ಐನ್ ಸ್ಟೀನನ ಸಿದ್ಧಾಂತ ಸುಳ್ಳಾದರೆ ನನ್ನ ಬಾಕ್ಸಿಂಗ್ ಚಡ್ಡಿ ತಿನ್ನುವೆ ಎಂದ ಜಿಮ್!

ನಿನ್ನೆಯಷ್ಟೇ ಜಿನೇವಾದಲ್ಲಿನ ಲಾಜ್೯ ಹ್ಯಾಡ್ರಾನ್ ಕೊಲೈಡರ್ ನಿಂದ ಬಂದಂಥ ಸುದ್ದಿ ವೈಜ್ಞಾನಿಕ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಯಾವ ಸಿದ್ಧಾಂತದ ಮೇಲೆ ಇಷ್ಟು ವಷ೯ ಭೌತಶಾಸ್ತ್ರವೇ ನಿಂತಿತ್ತೋ ಆ ಸಿದ್ಧಾಂತವೇ ಅಲುಗಾಡಿದೆ ಎಂದರೆ ಮನೆಯ ಅಡಿಪಾಯವೇ ಬಿರಿದಂತೆ. ನಿಜ, ವಿಜ್ಞಾನ ಎಂದರೆ ಮೂಗು ಮುರಿದು ಅದು ಯಾರಿಗೆ ಅಥ೯ವಾಗುತ್ತೆ ಮಾರಾಯಾ ಅನ್ನುವವರು ಕೂಡಾ ಐನ್ ಸ್ಟೀನನ ಸಿದ್ಧಾಂತ ಸುಳ್ಳಾಗುತ್ತಿದೆ ಎಂಬ ಸುದ್ದಿಯನ್ನು ಚೂಯಿಂಗ್ ಗಮ್ ನಂತೆ ಜಗಿದಿದ್ದಾರೆ. ಒಂದಷ್ಟು ಹೊತ್ತು ಚಚೆ೯ ನಡೆಸಿ ಬಳಿಕ ಇವರು ಹೇಳಿದ್ದು ಅದೇ ಹಳೇ ಮಾತನ್ನು- ವಿಜ್ಞಾನ ಯಾರಿಗೆ ಅಥ೯ವಾಗುತ್ತೆ?

  ಇವರ ವಿಚಾರ ಒತ್ತಟ್ಟಿಗಿರಲಿ, ಈ ಸಂಶೋಧನೆಯ ಬಗ್ಗೆ ವಿಜ್ಞಾನಿಗಳು ಯಾವ ಪ್ರತಿಕ್ರಿಯೆಯನ್ನೇ ಕೊಡಲಿಲ್ಲವೇ? ಕೊಟ್ಟಿದ್ದಾರೆ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವೊಬ್ಬರು ಅದೆಷ್ಟು ಪೂವಾ೯ಗ್ರಪೀಡಿತರಾಗಿ ವತಿ೯ಸಿದ್ದಾರೆ ಎಂದರೆ, ಒಂದು ಸಂಶೋಧನೆಯ ಫಲಿತಾಂಶವನ್ನು ಕನಿಷ್ಟಪಕ್ಷ ಚಚಿ೯ಸುವಂಥ ಮನಃಸ್ಥಿತಿಯನ್ನೂ ಅವರು ಪ್ರದಶಿ೯ಸಿಲ್ಲ. ಇಂಥ ಪೂವಾ೯ಗ್ರಹಗಳು ಹೊಸದೇನಲ್ಲ ಬಿಡಿ. ಐನ್ ಸ್ಟೀನ್ ತನ್ನ ಸಾಪೇಕ್ಷತಾ ಸಿದ್ಧಾಂತವನ್ನು ಮಂಡಿಸುವಾಗಲೂ ಅಂದಿನ ವಿಜ್ಞಾನಿಗಳು ಪೂವಾ೯ಗ್ರಹಪೀಡಿತರಂತೆ ವತಿ೯ಸಿದ್ದರು. ನ್ಯೂಟನ್ ಗುರುತ್ವಾಕಷ೯ಣ ಶಕ್ತಿಯನ್ನು ಕಂಡು ಹಿಡಿದಾಗಲೂ ಒಂದಷ್ಟು ಅಪಸ್ವರಗಳು ಪುಟಿದೆದ್ದು ಬಂದಿದ್ದವು. ಇರಲಿ, ಅಂದಿನ ವಿಚಾರಗಳು ಈಗೇಕೆ?

  ಭೌತಶಾಸ್ತ್ರದ ಅಡಿಗಲ್ಲಾಗಿದ್ದಂಥ ಸಾಪೇಕ್ಷತಾ ಸಿದ್ಧಾಂತವನ್ನೇ ಅಲ್ಲಗಳೆಯುಂಥ ಒಂದು ಫಲಿತಾಂಶ ಬಂದಾಗ ಪೂವಾ೯ಗ್ರಹಪೀಡಿತರಂತೆ ವತಿ೯ಸಿದ್ದಕ್ಕಿಂತಲೂ ಹೆಚ್ಚಾಗಿ ಜಗತ್ತಿಗೆ ವಿಶೇಷವಾದ ಜ್ಞಾನವನ್ನು ಅರುಹಬೇಕಾದಂಥ ಕೆಲವು ವಿಜ್ಞಾನಿಗಳು ಮತಿಗೆಟ್ಟವರಂತೆ ವತಿ೯ಸಿದರು. (ಇದನ್ನು ಸಾವ೯ತ್ರೀಕರಣಗೊಳಿಸಬೇಡಿ, ಎಲ್ಲರೂ ಅಲ್ಲ, ಕೆಲವರು. ಆದರೆ ಮನೆಯ ಒಬ್ಬ ಸದಸ್ಯ ತಪ್ಪು ಮಾಡಿದರೂ ಸಂಪೂಣ೯ ಮನೆತನಕ್ಕೇ ಕೆಟ್ಟ ಹೆಸರು ಬರುತ್ತದಲ್ಲ!) ಈ ರೀತಿಯಲ್ಲಿ ವತಿ೯ಸಿದ್ದು ಸರ್ರೆ ಯೂನಿವಸಿ೯ಟಿಯ ಭೌತಶಾಸ್ತ್ರದ ಪ್ರೊಫೆಸರ್ ಜಿಮ್ ಅಲ್ ಖಾಲಿಲಿ. ಸೆನ್೯ (CERN - the European Organization for Nuclear Research) ವಿಜ್ಞಾನಿಗಳ ಫಲಿತಾಂಶಕ್ಕೆ ಇವರ ಪ್ರತಿಕ್ರಿಯೆ ಏನು ಗೊತ್ತೆ?

  "ಸೆನ್೯ ವಿಜ್ಞಾನಿಗಳು ತಮ್ಮ ಸಂಶೋಧನೆಯ ಫಲಿತಾಂಶವನ್ನು ವಿಶ್ಲೇಷಿಸುವಲ್ಲಿ ಎಡವಿದ್ದಾರೆ. ಒಂದು ವೇಳೆ ನ್ಯೂಟ್ರಿನೋಗಳು ಬೆಳಕಿಗಿಂತ ಅಧಿಕ ವೇಗದಲ್ಲಿ ಚಲಿಸಿದ್ದೇ ಆದಲ್ಲಿ ಭೌತಶಾಸ್ತ್ರವೇ ತಲೆಕೆಳಗಾಗಲಿದೆ. ವಿಜ್ಞಾನಿಗಳ ದತ್ತಾಂಶದಲ್ಲಿಯೇ ಲೋಪಗಳಿವೆ ಎಂದು ನನಗನ್ನಿಸುತ್ತದೆ. ಒಂದು ವೇಳೆ ನ್ಯೂಟ್ರಿನೋಗಳು ಬೆಳಕಿಗಿಂತ ಅತ್ಯಧಿಕ ವೇಗದಲ್ಲಿ ಚಲಿಸಿದ್ದೇ ನಿಜ ಎಂದು ಸಾಬೀತಾದಲ್ಲಿ ಟಿವಿಯಲ್ಲಿ ನೇರ ಪ್ರಸಾರದ ಕಾಯ೯ಕ್ರಮದಲ್ಲಿ ನನ್ನ ಬಾಕ್ಸಿಂಗ್ ಚಡ್ಡಿಗಳನ್ನು ತಿನ್ನುವೆ."

  ಸ್ವಾಮಿ, ಆತ ಚಡ್ಡಿಯನ್ನಾದರೂ ತಿನ್ನಲಿ ಇನ್ನೇನನ್ನಾದರೂ ತಿನ್ನಲಿ ಅದನ್ನು ನಾವು ಪ್ರಸ್ನಿಸುತ್ತಿಲ್ಲ. ಆದರೆ ಒಬ್ಬ ವಿಜ್ಞಾನಿಯಾಗಿ ಆಡುವಂಥ ಮಾತೇ ಇದು? ಒಂದು ಸಂಶೋಧನೆ ಎಂದಾಕ್ಷಣ ಅದರಲ್ಲಿ ನಿಜ ವಿಚಾರಗಳಿರಲೇಬೇಕು ಎಂದೇನಿಲ್ಲ. ಹಾಗಂತ ಅದರಲ್ಲಿ ಲೋಪಗಳೇ ಇರುವುದು ಎಂದು ಹೇಳಲಿಕ್ಕೂ ಸಾಧ್ಯವಿಲ್ಲ. ಅದರ ಬಗ್ಗೆ ವಿವರವಾದ ಅಧ್ಯಯನ ಇಲ್ಲದೆ ಅಂತಿಮ ನಿಧಾ೯ರಕ್ಕೆ ಬರುವುದೂ ಸಾಧ್ಯವಿಲ್ಲ. ಇಂತಿರುವಾಗ ಸಂಶೋಧನೆ ನಿಜವೆಂದು ಸಾಬೀತಾದರೆ ಚಡ್ಡಿ ತಿನ್ನುವೆ ಎಂಬಂಥ ಮಾತುಗಳು ಜಿಮ್ ಅಲಂಕರಿಸಿರುವಂಥ ಸ್ಥಾನಕ್ಕೆ ಭೂಷಣವಲ್ಲ.

  "ಇದು ನಾನೆಸೆದ ಸವಾಲು" ಎಂದು ಆತ ಮೊಂಡು ವಾದ ಹಿಡಿಯಬಹುದು. ಸವಾಲೆಸೆಯುವುದಕ್ಕೆ ಬೇರೇನೂ ಸಿಗಲಿಲ್ಲವೇ? ಅಷ್ಟಕ್ಕೂ ಸವಾಲೆಸೆಯುವಂಥ ಮನಸ್ಸು ಆತನಲ್ಲಿದೆ ಎಂದಾಗಿದ್ದರೆ ಸೆನ್೯ ವಿಜ್ಞಾನಿಗಳ ಸಂಶೋಧನೆ ಸುಳ್ಳು ಎಂದು ಪ್ರಯೋಗಗಳ ಮೂಲಕ ಸಾಧಿಸಿ ತೋರಿಸಬಹುದಾಗಿತ್ತು. ಅದುವೇ ಒಬ್ಬ ವಿಜ್ಞಾನಿಗೆ ಶೋಭಿತವಾಗುವಂಥ ವಿಚಾರ. ಅದು ಬಿಟ್ಟು....

Comments

Popular posts from this blog

ಮಾನವ ವಲಸೆ ಬಂದ ಬಗೆ ಹೇಗೆ?

ಅವಸಾನದತ್ತ ಹವಳದ ದಂಡೆಗಳು...!

ಸೃಷ್ಟಿ ರಹಸ್ಯದ ಬೆನ್ನು ಹತ್ತಿ...