ಭೂಮಿಗೆ ನೀರು, ಜೀವಿಗಳು ಬಂದದ್ದು ಎಲ್ಲಿಂದ?
ನಮ್ಮ ಭೂಮಿಯಲ್ಲಿ ಎಲ್ಲಿಯೇ ನೋಡಿ, ನೀರಿನ ಆಗರ ಕಾಣಿಸುತ್ತದೆ. ಕೆಲವೊಂದು ಮರುಭೂಮಿಗಳಲ್ಲಿ ಮೇಲ್ಪದರದಲ್ಲಿ ನೀರು ಸಿಗುವುದಿಲ್ಲ, ಇನ್ನು ಕೆಲವು ಪ್ರದೇಶಗಳಲ್ಲಿ ನೀರಿನಂಶ ಕಡಿಮೆ ಇದೆ ಎನ್ನುವುದನ್ನು ಬಿಟ್ಟರೆ ನೀರಿಲ್ಲವೇ ಇಲ್ಲ ಎಂಬಂಥ ಪರಿಸ್ಥಿತಿ ಇಲ್ಲ. ಸಾಗರದಲ್ಲಿ ನೀರಿನ ರಾಶಿ ಕಂಡಾಗ, ಹಿಮಾಲಯದ ನೀಗ೯ಲ್ಲುಗಳನ್ನು ಕಂಡಾಗ, ನದಿಯುದ್ದಕ್ಕೂ ಹರಿಯುವಂಥ ತಣ್ಣನೆಯ ನೀರನ್ನು ಕಂಡಾಗ ಇಷ್ಟೊಂದು ನೀರು ಎಲ್ಲಿಂದ ಬಂತು ಎಂದು ಆಶ್ಚಯ೯ವಾಗುತ್ತದೆ.

ಹಷ೯ಲ್ ಬಾಹ್ಯಾಕಾಶ ವೀಕ್ಷಣಾಲಯದಿಂದ ಸಂಶೋಧನೆ ನಡೆಸುತ್ತಿರಬೇಕಾದರೆ ಧೂಮಕೇತುಗಳಲ್ಲಿ ನಮ್ಮಲ್ಲಿನ ಸಾಗರದಲ್ಲಿನ ನೀರಿನಂತೆಯೇ ಇರುವಂಥ ನೀರಿನ ಅಂಶಗಳು ಕಂಡುಬಂದಿವೆ. ಆದರೆ ಇವುಗಳು ಮಂಜಿನ ಕಳಗಳಂತಿವೆ. ಈ ಆಧಾರದ ಮೇಲೆ ವಿಜ್ಞಾನಿಗಳು ಧೂಮಕೇತುಗಳಲ್ಲಿ ಮಂಜಿನ ರೂಪದ ನೀರೇ ನಮ್ಮಲ್ಲಿನ ಸಾಗರ ಸೇರಿರಬೇಕು ಎಂದು ಅಂದಾಜಿಸುತ್ತಿದ್ದಾರೆ. ಈ ಅಂದಾಜು ನಿಜ ಎಂದೇ ಆದಂಥ ಪಕ್ಷದಲ್ಲಿ ಭೂಮಿಯ ಮೇಲೆ ಜೀವಿಗಳು ಹೇಗೆ ವಿಕಾಸ ಹೊಂದಿದವು ಎಂಬ ಬಗ್ಗೆ ಇನ್ನಷ್ಟು ನಿಖರವಾದ ಮಾಹಿತಿಗಳು ದೊರಕಲಿವೆ.
ದ್ರವರೂಪದ ನೀರು ಇಲ್ಲದೇ ಭೂಮಿಯಲ್ಲಿ ಜೀವಿಗಳು ವಿಕಾಸ ಹೊಂದುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಸಾಗರದಲ್ಲಿ ಈ ನೀರಿನ ಅಂಶ ಹೇಗೆ ಬಂತು ಎಂಬುದು ಮೂಲಭೂತ ಪ್ರಶ್ನೆ. ಇಂತಿರುವಾಗ ಹೊಸ ಸಂಶೋಧನೆ ಈ ನಿಟ್ಟಿನಲ್ಲಿ ಬೆಳಕು ಚೆಲ್ಲುತ್ತದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ಮಸ್ಸಾಷುಸೆಟ್ಸ್ ಆಸ್ಟ್ರಾನಮಿ ಯೂನಿವಸಿ೯ಟಿಯ ಪ್ರೊ. ಟೆಡ್ ಬಗಿ೯ನ್.

ಈ ಧೂಮಕೇತು ಮಂಜಿನ ರೂಪದ ನೀರನ್ನು ಮತ್ತು ಘನೀಕೃತ ಕಾಬ೯ನ್ ಡೈ ಆಕ್ಸೈಡನ್ನು ಹೊಂದಿದೆ. ರಕ್ತಾತೀತ ದೂರದಶ೯ಕ ಕೊಟ್ಟಂಥ ಅಂಕಿ-ಅಂಶಗಳ ನೆರವಿನಿಂದ ಈ ಧೂಮಕೇತುವಿನಲ್ಲಿರುವ ನೀರಿಗೂ ನಮ್ಮ ಸಾಗರದಲ್ಲಿರುವ ನೀರಿಗೂ ಅತ್ಯಂತ ಸಾಮ್ಯತೆ ಇದೆ ಎಂಬ ವಿಷಯವನ್ನು ವಿಜ್ಞಾನಿಗಳು ಕಂಡು ಕೊಂಡಿದ್ದಾರೆ. ಸಹಜವಾದಂಥ ಜಲಜನಕದ ಅಣುಗಳು ಮತ್ತು ಸಾಂಧ್ರ ನೀರಿನಲ್ಲಿ ಕಂಡುಬರುವಂಥ ಡ್ಯುಟೀರಿಯಂ ಕಣಗಳನ್ನು ಸಂಯೋಜನೆ ಮಾಡಿದಾಗ ವಿಜ್ಞಾನಿಗಳಿಗೆ ಈ ನೀರುಗಳಲ್ಲಿ ಸಾಮ್ಯತೆ ಕಂಡಿದೆ.

ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಇನ್ನೂ ಹಾಗೆಯೇ ಉಳಿದುಕೊಂಡಿದೆ. ಈ ಭೂಮಿಯಲ್ಲಿ ನೀರು ಯಾವುದೋ ಒಂದು ಕಡೆಯಿಂದ ಬಂತು ಎಂದೇ ಇಟ್ಟುಕೊಳ್ಳೋಣ. ಹಾಗಿದ್ದರೆ ಜೀವಗಳು ಬಂದದ್ದು ಎಲ್ಲಿಂದ? ಭೂಮಿಯಲ್ಲಿಯೇ ಉದಯವಾಗಿ, ನಂತರ ವಿಕಾಸವಾದದ್ದು ಎಂದೇ ಹೇಳುವುದಾದರೆ ಅದಾವ ಅಂಶ ಜೀವಿಗಳ ಸೃಷ್ಟಿಗೆ ಕಾರಣವಾಯಿತು? ಯಾವ ಜೀವಿ ಮೊದಲು ಸೃಷ್ಟಿಯಾಯಿತು? ನಂತರ ಉಳಿದ ಜೀವಿಗಳು ವಿಕಾಸವಾದದ್ದು ಹೇಗೆ? ನಮಗೂ ಆ ಮೂಲ ಜೀವಿಗಳಿಗೂ ಏನು ಸಂಬಂಧ?.... ಬಹುಶಃ ಪ್ರಶ್ನೆಗಳು ಮುಗಿಯುವುದೇ ಇಲ್ಲ.
ಹಾಗಿದ್ದರೆ ಈ ಪ್ರಶ್ನೆಗಳಿಗೆಲ್ಲ ಉತ್ತರ ಯಾವುದು?
ಅದಕ್ಕೆ ಇನ್ನೊಂದು ಸಂಶೋಧನೆಯ ಕಡೆಗೆ ಗಮನ ಹರಿಸಬೇಕು. ಈ ಸಂಶೋಧನೆ ನಡೆಸಿದ್ದು ಯೂನಿವಸಿ೯ಟಿ ಆಫ್ ಇಲಿನೋಯಿಸ್ ವಿಜ್ಞಾನಿಗಳು. ಏನಿದು ಸಂಶೋಧನೆ, ನೋಡೋಣ.....

The last universal common ancestor (LUCA) ಎಂದು ಕರೆಯಲ್ಪಡುವಂಥ ಮೂಲ ಜೀವಿಯ ಬಗ್ಗೆಯೇ ಈಗ ಅಧಿಕ ಚಚೆ೯ ನಡೆಯುತ್ತಿದೆ. ಕೆಲವು ವಿಜ್ಞಾನಿಗಳು ಇದೊಂದು ಕೋಶ ಎಂದೇ ಈಗಲೂ ಹೇಳುತ್ತಾರೆ.
ಏಕಕೋಶ ಜೀವಿಗಳಲ್ಲಿ ಪಾಲಿಫಾಸ್ಪೇಟ್ ಎಂಬಂಥ ರಾಸಾಯನಿಕ ಕಂಡುಬರುತ್ತದೆ ಮತ್ತು ಇದುವೇ ಆ ಏಕಕೋಶ ಜೀವಿಗಳಲ್ಲಿ ಶಕ್ತಿಯ ಆಗರವಾಗಿರುತ್ತದೆ. ಆದರೆ ಈ ರಾಸಾಯನಿಕಕ್ಕೂ ಜೀವಿಗಳ ಮೂಲ ಎಂದೇ ಕರೆಯಲ್ಪಡುವಂಥ ಆಗ೯ನೆಲ್ಲೆ (ಕೋಶಗಳ ಒಳಗಿರುವಂಥ ಉಪಘಟಕ, ಮೂಲ ಜೀವಿ(?))ಅತ್ಯಂತ ಸಾಮ್ಯತೆಯಿದೆ ಎನ್ನುತ್ತದೆ ನೂತನ ಸಂಶೋಧನೆ. ಅಲ್ಲದೆ, ಈ ರಾಸಾಯನಿಕವು ಯೂನಿವಸ೯ಲ್ ಆಗ೯ನೆಲ್ಲೆಯ ಪ್ರತೀಕವೇ ಆಗಿದೆ ಎನ್ನುತ್ತದೆ.
ಮಾನವನಲ್ಲಿರುವಂಥ ಅಂಗಾಂಗಗಳು (ಆಗ೯ನ್) ಯಾವ ರೀತಿಯ ಕೆಲಸಗಳನ್ನು ಮಾಡುತ್ತದೆಯೋ ಅಂಥದ್ದೇ ಕೆಲಸಗಳನ್ನು ಮಾಡುತ್ತದೆ ಈ ಆಗ೯ನೆಲ್ಲೆ. ಜೀವ ವೃಕ್ಷದ ಮೂಲ ಎಂದೇ ಗುರುತಿಸಿಕೊಂಡಿರುವಂಥ ಬ್ಯಾಕ್ಟೀರಿಯಾಗಳು, ಆಷಿ೯ಯಾಗಳು, ಯುಕರಿಯೋಟ್(ಇವೆಲ್ಲ ಏಕಕೋಶ ಜೀವಿಗಳು)ಗಳೆಲ್ಲವಕ್ಕೂ ಒಂದೇ ಮೂಲವಲ್ಲ, ಬ್ಯಾಕ್ಟೀರಿಯಾಗಳಲ್ಲಿ ಆಗ೯ನೆಲ್ಲೆ ಇಲ್ಲ ಎಂದು ಈ ಹಿಂದೆ ವೈಜ್ಞಾನಿಕ ಜಗತ್ತು ಭಾವಿಸಿತ್ತು. ಆದರೆ 2003ರಲ್ಲಿ ಇದೇ ಇಲಿನೋಯಿಸ್ ವಿಜ್ಞಾನಿಗಳ ತಂಡ ನಡೆಸಿದ ಸಂಶೋಧನೆಯ ಪ್ರಕಾರ, ಬ್ಯಾಕ್ಟೀರಿಯಾಗಳಲ್ಲಿನ ಪಾಲಿಫಾಸ್ಪೇಟ್ ಸ್ಟೋರೇಜ್ ವ್ಯವಸ್ಥೆಯು ಭೌತಿಕವಾಗಿ, ರಾಸಾಯನಿಕವಾಗಿ, ಕ್ರಿಯಾತ್ಮಕವಾಗಿ ಅಸಿಡೋಕ್ಯಾಲ್ಸಿಸಮ್ ಎಂಬ ಆಗ೯ನೆಲ್ಲೆಗೆ ಸಮನಾಗಿವೆ. ಅಂದರೆ ಬ್ಯಾಕ್ಟೀರಿಯಾಗಳಿಗೂ ಮೊದಲೇ ಅಸಿಡೋಕ್ಯಾಲ್ಸಿಸಮ್ ಈ ಭೂಮಿಯಲ್ಲಿತ್ತು ಎಂದಾಯಿತು.
ಇದರಿಂದಾಗಿ ವಿಜ್ಞಾನಿಗಳ ತಂಡವು V-H+PPase ಎಂಬ ಪ್ರೋಟೀನ್ ಎಂಜೈಮನ್ನು (ಕಿಣ್ವ) ಅಧ್ಯಯನಕ್ಕೆ ಒಳಪಡಿಸಿದರು. ಇದು ಮೂರೂ ರೀತಿಯ ಏಕಕೋಶ ಜೀವಿಗಳಲ್ಲಿ ಕಂಡುಬರುತ್ತದೆ. ಹಲವಾರು ಜೀವಿಗಳಲ್ಲಿ ಕಂಡುಬಂದಂಥ ಈ ವಶಂವಾಹಿಗಳನ್ನು ಹೋಲಿಕೆ ಮಾಡುವ ಮೂಲಕ, ವಿಭಿನ್ನ ಜೀವಿಗಳಲ್ಲಿ ಕಂಡು ಬರುವಂಥ ವಿಭಿನ್ನ ಕಿಣ್ವಗಳು ಹೇಗೆ ಒಂದಕ್ಕೊಂದು ಸಂಬಂಧ ಹೊಂದಿವೆ ಎಂಬುದನ್ನು ಆಧರಿಸಿ ವಿಜ್ಞಾನಿಗಳು ಒಂದು ವಂಶ ವೃಕ್ಷವನ್ನು ರಚಿಸಿದರು.
ಇದರೊಂದಿಗೆ, ಇಂದು ಕಾಣುವ ಸರಳ ಜೀವಿಗಳಿಗಿಂತ LUCA ತುಂಬಾ ಕ್ಲಿಷ್ಟವಾದದ್ದು. ಜೀವಜಗತ್ತು ವಿಕಾಸವಾಗುತ್ತಾ ಹೋದಂತೆ ಇದು ತನಗೆ ತಾನೇ ಸರಳವಾಗುತ್ತಾ ಹೋಯಿತು ಎಂಬ ಚಿಂತನೆಗೆ ವಿಜ್ಞಾನಿಗಳು ಬಂದಿದ್ದಾರೆ. ಜೀವ ಜಗತ್ತಿನ ವಿಕಾಸ ಎಂದರೆ ಅದು ಕೇವಲ ಒಂದು ಕಟ್ಟಡವನ್ನು ಕಟ್ಟಿದಂಥ ಸರಳ ಕೆಲಸವಲ್ಲ. ಅದರ ಹಿಂದೆ ಹಲವು ರಹಸ್ಯಗಳಿವೆ. ಅದನ್ನು ಭೇದಿಸಬೇಕು. ಅದ್ಯಾವಾಗ ಸಾಧ್ಯವಾಗುತ್ತೆ?
jeeva vikasa bahu klishtavaada vishaya......idaralli dinakkondu belavanigegalaaguttide...aadare sariyaada uttara innu sikkilla.....
ReplyDeleteಭೂಮಿಗೆ ನೀರು ಧೂಮಕೇತುಗಳಿಂದ ಬಂತು ಎನ್ನುವುದನ್ನು ನಂಬುವುದು ಕಷ್ಟ. ಅಂತಹ ಸಾಧ್ಯತೆ ಕಡಿಮೆ. ಅಲ್ಪ ಸ್ವಲ್ಪ ಬಂದಿರಬಹುದು ಅಷ್ಟೆ. ಆದರೆ ಇಲ್ಲಿನ ನೀರು ಇಲ್ಲಿಯೇ ತಯಾರಾಗಿರಬೇಕು.
ReplyDeleteಲೇಖನ ಚೆನ್ನಾಗಿದೆ. ಬ್ಲಾಗೂ ಚೆನ್ನಾಗಿದೆ.
ReplyDelete