‘ಶಕ್ತಿ’ಗೆ ಎರಡು ಹೊಸ ದಾರಿಗಳು

ಜಗತ್ತು ಅಭಿವೃದ್ಧಿ ಪಥದಲ್ಲಿ ಕ್ಷಿಪ್ರವಾಗಿ ಹೆಜ್ಜೆಯಿಡುತ್ತಿದೆ . ಇದರ ಜತೆ ಜತೆಗೇ ಜನರ ಅಗತ್ಯಗಳೂ ಹೆಚ್ಚಾಗುತ್ತಿದ್ದು , ಇಂಧನ ಬಳಕೆ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ . ತತ್ಪರಿಣಾಮ ಇಂಧನ ಕೊರತೆ ಜಗತ್ತಿನ ಎಲ್ಲ ದೇಶಗಳನ್ನೂ ಕಾಡುತ್ತಿದೆ . ಒಂದೆಡೆ ಪ್ರಸ್ತುತ ಉತ್ಪಾದನೆಯಾಗುತ್ತಿರುವ ದ್ರವ ಇಂಧನ ಪ್ರಮಾಣ ವಾಹನಗಳ ಬೇಡಿಕೆಗೆ ಸಾಕಾಗುವಷ್ಟಿಲ್ಲ . ಇನ್ನೊಂದೆಡೆ ಎಷ್ಟು ವಿದ್ಯುತ್ ಉತ್ಪಾದನೆ ಮಾಡಿದರೂ ಕೊರತೆ ನೀಗಿಸುವುದಕ್ಕೆ ಹೆಣಗಾಡುವಂಥ ಪರಿಸ್ಥಿತಿ ಇದೆ . ಈ ಸಮಸ್ಯೆಗಳನ್ನು ಬಗೆ ಹರಿಸಿ ಇಂಧನ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ವೈಜ್ಞಾನಿಕ ವಲಯ ಹಲವು ವರ್ಷಗಳಿಂದಲೇ ವಿವಿಧ ರೀತಿಯ ಸಂಶೋಧನೆಗಳನ್ನು ನಡೆಸುತ್ತಿದೆ . ಇದೀಗ ನಡೆದಿರುವ ಎರಡು ವಿಭಿನ್ನ ಪ್ರಯೋಗಗಳು ಇಂಧನ ಕೊರತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಆಶಾಭಾವನೆಯನ್ನು ಮೂಡಿಸಿವೆ .