ಶಂಕರಾಚಾರ್ಯ ಅಕ್ಷರ ವಂದನಂ

(ಈ ಕೀರ್ತನೆಯ ಸುಮಧುರ ಗಾಯನ ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ... https://youtu.be/44RNS4pNMfc ) ಅಷ್ಟಕಾದಿ ಅಪಾರವಂ ಅಕಲಂಕಿತ ಸ್ತವವಂ ಅಖಂಡದಿಂ ಅರ್ಪಿಸಿದ ಅಜೇಯ ಗುರು ಶಂಕರಂ ||೧|| ಆಚಾರ್ಯೋತ್ತಮ ಆಕಲ್ಪಂ ಆದ್ಯದ್ವೈತದ ಆಕರಂ ಆತ್ಮವೇ ಆದಿಯೆಂದನುಂ ಆ ಆದಿಗುರು ಶಂಕರಂ ||೨|| ಇಂದ್ರಛಾಪ ಇಹಾಲೋಕ ಇಂಥಾಮೋಹ ಇಲ್ಯಾಕೆನೆ ಇಷುಧಿಯಿಂ ಇಷ್ಟಕಾವ್ಯಂ ಇತ್ತನಾಗುರು ಶಂಕರಂ ||೩|| ಈಶ ಈಶಾನಿ ಈರ್ವರೇ ಈಸೃಷ್ಟಿಗಾದಿ ಈಜಗಂ ಈಪ್ಸೆ ಈಷಣವೇಕೆಂದಂ ಈ ಜಗದ್ಗುರು ಶಂಕರಂ ||೪|| ಉತ್ಕಂಠಿತ ಉಜ್ವಲನುಂ ಉರ್ವಿಯನು ಉದ್ಧರಿಪಂ ಉಕ್ಷಕೇತ ಉಮಾಶಿವಂ ಉಪಾಸ್ಯ ಗುರು ಶಂಕರಂ ||೫|| ಊನಮಾನವನೂನವಂ ಊರ್ಜದಿಂಗಳೆದಾಗನೀ ಊರೂರಜನಮಾನದಿಂ ಊರ್ಜಸ್ವಿ ಗುರು ಶಂಕರಂ ||೬|| ಋಕ್ಕು ಋಕ್ಕಿನ ಭಾಷ್ಯವಂ ಋಷಿಗಳುಂ ಋತ್ವಿಜರುಂ ಋತುವೆಲ್ಲದಿ ಭಜಿಸೆ ಋಣಿನಾನ್ಗುರು ಶಂಕರಂ ||೭|| ಎಚ್ಚಕನೆ ಎಚ್ಚರಿಸಿಂ ಎಮ್ಮನವಂ ಎತ್ತರಿಸಿ ಎನಸುಂ ನೀ ಎರ್ದೆಲಾಡೋ ಎಂದುಂ ನೀ ಗುರು ಶಂಕರಂ ||೮|| ಏಸುಜನ್ಮವ ಏರಿಯುಂ ಏರಾಟದಕರ್ಮವಿದುಂ ಏಳ್ ಏಳೆಂದು ಏಳಿಸೆ ಏಕೈಕ್ಯಂ ಗುರು ಶಂಕರಂ ||೯|| ಐಸಿರಿ ಐಹಿಕೈಲಿದುಂ ಐಷಾರಾಮವಿದೇಕಿನ್ನುಂ ಐಚ್ಛೆಗಳೆಯೆ ಐಕವೋ ಐತಿಹ್ಯ ಗುರು ಶಂಕರಂ ||೧೦|| ಒಳ್ಳಿತೋಪ್ಪಿತವೋಲ್ಮೆಯಿಂ ಒಚ್ಚಯದಿಂ ಒಟ್ಟಾಗಲ್ ಒಳಗಣ್ತೆರೆದೋಳಗೆಂ ಒಳ್ಗಂಪು ಗುರು ಶಂಕರಂ ||೧೧|| ಓಂಕಾರಬೀಜ ಓಜಸ್ಸುಂ ಓಘವೋವಳಿಸೋಕುಳಿಂ ಓಂಕಾರಮೂರುತೀಶನಾ ಓಜಸ್ವಿ ಗುರು ಶಂಕರಂ ||೧೨...