ನಕ್ಷತ್ರ ಕಳೇಬರದಲ್ಲಿ ಗ್ರಹಕಸ!


ಸೃಷ್ಟಿ, ಸ್ಥಿತಿ, ಲಯಗಳು ಜೀವಿಗಳ ಪಾಲಿಗೆ ಹೇಗೆ ಸಹಜ ಕ್ರಿಯೆಯೋ ಅದೇ ರೀತಿ ನಕ್ಷತ್ರಗಳ ಬದುಕಿನಲ್ಲೂ ಇವು ಸಾಮಾನ್ಯ ಸಂಗತಿಗಳು. ಒಂದು ನಕ್ಷತ್ರ ಹುಟ್ಟಿದ ಆರಂಭದಿಂದ ಮಹಾಸ್ಫೋಟವೆಂಬ ಕೊನೆಯ ಉಸಿರಿನವರೆಗೆ ನಕ್ಷತ್ರಜೀವನದಲ್ಲಿ ಎಂತೆಂಥ ಘಟನೆಗಳು ಸಂಭವಿಸುತ್ತವೆ ಎಂಬುದನ್ನು ವೈಜ್ಞಾನಿಕ ವಲಯ ಈಗಾಗಲೇ ಅರ್ಥ ಮಾಡಿಕೊಂಡಿದೆ. ಆದರೆ ನಕ್ಷತ್ರವೊಂದು ಮಹಾಸ್ಫೋಟಕ್ಕೆ ಒಳಗಾಗಿ ಕಪ್ಪುರಂಧ್ರವಾಗಿ ಮಾರ್ಪಟ್ಟ ಬಳಿಕ ಏನಾಗುತ್ತದೆ? ಒಂದು ನಕ್ಷತ್ರ ಸಂಪೂರ್ಣ ಸತ್ತುಹೋದಾಗ ಏನಾಗುತ್ತದೆ? ನಕ್ಷತ್ರಗಳ ಸಾವು ಎಂದರೇನು? ಎಂಬೆಲ್ಲ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ವೈಜ್ಞಾನಿಕ ಜಗತ್ತು ನಿರಂತರವಾಗಿ ನಡೆಸುತ್ತಲೇ ಬಂದಿದೆ.
ಅಚ್ಚರಿ ಎಂದರೆ, ಒಂದು ನಕ್ಷತ್ರ ಮಹಾಸ್ಫೋಟದೊಂದಿಗೆ ಕಪ್ಪುರಂಧ್ರವಾಗಿ ಬದಲಾಗುತ್ತದೆ. ಅಲ್ಲಿಗೆ, ಆ ನಕ್ಷತ್ರದಿಂದ ಬರುವ ಬೆಳಕು ಸ್ಥಗಿತಗೊಳ್ಳುತ್ತದೆ. ಇದು ನಕ್ಷತ್ರ ಸಂಪೂರ್ಣಸಾವಿನ ಸ್ಥಿತಿ ಎನ್ನಬಹುದು. ಆದರೆ ಈ ಹಂತಕ್ಕೂ ಒಂದೆರಡು ಹಂತ ಮೊದಲೇ ನಕ್ಷತ್ರ ವಿಚಿತ್ರಮರಣವನ್ನಪ್ಪುತ್ತದೆ. ಅದುವೇ ಶ್ವೇತಕುಬ್ಜ ಸ್ಥಿತಿ. ಕೆಂಪುದೈತ್ಯವಾಗಿ ಬೆಳೆದ ನಕ್ಷತ್ರವೊಂದು ತನ್ನ ಹೊರಕವಚವನ್ನು ಕಳಚಿಕೊಂಡು, ಗಾತ್ರದಲ್ಲಿ ಸಣ್ಣದಾಗಿ, ರಾಶಿಯಲ್ಲಿ ಭಾರವಾಗುವ ಸ್ಥಿತಿಯೇ ಶ್ವೇತಕುಬ್ಜಾವಸ್ಥೆ. ಇದು ಒಂದು ರೀತಿಯಲ್ಲಿ ನಕ್ಷತ್ರದ ಸಾವೇ ಸರಿ!
ಈಗ ವಿಷಯ ಏನಪ್ಪಾ ಅಂದ್ರೆ, ಶ್ವೇತಕುಬ್ಜ ಹಂತದಲ್ಲಿನರುವ ನಕ್ಷತ್ರಗಳಲ್ಲಿ ಗ್ರಹಗಳು, ಕ್ಷುದ್ರಗ್ರಹಗಳು, ಧೂಮಕೇತುಗಳು ಮತ್ತಿತರ ಆಕಾಶಕಾಯಗಳು ಸೇರಿಕೊಂಡು ಅವುಗಳನ್ನು ಮಲಿನಗೊಳಿಸುತ್ತಿವೆ ಎಂಬುದು. ಅರ್ಥಾತ್ ಗ್ರಹಕಸಗಳು ಈ ನಕ್ಷತ್ರಗಳನ್ನು ಸೇರಿಕೊಳ್ಳುತ್ತಿವೆಯಂತೆ! ಇದನ್ನು ಪತ್ತೆ ಹಚ್ಚಿದ್ದು, ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕ.
ಟಾರಸ್ ನಕ್ಷತ್ರಪುಂಜದಲ್ಲಿನ ಶ್ವೇತಕುಬ್ಜ ನಕ್ಷತ್ರವೊಂದನ್ನು ಅಧ್ಯಯನ ಮಾಡಿದ ಯೂನಿವರ್ಸಿಟಿ ಆಫ್ ಕೇಂಬಿಜ್‌ನ ವಿಜ್ಞಾನಿಗಳು ಶ್ವೇತಕುಬ್ಜಾವಸ್ಥೆಯಲ್ಲಿನ ನಕ್ಷತ್ರಗಳಲ್ಲಿ ಗ್ರಹಕಸಗಳು ಸೇರಿಕೊಳ್ಳುವುದನ್ನು ಕಂಡುಕೊಂಡಿದ್ದಾರೆ. ಗುರುತ್ವಾಕರ್ಷಣ ಶಕ್ತಿಯಿಂದಾಗಿ ಸಣ್ಣ ಸಣ್ಣ ಆಕಾಶಕಾಯಗಳು ಶ್ವೇತಕುಬ್ಜದ ಸೆಳೆತಕ್ಕೆ ಸಿಲುಕಿಕೊಳ್ಳುತ್ತವೆ. ಪ್ರಸ್ತುತ ಸಿಕ್ಕಿರುವ ಅಚ್ಚರಿಯ ವಿಚಾರವು ನಕ್ಷತ್ರಗಳ ಜೀವನ್ಮರಣ ಚಕ್ರವನ್ನು ಇನ್ನಷ್ಟು ಆಳವಾಗಿ ಅಧ್ಯಯನ ಮಾಡಲು ನೆರವಾಗಲಿದೆ ಎಂಬುದು ವಿಜ್ಞಾನಿಗಳ ಅಂಬೋಣ.
ನಕ್ಷತ್ರವೊಂದು ಹುಟ್ಟುತ್ತಲೇ ಗ್ರಹಗಳನ್ನೂ ಇತರ ಆಕಾಶಕಾಯಗಳನ್ನೂ ಸೃಷ್ಟಿಸುತ್ತದೆ ಎಂಬ ವಾದವಿದೆ. ಇದರ ವಾಸ್ತವಾಂಶ ತಿಳಿದುಕೊqðË!<ಳುವುದಕ್ಕೆ ಪ್ರಸ್ತುತ ನಡೆದಿರುವ ಸಂಶೋಧನೆ ಸಹಕಾರಿಯಾದೀತು ಎನ್ನುತ್ತಾರೆ ಯೂನಿವರ್ಸಿಟಿ ಆಫ್ ಕೇಂಬ್ರಿಜ್‌ನ ಸಂಶೋಧಕ ಜೇಯ್ ಫಾರಿಹ್.

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು