Posts

Showing posts from October, 2011

ಮೃತ್ಯು ವೀಣೆಯಲ್ಲಿ ಮಿಡಿದ ಬಾಳ ಶೃತಿ...

Image
ಆತ್ಮಶಕ್ತಿ, ಮನೋಶಕ್ತಿ, ವಿಶ್ವಾಸ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಶೃತಿಯೇ ಸಾಕ್ಷಿ. ಶೃತಿಯ ಜೀವನದ ಮಜಲುಗಳನ್ನು ನೋಡಿದಾಗ, ಆಕೆ ಎದುರಿಸಿದ ಸವಾಲುಗಳನ್ನು ನೆನೆಸಿದಾಗ ಕಣ್ಣುಗಳು ಮಂಜಾಗುತ್ತವೆ. ತನ್ನ ಸಮಸ್ಯೆಗಳ ವಿರುದ್ಧ ಆಕೆ ಹೋರಾಡಿದ ರೀತಿ ಅಭಿಮಾನದ ಹೊಳಹನ್ನು ಮೂಡಿಸುತ್ತದೆ.  ಆ ಒಂದು ಕ್ಷಣದಲ್ಲಿ ಉಸಿರುಗಟ್ಟಿದಂಥ ಅನುಭವವಾಗಿತ್ತು. ಕಷ್ಟಗಳು, ಸಮಸ್ಯೆಗಳು ಎಂದರೆ ಧೃತಿಗೆಡದೇ ಇದ್ದಂಥ ಜೀವ ಅಂದು ಥರಗುಟ್ಟಿತ್ತು. ಜೊತೆಗೇ ಅಚ್ಚರಿಯ ಆಘಾತ. ಮನೋಸ್ಥೈರ್ಯವನ್ನೇ ಉಸಿರಾಗಿಸಿಕೊಂಡಿರುವಂಥ ದಿಟ್ಟೆದೆಯ ವ್ಯಕ್ತಿತ್ವವನ್ನು ಕಂಡಾಗ ಅಭಿಮಾನದಿಂದ ಕಣ್ಣುಗಳು ಹನಿಗೂಡಿದ್ದರ ಅರಿವೂ ಆಗಿರಲಿಲ್ಲ. ಮಾತಾಡಲೋ, ಬೇಡವೋ, ಪ್ರಶ್ನೆಗಳನ್ನು ಕೇಳಿ ಜೀವನದ ಕಹಿಯನ್ನು ಕೆದಕಿ ಗಾಯದ ಮೇಲೆ ಬರೆ ಎಳೆಯುವಂಥ ದುಸ್ಸಾಹಸಕ್ಕೆ ಮುಂದಾಗಲೋ ಎಂದೆಲ್ಲ ಚಿಂತಿಸಿ, ತಲೆಕಡಿಸಿಕೊಂಡು ಕಡೆಗೂ ಮಾತು ಶುರುವಿಟ್ಟುಕೊಂಡರೆ ಜೀವನವನ್ನು ಎದುರಿಸುವಂಥ ಧೈರ್ಯ ಹೀಗಿರಬೇಕು ಎಂಬ ಭಾವನೆ ಮೂಡಿಸುವಂಥ ಮಾತುಗಳಿಗೆ ಮನಸ್ಸು ಶರಣಾಗಿತ್ತು. ಅಂಥದ್ದೊಂದು ಶರಣಾಗತಿಗೆ ನನ್ನ ಮನಸ್ಸು ಒಳಗಾದದ್ದು ಜಗತ್ತಿನಲ್ಲಿಡೀ ಪ್ರಖ್ಯಾತಿ ಪಡೆದಂಥ ವ್ಯಕ್ತಿಯೊಂದಿಗೆ ಮಾತನಾಡಿದಾಗ ಅಲ್ಲ. ಬಹುತೇಕ ಜನರು ಜಗತ್ತು ಎಂದರೇನೆಂಬುದನ್ನು, ಜೀವನದ ಸವಾಲುಗಳು ಹೇಗಿರುತ್ತವೆ ಎಂಬುದನ್ನು ಅರಿಯುವುದಕ್ಕೆ ಶುರು ಮಾಡುವಂಥ ಪ್ರಾಯದಲ್ಲಿ ಮೃತ್ಯುವಿನೊಂದಿಗೇ ಸೆಣಸಾಡಿ, ಮೃತ್ಯುಶಕ್ತಿಗೇ

ಎತ್ತ ಕಡೆ ಸಾಗುತ್ತಿದ್ದೇವೆ ನಾವು?

Image
ಪಾವನೆ ಎನಿಸಿಕೊಂಡಿದ್ದ ಗಂಗೆ ಕಲಿಷಿತಗೊಂಡಿದ್ದಾಳೆ. ಯಮುನೆಯ ಸ್ಥಿತಿಯೇನೂ ಭಿನ್ನವಾಗಿಲ್ಲ. ಗೋದಾವರಿಯ `ವರಿ' ನಿಜಕ್ಕೂ ಆತಂಕಕಾರಿ. ಸರಸ್ವತಿ ಸ್ವರ ಉಡುಗುತ್ತಿದೆ. ನರ್ಮದೆಯ ನೆಮ್ಮದಿಯೇ ಹಾಳಾಗಿದೆ. ಸಿಂಧು ಬತ್ತುತ್ತಿದ್ದಾಳೆ. ಕಾವೇರಿ ಅದೆಷ್ಟು ಕಾವೇರಿದ್ದಾಳೆ ಎಂಬ ಸತ್ಯ ಕರ್ನಾಟಕದ ಜನರಿಗೆ ಗೊತ್ತಿದೆ. ಈ ಎಲ್ಲ ನದಿಗಳು ತಮ್ಮ ಹರಿವನ್ನು ನಿಲ್ಲಿಸಿದರೆ ಅವಿಭಜಿತ ಭಾರತ ಬರಡಾಗುತ್ತದೆ! ಭಾರತ ಪಾಕಿಸ್ತಾನದ ಸಂಬಂಧವನ್ನು ನೆನೆಸಿಕೊಂಡಾಗಲೆಲ್ಲ ಆಕೆ ನೆನಪಾಗುತ್ತಾಳೆ. ಭಾರತದಲ್ಲಿಯೇ ಹುಟ್ಟಿ, ಭಾರತದಲ್ಲಿಯೇ ಬೆಳೆದು, ತನ್ನ ಜನ್ಮಭೂಮಿಗೂ ಒಂದಷ್ಟು ಕೊಡುಗೆಯನ್ನು ನೀಡಿ ಈಕೆ ಪಾಕಿಸ್ತಾನ ಸೇರುತ್ತಾಳೆ. ಅಲ್ಲಿನ ನೆಲಕ್ಕೊಂದಷ್ಟು ಕೊಡುಗೆಯನ್ನು ನಿಡುತ್ತಾಳೆ. ತನ್ನ ಬೆಳವಣಿಗೆಯ ಜೊತೆ ಜೊತೆಗೆ, ನಾಡಿಗೇ ಒಳಿತನ್ನು ಬಯಸುತ್ತಾಳೆ. ನಾಡನ್ನೂ ಬೆಳೆಸುತ್ತಾಳೆ. ಭಾರತದ ಮುಕುಟಮಣಿಗೆ ಸಿಂಗಾರವಾಗಿದ್ದಂಥ ಈಕೆ ಇಂದು ಸೊರಗಿದ್ದಾಳೆ. ಕ್ಷಯರೋಗಿಯಂತೆ ಕ್ಷೀಣಿಸುತ್ತಿದ್ದಾಳೆ. ಸಂಪೂರ್ಣ ಕ್ಷಯಿಸಿ, ಸಾವನ್ನಪ್ಪುವುದು ನಿಶ್ಚಿತವೋ ಎಂಬಂತೆ ಕುಗ್ಗಿ ಹೋಗಿದ್ದಾಳೆ. ಈಕೆ ಸಿಂಧು. ಭಾರತ-ಪಾಕಿಸ್ತಾನದ ಉತ್ತರದ ಭಾಗಗಳ ಜೀವಿಗಳಿಗೆ ಜೀವಜಲವನ್ನು ಕೊಟ್ಟು ದಾಹವನ್ನು ತೀರಿಸುವ ಈಕೆ ಇಂದು ತನ್ನ ದಾಹವನ್ನು ತೀರಿಸಿಕೊಳ್ಳಲು ಸಾಧ್ಯವಾಗದೇ ಒದ್ದಾಡುತ್ತಿದ್ದಾಳೆ. ಈಕೆಯ ಒಡಲಿಂದ ಅಮೃತ ಸಮಾನವಾದ ಜಲವನ್ನು ಹೀರುತ್ತಿರುವಂಥ ಮಾನವ ಆಕೆಗೆ ವಿಷವಿಕ್ಕುತ್ತ

ಶುಕ್ರನಲ್ಲಿ ಓಜೋನ್; ಮಂಗಳನಲ್ಲಿ ನೀರಾವಿ

Image
ಒಂದೆಡೆಯಿಂದ ಮಂಗಳಗ್ರಹ ಮತ್ತೆ ಸುದ್ದಿ ಮಾಡಿದರೆ, ತಾನೇನೂ ಕಮ್ಮಿ ಇಲ್ಲ ಎಂಬಂತೆ ಶುಕ್ರನೂ ಸದ್ದು ಮಾಡುತ್ತಿದ್ದಾನೆ. ಈಗಾಗಲೇ ನೀರು ಪತ್ತೆಯಾಗಿರುವಂಥ ಮಂಗಳಗ್ರಹದಲ್ಲಿನ ವಾತಾವರಣದಲ್ಲಿ ನೀರಾವಿ ಪತ್ತೆಯಾಗಿದೆ. ಹೀಗಾಗಿ ಅಲ್ಲಿ ಮಳೆ ಸುರಿಯುತ್ತದೆಯೇ ಎಂಬ ಚಿಂತನೆಗೆ ಇನ್ನಷ್ಟು ಪ್ರಖರತೆಯನ್ನು ಕೊಟ್ಟಿದೆ. ಇತ್ತ ಶುಕ್ರಗ್ರಹದಲ್ಲಿ ಓಜೋನ್ ಪದರ ಪತ್ತೆಯಾಗಿ ಅಚ್ಚರಿ ಮೂಡಿಸಿದೆ. ಅಂದರೆ, ಸೂರ್ಯನಿಂದ ಬರುವಂಥ ವಿಕಿರಣಗಳು ಶುಕ್ರನ ನೆಲವನ್ನು ಸ್ಪರ್ಶಿಸುವುದಿಲ್ಲ ಎಂಬುದು ಖಾತ್ರಿಯಾಯಿತು. ವಿಕಿರಣಗಳ ಹಾನಿಯಿಲ್ಲ ಎಂದರೆ ಜೀವಾಸ್ತಿತ್ವದ ಸಾಧ್ಯತೆಯನ್ನೂ ಅಲ್ಲಗಳೆಯಲಾಗುವುದಿಲ್ಲ. ಭೂಮಿಯ ಹೊರತಾಗಿ ಬೇರಾವ ಗ್ರಹಗಳು ಅಥವಾ ಆಕಾಶಕಾಯಗಳೂ ಸಹ ಜೀವಾಸ್ತಿತ್ವ ಹೊಂದಲು ಯೋಗ್ಯವಾಗಿಲ್ಲ ಎಂದೇ ವೈಜ್ಞಾನಿಕ ಜಗತ್ತು ತೀರಾ ಇತ್ತೀಚಿನ ವರ್ಷಗಳವರೆಗೂ ನಂಬಿತ್ತು. ಒಂದೊಂದೇ ಸಂಶೋಧನೆಗಳ ಫಲಿತಾಂಶದೊಂದಿಗೆ ಒಂದೊಂದು ಆಕಾಶಕಾಯಗಳಲ್ಲಿನ ವಿಸ್ಮಯಗಳೂ ಹೊರಬಿದ್ದಾಗ ನಂಬಿಕೆ ಬದಲಾಗುತ್ತಾ ಹೋಯಿತು. ಭೂಮಿಯಲ್ಲದೇ ಇನ್ನೂ ಯಾವುದಾದರೂ ಕಾಯಗಳಲ್ಲಿ ಜೀವಾಸ್ತಿತ್ವ ಇರಬಹುದು. ಅದಕ್ಕೆ ಬೇಕಾದಂತಹ ವಾತಾವರಣವನ್ನು ಹಲವಾರು ಕಾಯಗಳು ಹೊಂದಿವೆ ಎಂಬ ಸತ್ಯ ಗೊತ್ತಾದಾಗ ಆಕಾಶ ಕಾಯಗಳ ಬಗೆಗಿನ ವೈಜ್ಞಾನಿಕ ಚಿಂತನೆಯೇ ಬದಲಾಗಿ ಹೋಯಿತು. ಪ್ರತಿಯೊಂದು ಆಕಾಶಕಾಯಗಳಲ್ಲಿಯೂ ಜೀವಾಸ್ತಿತ್ವದ ಸಾಧ್ಯತೆಯನ್ನು ಅಥವಾ ಜೀವಾಸ್ತಿತ್ವ ಇರುವುದಕ್ಕೆ ಪೂರಕವಾದ ವಾತಾವರಣವನ್ನು ಕಂಡುಕ

ಕೃಷ್ಣಕುಹರದೊಳಗೆ ಜೀವಾಸ್ತಿತ್ವ!!!

Image
ಅದ್ಯಾಕೋ ಇತ್ತೀಚೆಗೆ ಈ ಕೃಷ್ಣಕುಹರಗಳು ಅರ್ಥಾತ್ ಕಪ್ಪುರಂಧ್ರಗಳು ಅಥವಾ ಬ್ಲ್ಯಾಕ್ ಹೋಲ್ ಗಳು ತುಂಬಾನೇ ಕಾಡುತ್ತಾ ಇವೆ; ನನ್ನನ್ನು ಮಾತ್ರವಲ್ಲ, ವಿಜ್ಞಾನಿಗಳನ್ನು ಕೂಡಾ! ಕೃಷ್ಣಕುಹರಗಳು ಇವೆ ಎಂಬ ಸಂಗತಿ ವೈಜ್ಞಾನಿಕ ಜಗತ್ತಿಗೆ ಗೊತ್ತಾದಂಥ ದಿನದಿಂದಲೇ ಇವುಗಳ ಬಗ್ಗೆ ಹೆಚ್ಚೆಚ್ಚು ಸಂಶೋಧನೆ ನಡೆಸುವಂಥ ಪ್ರುಯತ್ನಗಳು ನಡೆಯುತ್ತಿವೆ. ಅದಕ್ಕಾಗಿಯೇ ಹಲವಾರು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಇದ್ದಾರೆ. ಮೊನ್ನೆ 5ನೇ ತಾರೀಕಿನಂದು ಕೃಷ್ಣಕುಹರದ ರಹಸ್ಯಗಳು ಎಂಬ ಲೇಖನ ಬರೆದಾಗ; ಆ ಲೇಖನಕ್ಕೆ ಬಂದಂಥ ಪ್ರತಿಕ್ರಿಯೆಗಳು ಕೃಷ್ಣಕುಹರಗಳ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಜಾಲಾಡುವಂತೆ ನನ್ನನ್ನು ಪ್ರೇರೇಪಿಸಿದ್ದಂತೂ ನಿಜ. ಅದರಲ್ಲೂ ಮುಖ್ಯವಾಗಿ, ಫೇಸ್ ಬುಕ್ ಮಿತ್ರರೂ, ಹಿರಿಯರೂ ಆದಂಥ ಶ್ರೀಪಾದ ರಾವ್ ಅವರು ಭಾಗವತದಲ್ಲಿನ ಒಂದು ವಿಚಾರವನ್ನು- ಮಹಾಭಾರತ ಯುದ್ಧ ಮುಗಿದ ಮೇಲೆ ಶ್ರೀಕೃಷ್ಣ ಅರ್ಜುನನನ್ನು ಕರೆದುಕೊಂಡು ಗಾಢಾಂಧಕಾರವಿರುವಂಥ ಕೃಷ್ಣಕುಹರದೊಳಗೆ ಕರೆದುಕೊಂಡು ಹೋಗಿ ಅಲ್ಲಿ ಆದಿನಾರಾಯಣನ ದರ್ಶನ ಮಾಡಿದ- ಉಲ್ಲೇಖಿಸಿದ್ದನ್ನು ನೋಡಿದಾಗ ಒಂದು ಕ್ಷಣದಲ್ಲಿಯೇ ಅದರ ಬಗ್ಗೆ ಮನಸ್ಸಿನೊಳಗೆ ಹಲವು ರೀತಿಯ ಯೋಚನೆಗಳು ಸುಳಿದಾಡಿ ಮಾಯವಾದವು. ವೈಜ್ಞಾನಿಕ ಜಗತ್ತಿನ ಬೇರೆ ಬೇರೆ ಹೊಸ ವಿಚಾರಗಳು ಗಮನಕ್ಕೆ ಬಂದಾಗ ಅದು ಮರೆತೇ ಹೋಗಿತ್ತು. ಇಂತಿರುವಾಗ ಈ ವಿಚಾರವನ್ನು ಮತ್ತೆ ನೆನಪು ಮಾಡಿದ್ದು ರಷ್ಯಾದ ವಿಶ್ವವಿಜ್ಞಾನಿ ( ಕಾಸ್ಮೊಲಾಜಿ ಸ್

ಮಾನವ ಮೀನಿನ ರೂಪಾಂತರವೇ?

Image
ಬಹುಶಃ ಇಂಥದ್ದೊಂದು ಪ್ರಶ್ನೆ ಕೇಳಿದರೆ, ಮನುಷ್ಯನನ್ನು ಇಷ್ಟೊಂದು ಲೇವಡಿ ಮಾಡುತ್ತಿದ್ದಾರೆಯೇ ಎಂದು ಯಾರಾದರೂ ಭಾವಿಸಬಹುದೋ ಏನೋ? ಆದರೂ ಈ ಮನುಷ್ಯನೆಂಬೋ ಜೀವಿ ಭೂಮಿಗೆ ಬಂದದ್ದಾದರೂ ಎಲ್ಲಿಂದ? ತಾನೇ ತಾನಾಗಿ ಭೂಮಿಯ ಮೇಲೆ ಪ್ರತ್ಯಕ್ಷನಾದನೇ? ಅಥವಾ ಜೀವ ವಿಕಾಸದ ಹಂತದಲ್ಲಿ ಯಾವುದೋ ಪುಟ್ಟ ಜೀವಿ ವಿಕಾಸ ಹೊಂದಿ ಮನುಷ್ಯ ರೂಪವನ್ನು ತಾಳಿತೋ? ನಿಜ, ಈ ಎಲ್ಲ ಪ್ರಶ್ನೆಗಳ ಬಗ್ಗೆ ವೈಜ್ಞಾನಿಕ ಲೋಕದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. `ಮಂಗನಿಂದ ಮಾನವ'ನ ವಿಕಾಸವಾಯಿತು ಎಂದು ಇದುವರೆಗೆ ಹೇಳುತ್ತಲೇ ಬಂದಿದ್ದೇವೆ. ಇದಕ್ಕೂ ಹಿಂದಿನ ವಿಕಾಸವಾದದ ಹಂತಗಳೇನಾದರೂ ಇವೆಯೇ ಎಂಬ ಚಿಂತನೆ ವೈಜ್ಞಾನಿಕ ಜಗತ್ತಿನಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಇದರ ಫಲವೇ ಹಲವಾರು ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಈ ಸಂಶೋಧನೆಗಳ ಪೈಕಿ, ಮೋನಾಶ್ ಯೂನಿವರ್ಸಿಟಿ ಯಲ್ಲಿನ ಆಸ್ಟ್ರೇಲಿಯನ್ ರಿಜನರೇಟಿವ್ ಮೆಡಿಸಿನ್ ಸಂಸ್ಥೆಯ ಪ್ರೊ. ಪೀಟರ್ ಕ್ಯೂರಿ ಮತ್ತು ಯೂನಿವರ್ಸಿಟಿ ಆಫ್ ಸಿಡ್ನಿ ಯ ಪ್ರೊ. ನಿಕೊಲಸ್ ಕೋಲ್ ನೇತೃತ್ವದ ವಿಜ್ಞಾನಿಗಳ ತಂಡ ನಡೆಸಿದ ಸಂಶೋಧನೆ ಅಚ್ಚರಿ ಹುಟ್ಟಿಸುವಂತಿದೆ. ಕಾರಣ, ಇವರ ಸಂಶೋಧನೆಯಿಂದ ತಿಳಿದು ಬಂದದ್ದು ಏನೆಂದರೆ- ಮಾನವರು ಮೀನಿನ ರೂಪಾಂತರವಾಗಿರಬೇಕು!

ಭೂಮಿಗೆ ನೀರು, ಜೀವಿಗಳು ಬಂದದ್ದು ಎಲ್ಲಿಂದ?

Image
ನಮ್ಮ ಭೂಮಿಯಲ್ಲಿ ಎಲ್ಲಿಯೇ ನೋಡಿ, ನೀರಿನ ಆಗರ ಕಾಣಿಸುತ್ತದೆ. ಕೆಲವೊಂದು ಮರುಭೂಮಿಗಳಲ್ಲಿ ಮೇಲ್ಪದರದಲ್ಲಿ ನೀರು ಸಿಗುವುದಿಲ್ಲ, ಇನ್ನು ಕೆಲವು ಪ್ರದೇಶಗಳಲ್ಲಿ ನೀರಿನಂಶ ಕಡಿಮೆ ಇದೆ ಎನ್ನುವುದನ್ನು ಬಿಟ್ಟರೆ ನೀರಿಲ್ಲವೇ ಇಲ್ಲ ಎಂಬಂಥ ಪರಿಸ್ಥಿತಿ ಇಲ್ಲ. ಸಾಗರದಲ್ಲಿ ನೀರಿನ ರಾಶಿ ಕಂಡಾಗ, ಹಿಮಾಲಯದ ನೀಗ೯ಲ್ಲುಗಳನ್ನು ಕಂಡಾಗ, ನದಿಯುದ್ದಕ್ಕೂ ಹರಿಯುವಂಥ ತಣ್ಣನೆಯ ನೀರನ್ನು ಕಂಡಾಗ ಇಷ್ಟೊಂದು ನೀರು ಎಲ್ಲಿಂದ ಬಂತು ಎಂದು ಆಶ್ಚಯ೯ವಾಗುತ್ತದೆ.  ವಿಜ್ಞಾನಿಗಳ ಪ್ರಕಾರ ಈ ಭೂಮಿ ಎಂಬ ಗ್ರಹ ಸೃಷ್ಟಿಯಾಗಿ 80 ಲಕ್ಷ ವಷ೯ಗಳಾಗುವವರೆಗೂ ಇಲ್ಲಿ ನೀರಿನ ಲವಲೇಶವೂ ಇರಲಿಲ್ಲ. ಅಷ್ಟು ವಷ೯ಗಳ ಬಳಿಕವೇ ಭೂಮಿಯಲ್ಲಿ ನೀರು ಕಾಣಿಸಿಕೊಂಡದ್ದು ಮತ್ತು ಈ ನೀರೇ ಇಂದು ಜೀವಿಗಳಿಗೆ ಆಸರೆಯಾಗಿರುವುದು. ಇದೀಗ ನಡೆದಿರುವಂಥ ಹೊಸ ಸಂಶೋಧನೆ ಭೂಮಿಯ ಮೇಲೆ ನೀರು ಹೇಗೆ ಬಂತು ಎಂಬ ಬಗ್ಗೆ ಹೊಸ ಸಾಧ್ಯತೆಗಳನ್ನು ಅನಾವರಣಗೊಳಿಸಿದೆ. ಈ ನೂತನ ಸಂಶೋಧನೆಯ ಪ್ರಕಾರ ಧೂಮಕೇತುಗಳಿಂದಾಗಿಯೇ ಭೂಮಿಯಲ್ಲಿ ನೀರು ಕಾಣಿಸಿಕೊಂಡಿದೆ. ಹಾಗಾದರೆ ಈ ಧೂಮಕೇತುಗಳೇ ಭೂಮಿಗೆ ನೀರನ್ನು ತಂದು ತಂದು ಸುರಿದಿವೆಯೇ?.....

ಕಂಡಿರಾ ನೀಲಿ ಗುಲಾಬಿಯ...

Image
ಬುಹಶಃ ಇಂಥದ್ದೊಂದು ಗುಲಾಬಿ ಇದೆ ಎಂದರೆ ಯಾರೂ ನಂಬಲಿಕ್ಕಿಲ್ಲ. ಬಿಳಿ, ಕೆಂಪು, ತಿಳಿಗೆಂಪು... ಹೀಗೆ ಕೆಲವೇ ಬಣ್ಣಗಳಲ್ಲಿ ಸಿಗುತ್ತಾ ಇದ್ದಂಥ ಗುಲಾಬಿಯನ್ನು ಏಕಾಏಕಿ ನೀಲಿ ಬಣ್ಣದಲ್ಲೂ ಸಿಗುತ್ತೆ ಅಂದ್ರೆ ನಂಬೋದಕ್ಕಾದ್ರೂ ಹೇಗೆ ಸಾಧ್ಯ? ಅದ್ರಲ್ಲೂ ಗುಲಾಬಿ ಅಂದ್ರೆ ಪಂಚಪ್ರಾಣ ಅಂದುಕೊಳ್ಳುವ ಮಹಿಳೆಯರಿಗಂತೂ ಒಂದೇ ಒಂದು ಬಾರಿ ಈ ಗುಲಾಬಿಯನ್ನು ಮುಡಿದು ನೋಡ್ಲೇಬೇಕು ಅನ್ನಿಸಿರಬಹುದು.   ನಿಜ. ನಾನು ಹೇಳ್ತಾ ಇರೋದು ನೂರಕ್ಕೆ ನೂರರಷ್ಟು ನಿಜ. ನೀಲಿ ಗುಲಾಬಿ ಬಂದಿದೆ. ಈಗಾಗಲೇ ಮಾರುಕಟ್ಟೆಗೆ ಬರೋದಕ್ಕೂ ಸಿದ್ಧವಾಗಿದೆ. ನವೆಂಬರ್ ಹೊತ್ತಿಗೆ ಇದು ಮಾರುಕಟ್ಟೆಗೆ ಲಗ್ಗೆ ಇಡೋದಕ್ಕೆ ರೆಡಿಯಾಗಿದೆ. ಹಾಂ, ಕೊಂಡುಕೊಂಡೇ ಸಿದ್ಧ ಅಂತ ಮಾರುಕಟ್ಟೆಗೆ ಹಾಗೇ ಹೊರಟು ಬಿಟ್ಟೀರಿ! ಈ ಗುಲಾಬಿ ಬಂದಿರೋದು ಭಾರತದಲ್ಲಲ್ಲ, ಅಮೆರಿಕದಲ್ಲಿ. ಅಮೆರಿಕದಲ್ಲಿರುವಂಥವರಿಗಂತೂ ನೀಲಿ ಗುಲಾಬಿಯನ್ನು ಮುಡಿಯೋದಕ್ಕೆ ಒಂದು ಅಪೂವ೯ ಅವಕಾಶವೇ ಸಿಕ್ಕಿದೆ. ಇದು ಸಾಧ್ಯವಾ ಅನ್ನೋ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಬಂದಿರಬಹುದು, ಅಲ್ಲವೇ?   ಇದು ಸಾಧ್ಯವಾದದ್ದು ಕುಲಾಂತರಿ ತಂತ್ರಜ್ಞಾನ ದಿಂದ. ಇನ್ನೂ ಒಂದು ವಿಷಯ ಗೊತ್ತಾ? ಇದು ಈಗಾಗಲೇ ಜಪಾನಿನಲ್ಲಿ ಮಾರಾಟವಾಗುತ್ತಿದೆ. ಯಾಕಂದ್ರೆ ಈ ಗುಲಾಬಿಯನ್ನು ಹುಟ್ಟಿಸಿದ್ದು ಜಪಾನೀಯರೇ. ನೀಲಿ ಬಣ್ಣದ ಹೂವುಗಳಲ್ಲಿ ಕಾಣಿಸಿಕೊಳ್ಳುವಂಥ ವಂಶವಾಹಿಗಳನ್ನು ಗುಲಾಬಿಯ ವಂಶವಾಹಿಗಳ ಜೊತೆಗೆ ಸಂಯೋಗಿಸುವ ಮೂಲಕ ಹೊಸ ವಂಶವಾಹಿಯನ್

ಕೃಷ್ಣಕುಹರದ ರಹಸ್ಯಗಳು....

Image
ಕಪ್ಪು ರಂಧ್ರಗಳು ಸಾಮಾನ್ಯವಾಗಿ ಅತ್ಯಧಿಕ ರಾಶಿಯನ್ನು ಹೊಂದಿರುತ್ತವೆ. ಮರ್ಕಾರಿಯನ್  509 ಗೆಲಾಕ್ಸಿಯಲ್ಲಿ ಇರುವಂಥ, ನಮ್ಮ ಸೂರ್ಯನಿಗಿಂತ 30 ಕೋಟಿ ಪಟ್ಟು ಅಧಿಕ ರಾಶಿಯನ್ನು ಹೊಂದಿರುವಂಥ ಕಪ್ಪುರಂಧ್ರವನ್ನು ವಿಜ್ಞಾನಿಗಳ ತಂಡ ಅಧ್ಯಯನಕ್ಕೆ ಒಳಪಡಿಸಿದಾಗ ಈ ವಿಸ್ಮಯಗಳು ಹೊರ ಬಿದ್ದಿವೆ. ಬಾಹ್ಯಾಕಾಶ ವಿಜ್ಞಾನವೇ ಹಾಗೆ. ತಿಳಿದಷ್ಟೂ ಹೆಚ್ಚು ಹೆಚ್ಚು ವಿಸ್ಮಯಗಳು ಅನಾವರಣಗೊಳ್ಳುತ್ತಾ, ಕುತೂಹಲವನ್ನು, ಕೌತುಕವನ್ನು ಹೆಚ್ಚಿಸುತ್ತಾ ಇರುತ್ತವೆ. ಗ್ರಹಗಳು , ನಕ್ಷತ್ರಗಳು , ಧೂಮಕೇತುಗಳು ... ಹೀಗೆ ಪ್ರತಿಯೊಂದು ಆಕಾಶಕಾಯಗಳೂ ವಿಸ್ಮಯಗಳ ಆಗರ. ಒಂದೊಂದು ಕಾಯವೂ ವೈಜ್ಞಾನಿಕ ಜಗತ್ತನ್ನು ತನ್ನ ವಿಸ್ಮಯಗಳಿಂದಲೇ ತನ್ನತ್ತ ಸೆಳೆದುಕೊಳ್ಳುವಂಥ ಸಾಮರ್ಥ್ಯ ಉಳ್ಳವುಗಳು. ಅದರಲ್ಲಿಯೂ ವಿಜ್ಞಾನಿಗಳನ್ನು ಇಂದಿಗೂ ಕಾಡುತ್ತಿರುವಂಥ ಕಾಯಗಳೆಂದರೆ ಕೃಷ್ಣಕುಹರಗಳು, ಅಂದರೆ ಕಪ್ಪುರಂಧ್ರಗಳು ಅಥವಾ ಬ್ಲ್ಯಾಕ್ ಹೋಲ್ ಗಳು . ಈ ಕೃಷ್ಣಕುಹರಗಳೊಳಗೆ ಹಲವಾರು ಸಹಸ್ಯಗಳು ಅಡಗಿವೆ. ಜಗತ್ತಿನ ಸೃಷ್ಟಿಯ ಬಗ್ಗೆ, ಸೃಷ್ಟಿಯ ಮೂಲದ ಬಗ್ಗೆ, ಈ ಬ್ರಹ್ಮಾಂಡ ದ ಭವಿಷ್ಯದ ಬಗ್ಗೆ ಇವುಗಳಿಂದಲೇ ಮಾಹಿತಿ ಸಿಗಬಹುದು ಎಂದು ವಿಜ್ಞಾನಿಗಳು ಅಂದುಕೊಂಡಿದ್ದಾರೆ. ಕಪ್ಪು ರಂಧ್ರಗಳು ತಮ್ಮ ಗುರುತ್ವಾಕರ್ಷಣ ಶಕ್ತಿ ಗೆ ಸಿಲುಕಿದಂಥ ಎಲ್ಲವನ್ನು ಸ್ವಾಹಾ ಮಾಡುತ್ತವೆ, ಬೆಳಕನ್ನು ಸಹ ಬಿಡುವುದಿಲ್ಲ ಎಂದೂ ವೈಜ್ಞಾನಿಕ ಜಗತ್ತು ಭಾವಿಸಿತ್ತು. ಇದರ ಹಿಂದಿನ ರಹಸ್ಯಗಳು ಹೀಗೆ ಇರ

ನಮ್ ಸೂರ್ಯ ಹೀಗಿದ್ದಾನಾ?

Image
ಆಕಾಶದಲ್ಲಿ ಅದ್ಯಾರೋ ಇಟ್ಟು ಬಂದಂಥ ಹಣ್ಣೋ ಎಂಬಂತೆ ಕಾಣುವ ಸೂರ್ಯ ನಿಜವಾಗಿಯೂ ಹೇಗೆಲ್ಲಾ ಕಾಣ್ತಾನೆ? ಸೂರ್ಯ ಅಷ್ಟೊಂದು ಬೆಳಕು ಕೊಡ್ತಾನಲ್ಲ, ಅದೆಷ್ಟು ಬೆಂಕಿ ಹೊತ್ತಿಕೊಂಡಿರಬಹುದು ಯೋಚಿಸಿ. ನಮ್ಮ ಕಣ್ಣಿಗೆ ಆತನ ಒಡಲಲ್ಲಿ ನಡೆಯುವಂಥ ಪ್ರಕ್ರಿಯೆಗಳು ಕಾಣಿಸುವುದೇ ಇಲ್ಲ. ಸೂರ್ಯನ ಒಡಲಲ್ಲಿ ನಡೆಯುವಂಥ ಕ್ರಿಯೆಗಳನ್ನು ನೋಡಬೇಕು ಎಂಬ ಆಸೆ ಯಾರಿಗಿರುವುದಿಲ್ಲ ಹೇಳಿ. ವಿಜ್ಞಾನಿಗಳಿಗೂ ಈ ಸೂರ್ಯನನ್ನು ಕಂಡ್ರೆ ಅದೊಂಥರ ಪ್ರೀತಿ. ಈ ಬೆಂಕಿಯುಂಡೆಯ ರಹಸ್ಯಗಳನ್ನು ತಿಳಿದುಕೊಳ್ಬೇಕು ಅನ್ನೋ ಆಸೆ. ಅದಕ್ಕಾಗಿಯೇ ನಾಸಾ ಸೋಲಾರ್ ಡೈನಾಮಿಕ್ಸ್ ಅಬ್ಸರವೇಟರಿ ಸ್ಯಾಟಲೈಟನ್ನು ಉಡಾಯಿಸಿತ್ತು. ಆ ಉಪಗ್ರಹ ಈಗ ಸೂರ್ಯನ ಅಂತರಾಳವನ್ನು ಅರಿತುಕೊಂಡು, ಅದರ ಚಿತ್ರಗಳನ್ನು ಕಳುಹಿಸಿದೆ.   ಈ ಉಪಗ್ರಹವು ಪ್ರತಿದಿನ ಸುಮಾರು 1.5 ಟೆರಾಬೈಟ್ ನಷ್ಟು ದಾಖಲೆಗಳನ್ನು ವಿಜ್ಞಾನಿಗಳಿಗೆ ಕಳುಹಿಸಿಕೊಡುತ್ತದೆ. ಈ ದಾಖಲೆಗಳನ್ನು ಪರಿಶೀಲಿಸಿ ವಿಜ್ಞಾನಿಗಳು ಸೂರ್ಯನ ಅಂತರಾಳವನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. 1.5 ಟೆರಾಬೈಟ್ ಅಂದರೆ ಎಷ್ಟಾಗುತ್ತೆ ಗೊತ್ತೆ? ಎಂಪಿ3 ಪ್ಲೇಯರಿನಲ್ಲಿ 5 ಲಕ್ಷ ಹಾಡುಗಳನ್ನು ತುಂಬಿಸಿದಷ್ಟು. ಈ ಉಪಗ್ರಹವನ್ನು 2010ರ ಫೆಬ್ರುವರಿಯಲ್ಲಿ ಉಡಾವಣೆ ಮಾಡಲಾಗಿತ್ತು. 5 ವರ್ಷದ ಯೋಜನೆಯಲ್ಲಿ ಈ ಉಪಗ್ರಹವು ಸೂರ್ಯನ ಕಾಂತವಲಯವನ್ನು ಅಧ್ಯಯನ ನಡೆಸಲಿದ್ದು, ಸೂರ್ಯ ಹೇಗೆ ಕಾರ್ಯಾಚರಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಲು ನೆರ