ಮಿಡಿಯುತಿವೆ ಹೃದಯ ಕೋಶಗಳು...!
ವೈದ್ಯಕೀಯ ಜಗತ್ತಿನಲ್ಲಿ
ನಡೆಯುತ್ತಿರುವ ಒಂದೊಂದು ಪ್ರಯೋಗವೂ
ಜನರಿಗೆ ಎಷ್ಟು ಸಹಕಾರಿಯಾದುದೋ
ಅಷ್ಟೇ ಕೌತುಕವನ್ನೂ ಸೃಷ್ಟಿಸುತ್ತದೆ.
ಇದೂ ಸಾಧ್ಯವೇ
ಎಂಬ ಅಚ್ಚರಿಗೆ ಕಾರಣವಾಗುತ್ತದೆ.
ಒಂದು ರೋಗವನ್ನು
ವಾಸಿಮಾಡುವ ಚಿಕಿತ್ಸೆಯಿಂದ
ಹಿಡಿದು,
ಕೆಲಸ ಮಾಡದ
ಅಂಗಕ್ಕೆ ಬೇರೆಯವರಿಂದ ದಾನ ಪಡೆದ
ಅಂಗವನ್ನು ಕಸಿ ಕಟ್ಟುವಲ್ಲಿಯವರೆಗಿನ
ಸಂಶೋಧನೆಗಳೂ ಅಚ್ಚರಿಯೇ ಸರಿ!
ತೀರಾ ಇತ್ತೀಚಿನ
ದಿನಗಳಲ್ಲಿ ಕಾಂಡಕೋಶ ಮತ್ತು
ಜೀವಕೋಶಗಳನ್ನು ಪಡೆದು ಅವುಗಳಿಂದ
ಅಂಗಾಂಗಗಳನ್ನು ಬೆಳೆಸುವ ಸಂಶೋಧನೆಗಳ
ಪ್ರಮಾಣ ಹೆಚ್ಚುತ್ತಿದೆ.
ಹೃದಯದ ಬೈಪಾಸ್
ಸರ್ಜರಿಗೆ ದೇಹದ ಇತರ ಭಾಗದಿಂದ
ಪಡೆದ ಅಂಗಾಂಶವನ್ನು ಬಳಸುವ
ತಂತ್ರಜ್ಞಾನವೂ ಅಭಿವೃದ್ಧಿಗೊಂಡಿದೆ.
ಇದೀಗ ಜೀವಕೋಶಗಳ
ಅಂಗಾಂಶ ಕೃಷಿಯ ಮೂಲಕ ಹೃದಯನ್ನೇ
ಸೃಷ್ಟಿಸುವ ಪ್ರಯತ್ನದಲ್ಲಿ
ಜಯಶಾಲಿಗಳಾಗಿದ್ದಾರೆ ವಿಜ್ಞಾನಿಗಳು.
ಸಂಶೋಧನೆ ಎಲ್ಲಿ?:
ವಿಯೆನ್ನಾ
ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ
ವಿಜ್ಞಾನಿಗಳು ಕಾಂಡಕೋಶಗಳನ್ನು
ಹೃದಯದ ಕೋಶಗಳನ್ನಾಗಿ ಅಭಿವೃದ್ಧಿಪಡಿಸುವಲ್ಲಿ
ಯಶಸ್ವಿಯಾಗಿದ್ದಾರೆ.
ಈಗಾಗಲೇ
ಇದನ್ನು ಇಲಿಯ ಮೇಲೆ ಪ್ರಯೋಗಿಸಲಾಗಿದ್ದು,
ಇದರಲ್ಲಿ
ಯಶಸ್ಸು ಕಂಡಿದ್ದೇವೆ ಎಂಬುದಾಗಿ
ಸಂಶೋಧನಾ ತಂಡದ ಮುಖ್ಯಸ್ಥ
ಪ್ರೊ.ಮಾರ್ಕೋ
ಮಿಹೋವಿಲೋವಿ ಹೇಳಿದ್ದಾರೆ.
ಅಭಿವೃದ್ಧಿ ಹೇಗೆ?:
ಹೃದಯದ
ಜೀವಕೋಶಗಳ ಅಭಿವೃದ್ಧಿಗೆ ಕೆಲವೊಂದು
ದ್ರವ್ಯಗಳು ಪ್ರಚೋದನೆ ಕೊಡುತ್ತವೆ.
ಕಾಂಡಕೋಶಗಳಂತೆಯೇ
ಇರುವ ಆದರೆ ಅವುಗಳಿಗಿಂತ ಹೆಚ್ಚು
ಬೆಳವಣಿಗೆ ಸಾಧಿಸಿದ ಪ್ರೋಜೆನೀಟರ್
ಕೋಶಗಳು ಹೃದಯದ ಕೋಶಗಳನ್ನು
ಅಭಿವೃದ್ಧಿಪಡಿಸುತ್ತವೆ.
ಹೃದಯ ಕೋಶಗಳ
ಅಭಿವೃದ್ಧಿಯನ್ನು ಪ್ರಚೋದಿಸುವ
ದ್ರವ್ಯಗಳನ್ನು ಬಳಸಿ ಪ್ರೋಜೆನೀಟರ್
ಕೋಶಗಳನ್ನು ಹೃದಯ ಕೋಶಗನ್ನಾಗಿ
ಅಭಿವೃದ್ಧಿ ಮಾಡುವ ಪ್ರಯತ್ನವನ್ನು
ಮಾಡಿದ ಪ್ರೊ.ಮಾರ್ಕೋ
ತಂಡ ಯಶಸ್ವಿಯಾದದ್ದು ಟ್ರಯಾಜೈನ್
ಎಂಬ ಸಂಯುಕ್ತ ರಾಸಾಯನಿಕ ದ್ರವ್ಯವನ್ನು
ಬಳಸಿ!
ಭ್ರೂಣಾವಸ್ಥೆಯಲ್ಲಿರುವ
ಶಿಶುವಿನ ಕಾಂಡಕೋಶವನ್ನು ಪಡೆದು
ಅದನ್ನು ದೇಹದ ಯಾವುದೇ ಭಾಗಗಳ
ಜೀವಕೋಶಗಳನ್ನಾಗಿ ಅಭಿವೃದ್ಧಿಪಡಿಸುವುದಕ್ಕೆ
ಈಗ ಸಾಧ್ಯವಿದೆ.
ಆದರೆ ಪ್ರಬುದ್ಧ
ಮನುಷ್ಯನ ಕಾಂಡಕೋಶಗಳನ್ನು ಪಡೆದು
ಎಲ್ಲಾ ಭಾಗಗಳ ಜೀವಕೋಶಗಳನ್ನು
ಅಭಿವೃದ್ಧಿ ಮಾಡುವುದಕ್ಕೆ
ಸಾಧ್ಯವಿಲ್ಲ.
ಕೆಲವೊಂದು
ಅಂಗಗಳ ಜೀವಕೋಶಗಳನ್ನು
ಅಭಿವೃದ್ಧಿಪಡಿಸುವುದಕ್ಕೆ
ಸಾಧ್ಯವಿದೆಯಾದ ಕಾರಣ ಈ ನಿಟ್ಟಿನಲ್ಲಿ
ಹೆಚ್ಚಿನ ಸಂಶೋಧನೆ ನಡೆದರೆ
ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚು
ಪ್ರಯೋಜನವಾದೀತು ಎನ್ನುತ್ತಾರೆ
ಪ್ರೊ.ಮಾರ್ಕೋ.
ಮುಂದಿನ ಗುರಿ:
ಪ್ರಸ್ತುತ
ಈ ವಿಧಾನ ಅತ್ಯಂತ ಸುಲಭವಾಗಿ
ಚಿಕಿತ್ಸೆಗೆ ಒಗ್ಗಿಕೊಳ್ಳುತ್ತಿದೆ.
ವಿಭಿನ್ನತೆ
ಹೊಂದಿರುವ ಹಲವಾರು ದ್ರವ್ಯಗಳನ್ನು
ಹೊಸ ಸಂಯೋಜಿತ ವಿಧಾನವಿಲ್ಲದೇ
ನೇರವಾಗಿ ಚಿಕಿತ್ಸೆಗೆ ಬಳಸಬಹುದಾಗಿದೆ.
ಆದರೂ ಔಷಧೀಯ
ಬಳಕೆಗೆ ಅನುಕೂಲವಾಗುವಂತೆ ಈ
ವಿಧಾನವನ್ನು ಅಭಿವೃದ್ಧಿಪಡಿಸುವ
ಅಗತ್ಯವಿದೆ.
ಅಲ್ಲದೆ,
ಟ್ರೈಜೈನ್
ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ
ಎಂಬುದನ್ನೂ ಪರಿಶೀಲನೆಗೆ ಒಳಪಡಿಸುವ
ಅಗತ್ಯವಿದೆ ಎಂದು ಮಾರ್ಕೋ
ಹೇಳುತ್ತಾರೆ.
ಪ್ರಸ್ತುತ ಸ್ಥಿತಿಯಲ್ಲಿ
ಅಂಗಾಂಗ ಕಸಿ ಔಷಧಗಳೇ ಹೆಚ್ಚು
ಬಳಕೆಯಲ್ಲಿವೆ.
ಹೀಗಾಗಿ
ರೋಗಿಯ ಡಿಎನ್‌ಎಯನ್ನೇ ಬಳಸಿಕೊಂಡು
ಪ್ರಯೋಗಾಲಯದಲ್ಲಿ ಹೃದಯದ>9>202?ಗಾಶವನ್ನು
ಬೆಳೆಸುವುದು ಉತ್ತಮ.
ಆದರೆ ಇದು
ಇನ್ನಷ್ಟು ಅಭಿವೃದ್ಧಿಗೊಳ್ಳಬೇಕಿದೆ.
ಹೊಸ
ತಂತ್ರಜ್ಞಾನವನ್ನು ಮನುಷ್ಯರಿಗೆ
ಚಿಕಿತ್ಸೆ ಕೊಡುವುದಕ್ಕೂ ಬಳಸಲು
ಸಾಧ್ಯವಾಯಿತು ಎಂದಾದರೆ ವೈದ್ಯಕೀಯ
ಕ್ಷೇತ್ರಕ್ಕೆ ಅನುಕೂಲವಾಗಲಿದೆ.
ಅಲ್ಲದೆ,
ಮನುಷ್ಯರ
ಜೀವಿತಾವಧಿಯೂ ಹೆಚ್ಚಬಹುದು
ಎನ್ನುತ್ತಾರೆ ಪ್ರೊ.ಮಾರ್ಕೋ!
ಉತ್ತಮ ಮಾಹಿತಿ
ReplyDeleteThumbha uthama mahithi.. idu yashasviyadre thumbha mandige prayojane agabahudu..
ReplyDeletefrom,
vidya irvathur