ವಿಷ್ಣುಪ್ರಿಯ ಅಂದ್ರೆ......

ವಿಷ್ಣುಪ್ರಿಯ ಅಂದ್ರೆ ಯಾರು? ಇಂಥದ್ದೊಂದು ಪ್ರಶ್ನೆಯನ್ನು ತುಂಬಾ ಬಾರಿ ನನ್ನನ್ನೇ ಕೇಳಿದವರಿದ್ದಾರೆ. ಕೆಲವೊಂದು ಬಾರಿ ಹೇಳಿ ಬಿಡಬೇಕು ಎಂಬ ತುಡಿತ. ಛೇ, ಹೇಳಿದರೆ, ನನ್ನ ಗುರುತು ಬದಲಾದರೆ ಸದ್ಯಕ್ಕೆ ಒಳ್ಳೆಯದಲ್ಲ ಎಂಬ ಮನಸಿನ ಎಚ್ಚರಿಕೆಯ ಕರೆಗೆ ಓಗೊಟ್ಟು ಸುಮ್ಮನಾಗಿದ್ದೆ. ವಿಷ್ಣುಪ್ರಿಯ ಎಂದರೆ ಅವರಂತೆ, ಇವರಂತೆ... ತುಂಬಾ ಜನ ಹೇಳಿದ್ದರು. ನನ್ನ ಅಕ್ಕನಲ್ಲಿಯೂ ‘ಹಾಗಂದ್ರೆ ನೀನಾ?’ ಎಂದು ಕೇಳಿದ್ದರು. ಹೇಳೋದು ಹೇಗೆ? ಅವರು ಯಾರೋ ಪ್ರಾಯದ ವ್ಯಕ್ತಿಯಂತೆ ಎಂದವರೂ ಇದ್ದಾರೆ.
ಈಗ ನನ್ನ ಐಡೆಂಟಿಟಿ ಬಯಲು ಮಾಡುವ ಗಳಿಗೆ ಸಮೀಪಿಸಿದೆಯೇನೋ ಎಂದೆನಿಸಿದೆ. ಆ ಕಾರಣಕ್ಕೆ ಈ ಬರಹ. ವಿಜ್ಞಾನದ ಬಗ್ಗೆ ಅತೀವ ಆಸಕ್ತಿ, ಬರೆಯುವುದಕ್ಕೆ ಅವಕಾಶವಿಲ್ಲದ ಪರಿಸ್ಥಿತಿ. ಅಂಥ ಸಂದರ್ಭದಲ್ಲಿ ಅವಕಾಶ ಸಿಕ್ಕಿದ್ದು ಹೊಸದಿಗಂತದಲ್ಲಿ. ಪ್ರತೀ ಬುಧವಾರ ವಿಜ್ಞಾನ ಮತ್ತು ಸಾದ್ಯವಾದಷ್ಟು ಮಟ್ಟಿಗೆ ಆಧ್ಯಾತ್ಮ, ವೇದಗಳನ್ನು ಸೇರಿಸಿಕೊಂಡು ಲೇಖನ ಬರೆಯುತ್ತಿದ್ದೆ. ಹಾಗಂತ ನಾನೇನೂ ಪರಿಪೂರ್ಣನಲ್ಲ. ಹಲವಾರು ವಿಚಾರಗಳ ಬಗ್ಗೆ ನಾನೂ ತಜ್ಞರ ಬಳಿ ಕೇಳಿ ತಿಳಿದುಕೊಂಡಿದ್ದಿದೆ. ಗುರುತು ಬಿಟ್ಟುಕೊಡಲಾಗದ ಅನಿವಾರ್ಯತೆಯಿಂದಾಗಿ ಅವರನ್ನು ಮುಖತಃ ಭೇಟಿ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ.
ಸತತವಾಗಿ ೫೬ ವಾರಗಳ ಕಾಲ ವಿಜ್ಞಾನ ವಿಶೇಷ ಅಂಕಣವನ್ನು ಹೊಸದಿಗಂತದಲ್ಲಿ ಬರೆದೆ. ಆದರೆ ನಂತರ ಮುಂದುವರಿಸುವುದು ಬೇಡ ಎಂದು ನಾನೇ ಅದಕ್ಕೆ ಅಂತ್ಯ ಹಾಡಿದೆ. ಹಾಗಂತ ಬ್ಲಾಗ್ ಬರೆಹ ನಿಲ್ಲುವುದಿಲ್ಲ. ಇತ್ತೀಚೆಗೆ ನನ್ನ ಬ್ಲಾಗ್ ಹೆಚ್ಚು ಅಪ್‌ಡೇಟ್ ಆಗಿಲ್ಲ. ಬಿಡುವಿಲ್ಲದ ದಿನಚರಿ, ತಾಂತ್ರಿಕ ಸಮಸ್ಯೆಗಳು ಅದಕ್ಕೆ ಕಾರಣ. ಮುಂದೆಯೂ ನಿಮ್ಮೆಲ್ಲರ ಪ್ರೀತಿ, ಹಾರೈಕೆ ನನ್ನ ಜೊತೆಗಿರಲಿ ಎಂಬುದಷ್ಟೇ ನನ್ನ ಅಪೇಕ್ಷೆ.
ನಾನು ವೈಜ್ಞಾನಿಕ ಅಂಕಣವನ್ನು ಬರೆಯುವುದಕ್ಕೆ ಶುರು ಮಾಡಿದಾಗ ಹಲವಾರು ಹಿರಿಯ ವೈಜ್ಞಾನಿಕ ಬರಹಗಾರರು ನನ್ನ ಬೆನ್ನು ತಟ್ಟಿದ್ದಾರೆ. ಅವರೆಲ್ಲರಿಗೂ ಚಿರಋಣಿ.
ಓಹ್, ಹಾಗಿದ್ದರೆ ಇನ್ನು ಹೇಗೆ ಗುರುತಿಸಿಕೊಳ್ಳಲಿ? ಪ್ರಕಾಶ್ ಪಯಣಿಗ ಎಂದಾದರೂ ಕರೆಯಿರಿ, ವಿಷ್ಣುಪ್ರಿಯ ಎಂದಾದರೂ ಅನ್ನಿ ನಿಮ್ಮ ಬಿಚ್ಚು ಮನಸಿನ ಪ್ರೀತಿಯಷ್ಟೇ ನನಗೆ ಸಾಕು.
ವಿಷ್ಣುಪ್ರಿಯ (ಪ್ರಕಾಶ್ ಪಯಣಿಗ)

my other blogs - http://hejjenu.blogspot.in and  http://dheemkita.blogspot.in and

Comments

  1. ವಿಷ್ಣುಪ್ರಿಯ-ಪ್ರಕಾಶನಿಗೆ ಶುಭವಾಗಲಿ...ಪ್ರಕಾಶ ದಿನ್ ದುಗುನಿ ರಾಚ್ ಚೌಗುನಿ ಅನ್ನೋಹಾಗೆ...

    ReplyDelete
  2. ಆಜಾದ್ ಐ.ಎಸ್(ಜಲನಯನ)...... ನಿಮ್ಮ ಹಾರೈಕೆಯಿಂದ ತುಂಬಾ ತುಂಬಾ ಖುಷಿ ಆಯ್ತು... ಪ್ರೀತಿ ಇರಲಿ

    ReplyDelete
  3. 3 ದಿನದ ಹಿಂದೆಯಷ್ಟೇ ನಿಮ್ಮ ಬ್ಲಾಗ್ ಬಗ್ಗೆ ನೆನಪಿಸಿಕೊಳ್ಳುತ್ತಿದ್ದೆ, ಯಾಕೆ ಇತ್ತೀಚೆಗೆ ಒಂದೂ ಪೋಸ್ಟ್ ಬಂದಿಲ್ಲ ಎಂದು. ಬ್ಲಾಗ್ ಮುಂದುವರಿಯಲಿ ಪ್ಲೀಸ್.

    ReplyDelete
  4. ವಿಶ್ನುಪ್ರಿಯ ಗಿಂತ ನಿಮ್ಮ 'ಪ್ರಕಾಶ್ ಪಯಣಿಗ' ಹೆಸರೇ ನನಗೆ ಹೆಚ್ಚು ಇಷ್ಟ... ನಿಮ್ಮ ಬರವಣಿಗೆ ಹೇಗೆಯೇ ಮುಂದುವರೆಯಲಿ.

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು