ಲಿಂಗಪರಿವರ್ತನೆ: ಬಡವಾಗುತ್ತಿವೆ ಕಂದಮ್ಮಗಳು!


ಜೆನಿಟೋಪ್ಲಾಸ್ಟಿ. ಈ ತಂತ್ರಜ್ಞಾನದ ಹಿಂದಿದ್ದ ಉದ್ದೇಶವೂ ಸಹ ಕೆಟ್ಟದಾಗೇನೂ ಇರಲಿಲ್ಲ. ನಪುಂಸಕತೆಯನ್ನು ನಿವಾರಿವಂಥ ಮಹತ್ವದ ಉದ್ದೇಶವನ್ನು ಇಟ್ಟುಕೊಂಡಿದ್ದಂಥ ಈ ತಂತ್ರಜ್ಞಾನ ಧನದಾಹಿ ವೈದ್ಯರ ಕೈಯಲ್ಲಿ ಲಿಂಗಪರಿವರ್ತನೆಯಂಥ ದುರುದ್ದೇಶಕ್ಕೆ ಬಳಕೆಯಾಗುತ್ತಿದೆ ಅಷ್ಟೆ. ಎಂತಹುದ್ದೇ ಅಭಿವೃದ್ಧಿಯಾದರೂ ಅದು ನಿಸರ್ಗವನ್ನು, ಆ ನಿಸರ್ಗದ ಸೃಷ್ಟಿಯನ್ನು ಕಾಪಾಡಿಕೊಂಡು ಬರಬೇಕೇ ಹೊರತು, ಅದನ್ನೇ ಧಿಕ್ಕರಿಸಿ ಮುನ್ನಡೆಯುವಂತಿರಬಾರದು.


ಗರ್ಭಿಣಿಯೊಬ್ಬಳು ಪ್ರಸವಿಸಿದ ತಕ್ಷಣ ಆಕೆಯ ಕಡೆಯವರು ನೋಡುವುದು- ಮಗು ಗಂಡೋ ಹೆಣ್ಣೋ ಎಂದು. ಒಂದು ವೇಳೆ ಮಗು ಹೆಣ್ಣಾಗಿದ್ದರೆ ಮುಗಿಯಿತು ಅದರ ಕಥೆ! ಹೀಗೆಲ್ಲ ಆಗುತ್ತದೆಯೇ ಎಂಬ ಪ್ರಶ್ನೆ ಒಂದಷ್ಟು ವರ್ಗಗಳ ಜನರ ಮನಸ್ಸಿನಲ್ಲಿ ಮೂಡಬಹುದು. ಕಾರಣ- ಮಗು ಗಂಡಾಗಲಿ, ಹೆಣ್ಣಾಗಲಿ... ಸುಸೂತ್ರವಾಗಿ ಆದರೆ ಸಾಕು ಎಂದು ಭಾವಿಸುವ ಜನರಿದ್ದಾರೆ. ಮುಖ್ಯವಾಗಿ ಕರ್ನಾಟಕ ಮತ್ತು ಕೇರಳಗಳಲ್ಲಿ ಹೆಣ್ಣು ಗಂಡೆಂಬ ತಾರತಮ್ಯ ಕಡಿಮೆಯಾಗುತ್ತಿದೆ. ಆದರೆ ಸಂಪೂರ್ಣ ಭಾರತದ ಪರಿಸ್ಥಿತಿ ಹೀಗಿಲ್ಲ. ಗಂಡು ಮಗು ಮಾತ್ರ ನಮಗೆ ಬೇಕು ಎಂದು ಭಾವಿಸುವ ಅದೆಷ್ಟೋ ಜನ ಭಾರತದಲ್ಲಿದ್ದಾರೆ. ಮಗು ಹೆಣ್ಣು ಎಂದಾಕ್ಷಣ ಅದನ್ನು ಒಂದೋ ಸಾಯಿಸಿ ಬಿಡುತ್ತಾರೆ, ಇಲ್ಲವಾದಲ್ಲಿ ಬಿಟ್ಟು ಹೋಗುತ್ತಾರೆ. ಇದು ಹಳೇ ದಿನಗಳ ವಿಚಾರವಾಯಿತು. ಆದರೆ ಯಾವಾಗ ಲಿಂಗಪರಿವರ್ತನೆ ತಂತ್ರಜ್ಞಾನವನ್ನು ವೈದ್ಯಲೋಕ ಬಳಸಿಕೊಳ್ಳಲಾರಂಭಿಸಿತೋ ಅಂದಿನಿಂದ ಹೆಣ್ಣು ಮಗುವಿನ ಹತ್ಯೆ ಕಡಿಮೆಯಾಗಿದೆ. ಹಾಗಂತ ಖುಷಿ ಪಡುವ ಹಾಗಿಲ್ಲ! ಹೆಣ್ಣು ಮಗುವಿನ ಲಿಂಗ ಪರಿವರ್ತನೆ ಮಾಡಿ ಗಂಡಾಗಿಸುತ್ತಾರೆ. ನಮ್ಮ ವಂಶಕ್ಕೊಂದು ಗಂಡು ಮಗು ಬಂತು ಎಂದು ಬೀಗುತ್ತಾರೆ.

ಈ ಲಿಂಗಪರಿವರ್ತನೆ ತಂತ್ರಜ್ಞಾನ ಇತ್ತೀಚೆಗೆ ದಂಧೆಯಾಗಿರುವುದು ಗಮನಕ್ಕೆ ಬರುತ್ತಿದೆ. ಇಂದೋರ್ ನ ಆಲ್ ಇಂಡಿಯಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು ಲಿಂಗಪರಿವರ್ತನೆ ಮೂಲಕ ಹಲವಾರು ಹೆಣ್ಣು ಮಕ್ಕಳನ್ನು ಗಂಡಾಗಿ ಪರಿವರ್ತನೆ ಮಾಡುತ್ತಿದ್ದಾರೆ ಎಂಬ ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ಪತ್ರಿಕೆಯೊಂದು ಈ ಅವ್ಯವಹಾರವನ್ನು ಬುಲಿಗೆಳೆದಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ವೈದ್ಯರು- `ಲಿಂಗಪರಿವರ್ತನೆ ತಂತ್ರಜ್ಞಾನವೇ ವೈದ್ಯಲೋಕದಲ್ಲಿಲ್ಲ. ಹೀಗಿರುವಾಗ ಹೆಣ್ಣನ್ನು ಗಂಡಾಗಿ ಮಾಡುವುದಕ್ಕೆ ಹೇಗೆ ಸಾಧ್ಯ?' ಎಂದರು. ಹಾಗಿದ್ದರೆ ಲಿಂಗಪರಿವರ್ತನೆ ತಂತ್ರಜ್ಞಾನವೇ ಇಲ್ಲವೇ? ಅಥವಾ ವೈದ್ಯರು ಈ ತಂತ್ರಜ್ಞಾನವನ್ನು ದುರುಪಯೋಗ ಮಾಡುತ್ತಿರುವುದು ಸುಳ್ಳೇ ಎಂಬ ಪ್ರಶ್ನೆಗಳು ಮುಡುವುದು ಸಹಜ. ವಾಸ್ತವ ಎಂದರೆ- ಲಿಂಗ ಪರಿವರ್ತನೆ ತಂತ್ರಜ್ಞಾನ ಬಳಕೆಯಲ್ಲಿದೆ. ಆದರೆ ಈ ತಂತ್ರಜ್ಞಾನವನ್ನು ಯಾವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿತ್ತೋ ಆ ಉದ್ದೇಶಕ್ಕೆ ಇದು ಬಳಕೆಯಾಗುವ ಬದಲು ಲಿಂಗಪರಿವರ್ತನೆಯಂಥ ಕೆಟ್ಟ ಉದ್ದೇಶಕ್ಕೆ ಬಳಕೆಯಾಗುತ್ತಿದೆ.

ಲಿಂಗಪರಿವರ್ತನೆ ತಂತ್ರಜ್ಞಾನ
ಈ ಲಿಂಗಪರಿವರ್ತನೆ ತಂತ್ರಜ್ಞಾನವನ್ನು ಇಂಟ ರ್ ಸೆಕ್ಸ್ ಸರ್ಜರಿ ಎನ್ನುತ್ತಾರೆ. ಕೆಲವೊಂದು ಮಕ್ಕಳಿಗೆ ಜನ್ಮತಃ ಲೈಂಗಿಕ ಸಮಸ್ಯೆಗಳಿರುತ್ತವೆ. ಜನನಾಂಗ ಊನಗಳಿರುತ್ತವೆ. ಹೆಚ್ಚಾಗಿ ಈ ಸಮಸ್ಯೆಗಳು ಗೋಚರಿಸುವುದು ಹೆಣ್ಣು ಮಕ್ಕಳಿಗೆ. ಅದೆಷ್ಟೋ ಬಾರಿ ಹೆಣ್ಣು ಮಕ್ಕಳ ಯೂಟೆರಸ್ (ಮೂತ್ರನಾಳ) ಮತ್ತು ವಜಿನಾದ (ಯೋನಿ) ದ್ವಾರಗಳಲ್ಲಿ ಸಮಸ್ಯೆಗಳಿರುತ್ತವೆ. ಇಂತಹ ಹಲವಾರು ಜನನಾಂಗ ಸಂಬಂಧಿ ದೋಷಗಳನ್ನು ಸರಿಪಡಿಸುವದಕ್ಕಾಗಿ ಈ ಇಂಟ ರ್ ಸೆಕ್ಸ್ ಸರ್ಜರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿತ್ತು. ಅಲ್ಲದೆ ಮಗುವನ್ನು ಹೆರುವಂಥ ಸಂದರ್ಭದಲ್ಲಿ ತಾಯಿಯ ಯೋನಿ ಸಾಮಾನ್ಯ ಗಾತ್ರಕ್ಕಿಂತ ಅಧಿಕ ಪ್ರಮಾಣದಲ್ಲಿ ಹಿಗ್ಗುತ್ತದೆ. ಈ ರೀತಿ ಹಿಗ್ಗಿದಂಥ ಯೋನಿಯನ್ನು ಮತ್ತೆ ಮೊದಲ ಸ್ಥಿತಿಗೇ ತರುವ ಸಲುವಾಗಿಯೂ ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಆದರೂ ಸಹ ಈ ತಂತ್ರಜ್ಞಾನ ಅಭಿವೃದ್ಧಿಯಾಗಿ ಅದರಲ್ಲಿ ವಿವಿಧ ಬದಲಾವಣೆಗಳಾದರೂ ಸಹ ಸತತವಾಗಿ ವಿವಾದಕ್ಕೀಡಾಗುತ್ತಲೇ ಬಂದಿದೆ.


1970ರ ದಶಕಕ್ಕಿಂತಲೂ ಪೂರ್ವದಲ್ಲಿ ಬಳಕೆಯಾಗುತ್ತಿದ್ದಂಥ ತಂತ್ರಜ್ಞಾನ ಕ್ಲಿಟರೆಕ್ಟಮಿ. ಸ್ತ್ರೀಯರನ್ನು ಲೈಂಗಿಕವಾಗಿ ಉತ್ತೇಜಿಸುವ ಕ್ಲಿಟ ರ್ ಗಳು, ಗ್ಲಾನ್ ಗಳು ಮೊದಲಾದವುಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದ್ದರೆ ಅವುಗಳನ್ನು ತೆಗೆಯುವುದಕ್ಕಾಗಿ ಅಥವಾ ಈ ಅಂಗಗಳಲ್ಲಿ ದೋಷವಿದ್ದರೆ ಸರಿಪಡಿಸುವುದಕ್ಕಾಗಿ ಈ ತಂತ್ರಜ್ಞಾನದ ಬಳಕೆಯಾಗುತ್ತಿತ್ತು. ಆದರೆ ಈ ಸರ್ಜರಿಯಿಂದ ಸ್ತ್ರೀಯರ ಲೈಂಗಿಕ ಆಸಕ್ತಿಯೇ ಹೊರಟು ಹೋಗುತ್ತದೆ ಮತ್ತು ಅವರು ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಉತ್ತೇಜನಗೊಳ್ಳುವ ಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಈ ತಂತ್ರಜ್ಞಾನವನ್ನು ಜಗತ್ತಿನಾದ್ಯಂತ ನಿಷೇಧಿಸಲಾಯಿತು. ಹೀಗಾಗಿ ಕ್ಲಿಟರೋಪ್ಲಾಸ್ಟಿ ಎಂಬ ತಂತ್ರಜ್ಞಾನ ಅಭಿವೃದ್ಧಿಯಾಯಿತು. ಇದರಲ್ಲಿ ಲೈಂಗಿಕ ಸಂವೇದನೆಗೆ ಯಾವ ತೊಂದರೆಯೂ ಆಗುತ್ತಿರಲಿಲ್ಲವಾದರೂ ಈ ತಂತ್ರಜ್ಞಾನ ವೈದ್ಯಲೋಕದ ನಿರೀಕ್ಷೆಗಳನ್ನು ಈಡೇರಿಸಿರಲಿಲ್ಲ.

ಇನ್ನೊಂದು ತಂತ್ರಜ್ಞಾನ ವಜಿನೋಪ್ಲಾಸ್ಟಿ. ಹೆಚ್ಚಾಗಿ ಪ್ರಸವದ ಸಂದರ್ಭದಲ್ಲಿ ಹಿರಿದಾಗುವ ಯೋನಿಯನ್ನು ಸಹಜ ಗಾತ್ರಕ್ಕೆ ಕುಗ್ಗಿಸುವ ಸಲುವಾಗಿ ಬಳಕೆಯಾಗುತ್ತಿರುವ ತಂತ್ರಜ್ಞಾನ. ಹಿಗ್ಗಿದ ಯೋನಿಯನ್ನು ಸಹಜ ಗಾತ್ರಕ್ಕೆ ಕುಗ್ಗಿಸುವುದು ಸುಲಭದ ಮಾತಲ್ಲ. ಯೂಟರೆಕ್ಸ್ (ಮೂತ್ರನಾಳ), ಸೆರ್ವಿಕ್ಸ್ (ಗರ್ಭಕೊರಳು) ಮತ್ತು ಯೋನಿ ತೀರಾ ಹತ್ತಿರ ಹತ್ತಿರದಲ್ಲೇ ಇರುವ ಕಾರಣ ಯಾವ ಭಾಗಗಳಿಗೂ ಅಪಾಯ ಸೋಕದಂತೆ ಸರ್ಜರಿ ಮಾಡಬೇಕಾಗುತ್ತದೆ. ವಜಿನೋಪ್ಲಾಸ್ಟಿ ಬಹುಮಟ್ಟಿಗೆ ಈ ಸಮಸ್ಯೆಗಳನ್ನು ಮೆಟ್ಟಿ ನಿಂತಿತ್ತು. ಅಲ್ಲದೆ, ಕೆಲವೊಂದು ಬಾರಿ ಹೆಣ್ಣು ಮಕ್ಕಳ ಯೋನಿ ಸಹಜ ಪ್ರಮಾಣದ ಆಳವನ್ನು ಹೊಂದಿರುವುದಿಲ್ಲ. ವಿವಿಧ ಸಮಸ್ಯೆಗಳಿಂದಾಗಿ ಯೋನಿಯ ಬಾಗಿಲು ಮುಚ್ಚಿರುತ್ತದೆ. ಇಂಥ ಸಂದರ್ಭದಲ್ಲಿ ಲೈಂಗಿಕ ಸಂಪರ್ಕ ಮತ್ತು ಗರ್ಭಧಾರಣೆ ಕಷ್ಟವಾಗುತ್ತದೆ. ಈ ಸಮಸ್ಯೆ ಸರಿಪಡಿಸುವುದಕ್ಕಾಗಿಯೂ ವಜಿನೋಪ್ಲಾಸ್ಟಿ ಬಳಕೆಯಾಗುತ್ತಿದೆ. ಇದರಲ್ಲಿಯೂ ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳಿವೆಯಾದರೂ ಇದು ಈಗಲೂ ಬಳಕೆಯಾಗುತ್ತಿದೆ.

ಕೆಲವೊಂದು ಗಂಡು ಮಕ್ಕಳಲ್ಲಿ ಹುಟ್ಟುವಾಗಲೇ ಜನನಾಂಗ ಸಮಸ್ಯೆ ಇರುತ್ತದೆ. ಶಿಶ್ನ ಇದ್ದೂ ಇಲ್ಲದಂತಿರುತ್ತದೆ. ಇಂಥ ಸಂದರ್ಭದಲ್ಲಿ ಶಿಶ್ನ ಮತ್ತು ವೃಷಣಗಳನ್ನು ತೆಗೆದು ಆ ಜಾಗದಲ್ಲಿ ಯೋನಿಯನ್ನು ಅಳವಡಿಸಿ ಗಂಡು ಮಗುವನ್ನು ಹೆಣ್ಣು ಮಗುವನ್ನಾಗಿ ಮಾಡಲು ಇದೇ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಶಿಶ್ನ ನಿಷ್ಪ್ರಯೋಜಕ ಎನಿಸಿದರಷ್ಟೇ ಈ ಸರ್ಜರಿ ಮಾಡುವುದಕ್ಕೆ ಅವಕಾಶ ಇರುವುದು.
ಇನ್ನೊಂದು ತಂತ್ರಜ್ಞಾನ ಗೊನಡೆಕ್ಟಮಿ. ಗಂಡುಮಕ್ಕಳ ಗೊನಾಡ್(ವೃಷಣ)ಗಳಲ್ಲಿ ಕೆಲವೊಂದು ಸಮಸ್ಯೆಗಳಿರುತ್ತವೆ. (ಹೆಣ್ಣು ಮಕ್ಕಳಲ್ಲಿ ಗರ್ಭಕೋಶವೇ ಗೊನಾಡ್ ಆಗಿರುತ್ತದೆ.) ಇದರಿಂದಾಗಿ ಈ ಅಂಗ ನಿಷ್ಕ್ರಿಯಗೊಂಡು, ಗಂಡುಮಗು ಪ್ರಾಪ್ತನಾಗುವ ಹೊತ್ತಿಗೆ ಹೆಣ್ಣಾಗಿ ಬದಲಾಗುವ ಅಪಾಯವಿರುತ್ತದೆ. ಇದನ್ನು ತಡೆಯುವುದಕ್ಕಾಗಿ ಗೊನಡೆಕ್ಟಮಿ ತಂತ್ರಜ್ಞಾನ ಬಳಕೆಯಾಗುತ್ತದೆ. ಗೊನಾಡ್ಗಳೆಂದರೆ ಸಂತಾನಾಭಿವೃದ್ಧಿ ಅಥವಾ ಗರ್ಭಧಾರಣೆಗೆ ಅಗತ್ಯವಿರುವ ವೀರ್ಯಾಣು ಮತ್ತು ಅಂಡಾಣುಗಳನ್ನು ಉತ್ಪತ್ತಿಮಾಡುವ ಗ್ರಂಥಿಗಳು.

ಈ ಎಲ್ಲ ತಂತ್ರಜ್ಞಾನಗಳ ಸಂಯುಕ್ತ ಮತ್ತು ಅಭಿವೃದ್ಧಿ ಹೊಂದಿದ ರೂಪವೇ ಲಿಂಗಪರಿವರ್ತನೆ ತಂತ್ರಜ್ಞಾನ. ಇದುವೇ ಜೆನಿಟೋಪ್ಲಾಸ್ಟಿ. ಈ ತಂತ್ರಜ್ಞಾನದ ಹಿಂದಿದ್ದ ಉದ್ದೇಶವೂ ಸಹ ಕೆಟ್ಟದಾಗೇನೂ ಇರಲಿಲ್ಲ. ನಪುಂಸಕತೆಯನ್ನು ನಿವಾರಿವಂಥ ಮಹತ್ವದ ಉದ್ದೇಶವನ್ನು ಇಟ್ಟುಕೊಂಡಿದ್ದಂಥ ಈ ತಂತ್ರಜ್ಞಾನ ಧನದಾಹಿ ವೈದ್ಯರ ಕೈಯಲ್ಲಿ ಲಿಂಗಪರಿವರ್ತನೆಯಂಥ ದುರುದ್ದೇಶಕ್ಕೆ ಬಳಕೆಯಾಗುತ್ತಿದೆ ಅಷ್ಟೆ. ನಪುಂಸಕತೆಯನ್ನು ನಿವಾರಿಸುವುದರ ಜೊತೆಗೆ ಸಂತಾನೋತ್ಪತ್ತಿ ಸಾಮಥ್ರ್ಯ ಹೆಚ್ಚಿಸುವುದಕ್ಕೆ, ಕ್ಯಾನ್ಸರ್ ಸಾಧ್ಯತೆ ತಡೆಗಟ್ಟುವುದಕ್ಕೆ, ಜನನಾಂಗಗಳಿಗೆ ಆಗುವಂಥ ಆಂತರಿಕ ಹಾನಿಯನ್ನು ತಡೆಯುವುದಕ್ಕೆ, ಲೈಂಗಿಕ ಸಾಮಥ್ರ್ಯವನ್ನು ವೃದ್ಧಿಸುವುದಕ್ಕೆ ಕೂಡಾ ಈ ತಂತ್ರಜ್ಞಾನವನ್ನು ಬಳಸಬಹುದು.

ಸಾಮಾಜಿಕ ಕಾಳಜಿ ಇರಬೇಕು
ವೈದ್ಯರು ಎಂದರೆ ಸಮಾಜ ಸೇವಕರು ಎಂದೇ ಪರಿಗಣಿಸಿದಂಥ ದೇಶ ನಮ್ಮದು. ಹಾಗೆ ನೋಡಿದರೆ ಪ್ರತಿಯೊಬ್ಬ ವ್ಯಕ್ತಿಯೂ ಜನಪರ ಕಾಳಜಿಯನ್ನು ಹೊಂದಿರಬೇಕು. ದೇಶದಲ್ಲಿ ಗಂಡು-ಹೆಣ್ಣು ಅನುಪಾತ ಆತಂಕಕಾರಿಯಾಗಿ ಕಡಿಮೆಯಾಗುತ್ತಿದೆ. ಇಂತಿರುವಾಗ ಹುಟ್ಟುವಂಥ ಎಲ್ಲ ಹೆಣ್ಣು ಮಕ್ಕಳನ್ನೂ ಗಂಡಾಗಿ ಪರಿವರ್ತಿಸುವಂಥ ಕೆಲಸಗಳಿಗೆ ವೈದ್ಯರು ಇಳಿದರೆ ದೇಶದ ಪರಿಸ್ಥಿತಿ ಹಳ್ಳ ಹಿಡಿದೀತು. ಲಿಂಗಪರಿವರ್ತನೆ ಮಢುವಂಥ ತಂತ್ರಜ್ಞಾನದ ಬಗ್ಗೆ ಜಗತ್ತಿಗೆಲ್ಲ ತಿಳಿದಿದ್ದರೂ ಇಂಥ ತಂತ್ರಜ್ಞಾನವೇ ಇಲ್ಲ. ಹೀಗಿರುವಾಗ ಹೆಣ್ಣನ್ನು ಗಂಡಾಗಿ ಪರಿವರ್ತಿಸುವುದು ಹೇಗೆ ಎಂಬ ಉತ್ತರವನ್ನು ಕೊಟ್ಟಿದ್ದಾರಲ್ಲ ಇಂದೋರ್ ನ  ಆಲ್ ಇಂಡಿಯಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು!


ಎಷ್ಟೆಂದರೂ ಈ ಜಗತ್ತನ್ನು ನಿಯಂತ್ರಿಸುವುದಕ್ಕೆ ಪ್ರಕೃತಿಯಂಥ ಒಂದು ಶಕ್ತಿಯಿದೆ. ಆ ಶಕ್ತಿಯೊಳಗಾದ ಸೃಷ್ಟಿಯನ್ನೇ ಬದಲಿಸುತ್ತೇವೆಂದು ಹೊರಟಿವೆ ಇಂದಿನ ತಂತ್ರಜ್ಞಾನಗಳು. ಎಂತಹುದ್ದೇ ಅಭಿವೃದ್ಧಿಯಾದರೂ ಅದು ನಿಸರ್ಗವನ್ನು, ಆ ನಿಸರ್ಗದ ಸೃಷ್ಟಿಯನ್ನು ಕಾಪಾಡಿಕೊಂಡು ಬರಬೇಕೇ ಹೊರತು, ಅದನ್ನೇ ಧಿಕ್ಕರಿಸಿ ಮುನ್ನಡೆಯುವಂತಿರಬಾರದು. ಧಿಕ್ಕರಿಸಿದ್ದೇ ಆದಲ್ಲಿ ಆಪತ್ತು ಕಟ್ಟಿಟ್ಟ ಬುತ್ತಿ.

Comments

  1. tumba dinada hinde nanu genitoplasty bagge havyakadalli status kottidde aadre istu vivara gottiralilla dhanyavada vishnu. H.R.SHREEPADA RAO.

    ReplyDelete
  2. @ shreepada rao, nimma pratikriyege dhanyavadagalu sir... vaidyo narayano harihi emba maatige indina vaidyaru apavada annistide. lingaparivartane dande heege munduvaridare khanditakku stree kulakke apaya kadide. eegagale linganupaatada antara hechchuttide. mundakke?

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು