ನಮ್ ಸೂರ್ಯ ಹೀಗಿದ್ದಾನಾ?

ಆಕಾಶದಲ್ಲಿ ಅದ್ಯಾರೋ ಇಟ್ಟು ಬಂದಂಥ ಹಣ್ಣೋ ಎಂಬಂತೆ ಕಾಣುವ ಸೂರ್ಯ ನಿಜವಾಗಿಯೂ ಹೇಗೆಲ್ಲಾ ಕಾಣ್ತಾನೆ? ಸೂರ್ಯ ಅಷ್ಟೊಂದು ಬೆಳಕು ಕೊಡ್ತಾನಲ್ಲ, ಅದೆಷ್ಟು ಬೆಂಕಿ ಹೊತ್ತಿಕೊಂಡಿರಬಹುದು ಯೋಚಿಸಿ. ನಮ್ಮ ಕಣ್ಣಿಗೆ ಆತನ ಒಡಲಲ್ಲಿ ನಡೆಯುವಂಥ ಪ್ರಕ್ರಿಯೆಗಳು ಕಾಣಿಸುವುದೇ ಇಲ್ಲ. ಸೂರ್ಯನ ಒಡಲಲ್ಲಿ ನಡೆಯುವಂಥ ಕ್ರಿಯೆಗಳನ್ನು ನೋಡಬೇಕು ಎಂಬ ಆಸೆ ಯಾರಿಗಿರುವುದಿಲ್ಲ ಹೇಳಿ. ವಿಜ್ಞಾನಿಗಳಿಗೂ ಈ ಸೂರ್ಯನನ್ನು ಕಂಡ್ರೆ ಅದೊಂಥರ ಪ್ರೀತಿ. ಈ ಬೆಂಕಿಯುಂಡೆಯ ರಹಸ್ಯಗಳನ್ನು ತಿಳಿದುಕೊಳ್ಬೇಕು ಅನ್ನೋ ಆಸೆ. ಅದಕ್ಕಾಗಿಯೇ ನಾಸಾ ಸೋಲಾರ್ ಡೈನಾಮಿಕ್ಸ್ ಅಬ್ಸರವೇಟರಿ ಸ್ಯಾಟಲೈಟನ್ನು ಉಡಾಯಿಸಿತ್ತು. ಆ ಉಪಗ್ರಹ ಈಗ ಸೂರ್ಯನ ಅಂತರಾಳವನ್ನು ಅರಿತುಕೊಂಡು, ಅದರ ಚಿತ್ರಗಳನ್ನು ಕಳುಹಿಸಿದೆ.

  ಈ ಉಪಗ್ರಹವು ಪ್ರತಿದಿನ ಸುಮಾರು 1.5 ಟೆರಾಬೈಟ್ ನಷ್ಟು ದಾಖಲೆಗಳನ್ನು ವಿಜ್ಞಾನಿಗಳಿಗೆ ಕಳುಹಿಸಿಕೊಡುತ್ತದೆ. ಈ ದಾಖಲೆಗಳನ್ನು ಪರಿಶೀಲಿಸಿ ವಿಜ್ಞಾನಿಗಳು ಸೂರ್ಯನ ಅಂತರಾಳವನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. 1.5 ಟೆರಾಬೈಟ್ ಅಂದರೆ ಎಷ್ಟಾಗುತ್ತೆ ಗೊತ್ತೆ? ಎಂಪಿ3 ಪ್ಲೇಯರಿನಲ್ಲಿ 5 ಲಕ್ಷ ಹಾಡುಗಳನ್ನು ತುಂಬಿಸಿದಷ್ಟು. ಈ ಉಪಗ್ರಹವನ್ನು 2010ರ ಫೆಬ್ರುವರಿಯಲ್ಲಿ ಉಡಾವಣೆ ಮಾಡಲಾಗಿತ್ತು. 5 ವರ್ಷದ ಯೋಜನೆಯಲ್ಲಿ ಈ ಉಪಗ್ರಹವು ಸೂರ್ಯನ ಕಾಂತವಲಯವನ್ನು ಅಧ್ಯಯನ ನಡೆಸಲಿದ್ದು, ಸೂರ್ಯ ಹೇಗೆ ಕಾರ್ಯಾಚರಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಲು ನೆರವಾಗುತ್ತದೆ.

  ಮುಖ್ಯುವಾಗಿ ಸೂರ್ಯನಲ್ಲಿ ಕಾಂತವಲಯ ಹೇಗೆ ಸೃಷ್ಟಿಯಾಗುತ್ತದೆ, ಇದು ಸೌರಮಾರುತಗಳೇ ಮೊದಲಾದ ಸೌರಚಟುವಟಿಕೆಗಳಿಗೆ ಹೇಗೆ ಕಾರಣವಾಗುತ್ತದೆ ಎಂಬೆಲ್ಲ ವಿಚಾರಗಳನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದಾರೆ ವಿಜ್ಞಾನಿಗಳು.

ಫ್ಳೋರಿಡಾದ ಕೇಪ್ ಕೆನೆವರಲ್ ನಿಂದ ಉಡ್ಡಯನಗೊಂಡಂಥ ಈ ಉಪಗ್ರಹದ ವೆಚ್ಚ 85.5 ಕೋಟಿ ಅಮೆರಿಕನ್ ಡಾಲರ್. 7.2x14.8 ಅಡಿಯ ಈ ಉಪಗ್ರಹ ಭೂಮಿಯಿಂದ 22,000 ಮೈಲಿಗಳಷ್ಟು ಎತ್ತರದಲ್ಲಿ ಪರಿಭ್ರಮಿಸುತ್ತಿದೆ. 21 ಅಡಿಯ ಸೌರ ಪೆನಾಲ್ ಗಳು 1450 ವ್ಯಾಟ್ ವಿದ್ಯುತ್ ಉತ್ಪಾದಿಸುತ್ತವೆ. ಈ ಉಪಗ್ರಹ ತೆಗೆದು ಕಳುಹಿಸಿದಂಥ ಚಿತ್ರಗಳನ್ನು ನೋಡಿ. ಇವು ಮಾನವನ ಕಣ್ಣಿಗೆ ಕಾಣದೇ ಇರುವಂಥ ಕ್ಷ-ಕಿರಣ ಮತ್ತು ನೇರಳಾತೀತ ಕಿರಣಗಳ ಮೂಲಕ ಸೂರ್ಯ ಹೇಗೆ ಶಕ್ತಿಯನ್ನು ಪಸರಿಸುತ್ತಾನೆ ಎಂಬುದನ್ನು ಸೂಚಿಸುತ್ತವೆ:












Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು