ಚೀನೀಯರು ಸಮುದ್ರದಾಳ ನೋಡಲು ಹೊರಟಿದ್ದಾರೆ...

ಬಾಹ್ಯಾಕಾಶ ಯಾನದ ಬಗ್ಗೆ ಹೆಚ್ಚಿನವರಿಗೆ ಗೊತ್ತಿದೆ. ಸಮುದ್ರದಾಳದ ಬಗ್ಗೆ? ಅಲ್ಪ ಸ್ವಲ್ಪ ಗೊತ್ತಿದೆ. ಆದರೆ ಸಮುದ್ರ ಎಷ್ಟು ಆಳವಿದೆ? ಅದಕ್ಕೆ ಕೊನೆಯೆಂಬುದು ಇದೆಯಾ? ಇದ್ದರೆ ಆ ಕೊನೆಯಲ್ಲಿ ಏನಿದೆ? ಎಂಬೆಲ್ಲ ವಿಚಾರಗಳ ಬಗ್ಗೆ ಯಾರಲ್ಲಿಯೂ ಸ್ಪಷ್ಟವಾದ ಮಾಹಿತಿಯಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದಕ್ಕೆ ಹೊರಟಿದ್ದಾರೆ ಚೀನಾ ಸಾಧಕರು! ಹೌದು, ಎಲ್ಲರೂ ಏನಾದರೂ ಸಾಧನೆ ಮಾಡುವುದಕ್ಕೆ ಹೊರಟರೆ ಚೀನೀಯರು ಯಾವತ್ತೂ ಬೇರೆಯದೇ ರೀತಿಯಲ್ಲಿ ಸಾಧನೆ ಮಾಡುವುದಕ್ಕೆ ಪ್ರಯತ್ನಿಸುತ್ತಾರೆ. ತಮ್ಮದೇ ಆದ ಸಾಧನೆಗಳಿಂದ ಅವರು ಗುರುತಿಸಿಕೊಳ್ಳುತ್ತಾರೆ. ಜಗತ್ತಿನ ಎಲ್ಲರ ಗಮನ ಬಾಹ್ಯಾಕಾಶದ ಕಡೆಗಿದ್ದರೆ ಸಮುದ್ರದ ಆಳವನ್ನು ನೋಡಲು ಹೊರಡುವ ಮೂಲಕ ಜಗತ್ತಿನ ಗಮನವನ್ನೇ ತನ್ನೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ನಡೆಸಿದೆ. ಸಮುದ್ರ ಎಷ್ಟು ಆಳವಿದೆಯೋ ಗೊತ್ತಿಲ್ಲ. ಆದರೆ ಪ್ರಸ್ತುತ ನಾವು ಅಂದುಕೊಂಡಿರುವ ಪ್ರಕಾರ ಸಮುದ್ರ ಗರಿಷ್ಠ ಆಳವಾಗಿರುವುದು ಪೆಸಿಫಿಸಿಕ್ ಸಾಗರದಲ್ಲಿರುವ ಮರೀನಾ ಟ್ರೆಂಚ್ ಎಂಬಲ್ಲಿ. ಇಲ್ಲಿ ಸಮುದ್ರ 11,035 ಮೀಟರ್ ಆಳವಿದೆ. ಜಿಯಲಾಂಗ್ ಅಂಡರ್ವಾಟರ್ ಕ್ರಾಫ್ಟ್ ಹೆಸರಿನ ನೌಕೆಯ ಮೂಲಕ ಚೀನೀಯರು ಸಮುದ್ರದಾಳಕ್ಕೆ ಇಳಿಯಲಿದ್ದಾರೆ. 26 ಅಡಿ ಉದ್ದು ಈ ನೌಕೆಯ ಮೂಲಕ ಮುಂದಿನ ವರ್ಷ 7000 ಮೀಟರ್ ಆಳಕ್ಕೆ ಇಳಿಯಲಿದ್ದಾರೆ. ಈಗಾಗಲೇ ಇವರು 5,000 ಮೀಟರ್ ಆಳಕ್ಕೆ ಇಳಿದಿದ್ದಾರೆ. ನಂತರ 11,000 ಮೀಟರ್ಗಳಿಗೂ ಅಧಿಕ ಆಳಕ್ಕೆ ...