ಜೀವಿಗಳೊಳಗೊಂದು ಲೋಕ!

ಡಾ.ಸೂಸ್ ಅವರ ಕಾದಂಬರಿ ಆಧರಿತ ಆನಿಮೇಶನ್ ಚಿತ್ರ `ಹಾರ್ಟನ್ ಹಿಯರ್ಸ್ ಎ ಹೂ!' ನೋಡಿದ್ದೀರಾ? ಇಲ್ಲವೆಂದಾದ್ರೆ ಒಮ್ಮೆ ನೋಡಿ. ಈ ಸಿನೆಮಾದಲ್ಲಿ ಬರುವಂಥ ಕಾಲ್ಪನಿಕ ಪಾತ್ರಗಳು ಅಚ್ಚರಿ ಹುಟ್ಟಿಸುತ್ತವೆ. ದೊಡ್ಡ ಹೂವಿನೊಳಗೆ ಇರುವಂಥ ಕಾಲ್ಪನಿಕ ಲೋಕದ ಕಥೆಯಿದು. ಹೂವಿನೊಳಗೊಂದು ಲೋಕ ಇದೆಯೇ?
1

2

3

4 
5 
6



ಇದೇ ಜಿಜ್ಞಾಸೆಯಲ್ಲಿ ವಿಜ್ಞಾನಿ ಗ್ಯಾರಿ ಗ್ರೀನ್ ಬರ್ಗ್ ಅವರು ವಿವಿಧ ರೀತಿಯ ಜೀವಿಗಳನ್ನು ತಮ್ಮ ಸೂಕ್ಷ್ಮದರ್ಶಕದ ಮೂಲಕ 300 ಪಟ್ಟು ದೊಡ್ಡದಾಗಿಸಿ ನೋಡಿದರು. ಆಗ ಕಂಡಂಥ ಚಿತ್ರಗಳನ್ನು ನೋಡಿದರೆ ಮೇಲೆ ಹೇಳಿದ ಸಿನೆಮಾದ ಪಾತ್ರಗಳು ನೆನಪಾಗುತ್ತವೆ. ಗ್ಯಾರಿ ಅವರು ಮ್ಯಾಗ್ನಿಫೈ ಮಾಡಿ ನೋಡಿದ ಹೂವುಗಳು, ಎಲೆಗಳು ಮತ್ತಿತರ ಭಾಗಗಳನ್ನು ಗಮನಿಸಿದರೆ ಜೀವಿಗಳೊಳಗೆ ಮತ್ತೊಂದು ಲೋಕವಿದೆಯೇನೋ ಎನಿಸುತ್ತದೆ. ಈ ಸಿನೆಮಾದಲ್ಲಿ ಕೂಡಾ ತೋರಿಸಿರುವಂಥದ್ದು ಇಂಥದ್ದೇ ಒಂದು ಲೋಕವನ್ನು. ಪ್ರಕೃತಿ ತುಂಬಾ ರಹಸ್ಯಗಳನ್ನು ತನ್ನೊಳಗೆ ಹೊತ್ತುಕೊಂಡಿದೆ. ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಎಲ್ಲೆಡೆಯೂ ಇಂಥ ವಿಚಿತ್ರಗಳೇ ಕಾಣಸಿಗುತ್ತವೆ ಎನ್ನುತ್ತಾರೆ ಗ್ಯಾರಿ.

ಗ್ಯಾರಿ ತಮ್ಮದೇ ಆದ 3ಡಿ ಮೈಕ್ರೋಸ್ಕೋಪನ್ನು ಅಭಿವೃದ್ಧಿಪಡಿದ್ದಾರೆ. ಈ ಮೈಕ್ರೋಸ್ಕೋಪನ್ನು ಕ್ಯಾಮರಾ ರೀತಿಯಲ್ಲಿ ಬಳಸಿಕೊಂಡು 300 ಪಟ್ಟು ಮ್ಯಾಗ್ನಿಫೈ (ಹಿಗ್ಗಿಸುವುದು) ಮಾಡಿದಂಥ ಚಿತ್ರಗಳನ್ನು ತೆಗೆದಿದ್ದಾರೆ. ಕಳೆದ 21 ವರ್ಷಗಳಿಂದ ಇಂಥ ಚಿತ್ರಗಳನ್ನು ತೆಗೆಯುತ್ತಿದ್ದೇನೆ. ಇದುವರೆಗೆ ಈ ಕಾಯಕ ನನಗೆ ಬೇಸರ ತರಿಸಿಲ್ಲ ಎನ್ನುತ್ತಾರೆ ಗ್ಯಾರಿ. ವಸ್ತುಗಳನ್ನು ಇಷ್ಟೊಂದು ಸೂಕ್ಷ್ಮವಾಗಿ ಗಮನಿಸುವುದು ಸುಲಭವಲ್ಲ. ಇದಕ್ಕಾಗಿ ಕ್ಯಾಮರಾ ಮತ್ತು ಮೈಕ್ರೋಸ್ಕೋಪಿನ ತಂತ್ರಜ್ಞಾನಗಳನ್ನು ಅವರು ಸಂಯೋಜಿಸಿ, ತಮ್ಮದೇ ಆದಂಥ 3ಡಿ ಮೈಕ್ರೋಸ್ಕೋಪಿಕ್ ಕ್ಯಾಮರಾವನ್ನು ಅಭಿವೃದ್ಧಿಪಡಿಸಿದ್ದಾರೆ.

ಅಂತರ್ಜಾಲವನ್ನು ಜಾಲಾಡ್ತಾ ಇರುವಾಗ ಸಿಕ್ಕಿದ ಈ ಮಾಹಿತಿ ಮತ್ತು ಚಿತ್ರಗಳು ನನ್ನ ಬ್ಲಾಗ್, ಫೇಸ್ ಬುಕ್ ಮಿತ್ರರಿಗಾಗಿ-



ಚಿತ್ರ 1: ಜಿನ್ ಫಾಂಡೆಲ್ ರೋಸ್ ವೈನ್ 300 ಪಟ್ಟು ಹಿಗ್ಗಿದಾಗ

ಚಿತ್ರ 2: ರೋಸ್ ಮರಿ (ಸುವಾಸನೆಭರಿತ ಸಸ್ಯ- ಇದಕ್ಕೆ ಕನ್ನಡದ ಹೆಸರಿದ್ದರೆ ದಯವಿಟ್ಟು ತಿಳಿಸಿ) 125 ಪಟ್ಟು ಹಿಗ್ಗಿದಾಗ

ಚಿತ್ರ 3: ಡ್ರ್ಯಾಗನ್ ಫ್ರುಟ್ 125 ಪಟ್ಟು ಹಿಗ್ಗಿದಾಗ

ಚಿತ್ರ 4: ಸ್ತ್ರಾಬೆರಿ 125 ಪಟ್ಟು ಹಿಗ್ಗಿನಲ್ಲಿ


ಚಿತ್ರ 5: ಸಕ್ಕರೆಯನ್ನು 125 ಪಟ್ಟು ಹಿಗ್ಗಿಸದರೆ ಹೀಗಿರುತ್ತೆ!

ಚಿತ್ರ 6: ತುಳಸಿ ಎಲೆಯನ್ನು 125 ಪಟ್ಟು ಹಿಗ್ಗಿಸದರೆ ಹೀಗೆ ಕಾಣುತ್ತೆ 

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು