Posts

Showing posts from April, 2011

ಸೂಕ್ಷ್ಮದತ್ತ ಹೊರಟರೆ ಅದು ಸೃಷ್ಟಿ ಮೂಲವಲ್ಲ!

Image
ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಲ್ಲಿ ನಡೆಸಿದ ಘರ್ಷಣೆಯಿಂದ ಹಿಗ್ಸ್ ಬೋಸಾನ್ ಗಳನ್ನು ವೀಕ್ಷಿಸಲು, ಅವುಗಳ ಗುಣನಡತೆಗಳನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಸಾಧ್ಯವಾಗಿದೆ ಎಂಬುದು ನಿಜ. ಹಾಗಂತ ಇದನ್ನೇ ಸೃಷ್ಟಿ ಮೂಲದ ಪತ್ತೆ ಎನ್ನಲಾಗದು. ಯಾವ ಕಣಗಳನ್ನೇ ಆಗಲಿ ಎಷ್ಟೇ ಚಿಕ್ಕದಾಗಿ ಒಡೆಯುತ್ತಾ ಹೋದರೂ ಅದು ಮತ್ತಷ್ಟು ಚಿಕ್ಕ ಕಣಗಳನ್ನು ಕೊಡುತ್ತದೆ. ಇದನ್ನೇ ಮುಂದುವರಿಸಿದರೆ ಹೋಗುವುದು ಇನ್ಫಿನಿಟಿಯತ್ತ. ಅಂದರೆ ಅನಂತದ ಕಡೆಗೆ. ಆ ಅನಂತವನ್ನು ತಲುಪುವತ್ತ ವೈಜ್ಞಾನಿಕ ಜಗತ್ತು ಗಮನ ಹರಿಸಿದರೆ ಸೃಷ್ಟಿ ರಹಸ್ಯದ ಅರಿವು ದೊರಕೀತು.  ಸೃ ಷ್ಟಿ- ಇದುವರೆವಿಗೂ ವಿಜ್ಞಾನಿಗಳ ಅರಿವಿಗೆ ನಿಲುಕದೇ ಇರುವಂಥ ವಿಶೇಷ ಕ್ರಿಯೆ. ಈ ಮಹಾನ್ ಕ್ರಿಯೆಯ ಒಳಗಣ ಹೂರಣವನ್ನು ಅರಿತುಕೊಳ್ಳುವ ಪ್ರಯತ್ನ ವೈಜ್ಞಾನಿಕ ಜಗತ್ತಿನಲ್ಲಿ ಹಲವು ದಶಕಗಳಿಂದ ನಡೆಯುತ್ತಿದೆ. ಅಂಥ ಪ್ರಯತ್ನಗಳ ಪೈಕಿ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಲ್ಲಿ ಮಹಾಸ್ಫೋಟವನ್ನು ಪುನರ್ಸೃಷ್ಟಿಸುವ ಮೂಲಕ ಸೃಷ್ಟಿ ಕ್ರಿಯೆಯ ರಹಸ್ಯ ಭೇದಿಸುವ ಪ್ರಯತ್ನ ಅತಿ ಮುಖ್ಯವಾದುದು. ಮಹಾನ್ ಕ್ರಿಯೆಯೊಂದರ ಮೂಲವನ್ನು ಶೋಧಿಸುತ್ತಾ ಹೊರಟ ಈ ಪ್ರಯತ್ನವೀಗ ಮಹತ್ವದ ಘಟ್ಟವನ್ನು ತಲುಪಿದೆ. ಜಗತ್ತಿನಲ್ಲೇ ಪ್ರಪ್ರಥಮವಾಗಿ ಅತ್ಯಂತ ತೀಕ್ಷ್ಣವಾದ, ಅತಿ ವೇಗದ ಕಿರಣಗಳನ್ನು ಹೊಮ್ಮಿಸುವಲ್ಲಿ ಸಫಲವಾಗಿದೆ. ಆದರೆ, ಇದನ್ನೇ ಸೃಷ್ಟಿ ಮೂಲ ಎಂದು ಕೆಲವರು ಬಣ್ಣಿಸಲು ಹೊರಟಿದ್ದಾರೆ. ಕೆಲವೊಂದು ಮಾಧ್ಯಮಗಳು ಕೂಡಾ ಸೃಷ್ಟಿ

ಕ್ರೀಡಾಳುಗಳ `ಸಡತ್ ಡೆತ್'ಗೆ ಸಿಕ್ಕಿದೆ ಪರಿಹಾರ!

Image
* ಇಸ್ರೇಲ್ ನ ಸಂಶೋಧಕರಿಂದ ಸಮಸ್ಯೆಯ ಮೂಲ ಪತ್ತೆ * ಮೊದಲೇ ಚಿಕಿತ್ಸೆ ಪಡೆದರೆ ಕ್ರೀಡಾಳು ಮೈದಾನದಲ್ಲೇ ಸಾಯುವ ಪ್ರಸಂಗ ಬರದು 2004 ರ ಡಿಸೆಂಬರ್ 5ನೇ ತಾರೀಕು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಫೂಟ್ಬಾಲ್ ಪಂದ್ಯ ನಡೆಯುತ್ತಿತ್ತು. ಅತ್ಯಂತ ಕುತೂಹಲದ ಘಟ್ಟದಲ್ಲಿ ಪಂದ್ಯ ಪೈಪೋಟಿಯಿಂದ ಸಾಗುತ್ತಿದ್ದಾಗ ಗೋವಾದ ಡೆಂಪೋ ಸ್ಪೋರ್ಟ್ಸ್  ಕ್ಲಬ್ ಪರ ಆಡುತ್ತಿದ್ದ ಕ್ರಿಸ್ಟಿಯಾನೋ ಡಿ ಲಿಮಾ (ಕ್ರಿಸ್ಟಿಯಾನೋ ಜೂನಿಯರ್) ಏಕಾಏಕಿ ಕುಸಿದು ಬಿದ್ದ. ಇದಕ್ಕೆ ನೆಪ ಎದುರಾಳಿ ಮೋಹನ್ ಬಗಾನ್ ತಂಡದ ಗೋಲ್ ಕೀಪರ್ ಗೆ ಡಿಕ್ಕಿ ಹೊಡೆದದ್ದು. ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಕೊನೆಯುಸಿರೆಳೆದಿದ್ದ ಕ್ರಿಸ್ಟಿಯಾನೋ. ಕ್ರಿಸ್ಟಿಯಾನೋ ಸಾವಿಗೆ ಎದುರಾಳಿ ಆಟಗಾರನಿಗೆ ಡಿಕ್ಕಿ ಹೊಡೆದದ್ದು ಕಾರಣವಲ್ಲ. ಆತನಿಗೆ `ಸಡನ್ ಡೆತ್ ಸಿಂಡ್ರೋಮ್' ಇತ್ತು. ಈ ಘಟನೆ ರಾಜ್ಯದ ಕ್ರೀಡಾಪ್ರೇಮಿಗಳ ಮನಸ್ಸಿನಿಂದ ಇನ್ನೂ ಮಾಸಿರಲಿಕ್ಕಿಲ್ಲ. ಇಂಥ ಘಟನೆಗಳು ಫೂಟ್ಬಾಲ್ ಕ್ಷೇತ್ರದಲ್ಲಿ ಹಲವಾರು. ಆಥ್ಲೀಟ್  ಗಳು  ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪುವ ಘಟನೆಗಳು ಪ್ರತಿ ವರ್ಷವೂ ನಡೆಯುತ್ತವೆ. ಈ ರೀತಿ ಕ್ರೀಡಾಳು ಮೃತಪಟ್ಟರೆ `ಸಾವಿಗೆ ಹೃದಯಾಘಾತ ಕಾರಣ' ಎಂಬ ವರದಿ ವೈದ್ಯರಿಂದ ಬರುತ್ತದೆ. ಸ್ಪಷ್ಟ ಕಾರಣ ಮತ್ತು ಕ್ರೀಡಾಳುಗಳು ಈ ರೀತಿ ಆಘಾತಕಾರಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚುತ್ತಿರುವುದು ಮಾತ್ರ ಇದುವರೆಗೆ ರಹಸ್ಯವಾಗುಳಿದಿತ್ತು. ಇದೀಗ ಅದನ್ನು ಭೇದಿಸು

ಏನಿಲ್ಲಾ ಏನಿಲ್ಲಾ ಎನಬೇಡಿ ವೆನಿಲ್ಲಾಕ್ಕೆ ಬೆಲೆ ಬರುತ್ತೆ!

Image
* ವೆನಿಲ್ಲಾ ಕೃಷಿ ಸಮಸ್ಯೆ ನಿವಾರಣೆಗೆ ಅಂಗಾಂಶ ಕೃಷಿಯ ಬಲ * ಹೊಸ ತಳಿಯ ಸೃಷ್ಟಿ, ಪರಾಗಸ್ಪರ್ಶ ಅಧಿಕ ಫಲಪ್ರದ ವೆನಿಲ್ಲಾ ಗಿಡ ನೆಟ್ಟವರೆಲ್ಲಾ `ಏನಿಲ್ಲಾ, ಏನಿಲ್ಲಾ' ಅಂತ ನೊಂದುಕೊಂಡರು. ಆದರೆ ವೆನಿಲ್ಲಾಕ್ಕೆ ಮತ್ತೆ ಬೇಡಿಕೆ ಬರಲಾರಂಭಿಸಿದೆ. ಪ್ರಸ್ತುತ ವೆನಿಲ್ಲಾ ಧಾರಣೆ ಹಸಿ ಕೋಡು ಕೆ.ಜಿ.ಗೆ 200 ರು. ಮತ್ತು ಒಣ ಕೋಡು ಕೆ.ಜಿ.ಗೆ 600-700 ರು. ಇದೆ. ಇದರಲ್ಲಿ ಅಧಿಕ ಪಾಲು ಕೃಷಿ ವೆಚ್ಚಕ್ಕೇ ಹೋಗುತ್ತದೆ. ಸಂಶೋಧಕರ ಪ್ರಯತ್ನ ಫಲಿಸಿದ್ದೇ ಆದಲ್ಲಿ ಈ ಧಾರಣೆ ದುಪ್ಪಟ್ಟಾಗುವುದಂತೂ ಖಂಡಿತ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.   ಬತ್ತ ನಂಬಿದರೆ ಜೀವನವೇ ಬತ್ತಿ ಹೋದೀತು, ಅಡಕೆ, ತೆಂಗಿಗೆ  ಸಾವಿರ ಸಮಸ್ಯೆ, ಯಾವ ಕೃಷಿಯೂ ಹೊಟ್ಟೆ ತುಂಬುವಷ್ಟು ಆದಾಯ ಕೊಡುತ್ತಿಲ್ಲ ಎಂಬ ಕೊರಗು ಕಾಡಲಾರಂಭಿಸಿದಾಗಲೇ ರೈತನಿಗೆ, ಕೃಷಿಕನಿಗೆ ಆಪದ್ಭಾಂಧವನಾಗಿ ಆಗಮಿಸಿದ್ದು ವೆನಿಲ್ಲಾ. ಇದು ರೈತನ ಮಿತ್ರನಾದದ್ದು ಮಾತ್ರವಲ್ಲ, ರೈತನನ್ನು ಒಂದರ್ಥದಲ್ಲಿ ಸಂಪೂರ್ಣವಾಗಿ ತನ್ನ ಸ್ವಾಧೀನ ಮಾಡಿಕೊಂಡಿತು. ಬೇಡಿಕೆ ಬಂತು ಅಂತ ಎಲ್ಲಾ ರೈತರೂ ವೆನಿಲ್ಲಾ ಬೆಳೆಯಲಾರಂಭಿಸಿದಾಗಲೇ ಕೈ ಕೊಟ್ಟಿತು ನೋಡಿ. ವೆನಿಲ್ಲಾ ಗಿಡ ನೆಟ್ಟವರೆಲ್ಲಾ `ಏನಿಲ್ಲಾ, ಏನಿಲ್ಲಾ' ಅಂತ ನೊಂದುಕೊಂಡರು. ಹಠಾತ್ತನೆ ಭಾರತೀಯ ಕೃಷಿಕ್ಷೇತ್ರಕ್ಕೆ ಕಾಲಿಟ್ಟಿದ್ದ ವೆನಿಲ್ಲಾ ಅಷ್ಟೇ ವೇಗದಲ್ಲಿ ತೋಟಗಳಿಂದ ಮಾಯವಾಯಿತು ಎಂಬುದಂತೂ ನಿಜ. ಆದರೆ ವೆನಿಲ್ಲಾಕ್ಕೆ ಮತ

`ಮಮ್ಮಿ'ಗಳು ನೆನಪಿಸಿದ ಆಯುರ್ವೇದ ಸಂಹಿತೆಗಳು....

Image
ಪಿರಮಿಡ್ ಗಳೊಳಗೆ ಕೆಡದಂತೆ ಇರಿಸಲ್ಪಟ್ಟ ಶವಗಳನ್ನು ಹೊರತೆಗೆದು ಅವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ವಿವಿಧ ರೀತಿಯ ಪರೀಕ್ಷೆಗಳಿಗೆ ಒಳಪಡಿಸಿದಾಗ ಚಕಿತರಾದದ್ದು ಸ್ವತಃ ವಿಜ್ಞಾನಿಗಳು. ಅದಕ್ಕೆ ಕಾರಣೀಭೂತವಾದ್ದು ಮಲೇರಿಯಾ, ಮಧುಮೇಹ, ಹೃದ್ರೋಗ ಮೊದಲಾದ ರೋಗಗಳು. ಹಾಗೆ ನೋಡಿದರೆ ನಮ್ಮ ಋಷಿ ಮುನಿಗಳೇ ಹಲವಾರು ವಿಧದ ರೋಗಗಳು ಮತ್ತು ಅವುಗಳ ಚಿಕಿತ್ಸಾ ವಿಧಾನಗಳನ್ನು ವಿವರಿಸಿದ್ದಾರೆ. ಕಾಶ್ಯಪ ಸಂಹಿತೆ, ಚರಕ ಸಂಹಿತೆ, ಸುಶ್ರುತ ಸಂಹಿತೆ, ವಾಗ್ಭಟನ ಅಷ್ಟಾಂಗ ಹೃದಯಂ... ಹೇಗೆ ಹಲವು ಸಂಹಿತೆಗಳು ಹಲವು ರೋಗಗಳ ವಿಚಾರಗಳನ್ನು ತೆರೆದಿಟ್ಟಿವೆ. ನಾವು ಮಾತ್ರ ಆ ಸಂಹಿತೆಗಳನ್ನು ಮುಚ್ಚಿಟ್ಟಿದ್ದೇವೆ. ವಿಜ್ಞಾನಲೋಕದಲ್ಲಿ ವಿಶೇಷವಾಗಿ ಚರ್ಚೆಗೆ ಒಳಗಾಗುತ್ತಿರುವ, ವಿಜ್ಞಾನ ಕ್ಷೇತ್ರದಲ್ಲಿ ಹೊಸ ಚಿಂತನಧಾರೆಯನ್ನು ಮೂಡಿಸಬಹುದಾದ ವಿಚಾರವೊಂದನ್ನು ಈ ಬಾರಿ ತೆರೆದಿಡಬೇಕು ಅಂತ ಯೋಚಿಸುತ್ತಿದ್ದಾಗಲೇ ಈಜಿಫ್ಟ್ ನ ಪಿರಮಿಡ್  ಗಳ ಒಳಗಡೆ ಬೆಚ್ಚಗೆ, ಶಾಶ್ವತವಾಗಿ ಮಲಗಿರುವ ಮಮ್ಮಿಗಳು ಫಕಫಕನೆ ನಕ್ಕವು! ಸಾವಿರಾರು ವರ್ಷಗಳಷ್ಟು ಹಳೆಯದಾಗಿರುವ ಆ ಮಮ್ಮಿಗಳಲ್ಲೊಂದಾದರೂ ಹೊಸ ವಿಚಾರ ಇರಲೇಬೇಕೆಂಬ ಅಂದಾಜು ಸಿಕ್ಕಿದ್ದು ಆಗಲೇ. ಅದೇ ತುಡಿತದೊಂದಿಗೆ ಒಂದಿಷ್ಟು ಕೆದಕಿ ನೋಡಿದಾಗ ಮಮ್ಮಿಗಳ ಬಗ್ಗೆ ನಡೆದಿರುವ ಕೆಲವೊಂದು, ಆದರೆ ಅತ್ಯಂತ ಮಹತ್ವ ಎನ್ನಬಹುದಾದಂಥ, ವೈಜ್ಞಾನಿಕ ಸಂಶೋಧನೆಗಳು, ಮಮ್ಮಿಗಳೇ ಎದ್ದು ಕುಳಿತಂತೆ, ಥಟಕ್ಕನೆ ಕಣ್ಣ ಮುಂದೆ ಬಂದವ

ನದಿ ಶುದ್ಧೀಕರಣಕ್ಕೆ ಬಾಳೆಹಣ್ಣಿನ ಸಿಪ್ಪೆ!

Image
ಬಾಳೆಹಣ್ಣಿನಿಂದ ವೈನ್ ತಯಾರಿಸಲಾಗುತ್ತಿದೆ. ಚರ್ಮದ ಮೇಲಿನ ಕಲೆಗಳನ್ನು ನಿವಾರಿಸಲು ಬಳಸಲಾಗುತ್ತಿದೆ. ಬೂಟ್ಗಳನ್ನು ಪಾಲಿಶ್ ಮಾಡುವುದಕ್ಕೆ, ಬೆಳ್ಳಿಯ ಹೊಳಪನ್ನು ಹೆಚ್ಚಿಸುವುದಕ್ಕೆ ಕೂಡಾ ಬಳಕೆಯಾಗುತ್ತಿದೆ. ಇಷ್ಟಕ್ಕೇ ಮುಗಿಯುತ್ತದೆಯೇ? ಧೂಮಪಾನ ಸೇವನೆಯ ಚಟ ಇರುವವರನ್ನು ಆ ಚಟದಿಂದ ತಪ್ಪಿಸುವ ಸಲುವಾಗಿ ಬಾಳೆಹಣ್ಣಿನ ಸಿಪ್ಪೆಯ ನಾರುಗಳನ್ನು ಒಣಗಿಸಿ ಪುಡಿ ಮಾಡಿ ಸೇವಿಸುವುದಕ್ಕೆ ಕೊಡಲಾಗುತ್ತದೆ. ಇದರಿಂದಾಗಿ ಧೂಮಪಾನಿ ನಿಧಾನಕ್ಕೆ ತನ್ನ ಚಟವನ್ನು ಕಡಿಮೆ ಮಾಡಿಕೊಳ್ಳುತ್ತಾ ಬರುತ್ತಾನೆ. ಇಷ್ಟೊಂದು ವಿಧದಲ್ಲಿ ಬಳಕೆಯಾಗುತ್ತಿರುವ ಬಾಳೆಹಣ್ಣು ಇದೀಗ ನದಿ ನೀರಿನ ಶುದ್ಧಿಗೂ ಉಪಕಾರಿ. ಜೀವಜಲ ಜೀವವನ್ನೇ ಹರಣ ಮಾಡುವ ಮಟ್ಟಕ್ಕೆ ಬಂದಿದೆ. `ಪುಣ್ಯರಾಶಿಯನ್ನೇ ಮೈದುಂಬಿಕೊಂಡಿವೆ' ಎಂದು ವರ್ಣಿಸಲ್ಪಡುತ್ತಿದ್ದ ನದಿಗಳಲ್ಲಿ ಈಗ ಹರಿಯುವುದು ಬರೀ ಪಾಪ ರಾಶಿ, ಅರ್ಥಾತ್  ತ್ಯಾಜ್ಯ ನೀರು. ಈ ನದಿಗಳನ್ನು ಹೇಗಾದರೂ ಶುಚಿಗೊಳಿಸಬೇಕು ಅಂತ ಜಗತ್ತಿನ ವಿವಿಧ ಸರ್ಕಾರಗಳು ಕೋಟಿಗಟ್ಟಲೆ ಖರ್ಚು ಮಾಡುತ್ತಿವೆ. ನದಿಗಳು ಮಾತ್ರ ಶುದ್ಧವಾಗುತ್ತಿಲ್ಲ! ಘನತ್ಯಾಜ್ಯಗಳನ್ನು ನದಿ ನೀರಿಗೆ ಬಿಡುವ ಚಾಳಿಯನ್ನು ಜನರು, ಕೈಗಾರಿಕೆಗಳು ನಿಲ್ಲಿಸುತ್ತಿಲ್ಲ, ಆ ತ್ಯಾಜ್ಯಗಳು ನದಿ ನೀರಿನಿಂದ ಪ್ರತ್ಯೇಕಗೊಳ್ಳುತ್ತಲೂ ಇಲ್ಲ. ಘನತ್ಯಾಜ್ಯಗಳನ್ನು ಪ್ರತ್ಯೇಕಿಸುವುದಕ್ಕೂ ಅಧಿಕ ವೆಚ್ಚವಾಗುತ್ತದೆ. ಇಂತಿರುವಾಗ ನದಿನೀರಿನಿಂದ ಘನತ್ಯಾಜ್ಯಗಳನ್ನು ಪ್ರತ್ಯೇಕಿಸುವ

ಮೂತ್ರನಾಳದ ಸಮಸ್ಯೆಗೆ ಅಂಗಾಂಶ ಕಸಿಯ ಪರಿಹಾರ

Image
* ರೋಗಿಗಳ ಜೀವಕೋಶಗಳನ್ನೇ ಪಡೆದು ಮೂತ್ರನಾಳ ಸೃಷ್ಟಿ * ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿ ರೋಗಿಯ ದೇಹಕ್ಕೆ ಕಸಿ * ಮುಟ್ಟು ನಿಲ್ಲುವ ಹಂತ ತಲುಪಿದ ಮಹಿಳೆಯರಿಗೆ ಸಹಕಾರಿ ಜ ಗತ್ತಿನಲ್ಲಿ ಲಕ್ಷಾಂತರ ಜನ ಮೂತ್ರನಾಳದ (ಯೂರೆಥ್ರಾ) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವೊಂದು ರೋಗಿಗಳಲ್ಲಿ ಆಶಾಭಾವನೆ ಉದಿಸುವಲ್ಲಿ ಸಾಕಾರವಾಗಿದೆ. ಮೂತ್ರನಾಳದ ಸೋಂಕು ತಗುಲಿರುವ ವ್ಯಕ್ತಿಯ ಜೀವಕೋಶಗಳನ್ನು ಪಡೆದು ಅದನ್ನು ಅಂಗಾಂಶ ಕೃಷಿ ವಿಧಾನದ ಮೂಲಕ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ನಂತರ ಇದನ್ನು ರೋಗಿಯ ದೇಹಕ್ಕೆ ಕಸಿ ಮಾಡಲಾಗುತ್ತದೆ. ಬೆಂಗಳೂರು: ಮುಟ್ಟು ನಿಲ್ಲುವ ಹಂತ ಬಂದಿದೆ. ಮೂತ್ರನಾಳ ಸಿಕ್ಕಾಪಟ್ಟೆ ನೋವು. ಮೂತ್ರ ವಿಸರ್ಜನೆಗೆ ಸಮಸ್ಯೆಯಾಗುತ್ತಿದೆ.... ಪ್ರಾಯ ಆಗ್ತಾ ಬಂದ ಹಾಗೇ ಮೂತ್ರ ಮಾಡುವುದಕ್ಕೂ ಸಮಸ್ಯೆಯೇ? `ಅಜ್ಜನಿಗೆ ಮೂತ್ರ ಮಾಡುವುದಕ್ಕೆ ಎಷ್ಟು ಹೊತ್ತು? ಬೇಗ ಮೂತ್ರ ಮಾಡಿ ಬರದಿದ್ದರೆ ನಮಗೆಲ್ಲ ಟೆನ್ಶನ್ ಆಗೋದಿಲ್ವೆ? ಅಂತ ಮಕ್ಕಳಿಂದ, ಮೊಮ್ಮಕ್ಕಳಿಂದ ನಿಕೃಷ್ಟಕ್ಕೊಳಗಾಗಬೇಕಾಯಿತಲ್ಲ!' ಯಾಕಿಂಥಾ ಕಷ್ಟ...! ನನ್ಗೆ  ಮೂತ್ರ ಮಾಡೋದಕ್ಕೆ ಯಾಕೆ ಕಷ್ಟ ಆಗುತ್ತೆ? ನನ್ನ ಸಮಸ್ಯೆ ಯಾರ ಜೊತೆ ಹೇಳಿಕೊಳ್ಳಲಿ?     ಇಂಥ ನೋವುಗಳನ್ನು ಪ್ರತಿದಿನವೂ ಅನುಭವಿಸುವವರಿದ್ದಾರೆ. ಸಮಸ್ಯೆಯನ್ನು ಹೇಳಿಕೊಳ್ಳಲಾಗದೆ ವಿಲಿವಿಲಿ ಒದ್ದಾಡುತ್ತಾರೆ. ಜಗತ್ತಿನಲ್ಲಿ ಲಕ್ಷಾಂತರ ಜನ

ತ್ಯಾಜ್ಯ ನೀರಿನಲ್ಲಿದೆ ವಿದ್ಯುತ್!

Image
ಯೀ ಸೂಯಿ ನೇತೃತ್ವದ ಸಂಶೋಧಕರ ತಂಡ ಒಂದು ವಿಶೇಷವಾದ ಬ್ಯಾಟರಿಯನ್ನು ಅಭಿವೃದ್ಧಿಪಡಿಸಿದೆ. ಸಿಹಿ ನೀರು ಮತ್ತು ಉಪ್ಪು ನೀರುಗಳಲ್ಲಿರುವ ಕ್ಷಾರತೆಯ ವ್ಯತ್ಯಾಸವನ್ನು ವಿದ್ಯುತ್ ರೂಪಕ್ಕೆ ಪರಿವರ್ತಿಸುವುದು ಈ ಬ್ಯಾಟರಿಯ ವಿಶೇಷ ಗುಣ. ತ್ಯಾಜ್ಯ ನೀರಿನಿಂದಲೂ ಇದೇ ರೀತಿ ವಿದ್ಯುತ್ ಉತ್ಪಾದನೆ ಮಾಡುವುದು ಸಾಧ್ಯವಿದೆ. ಉಪ್ಪು ನಿರಿನಲ್ಲಿರುವಂತೆ ತ್ಯಾಜ್ಯ ನೀರಿನಲ್ಲಿಯೂ ಅಯಾನ್ ಗಳ ಪ್ರಮಾಣ ಹೆಚ್ಚಿರುತ್ತದೆ. ಇದನ್ನೇ ಲಾಭದಾಯಕವಾಗಿಸಿಕೊಂಡರೆ ಜಗತ್ತಿನಲ್ಲಿ ಬಳಕೆಯಾಗುತ್ತಿರುವ ವಿದ್ಯುತ್ನ ಶೇ.50ರಷ್ಟು ವಿದ್ಯುತ್ತನ್ನು ತ್ಯಾಜ್ಯ ನೀರಿನಿಂದಲೇ ಉತ್ಪಾದನೆ ಮಾಡುವುದು ಸಾದ್ಯವಿದೆ.   ಒಂದೆಡೆ ಜಗತ್ತು ವಿದ್ಯುತ್ ಅಭಾವದಿಂದ ಕೊರಗುತ್ತಿದ್ದರೆ ಇನ್ನೊಂದೆಡೆ ಈ ಸಮಸ್ಯೆಯನ್ನು ಹೋಗಲಾಡಿಸಲು ಒಂದಿಲ್ಲೊಂದು ಪ್ರಯತ್ನಗಳು ನಡೆಯುತ್ತಲೇ ಇವೆ. ಈಗಾಗಲೇ ಹಲವಾರು ರೀತಿಯ ಪ್ರಯತ್ನಗಳು, ಸಂಶೋಧನೆಗಳು ನಡೆದಿವೆ. ಇದೀಗ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಮತ್ತೊಂದು ದಾರಿ ಗೋಚರಿಸಿದೆ. ಇದರ ಹೊಳಹು ಮೂಡಿದ್ದು ಸಮುದ್ರದಲ್ಲಿ. ಆದರೆ ತ್ಯಾಜ್ಯ ನೀರಿಗೂ ಇದೇ ತಂತ್ರವನ್ನು ಅಳವಡಿಸುವ ಸಾದ್ಯತೆಯ ಮಿಂಚು ಮಾಡಿರುವುದು ಭವಿಷ್ಯದಲ್ಲಿ ವಿದ್ಯುತ್ ಅಭಾವ ಕೊನೆಗಾಣಬಹುದೇ ಎಂಬ ಆಶಾಭಾವ ಮೂಡಿಸಿದೆ.     ಹಾಗಿದ್ದರೆ ಈ ನೂತನ ತಂತ್ರಜ್ಞಾನ ಹೇಗಿರಬಹುದು? ಜಗತ್ತನ್ನು ವಿದ್ಯುತ್ ಸಮಸ್ಯೆಯಿಂದ ಪಾರು ಮಾಡಲು ಹಲವಾರು ವಿಜ್ಞಾನಿಗಳು, ಸಂಶೋಧಕರು ಪಣತೊಟ