ಬುವಿಯೊಳಗೆ ಜೀವಸೃಷ್ಟಿ ಎಲ್ಲಾಯ್ತು?

ಭೂಮಿಯಲ್ಲಿ ಜೀವಜಗತ್ತು ಸೃಷ್ಟಿಯಾಗಿ , ಬೆಳೆಯುತ್ತಿದೆ ಎಂಬುದು ಗೊತ್ತು . ಯಾವುದೇ ಒಂದು ಕಾಲದಲ್ಲಿ ಇಲ್ಲಿ ಸೃಷ್ಟಿ ಕಾರ್ಯ ಶುರುವಾಗಿದೆ ಎಂಬುದೂ ಗೊತ್ತು . ಆದರೆ ಸೃಷ್ಟಿಕಾರ್ಯ ಶುರುವಾದದ್ದು ಎಲ್ಲಿ ? ಹೇಗೆ ಶುರುವಾಯ್ತು ? ಎಲ್ಲಾ ಜೀವಿಗಳೂ ಒಟ್ಟಿಗೇ ಸೃಷ್ಟಿಯಾದವೇ ? ಅಥವಾ ವಿಕಾಸದ ಪಥದಲ್ಲಿ ಒಂದು ಜೀವಿ ಇನ್ನೊಂದಾಗಿ ರೂಪಾಂತರಗೊಂಡಿತೇ ? ವೈಜ್ಞಾನಿಕ ಜಗತ್ತಿನಲ್ಲಿ ಇವುಗಳು ಮಿಲಿಯನ್ ಡಾಲರ್ ಪ್ರಶ್ನೆಗಳು . ಸೃಷ್ಟಿಯ ಬಗ್ಗೆ ಒಬ್ಬೊಬ್ಬರದು ಒಂದೊಂದು ವಾದ ; ಸೃಷ್ಟಿ ರಹಸ್ಯವನ್ನು ಪರಿಪೂರ್ಣವಾಗಿ ತೆರೆದಿಡುವುದಕ್ಕೆ ಯಾವ ವಾದಕ್ಕೂ ಸಾಧ್ಯವಾಗಿಲ್ಲ . ಅಪಾರವಾದ ಜಲರಾಶಿಯಲ್ಲಿ ಅರ್ಥಾತ ಅತಿಯಾದ ತಾಪಮಾನದಿಂದ ಕೂಡಿದ್ದ ಸಮುದ್ರತಟದಲ್ಲಿ ಜೀವಕುಡಿ ಸೃಷ್ಟಿಯಾಯಿತು ಎಂದು ಇದುವರೆಗಿನ ವೈಜ್ಞಾನಿಕ ಸಿದ್ಧಾಂತಗಳು ಪ್ರತಿಪಾದಿಸುತ್ತಾ ಬಂದಿದ್ದವು . ಆದರೆ ಈಗ ಇದು ಸರಿಯಾದ ವಾದವಲ್ಲ , ಸಾಗರದ ತಟದಲ್ಲಿ ಜೀವಜಗತ್ತಿನ ಉದಯವಾಗಿಲ್ಲ . ಬದಲಾಗಿ ಹಿಮಾವೃತಗೊಂಡಿರುವ ಧ್ರುವಪ್ರದೇಶಗಳಲ್ಲಿ ಜೀವಿಗಳು ಸೃಷ್ಟಿಯಾದವು ಎಂದು ಹೊಸ ಸಂಶೋಧನೆಯೊಂದು ಹೇಳಿದೆ . ಭೂಮಿಯ ಧ್ರುವಪ್ರದೇಶಗಳಲ್ಲಿ ಸಾಗರಮುಖಿಯಾಗಿ ಬೆಳೆದಿರುವ ಸಮುದ್ರ ನೀರ್ಗೋಲುಗಳು ( ಸೀ ಸ್ಟಾಲಕ್ಟೈಟ್ಸ್ ) ಅಥವಾ ಮಂಜಿನ ಕೊಳವೆಗಳಿರುವ ಪ್ರದೇಶದಲ್ಲಿ ಜೀವಜಗತ್ತು ಸೃಷ್ಟಿಯಾಯಿತು . ಉದ್ದಕ್ಕೆ ಮಂಜಿನರಾಶಿಯ ಅಡಿಯಲ್ಲಿ ನೂರಾರು ಯಾರ್ಡ್‌ಗಳಷ್ಟು ಉದ್ದಕ್ಕೆ ಬೆಳೆಯಬಲ್ಲ ನೀರ್ಗೋಲುಗಳನ್ನು...