೨೩ ಮೈಲಿ ಎತ್ತರದಿಂದ ದಾಖಲೆಯ ಜಿಗಿತ!

ಅಧಿಕ ಒತ್ತಡ ಇರುವಂಥ ದಿರಿಸು ಧರಿಸಿಕೊಂಡು ಜಿಗಿಯುವುದು ಎಂದರೆ ಅದು ಸುಲಭದ ವಿಚಾರವಲ್ಲ ಎನ್ನುತ್ತಾರೆ ಫೆಲಿಕ್ಸ್. ಯಾಕೆಂದರೆ ಒಂದು ವೇಳೆ ಎತಿ ಎತ್ತರದಿಂದ ಜಿಗಿಯುತ್ತಿರುವ ವೇಳೆ ಈ ದಿರಿಸಿನಲ್ಲಿ ಒಂದು ಸಣ್ಣ ತೂತು ಕಾಣಿಸಿಕೊಂಡರೂ ಅದನ್ನು ಧರಿಸಿದ ವ್ಯಕ್ತಿಯ ಕಣ್ಣಗುಡ್ಡೆಗಳು ಕುದಿಯತೊಡಗುತ್ತವೆ, ಹೃದಯ ಸ್ಫೋಟಿಸುತ್ತದೆ.


5 ಅಡಿ ಎತ್ತರದಿಂದ ಜಿಗಿಯುವುದೆಂದರೇ ಮೈ ನಡುಕ ಶುರುವಾಗುತ್ತದೆ. ಇನ್ನು ೨೩ ಮೈಲಿ ಸುಮಾರು ೧,೨೦,೦೦೦ ಅಡಿ ಎತ್ತರದಿಂದ ಜಿಗಿಯುವ ವಿಚಾರವನ್ನು ಒಮ್ಮೆ ಕಲ್ಪಿಸಿಕೊಳ್ಳಿ.

ಹೌದು, ಆಸ್ಟ್ರಿಯಾದ ಡೇರ್ ಡೆವಿಲ್ ಫೆಲಿಕ್ಸ್ ಬೌಮ್ ಗಾರ್ಟನರ್ ಇಂಥದ್ದೊಂದು ಸಾಹಸಕ್ಕೆ ಸಿದ್ಧವಾಗಿದ್ದಾರೆ. ಹಾಗಂತ ಇವರೇನೂ ಸುರಕ್ಷಾ ಸಾಧನಗಳಿಲ್ಲದೇ ಜಿಗಿಯುತ್ತಿಲ್ಲ. ಸುಮಾರು ೮ ಅಡಿ ಉದ್ದದ ಕ್ಯಾಪ್ಸೂಲ್‌ನಲ್ಲಿ (ಇದು ಅಪ್ಪಟ ಗಗನನೌಕೆಯಂತೆ ಕೆಲಸ ಮಾಡುತ್ತದೆ) ಕುಳಿತು ಹಾರಾಟ ನಡೆಸಲಿದ್ದು, ಬರೋಬ್ಬರಿ ೨೩ ಮೈಲಿ ಎತ್ತರಕ್ಕೆ ಏರಿ ಅಲ್ಲಿಂದ ಧುಮುಕಲಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಅವರು ೬೦,೦೦೦ ಅಡಿ ಎತ್ತರದಿಂದ ಧುಮುಕಿ ತಮ್ಮ ಹೊಸಸಾಧನೆಗೆ ನಾಂದಿ ಹಾಡಿದ್ದಾರೆ. ಈ ಹಿಂದೆ ಇವರು ದೊಡ್ಡ ದೊಡ್ಡ ಕಟ್ಟಡಗಳ ಮೇಲಿಂದ ಹಾರುವ ಮೂಲಕ ಸಾಧನೆಯ ಒಂದೊಂದೇ ಮೆಟ್ಟಿಲನ್ನು ಏರುವುದಕ್ಕೆ ಶುರು ಮಾಡಿದ್ದರು. ಇದೀಗ ವಾತಾವರಣದ ಉನ್ನತ ಮಟ್ಟಕ್ಕೆ (ಬಹುತೇಕ ನಿರ್ವಾತದಿಂದ ಕೂಡಿರುವಂಥ ಎತ್ತರಕ್ಕೆ) ಏರಿ ಅಲ್ಲಿಂದ ಜಿಗಿಯುವ ದಾಖಲೆ ನಿರ್ಮಿಸಲು ಸಿದ್ಧತೆ ನಡೆಸಿದ್ದಾರೆ.
ಅಧಿಕ ಒತ್ತಡ ಇರುವಂಥ ದಿರಿಸು ಧರಿಸಿಕೊಂಡು ಜಿಗಿಯುವುದು ಎಂದರೆ ಅದು ಸುಲಭದ ವಿಚಾರವಲ್ಲ ಎನ್ನುತ್ತಾರೆ ಫೆಲಿಕ್ಸ್. ಯಾಕೆಂದರೆ ಒಂದು ವೇಳೆ ಎತಿ ಎತ್ತರದಿಂದ ಜಿಗಿಯುತ್ತಿರುವ ವೇಳೆ ಈ ದಿರಿಸಿನಲ್ಲಿ ಒಂದು ಸಣ್ಣ ತೂತು ಕಾಣಿಸಿಕೊಂಡರೂ ಅದನ್ನು ಧರಿಸಿದ ವ್ಯಕ್ತಿಯ ಕಣ್ಣಗುಡ್ಡೆಗಳು ಕುದಿಯತೊಡಗುತ್ತವೆ, ಹೃದಯ ಸ್ಫೋಟಿಸುತ್ತದೆ. ಸುಮಾರು ೬೦ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ತಡೆದುಕೊಳ್ಳುವ ಸಾಮರ್ಥ್ಯವನ್ನು ಈ ದಿರಿಸು ಹೊಂದಿದ್ದರೂ ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಾವು ಕಟ್ಟಿಟ್ಟಬುತ್ತಿ! ಅಂದ ಹಾಗೆ ೧,೨೦,೦೦೦ ಅಡಿ ಎತ್ತರದಿಂದ ಜಿಗಿದು ಭೂಮಿ ತಲುಪುವುದಕ್ಕೆ ಬೇಕಾದ ಸಮಯ ಕೇವಲ ೧೦ ನಿಮಿಷ!

ಸಾಹಸಪ್ರಿಯ
ಇಷ್ಟು ಆತಂಕವಿದ್ದರೂ ಫೆಲಿಕ್ಸ್ ತಮ್ಮ ಸಾಹಸಕ್ಕೆ ಅಣಿಯಾಗುತ್ತಿದ್ದಾರೆ ಎಂದರೆ ಅವರ ಧೈರ್ಯ ಎಷ್ಟಿರಬಹುದು ಎಂದು ಯೋಚಿಸಿ.

ಈ ಹಿಂದೆ ಕರ್ನಲ್ ಜಾಯ್ ಕಿಟ್ಟಿಂಜರ್ ಎಂಬವರು ೧೯೬೦ರಲ್ಲಿ ೧,೦೦,೦೦೦ ಅಡಿ ಎತ್ತರದಿಂದ ಜಿಗಿದು ದಾಖಲೆ ನಿರ್ಮಿಸಿದ್ದರು. ಅವರ ದಾಖಲೆ ಮುರಿಯಬೇಕೆಂಬುದು ಫೆಲಿಕ್ಸ್ ಕನಸು. ಅದಕ್ಕಾಗಿ ಕರ್ನಲ್ ಜಾಯ್ ಜೊತೆಗೇ ಕೆಲಸ ಮಾಡುತ್ತಿದ್ದಾರೆ ಫೆಲಿಕ್ಸ್. ಈ ಕನಸು ಸಾಕಾರಗೊಳ್ಳಬೇಕು ಎಂದು ತಮ್ಮ ಶಿಷ್ಯನಿಗೆ ಹೃದಯದಾಳದ ಪ್ರೋತ್ಸಾಹ ಜಾಯ್ ಕಡೆಯಿಂದ ಸಿಗುತ್ತಿದೆ.

ಪ್ರಸ್ತುತ ೮೩ರ ಹರೆಯದ ಕರ್ನಲ್ ಕಿಟ್ಟಿಂಜರ್ ತಾವು ೧ ಲಕ್ಷ ಅಡಿ ಎತ್ತರದಿಂದ ಜಿಗಿದಿದ್ದ ವೇಳೆ ೬೧೪ ಮೈಲಿ ವೇಗವನ್ನು ಪಡೆದುಕೊಂಡಿದ್ದರು ಮತ್ತು ತಮ್ಮ ಪ್ಯಾರಾಷುಟ್ ಹಗ್ಗದಲ್ಲಿ ಜೋತು ಬಿದ್ದಿದ್ದರು. ಆದರೆ ಫಿಲಿಕ್ಸ್ ಎಲ್ಲ ಸಮಸ್ಯೆಗಳನ್ನು ಮೀರಿ ತಮ್ಮ ಸಾಹಸವನ್ನು ಮುಂದುವರಿಸಿದ್ದಾರೆ. ಶಿಷ್ಯನ ತಪ್ಪುಗಳನ್ನು ತಿದ್ದಿ ತೀಡುವುದಕ್ಕೆ ಗುರು ಕರ್ನಲ್ ಜಾಯ್ ಕಿಟ್ಟಿಂಜರ್ ಇರಬೇಕಾದರೆ ಭಯವೇನು?

ಜಿಗಿತ ಹೀಗೆ
ಹೀಲಿಯಂನಿಂದ ತುಂಬಿರುವ ಬಲೂನ್ ಈ ಜಿಗಿತಕ್ಕೆ ಸಹಕಾರಿಯಾಗುತ್ತದೆ. ೨೩ ಮೈಲಿ ಎತ್ತರದಿಂದ ಸುಮಾರು ೬೯೦ ಮೈಲಿ ವೇಗದಲ್ಲಿ (ಶಬ್ದದ ವೇಗಕ್ಕಿಂತಲೂ ಹೆಚ್ಚು) ಜಿಗಿಯುತ್ತಾರೆ. ಭೂಮಿಯಿಂದ ಸುಮಾರು ೫೦೦೦ ಅಡಿ ಎತ್ತರದವರೆಗೆ ಬರುವಲ್ಲಿಯವರೆಗೆ ಫಿಲಿಕ್ಸ್ ತಮ್ಮ ಪ್ಯಾರಾಷುಟ್ ತೆರೆಯುವಂತಿಲ್ಲ. ೫೦೦೦  ಅಡಿ ಇದೆ ಎನ್ನುವಾಗ ಪ್ಯಾರಾಷುಟ್ ತೆರೆದರೆ ನಂತರ ವೇಗ ಕಡಿಮೆಯಾಗುತ್ತಾ ಭೂಮಿಗೆ ಸ್ಪರ್ಶಿಸುವ ಹೊತ್ತಿಗೆ ಸಂಪೂರ್ಣ ನಿಧಾನಗತಿಗೆ ಬರಲಾಗುತ್ತದೆ.

ಏನೇ ಇದ್ದರೂ ಫಿಲಿಕ್ಸ್ ಈ ಸಾಹಸದಲ್ಲಿ ಯಶಸ್ಸು ಗಳಿಸಲಿ, ಹೊಸದೊಂದು ದಾಖಲೆಯನ್ನು ನಿರ್ಮಿಸಿ ಗುರುಕಾಣಿಕೆ ಸಲ್ಲಿಸಲಿ ಎಂಬುದೇ ಸಾಹಸಪ್ರಿಯರ ಆಶಯ.

Comments

  1. Thrilling, challenging, yes... but, I'm not for daredevil acts like this that involve HUGE costs & risks.

    ReplyDelete
  2. ತು೦ಬಾ ಚನಾಗಿದ್ದು ಅರ್ಟಿಕಲ್....ಫೆಲಿಕ್ಸ್ ಗೆ ಶುಭ ಹಾರೈಕೆಗಳು..:)

    ReplyDelete
  3. ಕೇಳಲು ರೋಮಾಂಚನವಾಗುತ್ತದೆ.. ಫೆಲಿಕ್ಸ್ ರಿಗೆ ಆಲ್ ದ ಬೆಸ್ಟ್..

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು