ಭೂತಟ್ಟೆಗಳಿಗೂ ಒಂದು ಲುಬ್ರಿಕೆಂಟ್!
ಭೂಗರ್ಭದಲ್ಲಿರುವ
ಲಾವಾರಸದ ಮೇಲೆ ತೇಲಾಡುತ್ತಿರುವ
ತಟ್ಟೆಗಳಿವೆ.
ಈ ತಟ್ಟೆಗಳು
ಅಲುಗಾಡಿದಾಗ ಭೂಕಂಪವಾಗುತ್ತದೆ.
ತಟ್ಟೆಗಳು
ಸೇರುವ ಜಾಗದಲ್ಲಿಯೇ ಜ್ವಾಲಾಮುಖಿ
ಉಂಟಾತ್ತದೆ.
ತಟ್ಟೆಗಳ
ಅಡಿಯಲ್ಲಿರುವ ಲಾವಾರಸವೇ ಜ್ವಾಲಾಮುಖಿ
ರೂಪದಲ್ಲಿ ಸ್ಫೋಟಗೊಳ್ಳುತ್ತದೆ
ಎಂಬೆಲ್ಲ ವಿಚಾರಗಳು ಎಲ್ಲರಿಗೂ
ಗೊತ್ತಿರುವಂಥದ್ದು.
ಆದರೆ ವಿಜ್ಞಾನ
ಪ್ರಿಯರ ಮನಸಿನಲ್ಲಿ ಒಂದು ಯೋಚನೆ
ಬಂದಿದ್ದಿರಬಹುದೋ ಏನೋ?
ಅದು-
ಭೂಗರ್ಭದಲ್ಲಿನ
ತಟ್ಟೆಗಳು (ಟೆಕ್ಟೋನಿಕ್
ಪ್ಲೇಟ್‌ಗಳು)
ಸರಾಗವಾಗಿ
ತೇಲಾಡುವುದಕ್ಕೆ ಹೇಗೆ ಸಾಧ್ಯ?
ವಾಹನಗಳ
ಎಂಜಿನ್ ಸರಾಗವಾಗಿ ಕೆಲಸ ಮಾಡಬೇಕು,
ಎಂಜಿನ್‌ನ
ಪಿಸ್ಟನ್‌ಗಳ ನಡುವಿನ ಘರ್ಷಣೆ
ಕಡಿಮೆ ಮಾಡಬೇಕು ಎಂದಾದರೆ ಅದಕ್ಕೆ
ಲುಬ್ರಿಕೆಂಟ್ ಅಥವಾ ಎಂಜಿನ್
ಆಯಿಲ್ ಹಾಕಬೇಕು.
ಅದೇ ರೀತಿ
ಭೂಮಿಯಾಳದಲ್ಲಿನ ತಟ್ಟೆಗಳು
ಸರಾಗವಾಗಿ ಚಲಿಸುವುದಕ್ಕೆ ಇಂಥ
ಲುಬ್ರಿಕೆಂಟ್ ಯಾವುದಾದರೂ ಇದೆಯೇ?!
ವಿಜ್ಞಾನಿಗಳೂ ಇದೇ
ಪ್ರಶ್ನೆಯ ಬಗ್ಗೆ ಹಲವು ಸಮಯದಿಂದ
ತಲೆಕೆಡಿಸಿಕೊಂಡು,
ಸಂಶೋಧನೆ
ನಡೆಸುತ್ತಿದ್ದರು.
ಅದಕ್ಕೀಗ
ಫಲ ಸಿಕ್ಕಿದೆ.
ಅಂದರೆ,
ಭೂಗರ್ಭದಲ್ಲಿನ
ತಟ್ಟೆಗಳು ಸರಾಗವಾಗಿ ಚಲಿಸುವುದಕ್ಕೂ
ಲುಬ್ರಿಕೆಂಟ್ ಇದೆ ಎಂಬುದು
ಪತ್ತೆಯಾಗಿದೆ.
ಸ್ಯಾನ್
ಡಿಯಾಗೋದ ಸ್ಕ್ರಿಪ್ಸ್ ಇನ್‌ಸ್ಟಿಟ್ಯೂಷನ್
ಆಫ್ ಓಶಿಯನೋಗ್ರಫಿಯ ವಿಜ್ಞಾನಿಗಳು
ಭೂತಟ್ಟೆಗಳ ಸರಾಗ ಚಲನೆಗೆ ಕಾರಣವಾದ
ಲುಬ್ರಿಕೆಂಟನ್ನು ಪತ್ತೆ ಮಾಡಿದ್ದು,
ದ್ರವರೂಪದಲ್ಲಿನ
ಶಿಲಾಪದರವೇ ಭೂತಟ್ಟೆಗಳಿಗೆ
ಲುಬ್ರಿಕೆಂಟ್ ರೀತಿಯಲ್ಲಿ ಕೆಲಸ
ಮಾಡುತ್ತದೆ ಎಂದಿದ್ದಾರೆ.
ನಿಕಾರಾಗುವಾದಲ್ಲಿನ
ಮಧ್ಯ ಅಮೆರಿಕ ಕಾಲುವೆಯಲ್ಲಿ
ವಿಜ್ಞಾನಿಗಳು ಸಂಶೋಧನೆ ನಡೆಸಿದ್ದು,
ಭೂತಳದಲ್ಲಿ
ಸುಮಾರು ೨೫ ಕಿ.ಮೀ.ದಪ್ಪದ
ದ್ರವರೂಪದ ಶಿಲಾಪದರವನ್ನು ಪತ್ತೆ
ಮಾಡಿದ್ದಾರೆ.
ಕೇಂದ್ರ
ಅಮೆರಿಕದ ಭಾಗದಲ್ಲಿ ಭೂಗರ್ಭದಲ್ಲಿರುವ
ಕೋಕೋಸ್ ತಟ್ಟೆಗಳ ಕೆಳಭಾಗದಲ್ಲಿ
ಈ ಪದರವಿದ್ದು,
ಲುಬ್ರಿಕೆಂಟ್‌ನಂತೆ
ಕೆಲಸ ಮಾಡುತ್ತದೆ.
ಭೂಕಂಪಗಳು
ಮತ್ತು ಜ್ವಾಲಾಮುಖಿಗಳ ಬಗ್ಗೆ
ಹೆಚ್ಚಿನ ಅಧ್ಯಯನ ಮಾಡುವುದಕ್ಕೆ
ಈ ಸಂಶೋಧನೆ ನೆರವಾಗಲಿದೆ ಎಂದು
ವಿಜ್ಞಾನಿಗಳು ಹೇಳಿದ್ದಾರೆ.
ಭೂತಟ್ಟೆಗಳ ಸರಾಗ
ಚಲನೆಗೆ ಕಾರಣ,
ಭೂಕಂಪ ಮತ್ತು
ಜ್ವಾಲಾಮುಖಿಗಳ ಬಗ್ಗೆ ವೈಜ್ಞಾನಿಕ
ಜಗತ್ತು ಹಲವು ದಶಕಗಳಿಂದ ಸಂಶೋಧನೆ
ನಡೆಸುತ್ತಿದೆ.
ದ್ರವರೂಪದಲ್ಲಿರುವ
ಶಿಲಾಗರ್ಭವೇ ಭೂತಟ್ಟೆಗಳ ಚಲನೆ,
ಭೂಕಂಪ ಮತ್ತು
ಜ್ವಾಲಾಮುಖಿಗಳಿಗೆ ಕಾರಣವಿರಬಹುದು
ಎಂಬ ಜಿಜ್ಞಾಸೆಯಿತ್ತು.
ಆದರೆ
ಭೂಗರ್ಭದಲ್ಲಿರುವ ದ್ರವರೂಪದ
ಶಿಲಾಪದರದ ಬಗ್ಗೆ ಇಷ್ಟೊಂದು
ಮಾಹಿತಿಗಳು ಇರಲಿಲ್ಲ.
ಮುಂದಿನ
ದಿನಗಳಲ್ಲಿ ಭೂಕಂಪ ಮತ್ತು
ಜ್ವಾಲಾಮುಖಿಗಳ ಬಗ್ಗೆ ನಡೆಯುವ
ಹೆಚ್ಚಿನ ಅಧ್ಯಯನಗಳಿಗೆ ಈ ಸಂಶೋಧನೆ
ನೆರವು ನೀಡಲಿದೆ.
ಅಲ್ಲದೆ,
ಭೂಗರ್ಭದಲ್ಲಿ
ಲಾವಾರಸ ಅಥವಾ ಮ್ಯಾಗ್ಮಾ ಹೇಗೆ
ಸೃಷ್ಟಿಯಾಗುತ್ತದೆ.
ಅದಕ್ಕೆ
ಕಾರಣವೇನು ಎಂಬ ಬಗ್ಗೆಯೂ ಸಂಶೋಧನೆಗಳು
ನಡೆಯಬೇಕಿದೆ.
ಪ್ರಸ್ತುತ
ವೈಜ್ಞಾನಿಕ ವಲಯದಲ್ಲಿರುವ
ಮಾಹಿತಿಗಳ ಪ್ರಕಾರ ಭೂಗರ್ಭದಲ್ಲಿರುವ ಅಂತರ್ಜಲ,
ಖನಿಜಗಳು,
ಶಿಲೆಗಳು,
ಅನಿಲಗಳು
ಒಟ್ಟಾಗಿ ಲಾವಾರಸ ಸೃಷ್ಟಿಯಾಗುತ್ತದೆ.
ಆದರೆ ಇದರ
ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕು.
ಅದಕ್ಕಿಂತಲೂ
ಹೆಚ್ಚಾದಿ ಹೊಸದಾಗಿ ಪತ್ತೆಯಾದ
ದ್ರವರೂಪದ ಶಿಲಾಪದರಕ್ಕೆ ಲಾವಾರಸ
ಹೇಗೆ ಸರಬರಾಜಾಗುತ್ತದೆ ಎಂಬುದನ್ನು
ಕಂಡುಕೊಳ್ಳಬೇಕು ಎನ್ನುತ್ತಾರೆ
ವಿಜ್ಞಾನಿಗಳು.
ಉತ್ತಮ ಮಾಹಿತಿ
ReplyDelete