ನಾಯಿಗೂ ಬೂಟ್ ಬಂದೈತೆ!


ಹಲವು ಶತಮಾನಗಳಿಂದ ಮಾನವನ ಮನೆಯ ಕಾವಲುಗಾರನಾಗಿದ್ದ ನಾಯಿಗೆ ಬಡ್ತಿ ಸಿಕ್ಕಿ, ಅದು ಫ್ಯಾಶನ್ ಲೋಕವನ್ನು ಪ್ರವೇಶಿಸಿದ್ದು ಈಗ ಹಳೇ ಸುದ್ದಿ. ಸರಿ, ನಾಯಿ ಫ್ಯಾಶನ್ ಲೋಕಕ್ಕೇನೋ ಪ್ರವೇಶ ಪಡೆಯಿತು. ಅಲ್ಲೇ ನಿಂತಿರೋದಕ್ಕೆ ಆಗುತ್ತದೆಯೇ? ಹೊಸ ಸುದ್ದಿ ಏನಪ್ಪಾ ಅಂದ್ರೆ ಇನ್ನು ನಿಮ್ಮ ಮುದ್ದಿನ ನಾಯಿಗೂ ಬೂಟು ತೊಡಿಸಿ ಖುಷಿ ಪಡಬಹುದು.


  ಅಲ್ಲಾ ಕಾಲ ಎಲ್ಲಿಗೆ ಬಂತು ಅಂತೀನಿ! ನಾಯಿಗೂ ಬೂಟ್ ಬೇರೆ ಬಂದಿದೆಯೇ? ನಿಜವಾಗಿಯೂ ನಾಯಿ ಬೂಟ್ ಬಂದಿದೆ. ಅದು ಕೂಡಾ ವಾಟರ್ ಪ್ರೂಫ್! ನಾಯಿ ಮಣ್ಣಿನ ಮೇಲೆ ನಡೀಲಿ, ಕೆಸರು ಗದ್ದೆಯಲ್ಲೇ ಓಡಾಡ್ಲಿ, ಮಂಜಿನ ಹನಿಗಳ ಮೇಲೆ ಕುಣಿದಾಡಲಿ... ಮಾನವನ ಮನೆಯ ರಕ್ಷಕ ನಾಯಿಯ ಕಾಲಿನ ರಕ್ಷಕವಾಗಿ ಈ ಬೂಟ್ ಇರುತ್ತೆ. ಕೆಲವೊಂದು ಬಾರಿ ನಾಯಿ ತನ್ನ ಕಾಲನ್ನ ತಾನೇ ಕಡಿದುಕೊಳ್ಳುತ್ತೆ. ಆಗ ಎಲ್ಲೋ ಇರುವೆ ಕಚ್ಚಿರ್ಬೇಕು ಅಂತ ನಾವು ಹೇಳ್ತೇವೆ. ಇನ್ನು ಮುಂದೆ ನಾಯಿಗೆ ಇರುವೆ ಕಚ್ಚೋ ಪ್ರಮೇಯವೇ ಇಲ್ಲ.

 ಅಂದಹಾಗೆ ಈ ನಾಯಿ ಬೂಟ್ ಬೆಲೆ 25 ಡಾಲರ್. ವಿವಿಧ ಸೈಜ್ ನಲ್ಲಿ ಈ ಬೂಟ್ ಗಳು ಸಿಗುತ್ತವಂತೆ! ವಿವಿಧ ಬಣ್ಣಗಳು ಕೂಡಾ ಇವೆ. ಜೈವಿಕವಾಗಿ ಕೊಳೆತು ಹೋಗುವಂಥ ರಬ್ಬರ್ ನಿಂದ ಇವುಗಳನ್ನು ತಯಾರಿಸಲಾಗಿದ್ದು ಪರಿಸರಕ್ಕೆ ಹಾನಿಯಾಗುತ್ತೆ ಅನ್ನೋ ಭಯವೂ ಇಲ್ಲವಂತೆ!

ಆದರೆ....
ಸಾಮಾನ್ಯವಾಗಿ ನಾಯಿಗಳಿಗೆ ಏನು ಸಿಕ್ಕರೂ ಕಚ್ಚಿ ಕಚ್ಚಿ ತಿನ್ನೋ ಅಭ್ಯಾಸ ಇರುತ್ತೆ. ಚಪ್ಪಲಿ, ಬೂಟ್ ಸಿಕ್ಕರಂತೂ ಕೇಳೋದೇ ಬೇಡ. ನಾಯಿಗೆ ಸಿಗೋ ಹಾಗೆ ಪ್ಲಾಸ್ಟಿಕ್, ರಬ್ಬರ್ ವಸ್ತುಗಳನ್ನು ಇಟ್ಟರೆ ಆಮೇಲೆ ಅದರ ಆಸೆ ಬಿಡ್ಲೇಬೇಕು. ಹೀಗಿರುವಾಗ ರಬ್ಬರ್ ನಿಂದ ತಯಾರಿಸಿದ ಬೂಟನ್ನು ನಾಯಿ ಕಾಲಿಗೆ ಹಾಕಿದ್ರೆ ಅದು ಅದರ ಕಾಲಲ್ಲೇ ಉಳಿಯುತ್ತೆ ಅನ್ನೋದಕ್ಕೆ ಗ್ಯಾರಂಟಿ ಏನು?

ಇರ್ಲಿ, ಇನ್ನು ಸೂಟೂ ಬಂದ್ರೆ, ನಾಯಿ ಸೂಟು, ಬೂಟು ಹಾಕ್ಕೊಂಡು, ಚೇರ್ ಮೇಲೆ ಕಾಲಮೇಲೆ ಕಾಲು ಹಾಕಿ ಕೂತ್ಕೊಂಡು ಮನೆಗೆ ಬಂದವರನ್ನು ಬೌ ಬೌ ಅಂತಲೇ ಸ್ವಾಗತಿಸುತ್ತೆ!!!

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು