ದೇವರು ಕಾಣಲೇ ಇಲ್ಲ...!

ದೇವಕಣ ವಿಜ್ಞಾನಿಗಳನ್ನು ಪೇಚಿಗೆ ಸಿಕ್ಕಿಸಿದೆ. ಇದರ ರಾಶಿ ಇಷ್ಟೇ ಎಂದುಕೊಂಡಾಗ ಇನ್ನೂ ಅಧಿಕವಾಗಿರಬೇಕು ಎಂಬ ಚಿಂತನೆ ಮೂಡಿಸಿದೆ. ಇಲ್ಲ, ಇನ್ನೂ ಅಧಿಕ ರಾಶಿಯಿರಬೇಕು ಎಂದುಕೊಂಡಾಗ ತೀರಾ ಹಗುರಾಗಿ ರಾಶಿಯನ್ನೇ ಹೊಂದಿರದ ಕಣವೋ ಎಂಬ ಭ್ರಮೆ ಮೂಡಿಸಿದೆ. ಯಾವುದು ಸತ್ಯ ಎಂಬ ಸಂದಿಗ್ಧ ವಿಜ್ಞಾನಿಗಳ ಪಾಲಾಗಿದೆ. ದೇವರನ್ನು ಅರ್ಥಾತ್ ದೇವಕಣವನ್ನು ಹುಡುಕಬೇಕು, ಈ ಸೃಷ್ಟಿಯ ಮೂಲ ಹೇಗಾಯಿತು ಎಂಬುದನ್ನು ಕಂಡುಕೊಳ್ಳಬೇಕು, ಬ್ರಹ್ಮಾಂಡ ಸೃಷ್ಟಿಯಾದ ಆರಂಭದಲ್ಲಿ ಜೀವಾಸ್ತಿತ್ವ ಹೇಗಿತ್ತು ಎಂಬುದನ್ನು ಅರಿತುಕೊಳ್ಳಬೇಕು ಎಂಬೆಲ್ಲ ಉತ್ಕಟಾಪೇಕ್ಷೆಯಲ್ಲಿದ್ದ ವಿಜ್ಞಾನಿಗಳು ಭ್ರಮನಿರಸನಗೊಂಡಿದ್ದಾರೆ. ಸೃಷ್ಟಿಯ ಮೂಲಕಣವೆಂದು ವೈಜ್ಞಾನಿಕ ಜಗತ್ತು ಪರಿಗಣಿಸಿರುವಂಥ ಹಿಗ್ಸ್ ಬೋಸಾನ್ಗಳನ್ನು ನೋಡಬೇಕು, ಅವುಗಳ ಸ್ವರೂಪವನ್ನು ಅರಿಯಬೇಕು ಎಂದು ನಿರ್ಧರಿಸಿದ್ದರು. ಅದಕ್ಕಾಗಿ ಸ್ವಿಜರ್ಲೆಂಡಿನ ಜಿನೇವಾ ಸಮೀಪದ ಸಿಇಆರೆನ್ ಎಂಬಲ್ಲಿ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ಸ್ಥಾಪಿಸಿದ್ದರು. ಈ ಮೂಲಕವಾಗಿ ದೇವಕಣವನ್ನು ಕಂಡುಕೊಳ್ಳುವ ಚಿಂತನೆಯಿತ್ತು. ಆದರೆ ಅದೀಗ ತಲೆಕೆಳಗಾಗಿದೆ. ಯಾವ ದೇವಕಣವನ್ನು ಅಂದರೆ ಹಿಗ್ಸ್ ಬೋಸಾನನ್ನು ಕಾಣಬೇಕು ಎಂದು ವಿಜ್ಞಾನಿಗಳು ಬಯಸಿದ್ದರೋ ಆ ದೇವಕಣ ವಿಜ್ಞಾನಿಗಳ ಜೊತೆ ಕಣ್ಣಾಮುಚ್ಚಾಲೆಯಾಡಿದೆ. ದೇಬಕಣವನ್ನು ಕಂಡೆವು, ಇದೇ ದೇವಕಣ ಎಂದು ಗುರುತಿಸುವಷ್ಟು ಕಾಲಾವಕಾಶವನ್ನು ವಿಜ್ಞಾನಿಗಳಿಗೆ ಕೊಡಲಿಲ್ಲ ಈ ದೇವಕಣ. ಮಿಂಚಿನಂತೆ ಮ...