ಶನಿಯ ಉಪಗ್ರಹದಿಂದ ನೀರು ಚಿಮ್ಮುತ್ತೆ....!

ಇದೀಗ ಇನ್ನೂ ಒಂದು ಮಹತ್ವದ ವಿಚಾರವನ್ನು ನಾಸಾ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅದು- ಶನಿಯ ಚಂದ್ರ ಎನ್ಸಿಲಾಡಸ್ ಸತತವಾಗಿ ನೀರನ್ನು ಚಿಮ್ಮುತ್ತಲೇ ಇರುತ್ತದೆ. ಈ ರೀತಿ ಈರು ಚಿಮ್ಮುವ ಕಾರಣ ಶನಿಗ್ರಹದ ಸುತ್ತಲೂ ನೀರಿನ ಕಣಗಳು ಹರಿದಾಡುತ್ತಿವೆ. ಯೂರೋಪಿಯನ್ ಸ್ಪೇಸ್ ಏಜೆನ್ಸಿಯ ಹರ್ಷಲ್ ಬಾಹ್ಯಾಕಾಶ ದೂರದರ್ಶಕ ತೆಗೆದಂತ ಚಿತ್ರಗಳನ್ನು ಆಧರಿಸಿ ಈ ಸಂಶೋಧನೆ ನಡೆಸಲಾಗಿದೆ.

ಶನಿಗ್ರಹದಲ್ಲಿ ನೀರಿನ ಅಂಶವಿದೆ ಎಂಬುದಾಗಿ ಬಹಳ ವರ್ಷಗಳಿಂದಲೇ ವಿಜ್ಞಾನಿಗಳು ಹೇಳುತ್ತಾ ಬಂದಿದ್ದಾರೆ. ಆದರೆ ಅಲ್ಲಿನ ವಾತಾವರಣವು ಮಾನವ ವಾಸಿಸಲು ಯೋಗ್ಯವಾಗಿಲ್ಲ. ಆದರೂ ಅಲ್ಲಿ ಜೀವಾಸ್ತಿತ್ವ ಇದೆಯೇ ಎಂಬ ಯೋಚನೆಗಳೂ ಬಂದಿದ್ದವು. ಇರಲಿ, ಬಾಹ್ಯಾಕಾಶದ ಒಂದೊಂದು ವಿಷಯವೂ ವಿಸ್ಮಯವನ್ನೇ ತಂದುಕೊಡುತ್ತದೆ. ಇನ್ನೂ ಅದೆಷ್ಟು ರಹಸ್ಯಗಳನ್ನು ಈ ಬ್ರಹ್ಮಾಂಡ ಒಳಗೊಂಡಿದೆಯೋ?
Comments
Post a Comment