ಕ್ಷೀರಪಥದಲ್ಲೊಂದು ವಜ್ರಕಾಯ!


ಈ ಗ್ರಹವನ್ನು ಇಡಿ ಇಡಿಯಾಗಿ ತಂದರೂ ಭೂಮಿಯ ಮೇಲಿರುವ ಎಲ್ಲ ದೇಶಗಳೂ ಶ್ರೀಮಂತವಾಗಬಹುದು! ಯಾಕೆ ಅಂತೀರಾ? ಇದು ಸಂಪೂಣ೯ವಾಗಿ ವಜ್ರಗಳಿಂದಲೇ ತುಂಬಿರುವಂಥ ಗ್ರಹ.

   ಹೌದು, ಇಂಥದ್ದೊಂದು ಕಾಯ ನಮ್ಮ ಕ್ಷೀರಪಥ ಗೆಲಾಕ್ಸಿಯಲ್ಲಿಯೇ ಪತ್ತೆಯಾಗಿದೆ. ಮೆಲ್ಬನಿ೯ನ ಸ್ವಿನ್ ಬನ್೯ ಯೂನಿವಸಿ೯ಟಿ ಆಫ್ ಟೆಕ್ನಾಲಜಿಯ ಪ್ರೋವೈಸ್ ಛಾನ್ಸೆಲರ್ ಪ್ರೊ. ಮ್ಯಾಥ್ಯೂ ಬೇಲ್ಸ್ ಸಾರಥ್ಯದಲ್ಲಿನ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ ಈ ಕಾಯವನ್ನು ಪತ್ತೆ ಮಾಡಿದೆ. ಆಸ್ಟ್ರೇಲಿಯಾ, ಜಮ೯ನಿ, ಬ್ರಿಟನ್, ಇಟಲಿ ಮತ್ತು ಅಮೆರಿಕದ ಬಾಹ್ಯಾಕಾಶ ವಿಜ್ಞಾನಿಗಳು ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು. ಈ ಕಾಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದೆಯಲ್ಲವೇ? ಮುಂದೆ ಓದಿ-

   ಕ್ಷೀರಪಥದಲ್ಲೇ ಇರುವಂಥ ಪಲ್ಸಾರ್ ಎಂದು ಕರೆಯಲ್ಪಡುವ ಒಂದು ಪುಟ್ಟ ನಕ್ಷತ್ರ. ಪಲ್ಸಾರ್ ಗಳೆಂದರೆ ಸುಮಾರು 20 ಕಿಲೋ ಮೀಟರ್ ವ್ಯಾಸದ ಪುಟ್ಟ ನಕ್ಷತ್ರಗಳು. ಈ ನಕ್ಷತ್ರಗಳು ಸದಾ ರೇಡಿಯೋ ತರಂಗಗಳನ್ನು ಹೊರಹೊಮ್ಮಿಸುತ್ತಲೇ ಇರುತ್ತವೆ. ಈ ನಕ್ಷತ್ರ ತನ್ನ ಕಕ್ಷೆಯಲ್ಲಿ ಪರಿಭ್ರಮಿಸುತ್ತಾ ಇರುವಾಗ ಹೊರಹೊಮ್ಮುವಂಥ ರೇಡಿಯೋ ತರಂಗಗಳು ಭೂಮಿ ಸೇರಿದಂತೆ ಎಲ್ಲ ಆಕಾಶಕಾಯಗಳತ್ತಲೂ ಚಿಮ್ಮುತ್ತವೆ. ಇದೇ ರೇಡಿಯೋ ತರಂಗಗಳನ್ನು ಗುರುತಿಸುವ ಮೂಲಕ ವಿಜ್ಞಾನಿಗಳು ವಜ್ರಕಾಯವನ್ನು ಪತ್ತೆ ಮಾಡುವಲ್ಲಿ ಯಸಸ್ವಿಯಾಗಿದ್ದಾರೆ. ಈ ನಕ್ಷತ್ರಕ್ಕೆ ವಿಜ್ಞಾನಿಗಳು ಇಟ್ಟಂಥ ಹೆಸರು- ಪಿ ಎಸ್ ಆರ್ ಜೆ1719-1438. ಈ ನಕ್ಷತ್ರಕ್ಕೂ ಒಬ್ಬ ಸ್ನೇಹಿತನಿದ್ದಾನೆ. ಆ ಸ್ನೇಹಿತನೇ ವಿಜ್ಞಾನಿಗಳು ಪತ್ತೆ ಮಾಡಿರುವಂಥ ವಜ್ರಕಾಯ! ಇದು ಈ ಪುಟ್ಟ ಪಲ್ಸಾರನ್ನು ಪರಿಭ್ರಮಿಸುತ್ತಿರುವಂಥ ಪುಟ್ಟ ಗ್ರಹ.

   ಈ ನಕ್ಷತ್ರದಿಂದ ಬರುತ್ತಿದ್ದಂಥ ರೇಡಿಯೋ ತರಂಗಗಳು ವ್ಯವಸ್ಥಿತವಾಗಿ ನಿಯಂತ್ರಿಸಲ್ಪಡುತ್ತಿದ್ದವು. ಈ ರೀತಿ ರೇಡಿಯೋ ತರಂಗಗಳು ನಿಯಂತ್ರಣಕ್ಕೆ ಒಳಪಡಬೇಕು ಅಂದಾದರೆ ಅಲ್ಲಿ ಗುರುತ್ವಾಕಷ೯ಣ ಶಕ್ತಿಯ ತಡೆ ಇರಲೇಬೇಕು. ಅಂದರೆ ಈ ನಕ್ಷತ್ರಕ್ಕಿಂತ ಅದನ್ನು ಪರಿಭ್ರಮಿಸುತ್ತಿರುವ ಗ್ರಹವೇ ದೊಡ್ಡ ಗಾತ್ರದಲ್ಲಿದೆ ಮತ್ತು ಹೆಚ್ಚು ಗುರುತ್ವಾಕಷ೯ಣ ಶಕ್ತಿಯನ್ನು ಹೊಂದಿದೆ ಎಂಬುದು ದಿಟ. ಈ ಗ್ರಹ ಮತ್ತು ನಕ್ಷತ್ರಗಳು ಸೆಪ೯ನ್ (ಹಾವಿನಾಕಾರದಲ್ಲಿರುವ ನಕ್ಷತ್ರಪುಂಜ)ದಿಂದ ಸುಮಾರು 4,000 ಜ್ಯೋತಿವ೯ಷ೯ (1 ಜ್ಯೋತಿವ೯ಷ೯ ಅಂದರೆ 9460730472580.8 ಕಿಲೋ ಮೀಟರ್) ದೂರದಲ್ಲಿವೆ. ಈ ನಕ್ಷತ್ರದಿಂದ ಹೊರಹೊಮ್ಮುವ ನಿಯಂತ್ರಿತ ರೇಡಿಯೋ ತರಂಗಗಳೇ ಬಾಹ್ಯಾಕಾಶ ವಿಜ್ಞಾನಿಗಳಿಗೆ ಹಲವು ವಿಚಾರಗಳನ್ನು ಅಥ೯ ಮಾಡಿಸಿವೆ.

- ಈ ಗ್ರಹವು ನಕ್ಷತ್ರವನ್ನು ಕೇವಲ 2 ಗಂಟೆ 10 ನಿಮಿಷಗಳಲ್ಲಿ ಪರಿಭ್ರಮಿಸುತ್ತದೆ. ಅಂದರೆ ಇದು ಆ ಗ್ರಹದ ಒಂದು ದಿನ.
- ಗ್ರಹ ಮತ್ತು ನಕ್ಷತ್ರಗಳ ನಡುವೆ ಇರುವ ಅಂತರ ಕೇವಲ 6 ತಕ್ಷ ಕಿಲೋ ಮೀಟರ್.
- ಈ ವಜ್ರಕಾಯದ (ಗ್ರಹ) ವ್ಯಾಸ ಖಂಡಿತವಾಗಿಯೂ 60,000 ಕಿಲೋ ಮೀಟರ್ ಗಳಿಗಿಂತ ಕಡಿಮೆಯಾಗಿದೆ. ಒಂದು ವೇಳೆ ಇದು ಸ್ವಲ್ಪ ಹೆಚ್ಚು ಗಾತ್ರ ಹೊಂದಿರುತ್ತಿದ್ದರೂ ನಕ್ಷತ್ರದ ಗುರುತ್ವಾಕಷ೯ ಶಕ್ತಿಯಿಂದ ತಪ್ಪಿಸಿಕೊಳ್ಳುತ್ತಿತ್ತು.
- ಈ ಗ್ರಹ ಸಣ್ಣ ಗಾತ್ರದ್ದೇ ಆಗಿದ್ದರೂ ಸಹ ನಮ್ಮ ಗುರುಗ್ರಹಕ್ಕಿಂತ ಸ್ವಲ್ಪ ಹೆಚ್ಚು ರಾಶಿಯನ್ನು ಹೊಂದಿದೆ. ಗುರು ಗ್ರಹದ ರಾಶಿ  1.8986×10ರ ಘಾತ 27 kg
- ಈ ಅಧಿಕ ರಾಶಿಯೇ ಈ ಗ್ರಹದಲ್ಲಿ ಏನಿರಬಹುದು ಎಂಬುದರ ಸುಳಿವು ಕೊಡುತ್ತದೆ.
- ಈ ನಕ್ಷತ್ರ ಕೇವಲ 20 ಕಿ.ಮೀ. ವ್ಯಾಸ ಹೊಂದಿದ್ದರೂ ನಮ್ಮ ಸೂಯ೯ನಿಗಿಂತ 1.4 ಪಟ್ಟು ಅಧಿಕ ರಾಶಿಯನ್ನು ಹಂದಿದೆ. ಸೂಯ೯ನ ರಾಶಿ 1.9891×10ರ ಘಾತ 30 kg
- ಈ ನಕ್ಷತ್ರವನ್ನು ಮಿಲಿಸೆಕೆಂಡ್ ಪಲ್ಸಾರ್ ಎಂದೂ ಕರೆಯುತ್ತಾರೆ. ಯಾಕೆಂದರೆ ಇದು ಪ್ರತಿ ನಿಮಿಷಕ್ಕೆ 10,000 ಬಾರಿ ತನ್ನ  ಕಕ್ಷೆಯಲ್ಲಿ ಪರಿಭ್ರಮಿಸುತ್ತದೆ.

- ಸಾಮಾನ್ಯವಾಗಿ ಮಿಲಿಸೆಕೆಂಡ್ ಪಲ್ಸಾರ್ ಗಳಿಗೆ ಒಂದು ಜೊತೆಗಾರ ನಕ್ಷತ್ರ (ಅದೂ ಕೂಡಾ ಪಲ್ಸಾರ್ ಆಗಿರುತ್ತದೆ) ಇರುತ್ತದೆ. ಅಂದರೆ ಈ ನಕ್ಷತ್ರದ ಜೊತೆಗಿರುವ ಗ್ರಹ ಮುಂಚೆ ನಕ್ಷತ್ರವೇ ಅಂದರೆ ಅದು ಕೂಡಾ ಪಲ್ಸಾರ್ ಆಗಿತ್ತು. ಆದರೆ ಈಗ ಇರುವಂಥ ಮಿಲಿಸೆಕೆಂಡ್ ಪಲ್ಸಾರ್ (ಪಿ ಎಸ್ ಆರ್ ಜೆ1719-1438) ಒಂದು ಕಾಲದಲ್ಲಿ ಶಕ್ತಿ ಕುಂದಿದಂಥ ಮತ್ತು ಸತ್ತು ಹೋದಂಥ (ಅಂದರೆ ತನ್ನ ಗುಣಗಳನ್ನು ಕಳೆದುಕೊಂಡಂಥ) ಪಲ್ಸಾರ್ ಆಗಿತ್ತು. ಜೊತೆ ಜೊತೆಗೆ ಪರಿಭ್ರಮಿಸುತ್ತಿರುವಂಥ ಸಂದಭ೯ದಲ್ಲಿ ಆಗ ಪಲ್ಸಾರ್ ಆಗಿದ್ದಂಥ (ಅಂದರೆ ಈಗಿನ ಗ್ರಹ - ವಜ್ರಕಾಯ) ಕಾಯವು ತನ್ನಲ್ಲಿನ ಹಲವಾರು ಅಂಶಗಳನ್ನು ಜೊತೆಗಾರ ನಕ್ಷತ್ರಕ್ಕೆ ವಗಾ೯ಯಿಸಿರಬೇಕು (ಇಂಥ ಪ್ರಕ್ರಿಯೆ ಪ್ರತಿಯೊಂದು ಆಕಾಶಕಾಯದಲ್ಲಿಯೂ ನಡೆಯುತ್ತದೆ). ಇದರಿಂದಾಗಿ ಶಕ್ತಿ ಕುಂದಿದ್ದಂಥ ನಕ್ಷತ್ರವು ಮಿಲಿಸಿಕೆಂಡ್ ಪಲ್ಸಾರ್ ಆಗಿ ರೂಪಾಂತರ ಹೊಂದಿರಬೇಕು. ಶಕ್ತಿಯುತವಾಗಿದ್ದಂಥ ನಕ್ಷತ್ರವು (ಈಗಿನ ವಜ್ರಕಾಯ) ಶ್ವೇತಕುಬ್ಜ ನಕ್ಷತ್ರವಾಗಿ ಬದಲಾಗಿರಬೇಕು. ಶ್ವೇತಕುಬ್ಜ ಎಂದರೆ ತನ್ನ ಹೊರವಲಯ ಮತ್ತು ಅಧಿಕ ಪ್ರಮಾಣದ ರಾಶಿಯನ್ನು ಕಳೆದುಕೊಂಡಂಥ ನಕ್ಷತ್ರ. ಇದುವೇ ಈಗಿನ ವಜ್ರಕಾಯ.

- ಒಂದು ವೇಳೆ ಶ್ವೇತಕುಬ್ಜವಾಗಿ ಬದಲಾದಂಥ ನಕ್ಷತ್ರದಲ್ಲಿ ಹೈಡ್ರೋಜನ್, ಹೀಲಿಯಂ ಇದ್ದದ್ದೇ ಆಗಿರುತ್ತಿದ್ದರೆ ಈ ಕಾಯವು ಇನ್ನೂ ಹಲವು ಪಟ್ಟು ದೊಡ್ಡದಾಗಿರಬೇಕಾಗಿತ್ತು. ಆದರೆ ಈ ಕಾಯದಲ್ಲಿ ಕೇವಲ ಕಾಬ೯ನ್ ಮತ್ತು ಆಕ್ಸಿಜನ್ ತುಂಬಿಕೊಂಡಿರುವ ಕಾರಣ ಕಾಯವು ಚಿಕ್ಕ ಗಾತ್ರವನ್ನು ಹೊಂದಿದೆ.
- ಕಾಬ೯ನ್ ಅಣುಗಳು ಬಿಗಿಯಾದ ಅಣುಬಂಧವನ್ನು ಹೊಂದಿರುವುದಂತೂ ಖಂಡಿತ. ಕಾಬ೯ನ್ ಬಿಗಿಯಾದ ಅಣುಬಂಧವನ್ನು ಹೊಂದಿರುವುದು ಗ್ರಾಫೈಟ್ ಮತ್ತು ವಜ್ರದಲ್ಲಿ ಮಾತ್ರ. ಅಂದರೆ ಈ ಕಾಯವು ವಜ್ರಕಾಯ ಅಥಾ೯ತ್ ಇಲ್ಲಿ ಅಧಿಕ ಪ್ರಮಾಣದ ವಜ್ರಗಳಿರುವುದು ಖಂಡಿತ ಎನ್ನುತ್ತಾರೆ ಬಾಹ್ಯಾಕಾಶ ವಿಜ್ಞಾನಿಗಳು.

ಎಲ್ಲಾ ಸರಿ, ಆದರೆ ಒಂದು ಶಂಕೆ- ಒಂದು ಸಣ್ಣ ತುಂಡು ಆಭರಣವನ್ನು ಕೂಡಾ ಬಿಡುವುದಕ್ಕೆ ಮನುಷ್ಯ ತಯಾರಿರುವುದಿಲ್ಲ. ಈ ವಜ್ರಕಾಯದಲ್ಲಿ ವಜ್ರದ ರಾಶಿಯೇ ಇದ್ದರೆ ಮಾನವ ಸುಮ್ಮನೇ ಬಿಟ್ಟಾನೆಯೇ? ಮಾನವನ ಆಕ್ರಮಣಕ್ಕೆ ಒಳಗಾದರೆ ವಜ್ರಕಾಯದ ಸ್ಥಿತಿ ಏನಾದೀತು?

Comments

  1. innu rajakaranigalu gani dhani galanna karkandu aa badige prayana maadtwo yento??? H,R, SHREEPADA RAO.

    ReplyDelete
  2. magnificiant info.... /diamondiious info tnx....!

    ReplyDelete
  3. ಈ ಗ್ರಹ ರಾಜಕಾರಣಿಗಳ ಕಣ್ಣಿಗೆ ಕಾಣಿಸದಿರಲಿ !

    ReplyDelete
  4. lol... jayalalita...laloo atva ballari gani dhoregalu idanna odadidre saaku :)

    ReplyDelete

Post a Comment

Popular posts from this blog

ಅವಸಾನದತ್ತ ಹವಳದ ದಂಡೆಗಳು...!

ಮಾನವ ವಲಸೆ ಬಂದ ಬಗೆ ಹೇಗೆ?

ಶಿವ ರೂಪಕಲ್ಪನ ಕಾವ್ಯ