ಪುರುಷರಿಗೆ ಗರ್ಭನಿರೋಧಕ: ಮತ್ತೊಂದು ಅವಾಂತರವೇ?

ಪುರುಷರಿಗಾಗಿಯೇ ವಿಶೇಷ ಗರ್ಭನಿರೋಧಕ ಗುಳಿಗೆಗಳನ್ನು  ಕೊಲಂಬಿಯಾ ಯೂನಿವರ್ಸಿಟಿಯ ವೈದ್ಯ ಸಂಶೋಧಕರು ಕಂಡು ಹಿಡಿದಿದ್ದಾರೆ. ಇದು ಜಗತ್ತಿನ ಪ್ರಥಮ ಸ್ಟಿರಾಯಿಡ್ ರಹಿತ ಗರ್ಭನಿರೋಧಕ ಗುಳಿಗೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ. ಆದರೆ ಗರ್ಭನಿರೋದಕ್ಕೆ ಸಂಬಂಧಿಸಿದಂತೆ ನಡೆಯುವ ಒಂದೊಂದು ಸಂಶೋಧನೆಗಳು ಕೂಡಾ ಯುವ ಸಮುದಾಯವನ್ನು ಪ್ರಚೋದಿಸಿದಂತಾಗುವುದಿಲ್ಲವೇ? ಈ ವಿಚಾರವಾಗಿ ಗಟ್ಟಿ ಚಿಂತನೆಯ ಅಗತ್ಯವಿದೆ. 

ಬೇಕು ಬೇಕಾದ ವಿಷಯಗಳನ್ನು ತಿಳಿದುಕೊಳ್ಳು ಟಿವಿ, ಇಂಟರ್ನೆಟ್. ತಿಳಿದುಕೊಂಡ ವಿಷಯಗಳ ಬಗ್ಗೆ ಪ್ರಾಕ್ಟಿಕಲ್ ಜ್ಞಾನ (?) ಸಂಪಾದಿಸುವ ಹುಚ್ಚು. ಜೊತೆಗೆ ಹರೆಯದ ಆಕರ್ಷಣೆ. ಈ ಕ್ಷಣದಲ್ಲಿ ಸಂಗಾತಿ ಬೇಕೇ ಬೇಕು ಎಂಬ ದಾಹ, ನಂತರದ ಕ್ಷಣದಲ್ಲಿ ಏನೇ ಆದರೂ ಚಿಂತಿಲ್ಲ. ಹಾಗೂ ಒಂದುವೇಳೆ ದಾಹ ಹೆಚ್ಚಾದರೂ ಸಮಸ್ಯೆಯಾಗದಂತ ಸಲಕರಣೆಗಳು, ಗುಳಿಗೆಗಳು ಇರುವಾಗ ಚಿಂತೆ ಮಾಡೋದಕ್ಕೆ ಯಾರು ಹೋಗ್ತಾರೆ? 18 ವರ್ಷಕ್ಕಿಂತ ಚಿಕ್ಕವರಿಗೆ ಇವುಗಳನ್ನೆಲ್ಲ ಕೊಡಬಾರದು ಎಂಬ ಕಾನೂನು ಇದ್ದರೂ ಸಹ `ಕಾನೂನುಗಳು ಇರುವುದೇ ಉಲ್ಲಂಘಿಸುವುದಕ್ಕೆ' ಎಂದು ತಿಳಿದುಕೊಂಡವರೇ ಹೆಚ್ಚು. ಅದರಲ್ಲೂ ಗರ್ಭನಿರೋಧಕ ಗುಳಿಗೆಗಳು ಆ ಸಮಯದಲ್ಲಿ `ಅದ್ಭುತ' ಎನ್ನಿಸಿದರೂ ಅದು ಉಂಟುಮಾಡುವ ಅಡ್ಡಪರಿಣಾಮಗಳನ್ನು ನಿವಾರಿಸಿಕೊಳ್ಳುವುದಕ್ಕೆ ಒಂದು ಜನ್ಮವಂತೂ ಸಾಲದು. ಇಂತಿರುವಾಗ ಪುರುಷರಿಗಾಗಿಯೇ ವಿಶೇಷ ಗರ್ಭನಿರೋಧಕ ಗುಳಿಗೆಗಳನ್ನು  ಕೊಲಂಬಿಯಾ ಯೂನಿವರ್ಸಿಟಿಯ ವೈದ್ಯ ಸಂಶೋಧಕರು ಕಂಡು ಹಿಡಿದಿದ್ದಾರೆ. 
ಈಗಾಗಲೇ ಮಹಿಳೆಯರಿಗಾಗಿ ಇರುವಂಥ ಗರ್ಭನಿರೋಧಕ ಗುಳಿಗೆಗಳ ದುರ್ಬಳಕೆಯಾಗುತ್ತಿದೆ. ಇಂತಿರುವಾಗಲೇ ಪುರುಷರಿಗಾಗಿ ಗರ್ಭನಿರೋಧಕ ಗುಳಿಗೆ ಬಂದಿದೆ ಎಂದರೆ ದುರ್ಬಳಕೆ ಹೆಚ್ಚುವುದಕ್ಕೆ ಪ್ರೋತ್ಸಾಹ ಕೊಟ್ಟಂತಾದೀತೇನೋ ಎಂಬ ಆತಂಕವುಂಟಾಗಿದೆ. ಹದಿಹರೆಯದ ಯುವಕರು ತಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ವಿಫಲರಾಗುತ್ತಿರುವಂಥ ಇಂದಿನ ದಿನಗಳಲ್ಲಿಯೂ ಇಂಥದ್ದೊಂದು ಸಂಶೋಧನೆ ಮನಸ್ಥಿತಿಯನ್ನು ಇನ್ನಷ್ಟು ಜಾಳು ಜಆಳಾಗಿಸದೇ ಇದ್ದೀತೇ? ಇರಲಿ ಯಾವುದಕ್ಕೂ ಸಂಶೋಧನೆಯೇನೆಂಬುದನ್ನು ಮೊದಲು ಅರಿತುಕೊಳ್ಳಬೇಕು. 
ಇದು ಜಗತ್ತಿನ ಪ್ರಥಮ ಸ್ಟಿರಾಯಿಡ್ರಹಿತ ಗರ್ಭನಿರೋಧಕ ಗುಳಿಗೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ. ಪುರುಷರು ಬಳಸಬಹುದಾದಂಥ ಈ ಗುಳಿಗೆ ರೆಟಿನೋಯಿಕ್ ಆಸಿಡ್ ರೆಸೆಪ್ಟರ್ಗಳೊಂದಿಗೆ ಸೇರಿಕೊಂಡು ವೀರ್ಯೋತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತವೆ. ಯಾವಾಗ ಈ ಔಷಧಿಯ ಪ್ರಭಾವ ತಗ್ಗುತ್ತದೆಯೋ ಆಗ ಮತ್ತೆ ವೀರ್ಯೋತ್ಪಾದನೆ ಶುರುವಾಗುತ್ತದೆ. ಪುರುಷ ಸಂತಾನೋತ್ಪತ್ತಿ ಸಾಮಥ್ರ್ಯವನ್ನು ಹೆಚ್ಚಿಸುವಂಥ ಪೋಷಕಾಂಶ ವಿಟಮಿನ್-ಎ. ಇದನ್ನೇ ಆಧಾರವಾಗಿರಿಸಿಕೊಂಡು ಸಂಶೋಧನೆ ನಡೆಸಿದ್ದರು ವಿಜ್ಞಾನಿಗಳು. ಚರ್ಮರೋಗ ಮತ್ತು ಸುಟ್ಟಗಾಯಗಳಿಗೆ ಚಿಕಿತ್ಸೆ ಕೊಡುವಂಥ ಪ್ರಯತ್ನಕ್ಕೆ ಬಳಸಿಕೊಳ್ಳಲಗುತ್ತಿದ್ದ ಸಂಯುಕ್ತ ರಾಸಾಯನಿಕವನ್ನು ಈ ಪ್ರಯೋಗಕ್ಕೆ ಬಳಸಿಕೊಂಡರು. ಈ ಸಂಯುಕ್ತ ರಾಸಾಯನಿಕವು ವೃಷಣಗಳಲ್ಲಿ ವಿವಿಧ ರೀತಿಯ ಬದಲಾವಣೆ ಮಾಡುವುದನ್ನೂ ಕಂಡುಕೊಂಡರು. ಈ ರಾಸಾಯನಿಕ ಸಂಯುಕ್ತವನ್ನು ಚರ್ಮ ರೋಗ ಮತ್ತು ಸುಟ್ಟ ಗಾಯಗಳ ಚಿಕಿತ್ಸೆಗೆ ಬಳಸಿಕೊಂಡರೆ ಪುರುಷರಲ್ಲಿ ಸಂತಾನಹೀನತೆ ಬರುತ್ತದೆ ಎಂದು ತಿಳಿದುಬಂದ ಕಾರಣ ಆ ಸಂಶೋಧನೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಯಾಕೆ ಈ ರಾಸಯನಿಕದಿಂದ ಸಂತಾನಹೀನತೆ ಬರುತ್ತದೆ ಎಂಬ ಬಗ್ಗೆ ಅಷ್ಟೊಂದು ವಿಸ್ತೃತವಾಗಿ ಹೇಳಿಲ್ಲ. ಆದರೆ ಈ ಫಲಿತಾಂಶವನ್ನೇ ಗರ್ಭನಿರೋಧಕ ಗುಳಿಗೆಯ ಸಂಶೋಧನೆ ಬಳಸಿಕೊಂಡಿತು ಡಾ.ಡೆಬ್ರಾ ಜೆ. ವೋಗ್ಮತ್ ಅವರ ತಂಡ.
ಸದ್ಯಕ್ಕೆ  ಈ ಸಂಯುಕ್ತ ರಾಸಾಯನಕವನ್ನು ಅತ್ಯಲ್ಪ ಪ್ರಮಾಣದಲ್ಲಿ ಬೆರೆಸಿ ಗುಳಿಗೆ ತಯಾರಿಸಲಾಗಿದೆ. ಇದಕ್ಕೂ ಕಡಿಮೆ ಪ್ರಮಾಣದ ಸಂಯುಕ್ತ ರಾಸಾಯನಿಕವನ್ನು ಬಳಸಿದರೆ ನಿರೀಕ್ಷಿತ ಪರಿಣಮ ಬೀರುತ್ತದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಈ ರಾಸಾಯನಿಕದ ಅಂಶ ಸ್ವಲ್ಪ ಹೆಚ್ಚಾದರೂ ಅದು ಸಂತಾನೋತ್ಪತ್ತಿ ಸಾಮಥ್ರ್ಯವನ್ನೇ ಕಸಿದುಕೊಳ್ಳುವ ಅಪಾಯವೂ ಇದೆಯಾದ್ದರಿಂದ ಸ್ವಲ್ಪ ಎಚ್ಚರಿರಬೇಕಾಗುತ್ತದೆ. ಅಂದರೆ 1 ಕಿ.ಗ್ರಾಂ ತೂಕದ ದೇಹಕ್ಕೆ 1 ಮಿಲಿಗ್ರಾಂ ರಾಸಾಯನಿಕ ಸಾಕಾಗುತ್ತದೆ.
ಪ್ರಸ್ತುತ ಬಳಸಲಾಗುತ್ತಿರುವ ಎಲ್ಲಾ ರೀತಿಯ ಗರ್ಭನಿರೋಧಕ ಗುಳಿಗೆಗಳು ಅಡ್ಡಪರಿಣಾಮವನ್ನು ಬೀರುವಂಥವಾಗಿದ್ದು, ಅದರಲ್ಲೂ ಪುರುಷರಿಗಾಗಿ ಇರುವಂಥ ಗರ್ಭನಿರೋಧಕ ಗುಳಿಗೆಗಳು ತೀರಾ ಹೆಚ್ಚಾದ ಅಡ್ಡಪರಿಣಾಮ ಉಂಟುಮಾಡುತ್ತವೆ. ಆದರೆ ಹೊಸ ಸಂಶೋಧನೆಗೆ ಬಳಸಲಾಗಿರುವಂಥ ಸಂಯುಕ್ತ ರಾಸಾಯನಿಕದಲ್ಲ ಇಂಥ ಅಡ್ಡ ಪರಿಣಾಮಗಳಿಲ್ಲದಿರುವುದು ಉತ್ತವಾದ ಅಂಶ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ. ಅಲ್ಲದೆ ಅತ್ಯಂತ ಕ್ಷಿಪ್ರವಾಗಿ ಈ ಸಂಯುಕ್ತ ರಾಸಾಯನಿಕವು ವೀರ್ಯೋತ್ಪಾದನೆಯ ಮೇಲೆ ಕಡಿವಾಣ ಹಾಕುತ್ತದೆ. ಹೀಗಾಗಿ ಮಿಲನದ ಕೆಲವೇ ಗಂಟೆ ಮೊದಲು ಇದನ್ನು ಸೇವಿಸದರೂ ಸಾಕು, ನಿರೀಕ್ಷಿತ ಪರಿಣಾಮ ಸಿಗುತ್ತದೆ ಎಂಬುದು ಸಂಶೋಧಕರ ಅಂಬೋಣ.
ಹಾಗಂತ ಈಗಲೇ ಈ ರಾಸಾಯನಿಕವು ಮಾರುಕಟ್ಟೆಗೆ ಬಂದಿಲ್ಲ. ಇದು ಎಲ್ಲಾ ರೀತಿಯಿಂದಲೂ ಸುರಕ್ಷಿತ ಹೌದೋ ಅಲ್ಲವೋ ಎಂಬುದನ್ನು ಇನ್ನಷ್ಟೇ ಪರೀಕ್ಷಿಸಬೇಕಾಗಿದೆ. ಸಂಶೋಧಕರ ಪ್ರಕಾರ ಅಡ್ಡ ಪರಿಣಾಮ ಇಲ್ಲ ಎಂಬುದನ್ನು ಒಪ್ಪಬೇಕಾಗುತ್ತದಾದರೂ ಅದನ್ನು ಪೂರ್ಣವಾಗಿ ಪರಿಶೀಲಿಸದೇ ಮಾನವರಿಗೆ ನೀಡುವಂತಿಲ್ಲ. ಹೀಗಾಗಿ ಇನ್ನಷ್ಟು ಪ್ರಯೋಗಗಳು ನಡೆಯುತ್ತಿವೆ. ಇನ್ನೂ ಒಂದಿ ವಿಚಾರವೆಂದರೆ ಈ ರಾಸಾಯನಿಕವನ್ನು ಸೇವಿಸಿದ ಎಷ್ಟು ಹೊತ್ತಿನವರೆಗೆ ವೀರ್ಯೋತ್ಪಾದನೆ ಸ್ಥಗಿತಗೊಂಡಿರುತ್ತದೆ ಮತ್ತು ಎಷ್ಟು ಹೊತ್ತಿನ ಬಳಿಕ ವೀರ್ಯೋತ್ಪಾದನೆ ಸಾಮಾನ್ಯ ಸ್ಥಿತಿಗೆ ಬರುತ್ತದೆ ಎಂಬುದನ್ನೂ ಪರಿಶೀಲಿಸಬೇಕಷ್ಟೆ. ಹೀಗಾಗಿ ಇದು ಮಾರುಕಟ್ಟೆಗೆ ಬರಲು ಇನ್ನೂ ಬಹಳಷ್ಟು ಸಮಯ ಬೇಕಾಗಬಹುದು.

ಪ್ರಚೋದನೆ ಎನಿಸದೇ?
ಇತ್ತೀಚಿನ ದಿನಗಳಲ್ಲಿ ಗರ್ಭನಿರೋಧಕ ಗುಳಿಗೆಗಳು ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತಿರುವುದು ಯುವ ಸಮುದಾಯಕ್ಕೆ. ಅದರಲ್ಲೂ ಅವಿವಾಹಿತರಿಗೆ. ಮೋಜಿಗಾಗಿ ಲೈಂಗಿಕ ಸಂಪರ್ಕ ಬಯಸುವಂಥ ಯುವ ಸಮುದಾಯ ಆ ಕ್ರಿಯೆಯಿಂದ ಗರ್ಭಧರಿಸದಂತೆ ತಡೆಗಟ್ಟಲು ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುತ್ತಾರೆ. (ಎಲ್ಲರೂ ನಿರೋಧ್ಗಳಂತು ಬಳಸಲು ಇಷ್ಟಪಡುವುದಿಲ್ಲ, ನೆನಪಿರಲಿ!) ಇತ್ತೀಚಿನ ಒಂದು ಅಧ್ಯಯನ ಪ್ರಕಾರ ಹೈಸ್ಕೂಲ್ ಮಟ್ಟಕ್ಕೆ ಕಾಲಿಡುವ ಹುಡುಗ, ಹುಡುಗಿಯರು ಕೂಡಾ ಇಂಥ ಅಡ್ಡ ದಾರಿ ಹಿಡಿಯುತ್ತಿದ್ದಾರೆ.
ಹೀಗಿರುವಾಗ ಗರ್ಭನಿರೋದಕ್ಕೆ ಸಂಬಂಧಿಸಿದಂತೆ ನಡೆಯುವ ಒಂದೊಂದು ಸಂಶೋಧನೆಗಳು ಕೂಡಾ ಯುವ ಸಮುದಾಯವನ್ನು ಪ್ರಚೋದಿಸಿದಂತಾಗುವುದಿಲ್ಲವೇ? `ಹೇಗಿದ್ದರೂ ಗುಳಿಗೆ ಇರುವಾಗ ಭಯ ಯಾಕೆ?' ಎಂದು ಭಾವಿಸುವ ಯುವಕ, ಯುವತಿಯರು ತಮ್ಮ ಬಯಕೆಗಳನ್ನು (ದಾಹ ಎನ್ನುವುದು ಸೂಕ್ತವೇನೋ?) ಈಡೇರಿಸಿಕೊಳ್ಳುವ ಹಾದಿ ಹಿಡಿದರೆ ಒಂದು ಸಮುದಾಯವನ್ನೇ ಹಾಳುಗೆಡವಿದಂತಾಗಲಾರದೇ? ಈ ವಿಚಾರವಾಗಿ ಗಟ್ಟಿ ಚಿಂತನೆಯ ಅಗತ್ಯವಿದೆ. ಕಾನೂನುಗಳು ಏನೂ ಮಾಡಲಾರವು ಎಂಬುದು ವಾಸ್ತವವೇ. ಗರ್ಭನಿರೋಧಕ ಗುಳಿಗಗೆಗಳು ಅಪಾಯಕಾರಿ ಎಂಬ ಸತ್ಯವೂ ಎಲ್ಲರ ಅರಿವಿನಲ್ಲೇ ಇದೆ. ಯುವ ಜನತೆಗೆ ಅದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಯುತ್ತಿಲ್ಲ. ಇವೆಲ್ಲ ಗೊತ್ತಿದ್ದು ಗೊತ್ತಿದ್ದು ಹೊಸ ಹೊಸ ಗರ್ಭನಿರೋಧಕ ಗುಳಿಗೆಗಳು ಮಾರುಕಟ್ಟೆ ಪ್ರವೇಶಿಸುವುದಕ್ಕೆ ಮತ್ತಷ್ಟು ಅವಕಾಶ ಮಾಡಿಕೊಡಬೇಕೆ?

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು