೆ
ಇದ್ದೂ ಇದ್ದೂ
ಬೇಜಾರೂ ಆಯ್ತು
ಮುದ್ದು ನವಿಲೇ ||
ನಿನಗೇ ಒಂದು
ಬಂಗಾರ ಗೆಜ್ದೆ
ತಂದು ಕೊಡುವೆ
ಕುಣಿಯೋಣ ನವಿಲೇ ||
ನಾನೂ ನೀನು
ಸೇರಿಕೊಂಡು
ಚಂದದ ಡ್ಯಾನ್ಸು
ಮಾಡುವ ನವಿಲೇ ||
ಥಕ ದಿನ್ನ ತೈ ತಕಿಟ ತಾಂ
ತಕಿಟ ತೋಂ ದಿನ ದಿನ್ನ ತ್ತಾಂ
ತರಿಕಿಟ ದಿನ ದಿನ್ನ ತ್ತೋಂ
ಧಿಮಿ ಧಿಮಿತ ಧಿಮಿತ ಧೀಂ ||
ಪರಿಕಲ್ಪನೆ, ಸಾಹಿತ್ಯ – ಪ್ರಣಮ್ಯ ಡಿ. ಶರ್ಮ
ಅಕ್ಷರ, ಪದ್ಯರೂಪ – ಪ್ರಕಾಶ್ ಪಯಣಿಗ
Comments
Post a Comment