ಇಬ್ಬರು ಸೂಯ೯ರ ಮುದ್ದಿನ ಗ್ರಹ!


ಆ ಲೋಕದಲ್ಲಿ ಒಬ್ಬ ಸೂಯ೯ ಉದಯಿಸಿದ ಬೆನ್ನಲ್ಲೇ ಇನ್ನೊಬ್ಬ ಸೂಯ೯ ಉದಯಿಸುತ್ತಾನೆ. ಮೊದಲ ಸೂಯ೯ನೊಂದಿಗೇ ಗಿರಕಿ ಹೊಡೆಯುತ್ತಾನೆ. ಆ ಸೂಯ೯ ನಡುನೆತ್ತಿಗೆ ಬಂದಾಗ ಇವನೂ ನಡುನೆತ್ತಿಗೆ ಬರುತ್ತಾನೆ. ಆ ಸೂಯ೯ ಮುಳುಗುವುದೇ ತಡ ಈ ಸೂಯ೯ನೂ ಮುಳುಗುತ್ತಾನೆ. ಈ ಇಬ್ಬರೂ ಸೂಯ೯ರಿಗೆ ಒಂದು ಮುದ್ದಿನ ಗ್ರಹವಿದೆ. ಆ ಗ್ರಹಕ್ಕೆ ಎರಡೆರಡು ಸೂಯೋ೯ದಯ ಎರಡೆರಡು ಸೂಯಾ೯ಸ್ತ ನೋಡುವಂಥ ಭಾಗ್ಯ. ಯಾರಿಗುಂಟು? ಯಾರಿಗಿಲ್ಲ?


  30 ವಷ೯ಗಳ ಹಿಂದೆ ತೆರೆ ಕಂಡಂಥ ಹಾಲಿವುಡ್ ಚಿತ್ರ ಸ್ಟಾರ್ ವಾರ್ಸ್ ನೋಡಿದವರಿಗೆ ಇದು ಅದರದ್ದೇ ಕಥೆ ಎನಿಸಬಹುದು. ಆದರೆ ಇದು ಕಥೆಯಲ್ಲ, ವಾಸ್ತವ. ಇಂಥದ್ದೊಂದು ಲೋಕವನ್ನು ನಾಸಾದ ಕೆಪ್ಲರ್ ಬಾಹ್ಯಾಕಾಶ ಮಿಶನ್ ಪತ್ತೆ ಮಾಡಿದೆ. ಭೂಮಿಯಿಂದ 200 ಜ್ಯೋತಿವ೯ಷ೯ (1 ಜ್ಯೋತಿವ೯ಷ೯ ಅಂದರೆ 9460730472580.8 ಕಿಲೋ ಮೀಟರ್) ದೂರದಲ್ಲಿ ಈ ಗ್ರಹ ಮತ್ತು ಸೂಯ೯ರು ಇದ್ದಾರೆ.

  ಈ ಗ್ರಹವು ಸಾಕಷ್ಟು ತಂಪಾಗಿದೆ ಮತ್ತು ಅನಿಲಗಳಿಂದ ತುಂಬಿದೆ. ಆದರೆ ಅಲ್ಲಿ ಜೀವಾಸ್ತಿತ್ವ ಇರುವುದು ಕಷ್ಟ. ಆದಾಗ್ಯೂ, ವಾಸಯೋಗ್ಯ ವಾತಾವರಣ ಇದೆ. ಹೀಗಾಗಿ ಅಲ್ಲಿ ಜೀವಿಗಳನ್ನು ಪತ್ತೆ ಮಾಡುವುದಕ್ಕೆ ಅಥವಾ ಜೀವಿಗಳು ವಾಸಿಸುವುದು ಸಾಧ್ಯವೇ ಎಂಬುದನ್ನು ಪತ್ತೆ ಮಾಡಲು ಪ್ರಯತ್ನಿಸಬಹುದು ಎಂದಿದ್ದಾರೆ ವಿಜ್ಞಾನಿಗಳು. ಈ ಗ್ರಹದ ಒಂದು ವಿಶೇಷವೆಂದರೆ ಇದು ಸೂಯ೯ರ ಸುತ್ತ ಪರಿಭ್ರಮಿಸುವುದಕ್ಕೆ ನಿಖರವಾದ ಕಾಲಮಾನವಿಲ್ಲ. ಅಂದರೆ, ನಮ್ಮ ಭೂಮಿ ಸೂಯ೯ನ ಸುತ್ತ ಪರಿಭ್ರಮಿಸುವುದಕ್ಕೆ 365 ದಿನಗಳ ಸಮಯ ತೆಗೆದುಕೊಳ್ಳುತ್ತದೆ. ಈ ಗ್ರಹಕ್ಕೆ ನಿಗದಿತ ಸಮಯ ಎಂಬುದಿಲ್ಲ. ಕಾರಣ- ಎರಡೆರಡು ಸೂಯ೯ರ ಗುರುತ್ವಾಕಷ೯ಣ ಶಕ್ತಿಗೆ ಅನುಗುಣವಾಗಿ ಪರಿಭ್ರಮಿಸಬೇಕಾಗಿರುವುದು. ಈ ಗ್ರಹ ಮತ್ತು ಸೂಯ೯ರ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಸುತ್ತಿದ್ದಾರೆ ನಾಸಾ ವಿಜ್ಞಾನಿಗಳು. ಇನ್ನೂ ಏನೇನು ರಹಸ್ಯಗಳು ಇಲ್ಲಿ ಅಡಗಿಕೊಂಡಿರಬಹುದು ಎಂಬ ಕುತೂಹಲ ಇದ್ದೇ ಇದೆ. ಮುಖ್ಯವಾಗಿ ಇಲ್ಲಿನ ವಾತಾವರಣ ಮತ್ತು ಜೀವಾಸ್ತಿತ್ವ ಸಾಧ್ಯತೆಯ ಬಗ್ಗೆ ಬಾಹ್ಯಾಕಾಶ ವಿಜ್ಞಾನಿಗಳು ಚಿಂತನೆ ನಡೆಸುತ್ತಿದ್ದಾರೆ.

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು