Posts

Showing posts from June, 2011

ನಮ್ಮ ಸೌರಮಂಡಲ ಲಯವಾಗುತ್ತಿದೆಯೇ?

Image
ಪ್ರಳಯ ಆಗಿಯೇ ಬಿಟ್ಟಿತು ಎಂಬ ಮನಸ್ಥಿತಿಗೆ ಜನ ತಲುಪಿದ್ದಾರೆ. ಆದರೆಡೆಯಲ್ಲಿಯೂ ಸೌರಲೋಕ ಅಂತ್ಯವಾಗುತ್ತದೆಯೇ? ಪ್ರಳಯ ಎಂಬುದು ನಿಜವೇ? ನಮ್ಮ ಸೌರಮಂಡಲದ ಅಂತ್ಯದ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹೇಳಿದ್ದು ಲೀಸೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು. ಸಾವು ಎಂದರೆ ಅಂತ್ಯವಲ್ಲ. ಅದು ಕೇವಲ ರೂಪಾಂತರ ಎನ್ನುತ್ತವೆ ಉಪನಿಷತ್ತುಗಳು. ಅದ್ಯಾವಾಗ ಪ್ರಳಯದ ಬಗ್ಗೆ ಮಾತುಗಳು ಜಿಗಿದೆದ್ದವೋ, ಮಾಧ್ಯಮಗಳಲ್ಲೆಲ್ಲ ಬರೇ ಪ್ರಳಯದ್ದೇ ಸುದ್ದಿಗಳು ತುಂಬಿಕೊಂಡವೋ ಆಗಲೇ ಜನ ಭೀತಿಗೊಳಗಾಗತೊಡಗಿದರು. ಇದರ ನಡುವೆಯೇ ನಮ್ಮ ಸೌ ರಲೋಕ ಅಂತ್ಯದತ್ತ ನಡೆಯುತ್ತಿದೆ ಎಂಬ ಸಂಶೋಧನೆಯೊಂದು ವೈಜ್ಞಾನಿಕ ವಲಯದಲ್ಲಿ ನಡೆದಿದ್ದು, ಅದು ಜನರಲ್ಲಿ ಇನ್ನಷ್ಟು ಆತಂಕಗಳನ್ನು ಸೃಷ್ಟಿಸಿದೆ. ಪ್ರಳಯ ಆಗಿಯೇ ಬಿಟ್ಟಿತು ಎಂಬ ಮನಸ್ಥಿತಿಗೆ ಜನ ತಲುಪಿದ್ದಾರೆ. ಆದರೆಡೆಯಲ್ಲಿಯೂ ಸೌರಲೋಕ ಅಂತ್ಯವಾಗುತ್ತದೆಯೇ? ಪ್ರಳಯ ಎಂಬುದು ನಿಜವೇ? ಎಲ್ಲವೂ ನಾಶವಾಗುತ್ತದೆಯೇ? ಎಂಬೆಲ್ಲ ಪ್ರಶ್ನೆಗಳು ಜನರನ್ನು ಕಾಡುತ್ತಿವೆ. ಒಂದೊಂದು ಸಂಶೋಧನೆಯಾದಾಗಲೂ ಅದು ಆತಂಕವನ್ನು ಹುಟ್ಟಿಸುವುದು ನಿಜ. ಆದರೆ ಆ ಸಂಶೋಧನೆಯ ಆಳವನ್ನು, ಅದರಲ್ಲಿರುವ ಸತ್ವವನ್ನು ಅರ್ಥ ಮಾಡಿಕೊಂಡು ನಂತರ ನಮ್ಮ ನಿರ್ಧಾರವನ್ನು ತೆಗೆದುಕೊಳ್ಳಬೇಕೇ ಹೊರತು ಯಾರೋ ಸಂಶೋಧನೆ ಮಾಡಿದ್ದಾರೆ ಎಂದ ತಕ್ಷಣ ಅದು ನಿಜವಾಗಿ ಬಿಡುವುದಿಲ್ಲವಲ್ಲ? ಮೊದಲಿಗೆ ನಿಜವೆಂದು ನಂಬಿ ನಂತರ ಅದು ಸುಳ್ಳೆಂದು ಸಾಬೀತಾದ ಮತ್ತು ಮೊದಲಿಗೇ ಅಡ್ಡಿ, ವ

ಶನಿಯ ೧೬ ಚಂದ್ರರಲ್ಲಿಯೂ ಸಾಗರವಿದೆಯೇ?

Image
ಶನಿಯ ಚಂದ್ರನಲ್ಲಿ ಭಾರೀ ಸಾಗರವಿದೆ.  ಶನಿಗ್ರಹದ ಅತಿದೊಡ್ಡ ಉಪಗ್ರಹ (ಚಂದ್ರ) ಟೈಟಾನ್ನಲ್ಲಿ ನೀರಿನ ಸಾಗರವೇ ಪತ್ತೆಯಾಗಿದೆ ಎಂಬ ಬಗ್ಗೆ ಮೇ ತಿಂಗಳಲ್ಲೇ ನನ್ನ ಅಂಕಣದಲ್ಲಿ ಬರೆದಿದ್ದೆ. ಇದೀಗ ಶನಿಯ ಇನ್ನೊಂದು ಚಂದ್ರ ಎನ್ ಕೆಲಾಡ್ಸ್ ನಲ್ಲಿಯೂ ಸಾಗರ ಪತ್ತೆಯಾಗಿದೆ. ನಾಸಾದ ಕ್ಯಾಸಿನಿ ನೌಕೆಯೇ ಇದನ್ನು ಪತ್ತೆ ಹಚ್ಚಿದೆ. ಇಲ್ಲಿ ಒಂದು ಪ್ರಶ್ನೆ ಬರುತ್ತಿದೆ. ಶನಿಯ ೧೬ ಚಂದ್ರರಲ್ಲಿಯೂ ಸಾಗರವಿದೆಯೇ? ಸಾಧ್ಯತೆಯಿದೆ. ಕ್ಯಾಸಿನಿ ಇನ್ನೇನು ಸಂಶೋಧನೆ ಮಾಡುತ್ತದೆಯೋ ಕಾಡು ನೋಡೋಣ! ಅಂದು ಬರೆದ ಲೇಖನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ  http://vijnanagange.blogspot.com/2011/05/blog-post_11.html

ಸೋನವ್ಯಾಂಡ್

Image
ಮೆದುಳಿಗೊಂದು ಅಲ್ಟ್ರಾಸೌಂಡ್ ಸ್ಕ್ಯಾನ್ ಮಾನವನ ದೇಹದಲ್ಲಿ ತೀರಾ ಸಂಕೀರ್ಣವಾದ ಮತ್ತು ಅಷ್ಟೇ ಸೂಕ್ಷ್ಮವಾದ ಭಾಗ ಮೆದುಳು. ಮೆದುಳಿಗೆ ಚಿಕಿತ್ಸೆ ನೀಡುವುದೂ ತುಂಬಾ ಕಷ್ಟ, ಅದಕ್ಕೆ ಎಷ್ಟು ಪರಿಣತಿ ಇದ್ದರೂ ತಾಳ್ಮೆ ಇಲ್ಲದಿದ್ದರೆ ಅಥವಾ ಆತುರದ ಕೆಲಸಕ್ಕೆ ಕೈ ಹಚ್ಚಿದರೆ ಮೆದುಳಿನ ವ್ಯವಸ್ಥೆ ಹಾಳಾಗಿಬಿಡುತ್ತದೆ. ಇನ್ನು ಮೆದುಳಿನ ಕ್ಯಾನ್ಸರ್ಗೆ ಚಿಕಿತ್ಸೆ ಕೊಡುವಾಗ ಎಷ್ಟು ಜಾಗೃತೆಯಿದ್ದರೂ ಸಾಲದು. ಸ್ವಲ್ಪ ಕೈ ಅಲುಗಾಡಿದರೂ ಮೆದುಳೇ ನಿಷ್ಕ್ರಿಯಗೊಳ್ಳುವ ಅಪಾಯವಿದೆ. ಮೆದುಳಿನ ಕ್ಯಾನ್ಸರ್ ಇದೆಯೇ ಎಂದು ಇದುವರೆಗೆ ಸಿಟಿ ಸ್ಕ್ಯಾನ್, ಎಂಆರ್ಐ ಮೂಲಕ ಪರೀಕ್ಷಿಸಲಾಗುತ್ತಿತ್ತು. ಆದರೆ ಇವು ಶಸ್ತ್ರಚಿಕಿತ್ಸೆಯ ಮೊದಲು ಮಾಡುವ ಪರೀಕ್ಷೆಗಳಾದ ಕಾರಣ ಮೆದುಳಿನ ಪೂರ್ಣ ವಿಚಾರ ಅರಿವಿಗೆ ನಿಲುಕುತ್ತಿರಲಿಲ್ಲ. ಇದೀಗ ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಲು, ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಹೊಸ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಅದುವೇ ಮೆದುಳಿನ ಅಲ್ಟ್ರಾಸೌಂಡ್ ಸ್ಕ್ಯಾನರ್. ಸಾಮಾನ್ಯವಾಗಿ ಮೆದುಳಿನ ಸ್ಕ್ಯಾನಿಂಗ್ಗೆ ಬಳಸುತ್ತಿರುವುದು ಸಿಟಿ ಸ್ಕ್ಯಾನಿಂಗ್ ಮತ್ತು ಎಂಆರ್ಐ ಸ್ಕ್ಯಾನಿಂಗ್ ತಂತ್ರಜ್ಞಾನಗಳನ್ನು. ಆದರೆ ಈ ವಿಧಾನಗಳಿಂದ ಮೆದುಳಿನ ಆಪರೇಷನ್ಗೆ ಮೊದಲಿನ ವಿವರಗಳನ್ನಷ್ಟೇ ಪಡೆಯಬಹುದಾಗಿದೆ. ಮೆದುಳಿನ ಆಪರೇಷನ್ ಮಾಡಿದ ಬಳಿಕ ಮೆದುಳಿನ ಗಾತ್ರದಲ್ಲಿಯೂ ವ್ಯತ್ಯಾಸವಾಗುತ್ತದೆ. ಮೆದುಳು ವಿಕಸನಗೊಳ್ಳುವ ಅಥವ

ಚೀನಾದಲ್ಲೊಂದು ಜಗದಚ್ಚರಿ!

Image
ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ ಮಾಡಲು ಚೀನಾ ಎಲ್ಲಾ ರೀತಿಯಿಂದಲೂ ಅರ್ಹತೆ ಪಡೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಅತಿ ದೊಡ್ಡದಾದ ರೇಡಿಯೋ ಟೆಲೆಸ್ಕೋಪನ್ನು ಅದು ನಿ ರ್ಮಿ ಸುತ್ತಿದೆ. 2016ರ ವೇಳೆಗೆ ಇದು ಪೂರ್ಣಗೊಳ್ಳಲಿದೆ. ಆದರೆ ಚೀನಾದ ಮನಸ್ಥಿತಿಯಲ್ಲಿ ಅಪಾಯವಿದೆ. ಪ್ರಪಂಚವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಅರ್ಥಾತ್ ಪ್ರಪಂಚದಲ್ಲೇ ಕಮ್ಯುನಿಸಂ ಅನ್ನು ಮುಂಚೂಣಿಗೆ ತಲುಪಲು ಪ್ರಯತ್ನಿಸುತ್ತಿದೆ. ಚೀನಾದ ಸಮಕ್ಕೆ ಇನ್ನೊಂದು ಶಕ್ತಿ ಬೆಳೆಯಲೇಬೇಕಾದ ಅನಿವಾರ್ಯತೆ ಈಗಿದೆ.  ಕೆಲವೊಂದು ಸಾರಿ ಚೀನಾದಷ್ಟು ದುಷ್ಟರಾಷ್ಟ್ರ ಇನ್ನೊಂದಿಲ್ಲ ಎನ್ನಿಸುತ್ತದೆ. ಆದರೆ ಅಭಿವೃದ್ಧಿಯ ಪಥದಲ್ಲಿ ಅದರ ವೇಗ, ಅದರ ಸಾಧನೆ ನೋಡಿದಾಗ ಅದರ ಬಗೆಗಿನ ಭಾವನೆಗಳೇ ಬದಲಾಗುತ್ತವೆ. ಅ ದು  ಚೀನಾ ದೇಶದ ಸಾಮ ರ್ಥ್ಯ . ಜಗತ್ತಿನ ಶಕ್ತಿಯುತ ರಾಷ್ಟ್ರವಾಗಿ ಗುರುತಿಸಿಕೊಳ್ಳುವ ಹಂಬಲದಲ್ಲಿ ಅದು ಮುನ್ನಡೆಯುತ್ತಿದ್ದು, ಆ ಹಾದಿಯಲ್ಲಿ ಅದು ಸ್ಥಾಪಿಸಿರುವ ಮತ್ತು ಸ್ಥಾಪಿಸುತ್ತಿರುವ ಮೈಲಿಗಲ್ಲುಗಳು ಎಂಥವರನ್ನಾದರೂ ಅಚ್ಚರಿಯ ಕೂಪಕ್ಕೆ ತಳ್ಳುತ್ತವೆ. ಅಂಥದ್ದೇ ಒಂದು ಸಾಧನೆಯನ್ನು ಚೀನಾ ಮತ್ತೊಮ್ಮೆ ಸಾಧಿಸಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ ಮಾಡಲು ಚೀನಾ ಎಲ್ಲಾ ರೀತಿಯಿಂದಲೂ ಅರ್ಹತೆ ಪಡೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಅತಿ ದೊಡ್ಡದಾದ ರೇಡಿಯೋ ಟೆಲೆಸ್ಕೋಪನ್ನು ಅದು ನಿರ್ಮಿಸುತ್ತಿದೆ. ಪ್ರಸ್ತುತ ಈ ರೇಡಿಯೋ ಟೆಲೆಸ್ಕೋ

ಸಿಂಧೂ ನಾಗರಿಕತೆ ಕಾಲದಲ್ಲೇ ಇತ್ತು ಸರ್ಜರಿ!

Image
ಕಂಚಿನ ಯುಗದ ಅಸ್ಥಿಪಂಜರದಿಂದ ಇದು ಪತ್ತೆ ಮೆದುಳು ಸಮಸ್ಯೆ ಪರಿಹಾರಕ್ಕೆ ಟ್ರೆಪನೇಶನ್ ಬೆಂಗಳೂರು: ಎಂಥದ್ದೇ ರೋಗ ಬಂದರೂ ಸರ್ಜರಿ ಮಾಡುವುದೇ ಇಂದಿನ ದಿನದಲ್ಲಿ ಒಂದು ರೀತಿಯ ಖಯಾಲಿಯಾಗಿದೆ. ಈ ಸರ್ಜರಿ ಇತ್ತೀಚಿನ ಅನ್ವೇಷಣೆ ಎಂದು ಬೀಗುತ್ತೇವೆ. ಆದರೆ ಸರ್ಜರಿಯ ಇತಿಹಾಸ ಇಂದು ನಿನ್ನೆಯದಲ್ಲ. ಶಸ್ತ್ರಚಿಕಿತ್ಸೆಯ ಪಿತಾಮಹ ಎಂದು ಕರೆಸಿಕೊಂಡ ಸುಶ್ರುತ ಹಲವು ಸಾವಿರ ವರ್ಷಗಳ ಹಿಂದೆಯೇ ಶಸ್ತ್ರಚಿಕಿತ್ಸೆಯನ್ನು ಅನ್ವೇಷಿಸಿದ್ದ. ಆದರೆ ಮೆದುಳಿನ ಚಿಕಿತ್ಸೆಗೆ ಆಗ ಸರ್ಜರಿ ಅಥವಾ ಶಸ್ತ್ರಚಿಕಿತ್ಸೆ ಇರಲಿಲ್ಲ ಎಂದೇ ಇತ್ತೀಚಿನವರೆಗಿನ ವಾದವಾಗಿತ್ತು. ಆದರೆ ಆ ವಾದವನ್ನು ಬದಲಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಕಾರಣ ಕಂಚಿನ ಯುಗದಲ್ಲಿಯೇ ಮೆದುಳು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು ಎಂಬುದು ಈಗ ಬೆಳಕಿಗೆ ಬಂದಿದೆ. ಸಿಂಧೂ ನಾಗರಿಕತೆಯ ಕಾಲದಲ್ಲಿನ, ಅಂದರೆ ಸುಮಾರು 4,300 ವರ್ಷಗಳಷ್ಟು ಹಿಂದಿನದಾದಂಥ ಅಸ್ಥಿಪಂಜರವನ್ನು ಭಾರತೀಯ ಪುರಾತತ್ವ ಇಲಾಖೆಯ ಸಂಶೋಧಕರು ಪತ್ತೆ ಮಾಡಿದ್ದು, ಈ ಅಸ್ಥಿಪಂಜರವು ಅಂದಿನ ಸರ್ಜರಿಗಳ ಬಗೆಗಿನ ಕಥೆಯನ್ನು ಹೇಳುತ್ತಿದೆ. ಗಂಭೀರವಾದ ಮೆದುಳಿನ ಸಮಸ್ಯೆಗಳಿಗೆ ಅಂದಿನ ಕಾಲದಲ್ಲಿಯೇ ಶಸ್ತ್ರಚಿಕಿತ್ಸೆಯ ಪರಿಹಾರ ಕಂಡುಕೊಳ್ಳಲಾಗಿತ್ತು. ಬಹುಶಃ ಅಂದಿನ ಕಾಲಮಾನದಲ್ಲಿ ಈ ಭಾಗಗಳೆಲ್ಲ ಭಾರತದ ಭಾಗಗಳೇ ಆಗಿದ್ದಿರಬೇಕು. ಯಾಕೆಂದರೆ ಆ ಕಾಲಘಟ್ಟದಲ್ಲಿ ಭಾರತದ ವಿಸ್ತಾರ ಈಗಿನ ಆಫ್ಘಾನಿಸ್ತಾನದವರೆಗೆ ವ್ಯಾಪಿಸಿತ್ತು. ಹರಪ್ಪಾ

ದೇಹ ಕಿರಿದಾಗುತ್ತಿದೆ, ಮೆದುಳು ಸಂಕುಚಿಸುತ್ತಿದೆ

Image
ನಮ್ಮ ಪೂರ್ವಜರಿಗಿಂತ ನಾವೇ ಶ್ರೇಷ್ಠ ಎಂಬ ಅಹಂಭಾವ ನಮ್ಮಲ್ಲಿ ಮನೆಮಾಡಿದೆ. ಇಂಥ ದಾಡಸಿತನದಿಂದಾಗಿ ನಮ್ಮ ಅವಸಾನವನ್ನು ನಾವೇ ಕಂಡುಕೊಳ್ಳುತ್ತಿದ್ದೇವೇನೋ ಎಂದೆನ್ನಿಸತೊಡಗಿದೆ. ಕೇಂಬ್ರಿಡ್ಜ್ ವಿ.ವಿ.ಯ ಸಂಶೋಧಕರು ಇತ್ತೀಚೆಗೆ ನಡೆಸಿದ ಸಂಶೋಧನೆಯ ಪ್ರಕಾರ ಮಾನವನ ಶರೀರದ ಗಾತ್ರ ತಲೆಮಾರಿನಿಂದ ತಲೆಮಾರಿಗೆ ಕಿರಿದಾಗುತ್ತಿದೆ. ಮೆದುಳು ಕೂಡಾ ಸಂಕೋಚನಕ್ಕೆ ಒಳಗಾಗುತ್ತಿದೆ.   ಎವರೆಸ್ಟ್ ಏರುವುದಕ್ಕೆ ನಮಗೆ ಗೊತ್ತಿದೆ. ಚಂದ್ರನಲ್ಲಿಯೂ ಕಾಲಿಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತೇವೆ. ಬಾಹ್ಯಾಕಾಶವೆಲ್ಲ ನಮ್ಮದೇ, ಅನ್ಯಗ್ರಹ ಜೀವಿಗಳನ್ನೂ ಹುಡುಕುತ್ತಿದ್ದೇವೆ, ಸೂರ್ಯಲೋಕವನ್ನೂ ಪ್ರವೇಶಿಸುವ ತಾಕತ್ತು ನಮ್ಮಲ್ಲಿದೆ ಎಂಬೆಲ್ಲ ಹುಚ್ಚು ಭ್ರಮೆಯಲ್ಲಿ ತೇಲಾಡುತ್ತಿದ್ದೇವೆ. !ನಮ್ಮ ಪೂರ್ವಜರಿಗಿಂತ ನಾವೇ ಶ್ರೇಷ್ಠ ಎಂಬ ಅಹಂಭಾವ ನಮ್ಮಲ್ಲಿ ಮನೆಮಾಡಿದೆ. ಇಂಥ ದಾಡಸಿತನದಿಂದಾಗಿ ನಮ್ಮ ಅವಸಾನವನ್ನು ನಾವೇ ಕಂಡುಕೊಳ್ಳುತ್ತಿದ್ದೇವೇನೋ ಎಂದೆನ್ನಿಸತೊಡಗಿದೆ. ಇದೇನೂ ಸುಖಾಸುಮ್ಮನೇ ಮಾಡುತ್ತಿರುವ ಆರೋಪವಲ್ಲ. ಯಾವ ವೈಜ್ಞಾನಿಕ ಕ್ಷೇತ್ರ ಇಂದು ನಾವು ಹೇಳಿಕೊಳ್ಳುತ್ತಿರುವ `ಅಭಿವೃದ್ಧಿ'ಗೆ ಕಾರಣವಾಗಿದೆಯೋ ಅದೇ ವೈಜ್ಞಾನಿಕ ಕ್ಷೇತ್ರ ನಡೆಸಿದಂಥ ಸಂಶೋಧನೆಯಿಂದಾಗಿ ಈ ಅನುಮಾನಗಳ ಬೇರು ಆಳಕ್ಕಿಳಿದಿದೆ. `ಅಭಿವೃದ್ಧಿ' ಎಂಬ ಹೆಸರಿನಲ್ಲಿ ನಾವು ಇದುವರೆಗಿ ಸೇವಿಸಿದ್ದು, ಈಗ ಸೇವಿಸುತ್ತಿರುವುದು ಹೀಗೇ ಮುಂದುವರಿದರೆ ಮುಂದೆ ಸೇವಿಸುವುದು ಬರೇ ವಿಷವನ

ತಮಾಷೆಯಲ್ಲ, ಇನ್ನೇನಿದ್ರೂ ವೈರ್ಲೆಸ್ ಕರೆಂಟ್ ಕಾಲ!

Image
* ಮೆಟಾಮೆಟೀರಿಯಲ್ಗಳಿಂದ ಇದು ಸಾಧ್ಯ * ಉತ್ತರ ಕೆರೋಲಿನಾ ಎಂಜಿನಿಯರ್ಗಳಿಂದ ಈ ಸಾಧನೆ ತಂತಿ ಇಲ್ಲದೆ ವಿದ್ಯುತ್ ಪ್ರಸಾರ ಮಾಡುವುದಕ್ಕೆ ಯರೋಸ್ಲಾವ್ ಅವರ ತಂಡ ಬಳಸಿಕೊಂಡದ್ದು ಮೆಟಾಮೆಟೀರಿಯಲ್ಗಳನ್ನು. ಅದೃಶ್ಯ ಗಂಟೆ (ಇನ್ವಿಸಿಬಲ್ ಕ್ಲಾಕ್)ಯನ್ನು ಗುರುತಿಸಲು ವಿಜ್ಞಾನಿಗಳು ಬಳಸುತ್ತಿರುವ ವಸ್ತುಗಳೇ ಮೆಟಾಮೆಟೀರಿಯಲ್ಗಳು. ಸಾಮಾನ್ಯವಾಗಿ ತಂತಿಗಳಲ್ಲಿ ವಿದ್ಯುತ್ ಪ್ರವಹಿಸುವಾಗ ಭಾರೀ ಪ್ರಮಾಣದ ವಿದ್ಯುತ್ ನಷ್ಟವಾಗುತ್ತದೆ. ಮೆಟಾಮೆಟೀರಿಯಲ್ಗಳಲ್ಲಿ ಆ ಸಮಸ್ಯೆ ಇಲ್ಲ.  ವಿಷ್ಣುಪ್ರಿಯ ಬೆಂಗಳೂರು: ಎಲ್ಲಿ ನೋಡಿದ್ರೂ ವೈರ್ಲೆಸ್ ಫೋನ್, ವೈರ್ಲೆಸ್ ಇಂಟರ್ನೆಟ್, ವೈರ್ಲೆಸ್ ಡಾಟಾ ಟ್ರಾನ್ಸ್ಫರ್... ಹೀಗೆ ಎಲ್ಲವೂ ವೈರ್ಲೆಸ್ ಆಗುತ್ತಿರುವ ಈ ಕಾಲದಲ್ಲಿ ಪ್ರತಿಯೊಂದು ವಿಚಾರದಲ್ಲಿಯೂ ವೈರ್ಲೆಸ್ ತಂತ್ರಜ್ಞಾನವನ್ನು ಅಪೇಕ್ಷಿಸುವುದು ತಪ್ಪಲ್ಲ. ಹೊಸ ಸುದ್ದಿ ಎಂದರೆ ಈ ವೈರ್ಲೆಸ್ ವಿಚಾರ ನಂಬಲೇ ಅಸಾಧ್ಯವಾದ ಕ್ಷೇತ್ರವೊಂದಕ್ಕೆ ಕಾಲಿಟ್ಟಿದೆ. ಅದು ವಿದ್ಯುತ್ ಕ್ಷೇತ್ರ. ವಿದ್ಯುತ್ ಪ್ರಸರಣಕ್ಕೆ ದೊಡ್ಡ ದೊಡ್ಡ ತಂತಿಗಳು ಅನಿವಾರ್ಯ. ಈಗಲೂ ಇದನ್ನೇ ನಂಬಲೇಬೇಕು. ಆದರೆ ಸಂಶೋಧಕರು ಸುಮ್ಮನೇ ಕುಳಿತುಕೊಳ್ಳುವುದಿಲ್ಲವಲ್ಲ? ಏನಾದರೊಂದು ಆವಿಷ್ಕಾರ ನಡೆಸುತ್ತಲೇ ಇರುವ ವೈಜ್ಞಾನಿಕ ಜಗತ್ತು ಇದೀಗ ವಿದ್ಯುತ್ತನ್ನು ಕೂಡಾ ತಂತಿ ಇಲ್ಲದೇ ಪ್ರಸಾರ ಮಾಡುವ ಸಾಧನೆಗೆ ಕೈ ಹಚ್ಚಿದೆ. ಈ ದಿಶೆಯಲ್ಲಿ ಯಶಸ್ಸು ಸಾಧಿಸಿದೆ ಕೂಡಾ. ಉತ್ತರ ಕೆರೋಲಿನಾದ ಡ್ಯೂಕ್ ಯ

ಪುರುಷರಿಗೆ ಗರ್ಭನಿರೋಧಕ: ಮತ್ತೊಂದು ಅವಾಂತರವೇ?

Image
ಪುರುಷರಿಗಾಗಿಯೇ ವಿಶೇಷ ಗರ್ಭನಿರೋಧಕ ಗುಳಿಗೆಗಳನ್ನು  ಕೊಲಂಬಿಯಾ ಯೂನಿವ ರ್ಸಿ ಟಿಯ ವೈದ್ಯ ಸಂಶೋಧಕರು ಕಂಡು ಹಿಡಿದಿದ್ದಾರೆ. ಇದು ಜಗತ್ತಿನ ಪ್ರಥಮ ಸ್ಟಿರಾಯಿಡ್ ರಹಿತ ಗರ್ಭನಿರೋಧಕ ಗುಳಿಗೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ. ಆದರೆ ಗರ್ಭನಿರೋದಕ್ಕೆ ಸಂಬಂಧಿಸಿದಂತೆ ನಡೆಯುವ ಒಂದೊಂದು ಸಂಶೋಧನೆಗಳು ಕೂಡಾ ಯುವ ಸಮುದಾಯವನ್ನು ಪ್ರಚೋದಿಸಿದಂತಾಗುವುದಿಲ್ಲವೇ? ಈ ವಿಚಾರವಾಗಿ ಗಟ್ಟಿ ಚಿಂತನೆಯ ಅಗತ್ಯವಿದೆ.   ಬೇಕು ಬೇಕಾದ ವಿಷಯಗಳನ್ನು ತಿಳಿದುಕೊಳ್ಳು ಟಿವಿ, ಇಂಟ ರ್ನೆ ಟ್. ತಿಳಿದುಕೊಂಡ ವಿಷಯಗಳ ಬಗ್ಗೆ ಪ್ರಾಕ್ಟಿಕಲ್ ಜ್ಞಾನ (?) ಸಂಪಾದಿಸುವ ಹುಚ್ಚು. ಜೊತೆಗೆ ಹರೆಯದ ಆಕರ್ಷಣೆ. ಈ ಕ್ಷಣದಲ್ಲಿ ಸಂಗಾತಿ ಬೇಕೇ ಬೇಕು ಎಂಬ ದಾಹ, ನಂತರದ ಕ್ಷಣದಲ್ಲಿ ಏನೇ ಆದರೂ ಚಿಂತಿಲ್ಲ. ಹಾಗೂ ಒಂದುವೇಳೆ ದಾಹ ಹೆಚ್ಚಾದರೂ ಸಮಸ್ಯೆಯಾಗದಂತ ಸಲಕರಣೆಗಳು, ಗುಳಿಗೆಗಳು ಇರುವಾಗ ಚಿಂತೆ ಮಾಡೋದಕ್ಕೆ ಯಾರು ಹೋಗ್ತಾರೆ? 18 ವರ್ಷಕ್ಕಿಂತ ಚಿಕ್ಕವರಿಗೆ ಇವುಗಳನ್ನೆಲ್ಲ ಕೊಡಬಾರದು ಎಂಬ ಕಾನೂನು ಇದ್ದರೂ ಸಹ `ಕಾನೂನುಗಳು ಇರುವುದೇ ಉಲ್ಲಂಘಿಸುವುದಕ್ಕೆ' ಎಂದು ತಿಳಿದುಕೊಂಡವರೇ ಹೆಚ್ಚು. ಅದರಲ್ಲೂ ಗರ್ಭನಿರೋಧಕ ಗುಳಿಗೆಗಳು ಆ ಸಮಯದಲ್ಲಿ `ಅದ್ಭುತ' ಎನ್ನಿಸಿದರೂ ಅದು ಉಂಟುಮಾಡುವ ಅಡ್ಡಪರಿಣಾಮಗಳನ್ನು ನಿವಾರಿಸಿಕೊಳ್ಳುವುದಕ್ಕೆ ಒಂದು ಜನ್ಮವಂತೂ ಸಾಲದು. ಇಂತಿರುವಾಗ ಪುರುಷರಿಗಾಗಿಯೇ ವಿಶೇಷ ಗರ್ಭನಿರೋಧಕ ಗುಳಿಗೆಗಳನ್ನು  ಕೊಲಂಬಿಯಾ ಯೂನಿವ ರ್ಸಿ ಟಿಯ ವೈ

ನವತಾರೆಗಳಲ್ಲಿ ಹರಳು, ಕಲ್ಲುಗಳ ಮಳೆ!

Image
ಎಲ್ಲ ಕಾಯಗಳಲ್ಲಿಯೂ ಮಳೆ ಬರುತ್ತದೆಯೇ? ಎಲ್ಲ ಅಧ್ಯಯನಗಳ ಬೆನ್ನಲ್ಲೇ ಮತ್ತೊಂದು ವಿಚಾರವೂ ಬೆಳಕಿಗೆ ಬಂದಿದೆ. ಅದು- ನಕ್ಷತ್ರಗಳಲ್ಲೂ ಮಳೆಯಾಗುತ್ತಿರುವ ವಿಚಾರ! ಸದಾ ಸುಡು ಸುಡು ಎನ್ನುತ್ತಿರುವ, ಬೆಂಕಿಯ ಜ್ವಾಲೆಯನ್ನೇ ಉಸಿರಾಡುತ್ತಿರುವ ನಕ್ಷತ್ರಗಳಲ್ಲಿ ಆಗುತ್ತಿರುವುದು ಜಲವೃಷ್ಟಿ ಅಲ್ಲ. ಬದಲಾಗಿ ಹರಳುಗಳ ಮಳೆ, ಕಲ್ಲುಗಳ ಮಳೆ! `ಮಳೆ'. ಈ ಶಬ್ದ ಕೇಳಿದ್ರೆ ಸಾಕು, ಮೈ ನಡುಗೋದಕ್ಕೆ ಶುರು ಆಗುತ್ತೆ. `ಥೂ ಈ ಮಳೆ ಬರೋದಕ್ಕೆ ಶುರು ಆದರೆ ಬಿಡೋದೇ ಇಲ್ಲ' ಅನ್ನೋ ಬೈಗುಳವೂ ಕೇಳಿ ಬರುತ್ತದೆ. ಭೂಮಿಯಲ್ಲಿ ಧಾರಾಳ ನೀರು ಇರುವ ಕಾರಣ ಮಳೆ ಬರುತ್ತದೆ ಅಂತ ನಾವು ತಿಳಿದುಕೊಂಡಿದ್ದೇವೆ. ಇತ್ತೀಚೆಗೆ ಹಲವು ಗ್ರಹಗಳಲ್ಲಿ, ಉಪಗ್ರಹಗಳಲ್ಲಿ ಮತ್ತಿತರ ಆಕಾಶಕಾಯಗಳಲ್ಲಿ ನೀರಿನ ಅಸ್ತಿತ್ವ ಪತ್ತೆಯಾಗಿದೆ. ಒಂದು ಗ್ರಹದಲ್ಲಿ ಮಳೆ ಬರುತ್ತಿರುವ ಸಾಧ್ಯತೆಯ ಬಗ್ಗೆಯೂ ಚಿಂತನೆ ನಡೆದಿದೆ. ಹಾಗಿದ್ರೆ ನೀರಿರುವ ಎಲ್ಲ ಕಾಯಗಳಲ್ಲಿಯೂ ಮಳೆ ಬರುತ್ತದೆಯೇ? ಭೂಮ್ಯೇತರ ಆಕಾಶಕಾಯಗಳಲ್ಲಿ ಜೀವಾಸ್ತಿತ್ವ, ನೀರಿನ ಇರವಿನ ಬಗ್ಗೆ ನಡೆಯುತ್ತಿರುವಂಥ ಸಂಶೋಧನೆಗಳು ಈ ಎಲ್ಲ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸುತ್ತಿವೆ. ಈ ಎಲ್ಲ ಅಧ್ಯಯನಗಳ ಬೆನ್ನಲ್ಲೇ ಮತ್ತೊಂದು ವಿಚಾರವೂ ಬೆಳಕಿಗೆ ಬಂದಿದೆ. ಅದು- ನಕ್ಷತ್ರಗಳಲ್ಲೂ ಮಳೆಯಾಗುತ್ತಿರುವ ವಿಚಾರ!     ಸದಾ ಸುಡು ಸುಡು ಎನ್ನುತ್ತಿರುವ, ಬೆಂಕಿಯ ಜ್ವಾಲೆಯನ್ನೇ ಉಸಿರಾಡುತ್ತಿರುವ ನಕ್ಷತ್ರಗಳಲ್ಲೂ