ಸಿಂಧೂ ನಾಗರಿಕತೆ ಕಾಲದಲ್ಲೇ ಇತ್ತು ಸರ್ಜರಿ!

ಕಂಚಿನ ಯುಗದ ಅಸ್ಥಿಪಂಜರದಿಂದ ಇದು ಪತ್ತೆ
ಮೆದುಳು ಸಮಸ್ಯೆ ಪರಿಹಾರಕ್ಕೆ ಟ್ರೆಪನೇಶನ್

ಬೆಂಗಳೂರು: ಎಂಥದ್ದೇ ರೋಗ ಬಂದರೂ ಸರ್ಜರಿ ಮಾಡುವುದೇ ಇಂದಿನ ದಿನದಲ್ಲಿ ಒಂದು ರೀತಿಯ ಖಯಾಲಿಯಾಗಿದೆ. ಈ ಸರ್ಜರಿ ಇತ್ತೀಚಿನ ಅನ್ವೇಷಣೆ ಎಂದು ಬೀಗುತ್ತೇವೆ. ಆದರೆ ಸರ್ಜರಿಯ ಇತಿಹಾಸ ಇಂದು ನಿನ್ನೆಯದಲ್ಲ. ಶಸ್ತ್ರಚಿಕಿತ್ಸೆಯ ಪಿತಾಮಹ ಎಂದು ಕರೆಸಿಕೊಂಡ ಸುಶ್ರುತ ಹಲವು ಸಾವಿರ ವರ್ಷಗಳ ಹಿಂದೆಯೇ ಶಸ್ತ್ರಚಿಕಿತ್ಸೆಯನ್ನು ಅನ್ವೇಷಿಸಿದ್ದ. ಆದರೆ ಮೆದುಳಿನ ಚಿಕಿತ್ಸೆಗೆ ಆಗ ಸರ್ಜರಿ ಅಥವಾ ಶಸ್ತ್ರಚಿಕಿತ್ಸೆ ಇರಲಿಲ್ಲ ಎಂದೇ ಇತ್ತೀಚಿನವರೆಗಿನ ವಾದವಾಗಿತ್ತು. ಆದರೆ ಆ ವಾದವನ್ನು ಬದಲಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಕಾರಣ ಕಂಚಿನ ಯುಗದಲ್ಲಿಯೇ ಮೆದುಳು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು ಎಂಬುದು ಈಗ ಬೆಳಕಿಗೆ ಬಂದಿದೆ.
ಸಿಂಧೂ ನಾಗರಿಕತೆಯ ಕಾಲದಲ್ಲಿನ, ಅಂದರೆ ಸುಮಾರು 4,300 ವರ್ಷಗಳಷ್ಟು ಹಿಂದಿನದಾದಂಥ ಅಸ್ಥಿಪಂಜರವನ್ನು ಭಾರತೀಯ ಪುರಾತತ್ವ ಇಲಾಖೆಯ ಸಂಶೋಧಕರು ಪತ್ತೆ ಮಾಡಿದ್ದು, ಈ ಅಸ್ಥಿಪಂಜರವು ಅಂದಿನ ಸರ್ಜರಿಗಳ ಬಗೆಗಿನ ಕಥೆಯನ್ನು ಹೇಳುತ್ತಿದೆ. ಗಂಭೀರವಾದ ಮೆದುಳಿನ ಸಮಸ್ಯೆಗಳಿಗೆ ಅಂದಿನ ಕಾಲದಲ್ಲಿಯೇ ಶಸ್ತ್ರಚಿಕಿತ್ಸೆಯ ಪರಿಹಾರ ಕಂಡುಕೊಳ್ಳಲಾಗಿತ್ತು. ಬಹುಶಃ ಅಂದಿನ ಕಾಲಮಾನದಲ್ಲಿ ಈ ಭಾಗಗಳೆಲ್ಲ ಭಾರತದ ಭಾಗಗಳೇ ಆಗಿದ್ದಿರಬೇಕು. ಯಾಕೆಂದರೆ ಆ ಕಾಲಘಟ್ಟದಲ್ಲಿ ಭಾರತದ ವಿಸ್ತಾರ ಈಗಿನ ಆಫ್ಘಾನಿಸ್ತಾನದವರೆಗೆ ವ್ಯಾಪಿಸಿತ್ತು. ಹರಪ್ಪಾ ಈಗಿರುವುದು ಪಾಕಿಸ್ಥಾನದಲ್ಲಿ. ಆ ಸಮಯದಲ್ಲಿ ಪಾಕಿಸ್ಥಾನ ಎಂಬ ದೇಶವೇ ಇರಲಿಲ್ಲ. ಹೀಗಾಗಿ ಈ ಸಾಧನೆಗಳು ಭಾರತ ನೆಲದಲ್ಲೇ ಆಗಿದ್ದಂತೂ ಖಂಡಿತ. ಹಾಗಿದ್ದರೆ ಈ ಸರ್ಜರಿಯ ಒಳಗುಟ್ಟೇನು?

ಇದು ಟ್ರೆಪನೇಶನ್
ಈ ಚಿಕಿತ್ಸಾ ಪದ್ಧತಿಯನ್ನು ಆಗ ಟ್ರೆಪನೇಶನ್ ಎಂದು ಕರೆಯುತ್ತಿದ್ದರು. ಈ ಹೆಸರು ಬಂದಿದ್ದು ಟ್ರೆಪನ್ ಎಂಬ ಶಬ್ದದಿಂದ. ಟ್ರೆಪನ್ ಅಂದರೆ ಅತ್ಯಂತ ಚಿಕ್ಕದಾದ ಡ್ರಿಲ್ಲಿಂಗ್ ಮೆಷಿನ್ ಮಾದರಿಯ ಒಂದು ಯಂತ್ರ. ತಲೆಯನ್ನು ಕೊರದು ಮೆದುಳಿನ ಸ್ಥಿತಿ ಗತಿಗಳನ್ನು ಅರಿಯಲು ಟ್ರೆಪನ್ ಬಳಸಲಾಗುತ್ತಿತ್ತು. ಭಾರತೀಯ ಪುರಾತತ್ವ ಇಲಾಖೆಯ (ಎಎಸ್ಐ) ವಿಜ್ಞಾನಿಗಳಾದ ಅನೇಕರಾಮ್  ಸಂಖ್ಯಾಣ ಮತ್ತು ಗ್ವೇನ್ ರಾಬಿನ್ಸ್ ಶಗ್ ನಡೆಸಿದ ಸಂಶೋಧನೆಯಲ್ಲಿ ಈ ಅಂಶಗಳು ಬೆಳಕಿಗೆ ಬಂದಿವೆ. ಇವರಿಬ್ಬರೂ ಅಪ್ಪಲಾಶಿಯಾನ್ ಸ್ಟೇಟ್ ಯೂನಿವರ್ಸಿಟಿಯವರಾಗಿದ್ದು, ಈಗ ಎಎಸ್ಐನಲ್ಲಿ ಫೆಲೋಶಿಪ್ ಮಾಡುತ್ತಿದ್ದಾರೆ. 
ಹರಪ್ಪಾದಲ್ಲಿ ಸಿಕ್ಕಿದಂತಹ ತಲೆಬುರುಡೆಗಳು ಟ್ರಪನೇಶನ್ ಪದ್ಧತಿಯ ಬಗ್ಗೆ ಪೂರ್ಣಪಾಠವನ್ನು ನೀಡಿದೆ. ಈ ಅಸ್ಥಿಪಂಜರದ ತಲೆಯಲ್ಲಿ ಇರುವಂಥ ತೂತು ಆ ವ್ಯಕ್ತಿ ಟ್ರೆಪನೇಶನ್ಗೆ ಒಳಗಾಗಿದ್ದ ಎಂಬುದನ್ನು ಸೂಚಿಸುತ್ತದೆ. ಈ ರೀತಿ ಅರತೆಪನೇಶನ್ ಚಿಕಿತ್ಸೆ ಪಡೆದ ಬಳಿಕವೂ ಒಂದಷ್ಟು ವರ್ಷಗಳ ಕಾಲ ಆ ವ್ಯಕ್ತಿ ಬದುಕಿದ್ದಿರಬಹುದು ಎನ್ನುತ್ತಾರೆ ವಿಜ್ಞಾನಿಗಳು.
ಈ ತಲೆಬುರುಡೆಯನ್ನು ಗಮನಿಸಿದರೆ ಆ ವ್ಯಕ್ತಿ ಕ್ರೇನಿಯಲ್ ಟ್ರೌಮಾಗೆ (ತಲೆಬುರುಡೆಗೆ ಹಾನಿಯಾಗಿರುವುದು) ಒಳಗಾಗಿದ್ದ ಎಂಬುದು ಖಂಡಿತ. ಕ್ರೇನಿಯಲ್ ಬೋನ್ಗಳಿಗಾದ ಗಾಯವು ಆ ವ್ಯಕ್ತಿಗೆ ಗಟ್ಟಿಯಾದ ಮರದ ತುಂಡಿನಿಂದ ಬಲವಾದ ಹೊಡೆತ ಬಿದ್ದಿದೆ ಎಂಬುದನ್ನು ಸೂಚಿಸುತ್ತದೆ. ಶಸ್ತ್ರಚಿಕಿತ್ಸೆ ನಡೆಸಿದ ತೂತಿನ ಸುತ್ತ ಇರುವಂಥ 3 ಮಿ.ಮೀ. ಗಾತ್ರದ ಅಂಚು ಆ ವ್ಯಕ್ತಿ ಚಿಕಿತ್ಸೆಯ ನಂತರವೂ ಹಲವು ವರ್ಷಗಳ ಕಾಲ ಬದುಕಿದ್ದ ಎಂಬುದನ್ನು ಸೂಚಿಸುತ್ತವೆ. ಈ ಸಮಶೋಧನೆಗಳನ್ನು ಎಎಸ್ಐನ ಕೋಲ್ಕತಾದ ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಇನ್ನೂ ವಿಶೇಷ ಅಂದರೆ ಈ ಶಸ್ತ್ರಚಿಕಿತ್ಸೆಗೆ ಬಳಸುತ್ತಿದ್ದ ಟ್ರೆಪನ್ಗಳನ್ನು ಕಂಚು ಅಥವಾ ವಜ್ರದಿಂದ ಮಾಡುತ್ತಿದ್ದಿರಬೇಕು.
ದಶಕದ ಹಿಂದೆ ಸಂಖ್ಯಾಣ್ ಮತ್ತು ಸ್ವಿಸ್ ಸಂಶೋಧಕ ಜಾರ್ಜ್ ವೆಬ್ಬರ್ ಕಾಶ್ಮೀರ ಕಣಿವೆಯಲ್ಲಿ ಈ ತಲೆಬುರುಡೆಗಳನ್ನು ಪತ್ತೆ ಮಾಡಿದ್ದರು. ಅಲ್ಲದೆ, ಇವು ಸಿಂಧೂ ನಾಗರಿಕತೆಯ ಕಾಲದ್ದು ಎಂದು ಹೇಳಿದ್ದರು. ಟ್ರೆಪನೇಶನ್ನನ್ನು ದುಷ್ಟಶಕ್ತಿಗಳನ್ನು ಓಡಿಸುವ ಸಲುವಾಗಿಯೂ ಆಗಿನ ಕಾಲದಲ್ಲಿ ಬಳಸಿಕೊಳ್ಳಲಾಗುತ್ತಿತ್ತು. 

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು