ಕಂಡಿರಾ ನೀಲಿ ಗುಲಾಬಿಯ...


ಬುಹಶಃ ಇಂಥದ್ದೊಂದು ಗುಲಾಬಿ ಇದೆ ಎಂದರೆ ಯಾರೂ ನಂಬಲಿಕ್ಕಿಲ್ಲ. ಬಿಳಿ, ಕೆಂಪು, ತಿಳಿಗೆಂಪು... ಹೀಗೆ ಕೆಲವೇ ಬಣ್ಣಗಳಲ್ಲಿ ಸಿಗುತ್ತಾ ಇದ್ದಂಥ ಗುಲಾಬಿಯನ್ನು ಏಕಾಏಕಿ ನೀಲಿ ಬಣ್ಣದಲ್ಲೂ ಸಿಗುತ್ತೆ ಅಂದ್ರೆ ನಂಬೋದಕ್ಕಾದ್ರೂ ಹೇಗೆ ಸಾಧ್ಯ? ಅದ್ರಲ್ಲೂ ಗುಲಾಬಿ ಅಂದ್ರೆ ಪಂಚಪ್ರಾಣ ಅಂದುಕೊಳ್ಳುವ ಮಹಿಳೆಯರಿಗಂತೂ ಒಂದೇ ಒಂದು ಬಾರಿ ಈ ಗುಲಾಬಿಯನ್ನು ಮುಡಿದು ನೋಡ್ಲೇಬೇಕು ಅನ್ನಿಸಿರಬಹುದು.

  ನಿಜ. ನಾನು ಹೇಳ್ತಾ ಇರೋದು ನೂರಕ್ಕೆ ನೂರರಷ್ಟು ನಿಜ. ನೀಲಿ ಗುಲಾಬಿ ಬಂದಿದೆ. ಈಗಾಗಲೇ ಮಾರುಕಟ್ಟೆಗೆ ಬರೋದಕ್ಕೂ ಸಿದ್ಧವಾಗಿದೆ. ನವೆಂಬರ್ ಹೊತ್ತಿಗೆ ಇದು ಮಾರುಕಟ್ಟೆಗೆ ಲಗ್ಗೆ ಇಡೋದಕ್ಕೆ ರೆಡಿಯಾಗಿದೆ. ಹಾಂ, ಕೊಂಡುಕೊಂಡೇ ಸಿದ್ಧ ಅಂತ ಮಾರುಕಟ್ಟೆಗೆ ಹಾಗೇ ಹೊರಟು ಬಿಟ್ಟೀರಿ! ಈ ಗುಲಾಬಿ ಬಂದಿರೋದು ಭಾರತದಲ್ಲಲ್ಲ, ಅಮೆರಿಕದಲ್ಲಿ. ಅಮೆರಿಕದಲ್ಲಿರುವಂಥವರಿಗಂತೂ ನೀಲಿ ಗುಲಾಬಿಯನ್ನು ಮುಡಿಯೋದಕ್ಕೆ ಒಂದು ಅಪೂವ೯ ಅವಕಾಶವೇ ಸಿಕ್ಕಿದೆ. ಇದು ಸಾಧ್ಯವಾ ಅನ್ನೋ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಬಂದಿರಬಹುದು, ಅಲ್ಲವೇ?

  ಇದು ಸಾಧ್ಯವಾದದ್ದು ಕುಲಾಂತರಿ ತಂತ್ರಜ್ಞಾನದಿಂದ. ಇನ್ನೂ ಒಂದು ವಿಷಯ ಗೊತ್ತಾ? ಇದು ಈಗಾಗಲೇ ಜಪಾನಿನಲ್ಲಿ ಮಾರಾಟವಾಗುತ್ತಿದೆ. ಯಾಕಂದ್ರೆ ಈ ಗುಲಾಬಿಯನ್ನು ಹುಟ್ಟಿಸಿದ್ದು ಜಪಾನೀಯರೇ. ನೀಲಿ ಬಣ್ಣದ ಹೂವುಗಳಲ್ಲಿ ಕಾಣಿಸಿಕೊಳ್ಳುವಂಥ ವಂಶವಾಹಿಗಳನ್ನು ಗುಲಾಬಿಯ ವಂಶವಾಹಿಗಳ ಜೊತೆಗೆ ಸಂಯೋಗಿಸುವ ಮೂಲಕ ಹೊಸ ವಂಶವಾಹಿಯನ್ನು ಸಿದ್ಧಪಡಿಸಿದಂಥ ಜಪಾನೀ ವಿಜ್ಞಾನಿಗಳು ನೀಲಿ ಗುಲಾಬಿಯ ಹುಟ್ಟಿಗೆ ಕಾರಣರಾಗಿದ್ದಾರೆ. ಆದರೆ ಕುಲಾಂತರಿ ತಳಿ ರೂಪುಗೊಳ್ಳುವಾಗ ನೀಲಿ ಬಣ್ಣ ಸ್ವಲ್ಪ ಗಾಢವಾಗಿ, ನಸುನೇರಳೆ ಬಣ್ಣದಂತೆ ಕಾಣಿಸುತ್ತದೆ.

  ಕಳೆದ 20 ವಷ೯ಗಳಿಂದ ಈ ಗುಲಾಬಿಯನ್ನು ಸೃಷ್ಟಿಸಬೇಕು ಎಂದು ವಿಜ್ಞಾನಿಗಳು ಪ್ರಯತ್ನಪಡುತ್ತಿದ್ದರು. ಜಪಾನೀ ಕಂಪನಿ ಸಂಟೋರಿ ಲಿಯಮಿಟೆಡ್ 2009ರಲ್ಲಿ ಈ ಕಾಯ೯ದಲ್ಲಿ ಯಶಸ್ವಿಯಾಯಿತು. ಆಗಿನಿಂದಲೇ ಜಪಾನಿನಲ್ಲಿ ಈ ಗುಲಾಬಿಯ ಗೆಲ್ಲುಗಳನ್ನು 15-20 ಪೌಂಡ್ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದಿನ್ನೂ ಭಾರತಕ್ಕೆ ಬಂದಿಲ್ಲ. ಅದ್ಯಾವಾಗ ಬರುತ್ತೋ ಅಂತ ನಮ್ಮಲ್ಲಿನ ಹೆಂಗಳೆಯರು ಕಾಯುತ್ತಿರುವುದಂತೂ ನಿಜ.

Comments

  1. ayyo... innu ententa madtwo gottille...devara srushtige manushyana srushti sawaalu !

    ReplyDelete
  2. ಚಿಕ್ಕಂದಿನಲ್ಲಿ ನನ್ನಜ್ಜ ನೀಲಿ ಗುಲಾಬಿಯ ಕತೆ ಹೇಳಿದ್ದಾಗಿಂದಲೂ...ಈವರೆಗೂ ನಾ ಈ ನೀಲಿಗುಲಾಬಿಯ ಬರುವಿಕೆಯನ್ನ ಕಾದಿದ್ದೇನೆ :)
    ನಿಜವಾಗಿಯೂ ಒಮ್ಮೆ ನೀಲಿ ಗುಲಾಬಿಯನ್ನ ಕೈಲಿಡಿದು ನೋಡುವ ನಿರೀಕ್ಷೆ!
    ಸವಿತ ಎಸ್ ಆರ್

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು