ಪ್ಲೂಟೋದಲ್ಲಿ ಸಾಗರ ಗಭ೯!
ಒಂದು ಕಾಲದಲ್ಲಿ ನಮ್ಮ ಸೌರಮಂಡಲದ ಒಂಬತ್ತನೇ ಗ್ರಹವಾಗಿದ್ದಂಥ ಪ್ಲೂಟೋವನ್ನು ಗ್ರಹದ ಪಟ್ಟಿಯಿಂದ ತೆಗೆದು ಹಾಕಲಾಗಿತ್ತು. ಈಗ ಅದೇ ಪ್ಲೂಟೋದಿಂದಲೇ ಒಂದು ವಿಸ್ಮಯ ಹೊರಬಿದ್ದಿದೆ. ಅದು... ಪ್ಲೂಟೋದಲ್ಲಿರುವಂಥ ಸಾಗರ ಗಭ೯!

ಈಗಾಗಲೇ ಶನಿಯ ಚಂದ್ರರಾದ ಟೈಟಾನ್ ಮತ್ತು ಎನ್ಸಿಲಾಡಸ್ ಗಳಲ್ಲಿ ನೀರಿನ ಸಾಗರ ಇದೆ ಎಂದು ಸಾಬೀತಾಗಿದೆ. ಒಂದು ವೇಳೆ ಪ್ಲೂಟೋದಲ್ಲಿಯೂ ಸಾಗರ ಇರುವುದು ಖಾತ್ರಿಯಾದರೆ ಅದು ಕೂಡಾ ಈ ಕಾಯಗಳ ಪಟ್ಟಿಗೆ ಸೇರುತ್ತದೆ. ಪ್ಲೂಟೋದ ಮೇಲ್ಪದರವು ಸುಮಾರು 200 ಕಿಲೋಮೀಟರ್ ಗಳಷ್ಟು ಮಂಜಿನ ಗಟ್ಟಿಯಿಂದ ಕೂಡಿದೆ. ಈ ಮಂಜಿನ ಪದರದಿಂದ ಸುಮಾರು 100ರಿಂದ 170 ಕಿಲೋಮೀಟರ್ ಗಳಷ್ಟು ಆಳದಲ್ಲಿ ತಾಜಾ ನೀರಿನ ಸಾಗರವಿರುವ ಸಾಧ್ಯತೆಗಳಿವೆ.

2015ರ ವೇಳೆಗೆ ನ್ಯೂಹಾರಿಜಾನ್ಸ್ ಗಗನನೌಕೆ ಪ್ಲೂಟೋ ತಲುಪಲಿದೆ. ಆ ಸಂದಭ೯ದಲ್ಲಿ ನಡೆಸಲಾಗುವ ಪರೀಕ್ಷೆಗಳಿಂದ ಪ್ಲೋಟೋದಲ್ಲಿ ಸಾಗರವಿದೆಯೇ ಇಲ್ಲವೇ ಎಂಬುದು ಖಚಿತವಾಗುತ್ತದೆ. ಒಂದು ವೇಳೆ ಪ್ಲೂಟೋದಲ್ಲಿ ಸಾಗರವಿರುವುದೇ ಹೌದಾದಲ್ಲಿ ಅದರ ಮಂಜಿನ ಪದರದಲ್ಲಿ ಬಿರುಕುಗಳು ಮೂಡಿರಬೇಕು. ಯಾಕೆಂದರೆ ಯಾವುದೇ ಕಾಯದ ಗಭ೯ದಲ್ಲಿನ ಶಾಖಕ್ಕೆ ಮಂಜಿನ ಪದರ ಉಬ್ಬಿಕೊಳ್ಳಬೇಕು ಮತ್ತು ಈ ಪದರವು ವಿಕಸನಗೊಂಡಿರಬೇಕು. ಒಂದು ವೇಳೆ ಸಾಗರ ಇಲ್ಲದೇ ಇದ್ದರೆ ಮಂಜಿನ ಪದರ ಸಂಕೋಚನಗೊಂಡಿರಬೇಕು. ಶೀತಲವಾಗುತ್ತಾ ಹೋದಂತೆ ಮಂಜು ಸಂಕೋಚನಗೊಳ್ಳುತ್ತದೆ. ಯಾವುದೇ ಫಲಿತಾಂಶಕ್ಕೂ ಇನ್ನೂ ನಾಲ್ಕು ವಷ೯ ಕಾಯಬೇಕು.
Comments
Post a Comment