ವಜ್ರವೂ ಆವಿಯಾಗುತ್ತೆ ಗೊತ್ತ?!

ಭೂಮಿಯ ಮೇಲೆ ಯಾವುದೂ ಶಾಶ್ವತವಲ್ಲವೇ? ಅತ್ಯಂತ ಕಠಿಣವಾದ ವಸ್ತು ಅನ್ನಿಸಿಕೊಂಡ ವಜ್ರ ಶಾಶ್ವತವಾಗಿರಬಹುದು ಎಂದು ಹೇಳುವಿರಾದರೆ ಅದು ತಪ್ಪು ಎನ್ನುತ್ತಾರೆ ವಿಜ್ಞಾನಿಗಳು. ಸದಾ ಸೂರ್ಯನ ಬೆಳಕಿಗೆ ತೆರೆದುಕೊಂಡಿದ್ದರೆ ವಜ್ರವು ನಿಧಾನಕ್ಕೆ ತನ್ನಷ್ಟಕ್ಕೆ ತಾನು ಆವಿಯಾಗುತ್ತದೆ ಎನ್ನುತ್ತಿದೆ ಹೊಸ ಸಂಶೋಧನೆ.



      ಮೆಕಾರಿ ವಿಶ್ವವಿದ್ಯಾಲಯದ ಫೋಟಾನಿಕ್ ರಿಸರ್ಚ್ ಸೆಂಟರ್ನ ರಿಚರ್ಡ್ ಮಿಲ್ಡ್ರನ್ ನೇತೃತ್ವದ ವಿಜ್ಞಾನಿಗಳ ತಂಡ ಈ ಸಂಶೋಧನೆ ನಡೆಸಿದೆ. ಇವರು ಒಂದು ಹರಳನ್ನು ಸತತವಾಗಿ ನೇರಳಾತೀತ ಕಿರಣಗಳಿಗೆ ಒಡ್ಡಿದಾಗ ಆ ಹರಳು ಕರಗಿ ಆವಿಯಾಗುವುದು ಕಂಡುಬಂತು. ಅದೇ ರೀತಿ ವಜ್ರವೂ ಆವಿಯಾಗುವುದನ್ನು ಇವರು ಕಂಡುಕೊಂಡಿದ್ದಾರೆ. ಇತರ ಬೆಳಕಿನ ಕಿರಣಗಳಿಗೆ ಅಂದರೆ ತೀವ್ರವಲ್ಲದ ಕಿರಣಗಳಿಗೆ ಒಡ್ಡಿದಾಗ ವಜ್ರ ಆವಿಯಾಗುವ ಪ್ರಮಾಣ ತೀರಾ ಅತ್ಯಲ್ಪವಾಗಿತ್ತು. ಆದರೆ ಈ ಆವಿಯಾಗುವ ಪ್ರಕ್ರಿಯೆ ಮಾತ್ರ ಕಂಡು ಬಂದಿತ್ತು. ಯಾವುದೇ ರೀತಿಯ ಬೆಳಕಿನ ಕಿರಣಗಳಿಗೆ ತೆರೆದುಕೊಂಡರೂ ಸಹ ವಜ್ರವು ಆಯಾ ಬೆಳಕಿನ ಕಿರಣಗಳ ತೀವ್ರತೆಗೆ ಅನುಗುಣವಾಗು ಕರಗಿ ಆವಿಯಾಗುತ್ತದೆ ಎನ್ನುತ್ತಿದ್ದಾರೆ ಸಂಶೋಧಕರು.
ಇಷ್ಟೆಲ್ಲಾ ಯಾಕೆ ಹೇಳಿದೆ ಗೊತ್ತ? ವಜ್ರನ ಆಭರಣಗಳನ್ನು ಧರಿಸುವವರಿಗೆ ಈ ವಿಷಯ ತಿಳಿಸಬೇಕೆಂದು! ನಾವು ಧರಿಸುವ ಯಾವುದೇ ಆಭರಣವಾದರೂ ಸಹ ಅದು ಬೆಳಕಿನ ಸ್ಪರ್ಶಕ್ಕೆ ಸಹಜವಾಗಿಯೇ ಒಳಗಾಗುತ್ತದೆ. `ವಜ್ರದ ಆಭರಣ ನನ್ನಲ್ಲಿ ಯಾವತ್ತೂ ಇರುತ್ತೆ' ಅಂತ ಭಾವಿಸಿಕೊಂಡಿರಿ ಎಂದಾದರೆ ವಜ್ರವನ್ನು ಕಳೆದುಕೊಳ್ಳುವುದಕ್ಕೆ ಸಿದ್ಧವಾಗಿ. ಸೂರ್ಯನ ಬೆಳಕಿನ ಸ್ಪರ್ಶಕ್ಕೇ ವಜ್ರ ಸವೆಯುತ್ತಾ ಬರುತ್ತದೆ, ಕಡೆಗೊಂದು ದಿನ ವಜ್ರದ ಆಭರಣದ ಯಾವುದೋ ಒಂದು ಭಾಗ ಸಂಪೂರ್ಣ ಕರಗಿ ತುಂಡಾದಾಗಲಷ್ಟೇ ನಮ್ಮ ಗಮನಕ್ಕೆ ಬರುತ್ತದೆ. ಯಾವುದೇ ಆಭರಣವಾದರೂ ಅವುಗಳನ್ನು ನಾವು ಸತತವಾಗಿ ಧರಿಸುತ್ತಿರುವಾಗ ಅವು ನಿಧಾನಕ್ಕೆ ಸವೆಯುತ್ತಾ ಬರುವುದು ಸಹಜ. ಇದಕ್ಕೆ ವಜ್ರವೂ ಹೊರತಲ್ಲ ಎಂಬುದನ್ನು ಈ ಸಂಶೋಧನೆ ಸ್ಪಷ್ಟಪಡಿಸುತ್ತದೆ. 

Comments

  1. ಯಾವುದೂ ಶಾಶ್ವತವಲ್ಲ ಈ ಭೂಮಿಯಲ್ಲಿ !! ಉತ್ತಮ ಲೇಖನ, ವಿಜ್ಞಾನವನ್ನು ಸುಲಭದಲ್ಲಿ ವಿವರಿಸುವ ಈ ಪ್ರಯತ್ನ ಉತ್ತಮವಾಗಿದೆ :) ಮುಂದುವರೆಯಲಿ .. :)

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು