ಬರುತ್ತಿದೆ ಸೋಲಾರ್ ಕಸದಬುಟ್ಟಿ!

ತ್ಯಾಜ್ಯ ವಿಲೇವಾರಿಯ ಬಗ್ಗೆ ಇತ್ತೀಚೆಗೆ ತುಂಬಾ ಮಾತುಗಳು, ಚಚೆ೯ಗಳು ಕೇಳಿಬರುತ್ತಿವೆ. ಪರಿಸರವನ್ನು ರಕ್ಷಿಸಬೇಕು, ಹೀಗಾಗಿ ತ್ಯಾಜ್ಯವನ್ನು ಎಸೆಯುವಾಗ ಸ್ವಲ್ಪ ವಿವೇಚನ ಇರಲಿ ಎಂಬ ಹಿತವಚನವೂ ಇದರ ಜೊತೆಗೂಡುತ್ತದೆ. ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದು ಸುಲಭದ ಮಾತೇನಲ್ಲ. ಭೂಮಿಗೆ ಎಸೆದರೆ ಭೂಮಿ ಮಲಿನವಾಗುತ್ತದೆ, ನೀರಿಗೆ ಹಾಕಿದರೆ ಜಲಮಾಲಿನ್ಯ, ಸುಟ್ಟರೆ ವಾಯುಮಾಲಿನ್ಯ! ಹಾಗಿದ್ದರೆ ತ್ಯಾಜ್ಯವನ್ನು ಏನು ಮಾಡುವುದು? ಹಾಗೇ ಇಟ್ಟುಕೊಳ್ಳುವುದಂತೂ ಇವೆಲ್ಲವುಗಳಿಗಿಂತಲೂ ಮಾರಕ. ವಿಲೇವಾರಿಗೆ ಒಂದು ದಾರಿ ಬೇಕಲ್ಲ?

ಸದ್ಯದಲ್ಲೇ ಇದಕ್ಕೊಂದು ಪರಿಹಾರವಾಗಿ 21ನೇ ಶತಮಾನದ ಅದ್ಭುತವೊಂದು ನಿಮ್ಮೆದುರಿಗಿರಲಿದೆ. ಇದು ಸೋಲಾರ್ ಕಸದಬುಟ್ಟಿ! ಕಂಪ್ಯೂಟರ್ ಸಾಫ್ಟ್ ವೇರ್ ಮೂಲಕ ನಿಯಂತ್ರಿಸಲ್ಪಡುವ ಈ ಸೌರ ಕಸದಬುಟ್ಟಿ ಖಂಡಿತಕ್ಕೂ ತ್ಯಾಜ್ಯ ವಿಲೇವಾರಿ ವಿಚಾರಕ್ಕೊಂದು ಪರಿಹಾರ ಕೊಟ್ಟಿದೆ ಎಂದು ಭಾವಿಸಬಹುದು.

3200 ಪೌಂಡ್ ಬೆಲೆಯ ಈ ಕಸದಬುಟ್ಟಿಯ ತಯಾರಿಯ ಹಿಂದಿರುವುದು ಐರಿಷ್ ಸಂಶೋಧಕರ ಮಿದುಳು. ಕೊಳೆತು ಹೋಗುವಂಥ ತ್ಯಾಜ್ಯಗಳನ್ನು ಈ ಕಸದಬುಟ್ಟಿ ತಾನಾಗಿಯೇ ಪುಡಿ ಮಾಡುತ್ತೆ. ಪುನಬ೯ಳಕೆ ಮಾಡಬಹುದಾದಂಥದ್ದನ್ನು ಪ್ರತ್ಯೇಕಿಸುತ್ತೆ. ಅವುಗಳನ್ನು ಕೂಡಾ ಪುಡಿ ಮಾಡುತ್ತೆ. ಬುಟ್ಟಿ ತುಂಬಿದಾಗ ಈ ಬುಟ್ಟಿಯಲ್ಲಿರುವ ಕಂಪ್ಯೂಟರ್ ಅಟೊಮೆಟಿಕ್ ಈಮೇಲನ್ನು ತನ್ನ ಮಾಲೀಕನಿಗೆ ಕಳುಹಿಸುತ್ತೆ. ಸಾವ೯ಜನಿಕ ಸ್ಥಳಗಳಲ್ಲಿ ಇದನ್ನು ಇಟ್ಟದ್ದು ಎಂದಾದರೆ ಈ ವ್ಯಾಪ್ತಿಯ ನಗರಸಭೆಗೆ ತಕ್ಷಣವೇ ಈಮೇಲ್ ಕಳುಹಿಸುತ್ತೆ. ಸತತ 8 ಗಂಟೆ ಸೂಯ೯ನ ಬೆಳಕು ಸಿಕ್ಕಿದ್ದೇ ಆದಲ್ಲಿ ಒಂದು ತಿಂಗಳು ಯಾವ ಸಮಸ್ಯೆಯೂ ಇಲ್ಲದೆ ಇದು ಕೆಲಸ ನಿವ೯ಹಿಸುತ್ತದೆ.

ಸಾವ೯ಜನಿಕ ಸ್ಥಳಗಳಲ್ಲಿ ಇದನ್ನು ಬಳಸಿದ್ದೇ ಆದಲ್ಲಿ ನಗರವೂ ಶುಚಿಯಾಗಿರುತ್ತೆ, ಕಸದಬುಟ್ಟಿಗಳನ್ನು ಆಗಾಗ್ಗೆ ಖಾಲಿ ಮಾಡುವ ಸಮಸ್ಯೆಯೂ ಇಲ್ಲ. ಜೊತೆಗೆ ಕಸದಬುಟ್ಟಿಗಳು ದುವಾ೯ಸನೆ ಬೀರುವ ಪ್ರಮೇಯವೂ ಇಲ್ಲ. ಭಾರತದಲ್ಲಿ ಸಾವ೯ಜನಿಕ ಸ್ಥಳಗಳಲ್ಲಿ ಇಂಥಕಸದಬುಟ್ಟಿಗಳನ್ನು ಅಳವಡಿಸಿದರೆ ತ್ಯಾಜ್ಯ ವಿಲೇವಾರಿ ಸುಲಭವಾಗಬಹುದು.

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು