ನಮ್ಮ ಸೌರಮಂಡಲ ಲಯವಾಗುತ್ತಿದೆಯೇ?

ಪ್ರಳಯ ಆಗಿಯೇ ಬಿಟ್ಟಿತು ಎಂಬ ಮನಸ್ಥಿತಿಗೆ ಜನ ತಲುಪಿದ್ದಾರೆ. ಆದರೆಡೆಯಲ್ಲಿಯೂ ಸೌರಲೋಕ ಅಂತ್ಯವಾಗುತ್ತದೆಯೇ? ಪ್ರಳಯ ಎಂಬುದು ನಿಜವೇ? ನಮ್ಮ ಸೌರಮಂಡಲದ ಅಂತ್ಯದ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹೇಳಿದ್ದು ಲೀಸೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು. ಸಾವು ಎಂದರೆ ಅಂತ್ಯವಲ್ಲ. ಅದು ಕೇವಲ ರೂಪಾಂತರ ಎನ್ನುತ್ತವೆ ಉಪನಿಷತ್ತುಗಳು. ಅದ್ಯಾವಾಗ ಪ್ರಳಯದ ಬಗ್ಗೆ ಮಾತುಗಳು ಜಿಗಿದೆದ್ದವೋ, ಮಾಧ್ಯಮಗಳಲ್ಲೆಲ್ಲ ಬರೇ ಪ್ರಳಯದ್ದೇ ಸುದ್ದಿಗಳು ತುಂಬಿಕೊಂಡವೋ ಆಗಲೇ ಜನ ಭೀತಿಗೊಳಗಾಗತೊಡಗಿದರು. ಇದರ ನಡುವೆಯೇ ನಮ್ಮ ಸೌ ರಲೋಕ ಅಂತ್ಯದತ್ತ ನಡೆಯುತ್ತಿದೆ ಎಂಬ ಸಂಶೋಧನೆಯೊಂದು ವೈಜ್ಞಾನಿಕ ವಲಯದಲ್ಲಿ ನಡೆದಿದ್ದು, ಅದು ಜನರಲ್ಲಿ ಇನ್ನಷ್ಟು ಆತಂಕಗಳನ್ನು ಸೃಷ್ಟಿಸಿದೆ. ಪ್ರಳಯ ಆಗಿಯೇ ಬಿಟ್ಟಿತು ಎಂಬ ಮನಸ್ಥಿತಿಗೆ ಜನ ತಲುಪಿದ್ದಾರೆ. ಆದರೆಡೆಯಲ್ಲಿಯೂ ಸೌರಲೋಕ ಅಂತ್ಯವಾಗುತ್ತದೆಯೇ? ಪ್ರಳಯ ಎಂಬುದು ನಿಜವೇ? ಎಲ್ಲವೂ ನಾಶವಾಗುತ್ತದೆಯೇ? ಎಂಬೆಲ್ಲ ಪ್ರಶ್ನೆಗಳು ಜನರನ್ನು ಕಾಡುತ್ತಿವೆ. ಒಂದೊಂದು ಸಂಶೋಧನೆಯಾದಾಗಲೂ ಅದು ಆತಂಕವನ್ನು ಹುಟ್ಟಿಸುವುದು ನಿಜ. ಆದರೆ ಆ ಸಂಶೋಧನೆಯ ಆಳವನ್ನು, ಅದರಲ್ಲಿರುವ ಸತ್ವವನ್ನು ಅರ್ಥ ಮಾಡಿಕೊಂಡು ನಂತರ ನಮ್ಮ ನಿರ್ಧಾರವನ್ನು ತೆಗೆದುಕೊಳ್ಳಬೇಕೇ ಹೊರತು ಯಾರೋ ಸಂಶೋಧನೆ ಮಾಡಿದ್ದಾರೆ ಎಂದ ತಕ್ಷಣ ಅದು ನಿಜವಾಗಿ ಬಿಡುವುದಿಲ್ಲವಲ್ಲ? ಮೊದಲಿಗೆ ನಿಜವೆಂದು ನಂಬಿ ನಂತರ ಅದು ಸುಳ್ಳೆಂದು ಸಾಬೀತಾದ ಮತ್ತು ಮೊದಲಿಗೇ ಅಡ್ಡಿ, ವ...