ಬುಲ್ಲೆಟ್ ಪ್ರೂಫ್ ಚಮ೯ ಬಂದೈತೆ!

ಈ ಚಮ೯ ಎಂಥ ಎಮ್ಮೆ ಚಮ೯ದ್ದೇ ಆದರೂ ಗುಂಡು(ಬುಲ್ಲೆಟ್)ಬಡಿದಾಗ ತಡೆದುಕೊಳ್ಳುವಷ್ಟು ಶಕ್ತವಾಗಿಲ್ಲ. ಅದೇ ಕಾರಣಕ್ಕೆ ಬುಲ್ಲೆಟ್ ಪ್ರೂಫ್ ಜಾಕೆಟ್ ಗಳಿಗೆ ಅಷ್ಟೊಂದು ಬೇಡಿಕೆ ಬಂದದ್ದು. ಆದರೆ ವೈಜ್ಞಾನಿಕ ಸಂಶೋಧನೆಗಳು ಸುಮ್ಮನೇ ಕೈ ಕಟ್ಟಿ ಕೂರುವುದಿಲ್ಲವಲ್ಲ? ಏನಾದರೊಂದು ಸಾಧನೆಯತ್ತ ಕಣ್ಣಿಟ್ಟೇ ಇರುತ್ತದೆ ವೈಜ್ಞಾನಿಕ ಜಗತ್ತು.

ಈಗ ಹೊಸದೊಂದು ಸಂಶೋಧನೆ ಜಗತ್ತನ್ನು ಅಚ್ಚರಿಯ ಕಡಲಲ್ಲಿ ಮುಳುಗಿಸಿದೆ. ಅಂದರೆ ಬುಲ್ಲೆಟ್ ಪ್ರೂಫ್ ಚಮ೯ವನ್ನೇ ಅಭಿವೃದ್ಧಿಪಡಿಸಿದ್ದಾರೆ ಡಚ್ ಸಂಶೋಧಕಿ ಜಲಿಲಾ ಎಸ್ಸೈದಿ. ಅಲ್ಲ, ಬುಲ್ಲೆಟ್ ಪ್ರೂಫ್ ಚಮ೯ ಎಂದ ತಕ್ಷಣ ಅದನ್ನು ಸೃಷ್ಟಿಸುವಲ್ಲಿ ಹೇಗೆ ಯಶಸ್ವಿಯಾದರು? ಗುಂಡಿಗೂ ಜಗ್ಗದ ಚಮ೯ ಹುಟ್ಟುವುದಕ್ಕೆ ಕಾರಣ ಯಾವುದು?... ಎಂಬೆಲ್ಲ ಪ್ರಶ್ನೆಗಳು ಮೂಡುವುದು ಸಹಜ. ಇದಕ್ಕಾಗಿ ಜಲಿಲಾ ಬಳಸಿಕೊಂಡಿದ್ದು ಜೇಡದ ದೇಹದಲ್ಲಿರುವಂಥ ಪ್ರೋಟೀನ್ ಮತ್ತು ಮೇಕೆಯ(ಆಡು) ಹಾಲು!

ಅಚ್ಚರಿಯಾಗುತ್ತದೆ ಅಲ್ಲವೇ? ಜಲಿಲಾ ಮತ್ತವರ ತಂಡ ಮೇಕೆಯನ್ನು ಕುಲಾಂತರಗೊಳಿಸಿತು. ಅಥಾ೯ತ್ ಕುಲಾಂತರಿ ತಳಿ ತಂತ್ರಜ್ಞಾನದ ಮೂಲಕ ಹೊಸ ತಳಿಯ ಮೇಕೆಯನ್ನು ಸೃಷ್ಟಿಸಿದರು. ಈ ರೀತಿ ಸೃಷ್ಟಿಸಿದಂಥ ಮೇಕೆ ಜೇಡವೊಂದು ಉತ್ಪಾದಿಸುವಂಥ ಪ್ರೋಟೀನನ್ನೇ ಒಳಗೊಂಡಿರುವ ಹಾಲನ್ನು ಉತ್ಪಾದಿಸುವುದಕ್ಕೆ ಶಕ್ತವಾಗಿತ್ತು. ಈ ಕುತಾಂತರಿ ಮೇಕೆಯಿಂದ ಉತ್ಪಾದಿಸಿದಂಥ ಹಾಲಿನಿಂದ ಫ್ಯಾಬ್ರಿಕ್ ಪ್ರತ್ಯೇಕಿಸಿದರು. ಈ ಫ್ಯಾಬ್ರಿಕ್ ಉಕ್ಕಿಗಿಂತಲೂ ಅಧಿಕ ಬಲಿಷ್ಠವಾಗಿದ್ದು, ಎಂತಹ ಬುಲ್ಲೆಟ್ ಗೂ ಸಹ ಜಗ್ಗುವುದಿಲ್ಲ. ಹೀಗೆ ಕುಲಾಂತರಿ ಮೇಕೆಯ ಹಾಲಿನಿಂದ ಸಿದ್ಧಗೊಂಡಂಥ ಫ್ಯಾಬ್ರಿಕ್ ಅನ್ನು ಮನುಷ್ಯನ ಚಮ೯ದ ಜೊತೆ ಸಂಯೋಜಿಸಿದರು ವಿಜ್ಞಾನಿಗಳು. ಬುಲ್ಲೆಟ್ ಪ್ರೂಫ್ ಚಮ೯ ಸಿದ್ಧವಾಯಿತು.

ಬುಲ್ಲೆಟ್ ಪ್ರೂಫ್ ಚಮ೯ ಸುಲಭದಲ್ಲಿ ಸಿದ್ಧಗೊಳ್ಳುವುದಿಲ್ಲ. ಮೊದಲಿಗೆ ಬುಲ್ಲೆಟ್ ಪ್ರೂಫ್ ಚಮ೯ ತಯಾರಿಸುವ ಮಾದರಿಯ ಸುತ್ತ ಮಾನವನ ನೈಜ ಚಮ೯ವನ್ನು ಬೆಳೆಸಬೇಕಾಗುತ್ತದೆ. ಈ ಚಮ೯ ಬೆಳೆಯುವುದಕ್ಕೆ ಏನಿಲ್ಲವೆಂದರೂ ಸುಮಾರು 5 ವಾರಗಳ ಕಾಲಾವಕಾಶ ಬೇಕು. ನಂತರ ಕುಲಾಂತರಿ ಮೇಕೆಯ ಹಾಲಿನಿಂದ ಪಡೆದಂಥ ಫ್ಯಾಬ್ರಿಕ್ ಬಳಸಿಕೊಂಡು ಕೖತಕ ಚಮ೯ ತಯಾರಿಸಿ ನೈಜ ಚಮ೯ಕ್ಕೆ ಅದು ಹೊಂದಿಕೆಯಾಗುವಂತೆ ನೋಡಿಕೊಳ್ಳಬೇಕು. ಗುಂಡನ್ನು ಕೂಡಾ ಹಿಡಿದಿಡಲು ಜೇಡದ ಬಲೆ ಶಕ್ತವಾಗಿದೆ ನೋಡಿ. ಅದರಿಂದಲೇ ಸ್ಫೂತಿ೯ ಪಡೆದ ಜೆಲಿಲಾ ಬೆಲ್ಲೆಟ್ ಪ್ರೂಫ್ ಚಮ೯ ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಚಮ೯ದ ನಿರೋಧಕ ಸಾಮಥ್ಯ೯ದ ಬಗ್ಗೆ ಇನ್ನೂ ಪರೀಕ್ಷೆಗಳು ನಡೆಯಬೇಕಿದೆ.

ಆದರೆ ಕೇವಲ ಸಿನಿಮಾಗಳಲ್ಲಷ್ಟೇ ಸೂಪರ್ ಮ್ಯಾನ್, ಐರನ್ ಮ್ಯಾನ್... ಮೊದಲಾದವರನ್ನೆಲ್ಲ ಕಂಡು, ನಾವೂ ಅವರಂತೆಯೇ ಆಗಬೇಕು ಎಂದು ಆಸೆಪಟ್ಟಿದ್ದವರಿಗೆಲ್ಲ ಒಂದು ಹೊಸ ಅವಕಾಶ ಇದೆ ನೋಡಿ.

Comments

  1. great........:) idrinda military force ge tumba anukoola agtu..adre sarakara adra yochne maadakku ashte.....

    ReplyDelete
  2. @shruthi- adre intha tantrajnana durupayoga agode jasthi. elru bulletproof charmadavaradre innondu reetiya samasye huttikollutte.

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು