ಬಂದಿದೆ ಹಿಗ್ಗಿಸಬಲ್ಲ ಬ್ಯಾಟರಿ!

ಒಂದು ಕಾಲದಲ್ಲಿ ದೊಡ್ಡ ದೊಡ್ಡ ಪೆಟ್ಟಿಗೆಗಳಂಥ ಬ್ಯಾಟರಿಗಳನ್ನು ಜನ ಬಳಸುತ್ತಿದ್ದರು. ತಂತ್ರಜ್ಞಾನ ಅಭಿವೃದ್ಧಿಯಾದಂತೆ ಬ್ಯಾಟರಿ ಗಾತ್ರ ಕಡಿಮೆಯಾಗುತ್ತಾ, ಸಾಮರ್ಥ್ಯ ಹೆಚ್ಚಾಗತೊಡಗಿತು. ಮೊಬೈಲ್ ಫೋನ್‌ಗಳ ಬಂದ ಆರಂಭದಲ್ಲಿ ಬಳಸುತ್ತಿದ್ದ ಬ್ಯಾಟರಿಗಳಿಗೂ ಈಗಿನ ಮೊಬೈಲ್‌ಗಳಲ್ಲಿ ಬಳಸುತ್ತಿರುವ ಬ್ಯಾಟರಿಗೂ ಹೋಲಿಕೆ ಮಾಡಿದರೆ ಬ್ಯಾಟರಿ ಉತ್ಪಾದನಾ ಕ್ಷೇತ್ರದಲ್ಲಾದ ತಂತ್ರಜ್ಞಾನ ಕ್ರಾಂತಿ ಎಂಥಾದ್ದು ಎಂಬುದು ವಿದಿತವಾಗುತ್ತದೆ.
ಕಾಗದದ ಹಾಳೆಯಷ್ಟು ತೆಳ್ಳಗಿನ ಬ್ಯಾಟರಿಗಳು ಬಂದಿದ್ದು, ಬ್ಯಾಟರಿ ಕ್ಷೇತ್ರದಲ್ಲಿನ ಸಂಶೋಧನೆಗಳ ಓಘವೂ ಹೆಚ್ಚಾಗುತ್ತಿದೆ. ಇದೀಗ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಬ್ಯಾಟರಿಗಳ ಪಟ್ಟಿಗೊಂದು ಹೊಸ ಸೇರ್ಪಡೆ! ಅದು- ಬೇಕಾದಂತೆ ಹಿಗ್ಗಿಸಬಲ್ಲ ಮತ್ತು ಮೂಲಸ್ವರೂಪಕ್ಕೇ ಕುಗ್ಗಿಸಬಲ್ಲ ಬ್ಯಾಟರಿ!
ಈ ಬ್ಯಾಟರಿಯನ್ನು ಸಂಶೋಧನೆ ಮಾಡಿದ್ದು ಅಮೆರಿಕದ ಷಿಕಾಗೋದ ಇಲಿನೋಯಿಸ್‌ನಲ್ಲಿರುವ ನಾರ್ಥ್‌ವೆಸ್ಟರ್ನ್ ವಿಶ್ವವಿದ್ಯಾಲಯದ ಯೋಂಗಂಗ್ ಹಾಂಗ್ ಮತ್ತು ಯೂನಿವರ್ಸಿಟಿ ಆಫ್ ಇಲಿನೋಯಿಸ್‌ನ ಜಾನ್ ಎ. ರೋಗರ್ಸ್. ಲೀಥಿಯಂ ಅಯಾನ್ ಬ್ಯಾಟರಿ ಇದಾಗಿದ್ದು, ಈ ಬ್ಯಾಟರಿಯಲ್ಲಿನ ಎಲೆಕ್ಟ್ರೋ?ಗಳು ಹಿಗ್ಗುವ ಮತ್ತು ಕುಗ್ಗುವ ಗುಣ ಹೊಂದಿವೆ. ಅಷ್ಟೇ ಇವುಗಳನ್ನು ಚಾರ್ಜ್ ಮಾಡುವುದಕ್ಕಾಗಿ ಕೇಬಲ್ ಬಳಸಬೇಕೆಂದೂ ಇಲ್ಲ. ಎಲೆಕ್ಟ್ರೋ?ಗಳು ಹಿಗ್ಗುವ ಗುಣ ಹೊಂದಿರುವುದರಿಂದಾಗಿ ವೈರ್‌ಲೆಸ್ ಆಗಿ ಚಾರ್ಜ್ ಮಾಡಲು ಸಾಧ್ಯವಿದೆ.
ವಾಣಿಜ್ಯೋದ್ದೇಶಿತ ಎಲ್‌ಇಡಿಗಳಲ್ಲಿ ಈ ಬ್ಯಾಟರಿಯನ್ನು ಬಳಸಬಹುದು. ಮಾತ್ರವಲ್ಲ, ಮಾನವನ ದೇಹದೊಳಗೆ ಮೆದುಳಿನ ಶಕ್ತಿ ಹೆಚ್ಚಿಸುವುದಕ್ಕೂ (ಮೆದುಳಿನಿಂದ ಹೃದಯಕ್ಕೆ ರವಾನೆಯಾಗುವ ವಿದ್ಯು? ತರಂಗಗಳ ಸಾಮರ್ಥ್ಯ ಹೆಚ್ಚಿಸುವುದಕ್ಕೆ) ಬಳಸಬಹುದು ಎಂಬುದನ್ನು ಸಂಶೋಧಕರು ನಿರೂಪಿಸಿದ್ದಾರೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಆದರೆ ೮ರಿಂದ ೯ಗಂಟೆಗಳ ಕಾಲ ಬ್ಯಾಟರಿ ಬರುತ್ತದೆ. ಬ್ಯಾಟರಿಯನ್ನು ಮಡಚಿ. ಸುರುಳಿಯಂತೆ ಸುತ್ತಿ, ಅದ್ಯಾವ ಕೋನದಲ್ಲಿ ಬೇಕಾದರೂ ಕೂರಿಸಿ... ಇದು ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ. ಬ್ಯಾಟರಿಯ ಎಲ್ಲಾ ಭಾಗಗಳನ್ನೂ ಅತ್ಯಂತ ಒತ್ತೊತ್ತಾಗಿ ಜೋಡಿಸುವ ಮೂಲಕ ಈ ಹಿಗ್ಗಿಸಬಲ್ಲ ಬ್ಯಾಟರಿ ಸೃಷ್ಟಿಸಿರುವುದಾಗಿ ಹಾಂಗ್ ಮತ್ತು ರೋಗರ್ಸ್ ಹೇಳಿಕೊಂಡಿದ್ದಾರೆ.
ಹಿಗ್ಗಿಸಬಲ್ಲಿ ಬ್ಯಾಟರಿಗಳ ಪವರ್ ಮತ್ತು ವೋಲ್ಟೇಜ್ ಇತರ ಬ್ಯಾಟರಿಗಳಂತೆಯೇ ಇರುತ್ತದೆ. ಆದರೆ ಹಿಗ್ಗಿಸಬಲ್ಲ ಬ್ಯಾಟರಿಗಳ ವಿಶೇಷತೆಯೆಂದರೆ ಇವುಗಳನ್ನು ಮೂಲಗಾತ್ರದ ಶೇ.೩೦೦ರಷ್ಟು ಹಿಗ್ಗಿಸಬಹುದು.
ಹೇಗೆ ಸಾಧ್ಯವಾಯಿತು?: ಹಿಗ್ಗಿಸಬಲ್ಲ ಬ್ಯಾಟರಿಗಳಲ್ಲಿ ಎಲೆಕ್ಟ್ರಾನಿಕ್ ಸರ್ಕಿಟ್‌ಗಳನ್ನೇ ಬಳಸಲಾಗಿದೆ. ಆದರೆ ಬ್ಯಾಟರಿಯನ್ನು ಹಿಗ್ಗಿಸಿದಾಗಲೂ ಸರ್ಕಿಟ್ ಬ್ರೇಕ್ ಆಗದೆ ಕಾರ್ಯನಿರ್ವಹಣೆ ಸರಾಗವಾಗಿ ಆಗುವುದಕ್ಕೆ ಬೇಕಾಗಿ ಎರಡು ವಿಶೇಷ ಪಾಪ್-ಅಪ್ ಬ್ರಿಡ್ಜ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಪಾಪ್ ಅಪ್ ಬ್ರಿಡ್ಜ್‌ಗಳು ಸರ್ಕಿಟ್ ಸರಾಗವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತವೆ.
ಸಾಮಾನ್ಯ ಪಾಪ್-ಅಪ್ ಬ್ರಿಡ್ಜ್‌ಗಳಲ್ಲಿ ಬಳಸುವ ತಂತ್ರಜ್ಞಾನಕ್ಕಿಂತ ಭಿನ್ನ ಮತ್ತು ಕ್ರಿಯಾಶņ?Y?253?ಾದ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗಿದೆ. ಅಂದರೆ ಎರಡು ಉಪಕರಣಗಳನ್ನು ಸಂಪರ್ಕಿಸುವ ಲೈನ್‌ಗಳನ್ನು ಇಂಗ್ಲಿಷ್‌ನ ‘ಎಸ್’ ಆಕಾರದಲ್ಲಿ ಎಳೆಯಲಾಗಿದೆ. ಒಂದು ದೊಡ್ಡ ಎಸ್ ಒಳಗೆ ಸಾವಿರಾರು ಸಣ್ಣ ‘ಎಸ್’ಗಳಿವೆ. ಬ್ಯಾಟರಿಯನ್ನು ಹಿಗ್ಗಿಸಿದಾಗ ಈ ಸಣ್ಣ ‘ಎಸ್’ಗಳು ಜಗ್ಗಿದಂತಾಗಿ ಸರಳ ರೇಖೆಯತ್ತ ಬರುತ್ತವೆ. ಎಲ್ಲಾ ‘ಎಸ್’ಗಳೂ ಸರಳ ರೇಖೆಗೆ ಬರುವ ಕಾರಣ ಅವುಗಳ ನಡುವಿನ ಸಂಪರ್ಕ ಮುಂದುವರಿಯುತ್ತದೆ. ಒಟ್ಟಿನಲ್ಲಿ ಇದೊಂದು ಮಹತ್ವದ ಕ್ರಾಂತಿ ಎಂದರೆ ತಪ್ಪೇನೂ ಇಲ್ಲ.

Comments

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು