ಮಕ್ಕಳು ತಿನ್ನುವ ಆಹಾರ ಅಮ್ಮನ ಮೇಲೆ ಅವಲಂಬಿತ


ನಿಮ್ಮ ಮಕ್ಕಳು ಹಸಿರು ಆಹಾರವನ್ನೇ ಹೆಚ್ಚಾಗಿ ತಿನ್ನಬೇಕೆ? ಹಾಗಿದ್ದರೆ ಗಭಿ೯ಣಿಯಾಗಿದ್ದಾಗಲೇ ಹಸಿರು ಆಹಾರ ಮಾತ್ರ ತಿನ್ನಿ!
ಹೀಗಂತ ಅಮೆರಿಕದ ವಿಜ್ಞಾನಿಗಳು ಸಂಶೋಧನೆ ನಡೆಸಿ ಅಮೆರಿಕದ ಮಹಿಳೆಯರಿಗೆ ಸಲಹೆ ನೀಡಿದ್ದಾರೆ. ಅಮೆರಿಕದ ಹೆಚ್ಚಿನ ಮಹಿಳೆಯರು ತಮ್ಮ ಮಕ್ಕಳು ಸಸ್ಯಾಹಾರಿಗಳಾಗಬೇಕು ಎಂದು ಬಯಸುತ್ತಿದ್ದಾರೆ. ಆದರೆ ಮಕ್ಕಳು ಸಸ್ಯಾಹಾರಕ್ಕೆ ಒಗ್ಗಿಕೊಳ್ಳುತ್ತಿಲ್ಲ ಎಂಬ ಕೊರಗು ಅವರಲ್ಲಿದೆ. ಇದಕ್ಕೆ ಪರಿಹಾರವೆಂದರೆ ಹೆಣ್ಣು ಮಕ್ಕಳು ಗಭಿ೯ಣಿಯಾಗಿದ್ದಾಗಲೇ ಸಸ್ಯಾಹಾರವನ್ನು ತಿನ್ನುವುದು ಎನ್ನುತ್ತದೆ ಸಂಶೋಧನೆ.


ಅಷ್ಟಕ್ಕೂ ಸಸ್ಯಾಹಾರದ ಮೇಲೆ ವಿದೇಶಿಯರಿಗೆ ಅಷ್ಟೊಂದು ವ್ಯಾಮೋಹ ಯಾತಕ್ಕೆ? ನಾವು ಹೇಗೆ ಪಾಶ್ಚಾತ್ಯರ ಸಂಸ್ಕೃತಿಗೆ ಮಾರುಹೋಗಿ ಅವರನ್ನು ಅನುಕರಣೆ ಮಾಡುತ್ತಿದ್ದೇವೆಯೋ ಅವರೂ ಹಾಗೆಯೇ ನಮ್ಮನ್ನು ನೋಡಿ ಕಲಿತಿದ್ದಾರೆ. ಆದರೆ ಇಲ್ಲೊಂದು ವ್ಯತ್ಯಾಸವಿದೆ. ನಮ್ಮದು ಅಂಧಾನುಕರಣೆ, ಅವರು ಹಾಗಲ್ಲ, ನಮ್ಮ ಪ್ರತಿಯೊಂದು ಪದ್ಧತಿಯಲ್ಲೂ ಇರುವಂಥ ವೈಜ್ಞಾನಿಕ ಸತ್ಯಗಳನ್ನು ಅನ್ವೇಷಿಸಿ, ಸತ್ಯ ಕಂಡುಕೊಂಡು ಬಳಿಕ ಅದನ್ನು ಅನುಸರಿಸುತ್ತಿದ್ದಾರೆ.

ಅವರ ಸಸ್ಯಾಹಾರ ಪ್ರೀತಿಗೆ ಇಷ್ಟೇ ಕಾರಣ ಅಲ್ಲ. ಮಾಂಸಾಹಾರದಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನ ಅಂಶ ಇರುತ್ತದೆ. ಇದೇ ಕಾರಣಕ್ಕೆ ಅಮೆರಿಕದಂಥ ದೇಶಗಳಲ್ಲಿನ ಶೇ.40ರಷ್ಟು ಜನ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬೊಜ್ಜನ್ನು ಹೇಗಾದರೂ ಕರಗಿಸಿಕೊಳ್ಳಬೇಕು ಎಂದು ಚಿಂತಿಸಿದ ಅವರಿಗೆ ಕಂಡದ್ದು ಸಸ್ಯಾಹಾರ. ಸಸ್ಯಾಹಾರದಲ್ಲಿಯೂ ಕೊಬ್ಬಿನ ಅಂಶ ಇದೆಯಾದರೂ ಅದು ಬೊಜ್ಜು ತರಿಸುವಂತಿಲ್ಲ. ಮುಖ್ಯವಾಗಿ ಸೊಪ್ಪು, ಹಸಿರು ಕಾಳುಗಳಲ್ಲಿ ಕೊಬ್ಬಿನ ಅಂಶ ತೀರಾ ಅತ್ಯಲ್ಪ. ಇದುವೇ ವಿದೇಶಿಯರು ಸಸ್ಯಾಹಾರವನ್ನು ಪ್ರೀತಿಸುವುದಕ್ಕೆ ಪ್ರಮುಖ ಕಾರಣ.

ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ವಿದೇಶಿಯರಲ್ಲಿ ಬಹಳಷ್ಟು ಜನ ತಮ್ಮ ಮಕ್ಕಳು ಸಸ್ಯಾಹಾರಿಗಳಾಗಲಿ ಎಂದು ಬಯಸುತ್ತಾರೆ. ಹಾಗಾಗಿ ಮಕ್ಕಳು ಆಹಾರ ತಿನ್ನಲು ಶುರು ಮಾಡಿದಾಗಲೇ ಸಸ್ಯಾಹಾರವನ್ನು ಕೊಡುವುದಕ್ಕೆ ಪ್ರಯತ್ನಿಸುತ್ತಾರೆ. ಆದರೆ ಇದರಿಂದ ಫಲ ಸಿಕ್ಕಿಲ್ಲ. ಇದನ್ನೆಲ್ಲ ಗಮನಿಸಿದ ಸಂಶೋಧಕರು, ಮಕ್ಕಳು ಸಸ್ಯಾಹಾರವನ್ನು ತಿನ್ನುವಂತಾಗಬೇಕಾದರೆ ತಾಯಿ ಗಭಿ೯ಣಿಯಾಗಿದ್ದಾಗಲೇ ಸಸ್ಯಾಹಾರ ಸೇವಿಸಬೇಕು ಎಂಬ ಸತ್ಯವನ್ನು ಕಂಡುಕೊಂಡಿದ್ದಾರೆ.

ಭಾರತದಲ್ಲಿ ಹಸಿರು ಆಹಾರಕ್ಕೆ ಪ್ರಾಧಾನ್ಯತೆಯಿದೆ. ಮಾಂಸಾಹಾರ ನಿಷಿದ್ಧ ಎಂದು ಹೇಳಲಾಗಿದೆ. ಅದಕ್ಕೆ ಹಲವೊಂದು ಕಟ್ಟುಪಾಡುಗಳನ್ನೂ ಹೇರಲಾಗಿದೆ. ನಾವು ಇವನ್ನೆಲ್ಲ ಮೂಢ ಸಂಪ್ರದಾಯ ಎಂದು ಸುಲಭವಾಗಿ ಜರೆದು ಬಿಡುತ್ತೇವೆ. ಮಾಂಸ ತಿಂದರೆ ಸದ್ಗತಿ ಸಿಗುವುದಿಲ್ಲವಂತೆ ಎಂದು ಗೇಲಿ ಮಾಡುತ್ತೇವೆ. ಆದರೆ ಅದರ ಹಿಂದಿನ ವೈಜ್ಞಾನಿಕ ಚಿಂತನೆಯ ಕಡೆಗೆ ಗಮನವನ್ನೇ ಕೊಡುವುದಿಲ್ಲ. ಪಾಶ್ಚಾತ್ಯರೇ ಅವರ ಆಚಾರಗಳನ್ನು ಬದಲಿಸಿಕೊಂಡು ಭಾರತೀಯರನ್ನು ಅನುಕರಿಸುತ್ತಿದ್ದಾರೆ. ಭಾರತೀಯ ಪರಂಪರೆಯಲ್ಲಿರುವ, ಸಂಸ್ಕೃತಿಯಲ್ಲಿರುವ ಮಹತ್ವವನ್ನು ಅವರು ಅಥ೯ ಮಾಡಿಕೊಂಡಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಯಲ್ಲಿನ ಲೋಪಗಳನ್ನು ನಾವು ಅರಿತುಕೊಳ್ಳುವಂತಾಗುವುದು ಯಾವಾಗ? ನಮ್ಮ ಸಂಸ್ಕೃತಿಯಲ್ಲಿನ ಮಹತ್ವದ ಬಗ್ಗೆ ನಮ್ಮಲ್ಲಿ ಜ್ಞಾನೋದಯವಾಗುತ್ತದೆಂದು ಆಶಿಸಬಹುದೇ? 

Comments

  1. sooper article sir.. pratiyobba bharatiyaru artha maadikollabekada vishayagalu ivu.

    ReplyDelete
  2. Vishnu idu khandita satya,modalu nammannu nammatanavannu,namma aachara vichara,aahara paddati yella vishyagala vaijnanika samshodhane aagabeku,shankahadinda biddare teertha yembante paaschatyarinda banda mele yella nambuvantagide duradrushta.....H.R.ShreepadaRao.

    ReplyDelete
  3. @ವಿಜಯಚಂದ್ರ, H.R.Shreepadarao- neevu heliddu nija. bhaarateeyaraada naavu nammallina jnanabhandaravannu artha madikolluva dina yaavaaaga baruttho?

    ReplyDelete

Post a Comment

Popular posts from this blog

ಅವಸಾನದತ್ತ ಹವಳದ ದಂಡೆಗಳು...!

ಮಾನವ ವಲಸೆ ಬಂದ ಬಗೆ ಹೇಗೆ?

ಶಿವ ರೂಪಕಲ್ಪನ ಕಾವ್ಯ