ಇದು ಕಾಮನಬಿಲ್ಲಲ್ಲ; ಚಂದ್ರಬಿಲ್ಲು!

ಕಾಮನಬಿಲ್ಲನ್ನು ನೋಡಿ ಅದರ ಅಂದವನ್ನು ಸವಿಯದವರು ಯಾರಿದ್ದಾರೆ ಹೇಳಿ. ನೀಲಾಗಸದಲ್ಲಿ ಬೆಳಕಿನ ಕಣಗಳು ಚದುರಿದಾಗ ಕಾಣುವ ಮನಮೋಹಕ ಬೆಳಕಿನ ಚಿತ್ತಾರ. ಹೆಣ್ಣಿನ ಹುಬ್ಬುಗಳೊಂದಿಗೆ ಹೋಲಿಸಲ್ಪಡುವ ಈ ಕಾಮನಬಿಲ್ಲಿನ ಕಥೆ ಒತ್ತಟ್ಟಿಗಿರಲಿ. ಚಂದ್ರಬಿಲ್ಲುಗಳನ್ನು ಅಥಾ೯ತ್ `ಮೂನ್ ಬೋ'ಗಳನ್ನು ನೋಡಿದ್ದೀರಾ?

ಇದೇನು ಚಂದ್ರಬಿಲ್ಲು ಎಂಬ ಪ್ರಶ್ನೆ ಹುಟ್ಟಿಕೊಳ್ಳಬಹುದು. ಕಾಮನಬಿಲ್ಲುಗಳು ಹಗಲು ಗೋಚರಿಸಿದರೆ ಚಂದ್ರಬಿಲ್ಲುಗಳು ಶಶಿಯ ತಂಪನೆಯ ಬೆಳಕಿನ ಪ್ರತಿಫಲವಾಗಿದೆ. ಕಾಮನಬಿಲ್ಲನ್ನು ಜಗತ್ತಿನ ಯಾವುದೇ ಭಾಗದಲ್ಲಾದರೂ ನೋಡಬಹುದು. ಆದರೆ ಚಂದ್ರಬಿಲ್ಲನ್ನು ಹಾಗೆ ನೋಡುವುದಕ್ಕೆ ಸಾಧ್ಯವಿಲ್ಲ. ಕೆಲವೇ ಕೆಲವು ಸ್ಥಳಗಳಲ್ಲಿ ಕಾಣಿಸುವ ಈ ಚಂದ್ರಬಿಲ್ಲುಗಳ ಸೌಂದಯ೯ ಎಂಥ ಅರಸಿಕರನ್ನೇ ಆದರೂ ಹಿಡಿದಿಡುತ್ತದೆ.

ಅಂದಹಾಗೆ, ಈ ಚಂದ್ರಬಿಲ್ಲುಗಳ ನೆನಪಾದದ್ದು ಕ್ಯಾಲಿಫೋನಿ೯ಯಾದ ಯೋಸೆಮಿಟ್ ನ್ಯಾಶನಲ್ ಪಾಕ್೯ ನಲ್ಲಿರುವ ಜಲಪಾತದಲ್ಲಿ ಇವು ಕಾಣಿಸಿಕೊಂಡ ಸುದ್ದಿ ನನ್ನ ಕಣ್ಣಿಗೆ ಬಿದ್ದಾಗ. ಬಹುತೇಕ ಜನರು ಚಂದ್ರಬಿಲ್ಲುಗಳಿವೆ ಅಥಾ೯ತ್ ರಾತ್ರಿಯ ವೇಳೆಯೂ ಕಾಮನಬಿಲ್ಲುಗಳನ್ನು ಕಾಣಬಹುದು ಎಂದರೆ ನಂಬುವುದೇ ಇಲ್ಲ. ಇದೇನೋ ಮಾನವ ನಿಮಿ೯ತ ಬೆಳಕಿನ ಚಿತ್ತಾರ ಇರಬೇಕು ಎಂದೇ ಭಾವಿಸುತ್ತಾರೆ. ಆದರೆ ಮಂದ್ರನ ಬೆಳಕು ನೇರವಾಗಿ ಬಿದ್ದು ಚದುರಿ ಹೋಗುವಂಥ ಸ್ಥಳಗಳಲ್ಲಿ ಚಂದ್ರಬಿಲ್ಲುಗಳನ್ನೂ ಕಾಣಬಹುದು. ಮುಖ್ಯವಾಗಿ ಜಲಪಾತಗಳಲ್ಲಿ ಇಂಥ ಚಂದ್ರಬಿಲ್ಲುಗಳು ಕಾಣಸಿಗುತ್ತವೆ. ಯಾವೆಲ್ಲ ಜಲಪಾತಗಳಿಗೆ ಚಂದ್ರನ ಬೆಳಕು ಬಿದ್ದು ಆ ಬೆಳಕು ಚದುರಿ ಹೋದರೆ ಅಲ್ಲಿ ರಾತ್ರಿಯ ವೇಳೆಯೂ ಕಾಮನಬಿಲ್ಲುಗಳು ಕಾಣಸಿಗುತ್ತವೆ. ಚಂದ್ರನ ಬೆಳಕು ಹೆಚ್ಚಿರುವ ಅಂದರೆ ಹುಣ್ಣಿಮೆ ಮತ್ತು ಅದರ ಹಿಂದುಮುಂದಿನ ಒಂದೆರಡು ದಿನಗಳಲ್ಲಿ ಈ ಚಂದ್ರಬಿಲ್ಲುಗಳು ಕಾಣಸಿಗುತ್ತವೆ.

Comments

  1. ಚಂದ್ರನ ಬಿಲ್ಲಿನ ಮಾಹಿತಿಗೆ ಧನ್ಯವಾದಗಳು. ಅಪರೂಪದ ಹೆಣ್ಣಿನ ಹುಬ್ಬುಗಳನ್ನು ಇನ್ನು ಮುಂದೆ ಚಂದ್ರನ ಬಿಲ್ಲಿಗೆ ಹೋಲಿಸಬಹುದು.

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು