ಸೂಕ್ಷ್ಮದತ್ತ ಹೊರಟರೆ ಅದು ಸೃಷ್ಟಿ ಮೂಲವಲ್ಲ!

ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಲ್ಲಿ ನಡೆಸಿದ ಘರ್ಷಣೆಯಿಂದ ಹಿಗ್ಸ್ ಬೋಸಾನ್ ಗಳನ್ನು ವೀಕ್ಷಿಸಲು, ಅವುಗಳ ಗುಣನಡತೆಗಳನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಸಾಧ್ಯವಾಗಿದೆ ಎಂಬುದು ನಿಜ. ಹಾಗಂತ ಇದನ್ನೇ ಸೃಷ್ಟಿ ಮೂಲದ ಪತ್ತೆ ಎನ್ನಲಾಗದು. ಯಾವ ಕಣಗಳನ್ನೇ ಆಗಲಿ ಎಷ್ಟೇ ಚಿಕ್ಕದಾಗಿ ಒಡೆಯುತ್ತಾ ಹೋದರೂ ಅದು ಮತ್ತಷ್ಟು ಚಿಕ್ಕ ಕಣಗಳನ್ನು ಕೊಡುತ್ತದೆ. ಇದನ್ನೇ ಮುಂದುವರಿಸಿದರೆ ಹೋಗುವುದು ಇನ್ಫಿನಿಟಿಯತ್ತ. ಅಂದರೆ ಅನಂತದ ಕಡೆಗೆ. ಆ ಅನಂತವನ್ನು ತಲುಪುವತ್ತ ವೈಜ್ಞಾನಿಕ ಜಗತ್ತು ಗಮನ ಹರಿಸಿದರೆ ಸೃಷ್ಟಿ ರಹಸ್ಯದ ಅರಿವು ದೊರಕೀತು. ಸೃ ಷ್ಟಿ- ಇದುವರೆವಿಗೂ ವಿಜ್ಞಾನಿಗಳ ಅರಿವಿಗೆ ನಿಲುಕದೇ ಇರುವಂಥ ವಿಶೇಷ ಕ್ರಿಯೆ. ಈ ಮಹಾನ್ ಕ್ರಿಯೆಯ ಒಳಗಣ ಹೂರಣವನ್ನು ಅರಿತುಕೊಳ್ಳುವ ಪ್ರಯತ್ನ ವೈಜ್ಞಾನಿಕ ಜಗತ್ತಿನಲ್ಲಿ ಹಲವು ದಶಕಗಳಿಂದ ನಡೆಯುತ್ತಿದೆ. ಅಂಥ ಪ್ರಯತ್ನಗಳ ಪೈಕಿ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಲ್ಲಿ ಮಹಾಸ್ಫೋಟವನ್ನು ಪುನರ್ಸೃಷ್ಟಿಸುವ ಮೂಲಕ ಸೃಷ್ಟಿ ಕ್ರಿಯೆಯ ರಹಸ್ಯ ಭೇದಿಸುವ ಪ್ರಯತ್ನ ಅತಿ ಮುಖ್ಯವಾದುದು. ಮಹಾನ್ ಕ್ರಿಯೆಯೊಂದರ ಮೂಲವನ್ನು ಶೋಧಿಸುತ್ತಾ ಹೊರಟ ಈ ಪ್ರಯತ್ನವೀಗ ಮಹತ್ವದ ಘಟ್ಟವನ್ನು ತಲುಪಿದೆ. ಜಗತ್ತಿನಲ್ಲೇ ಪ್ರಪ್ರಥಮವಾಗಿ ಅತ್ಯಂತ ತೀಕ್ಷ್ಣವಾದ, ಅತಿ ವೇಗದ ಕಿರಣಗಳನ್ನು ಹೊಮ್ಮಿಸುವಲ್ಲಿ ಸಫಲವಾಗಿದೆ. ಆದರೆ, ಇದನ್ನೇ ಸೃಷ್ಟಿ ಮೂಲ ಎಂದು ಕೆಲವರು ಬಣ್ಣಿಸಲು ಹೊರಟಿದ್ದಾರೆ. ಕೆಲವೊಂದು ಮಾಧ್ಯಮಗಳು ಕೂಡ...